ಹಾನಗಲ್ಲ ಪರಿಸರದ ಎರಡು ಅಪ್ರಕಟಿತ ಪೆಣ್ಬುಯಲ್ ಶಾಸನಗಳು

Main Article Content

ದೇವರಡ್ಡಿ ಹದ್ಲಿ

Abstract

ಪ್ರಾಚೀನ ಕರ್ನಾಟಕದಲ್ಲಿ ವೀರ ಮೌಲ್ಯವು 10ನೇ ಶತಮಾನದ ಯುಗ ಧರ್ಮವಾಗಿತ್ತು ಅಂತೆಯೇ ಪಂಪ ರನ್ನ ಜನ್ನ ಮೊದಲಾದ ಕವಿಪುಂಗವರು ತಮ್ಮ ಕಾವ್ಯಗಳಲ್ಲಿ ಅಂದಿನ ಸಾಮಾಜಿಕ ಪರಿಸರದಲ್ಲಿ ಪ್ರಚಲಿತದಲ್ಲಿದ್ದ ಆಚರಣೆ- ಸಂಸ್ಕೃತಿಯನ್ನು ಸಮದಂಡಿಯಾಗಿ; ಸಂದರ್ಭ ಸಿಕ್ಕಾಗಲೆಲ್ಲ ಉಲ್ಲೇಖಿಸಿದ್ದಾರೆ. ಅಂಥ ಪ್ರಸಂಗಗಳಲ್ಲಿ ಅಂದಿನ ಸಮಾಜದ ಧ್ಯೇಯ-ಧೋರಣೆಗಳು ಏನಾಗಿದ್ದವು ಎಂಬುದರ ಸ್ಪಷ್ಟವಾದ ಪರಿಕಲ್ಪನೆ ನಮಗೆ ದೊರಕುತ್ತದೆ. ಪಾನುಂಗಲ್ಲಯ್ನೂಱು ಪರಿಸರದ ಶಾಸನಗಳು ಇಂಥ ಅನೇಕ ಪ್ರಸಂಗಗಳನ್ನು ಉಲ್ಲೇಖಿಸಿವೆ. ಪ್ರಸ್ತುತ ಅಂಥ ಸಾಮಾಜಿಕ ದುರ್ಭರ ಪರಿಸ್ಥಿತಿಯಲ್ಲಿ ಹೋರಾಡಿ ‘ಸ್ತ್ರೀಯರ ಮಾನ’ ರಕ್ಷಣೆ ಮಾಡಿ ಹೋರಾಡಿ ಮಡಿದ ಇಬ್ಬರೂ ಯೋಧರ ಅಪ್ರಕಟಿತ ವೀರಗಲ್ಲಗಳನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ. 

Article Details

Section

Research Articles

Author Biography

ದೇವರಡ್ಡಿ ಹದ್ಲಿ

ಸಂಶೋಧನ ವಿದ್ಯಾರ್ಥಿ, ಮಹಾರಾಜ ಕಾಲೇಜು, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

How to Cite

ದೇವರಡ್ಡಿ ಹದ್ಲಿ. (2025). ಹಾನಗಲ್ಲ ಪರಿಸರದ ಎರಡು ಅಪ್ರಕಟಿತ ಪೆಣ್ಬುಯಲ್ ಶಾಸನಗಳು. ಅಕ್ಷರಸೂರ್ಯ (AKSHARASURYA), 7(01), 64 to 70. https://aksharasurya.com/index.php/latest/article/view/1172

References

ಕಲಬುರ್ಗಿ ಎಂ.ಎಂ., (1980), ಸಮಾಧಿ–ಬಲಿದಾನ –ವೀರಮರಣ ಸ್ಮಾರಕಗಳು, ಐ.ಬಿ.ಎಚ್. ಪ್ರಕಾಶನ, ಬೆಂಗಳೂರು.

ಚಿದಾನಂದಮೂರ್ತಿ ಎಂ., (1984), ವೀರಗಲ್ಲುಗಳು ಮತ್ತು ಮಾಸ್ತಿಕಲ್ಲುಗಳು, ಐ.ಬಿ.ಎಚ್. ಪ್ರಕಾಶನ, ಬೆಂಗಳೂರು.

ಪರಮಶಿವಮೂರ್ತಿ ಡಿ.ವಿ., (2010), ಪೆಣ್ಬುಯ್ಯಲ್, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ರಮೇಶ್‌ ಕೆ.ವಿ. (ಸಂ), ಕೊಟ್ರಯ್ಯ ಸಿ.ಟಿ.ಎಂ. (ಲೇ), (1970), ಎ ನೋಟ್ ಆನ್ ದಿ ಟರ್ಮ್ ‘ಉಡಿಯುರ್ಚ್ಚಿ’ ಆಫ್ ದ ಕನ್ನಡ ಇನ್ಸ್ಕ್ರಿಪ್ಷನ್ಸ್, ಜೆ.ಆ.ಎ.ಸೊ.ಇ.ಸಂ., ಸಂಪುಟ-III, ಎ.ಎಸ್‌.ಐ., ಮೈಸೂರು.

ನಾಗಚಂದ್ರ, (1971), ರಾಮಚಂದ್ರ ಚರಿತ ಪುರಾಣಂ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ಹಂಪ ನಾಗರಾಜಯ್ಯ (ಸಂ.), (2006), ರನ್ನ ಸಂಪುಟ-4; ಸಾಹಭೀಮ ವಿಜಯಂ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಮಂಜುನಾಥ್‌ ಜಿ.ಜಿ. (ಸಂ), (1985), ಚಂದ್ರಪ್ರಭ ಚರಿತೆ: ಚಂದ್ರಿಕಾ ವಿಹಾರ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

ಶ್ರೀನಿವಾಸಚಾರ್ ಡಿ. & ರಾಮಸ್ವಾಮಿ ಅಯ್ಯಂಗಾರ್ ಹೆಚ್.ಆರ್., (1930), ಅನಂತನಾಥ ಪುರಾಣಂ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.