ಧಾರ್ಮಿಕ ಸಾಮರಸ್ಯ ಹಾಗೂ ವೈಚಾರಿಕ ವಿಚಾರಗಳು
Main Article Content
Abstract
ಯುವಕರು ಪ್ರತಿಯೊಂದು ಧರ್ಮವನ್ನು ಸಮಾನ ದೃಷ್ಟಿಯಿಂದ ನೋಡು ಬೇಕು. ಎಲ್ಲರೂ ಎಲ್ಲ ಧರ್ಮವನ್ನು ಗೌರವಿಸಬೇಕು. ಗೌರವ ಎಂದರೆ ಬೇರೆ ಧರ್ಮವನ್ನು ಗೌರವಿಸಿದರೆ ನಮ್ಮ ಧರ್ಮವನ್ನೆ ಗೌರವಿಸಿದಂತಾಗುತ್ತದೆ ಎಂದು ಕುವೆಂಪು ಹೇಳುತ್ತಾರೆ
ವಿದ್ಯಾರ್ಥಿಗಳು, ಯುವಕರು ‘ಭತ್ತ ಬೆಳೆಯುವ ಗದ್ದೆಗಳಾಗಬೇಕು’ ಭತ್ತ ತುಂಬುವ ಚೀಲಗಳಾಗಬಾರದು’ ಎಂದು ಕುವೆಂಪು ಹೇಳುತ್ತಾರೆ. ಇಂದು ರಾಜಕೀಯ ಪ್ರೇರಿತವಾಗಿ ವಿಧ್ಯಾರ್ಥಿಗಳು ಯಾವುದೇ ಸಾಹಿತ್ಯ, ಇತಿಹಾಸ ಓದದೇ, ಯಾವುದೇ ಗ್ರಂಥಗಳನ್ನು ಓದದೆ ಭತ್ತ ಬೆಳೆಯುವ ಗದ್ದೆಗಳೂ ಆಗಿಲ್ಲ, ಭತ್ತ ತುಂಬುವ ಚೀಲಗಳೂ ಆಗಿಲ್ಲ ಬರಿ ಸೋರುವ ಚೀಲಗಳಾಗಿವೆ. ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಡುವ ಪರಿಸ್ಥಿತಿಯುಂಟಾಗಿವೆ. ವಿದ್ಯಾರ್ಥಿಗಳು ರಾಜಕೀಯ ಸಹಭಾಗಿತ್ವದಿಂದ ದೂರವಿರಬೇಕೆಂದು 1948ರಲ್ಲಿ ರಾಧಕೃಷ್ಣನ್ ಆಯೋಗದಲ್ಲಿ ಉಲ್ಲೇಖವಿದೆ. ‘ವಿದ್ಯಾರ್ಥಿಗಳು ರಾಜಕೀಯ ಸಹಭಾಗಿತ್ವದಿಂದ ದೂರವಿರಬೇಕು’ ಏಕೆಂದರೆ ರಾಜಕಾರಣ ರಾಜಕೀಯ ಜೀವನ ಸರಿಯಾಗಿಲ್ಲ. ಅದು ವಿದ್ವತ್ತುಗಳಿಸುವ ಬದಲು ವಿದ್ವತ್ತುನ್ನು ಹಾಳುಮಾಡುತ್ತದೆ.
ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಬೇಕು 1948 ರಾಧಕೃಷ್ಣನ್ ಆಯೋಗ, ಮೊದಲಿಯಾರ್ ಆಯೋಗ 1956, ಕೋಠಾರಿ ಆಯೋಗ 1966, 1984 ರಾಷ್ಟ್ರೀಯ ಶಿಕ್ಷಣ ನೀತಿ ಹೀಗೆ ಎಲ್ಲಾ ಆಯೋಗಗಳು ಪಠ್ಯತರ ಚಟುವಟಿಕೆ ಶೇಕಡ 70 ಭಾಗ ಇರಬೇಕು ಪಠ್ಯ ಚಟುವಟಿಕೆ ಶೇಕಡ 30 ಭಾಗ ಇರಬೇಕು ಎಂದು ಹೇಳಿವೆ. ಇದನ್ನು ಕುರಿತು ತಮ್ಮ ಅಭಿಪ್ರಾಯವನ್ನು ಕುವೆಂಪು ಅವರು ವ್ಯಕ್ತಪಡಿಸಿದ್ದಾರೆ. ಯುವಕರು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ಕುವೆಂಪು ಹೇಳುತ್ತಾರೆ.
ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಪ್ರತಿಯೊಂದು ಆಯೋಗಗಳನ್ನು ಅವಲೋಕಿಸಿದಾಗ ಕಂಡುಬರುವುದು ಪಠ್ಯೇತರ ಚಟುವಟಿಕೆಯಲ್ಲಿ ಕಡಿಮೆ ಅವಕಾಶ ಸಿಗುತ್ತಿರುವುದು ಕಂಡು ಬರುತ್ತದೆ. ವಿದ್ಯಾರ್ಥಿಗಳು ಅದರಲ್ಲೂ ಯುವಜನಾಂಗ ರಾಜಕೀಯ ಮತ್ತು ಗುಂಪುಗಾರಿಕೆಯಿಂದ ದೂರವಿರಬೇಕು. ಇವರ ನಡತೆ ಸತ್ಯ ಮತ್ತು ಮೌಲ್ಯಯುತವಾಗಿರಬೇಕು. ಆದರೆ ಇಂದು ಪಠ್ಯವನ್ನೇ ಶೇಕಡ 100 ರಷ್ಟಾಗಿ ಮಾಡಿಕೊಂಡು ವಿದ್ಯಾರ್ಥಿಗಳು ಪುಸ್ತಕದ ಹುಳುಗಳಾಗುತ್ತಿದ್ದಾರೆ. ಈಗ ಪುಸ್ತಕವನ್ನು ಬಿಟ್ಟು ಯಂತ್ರರ್ಷೀ ಹುಳುವಾಗುತ್ತಿದ್ದಾರೆ ಎಂದು ಕುವೆಂಪು ಅಭಿಪ್ರಾಯ ಪಡುತ್ತಾರೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಯಾದವಾಡ ಬಿ. ಎಸ್. , (2004), ಪ್ರಗತಿಶೀಲ ಭಾರತದಲ್ಲಿ ಶಿಕ್ಷಣ, ವಿದ್ಯಾನಿಧಿ ಪ್ರಕಾಶನ, ಗದಗ.
ಮಹಲಿಂಗರಂಗ, (1970), ಅನುಭವಾಮೃತ, ಪ್ರಸಾರಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
ಕುವೆಂಪು, (2006), ಪಾಂಚಜನ್ಯ, ಉದಯ ರವಿ ಪ್ರಕಾಶನ, ಮೈಸೂರು.