ಲಂಬಾಣಿ ಒಗಟುಗಳಲ್ಲಿ ಸಾಮಾಜಿಕ ಸಂವೇದನೆ
Main Article Content
Abstract
ಜನಪದ ಸಾಹಿತ್ಯ ಜನರ ಜೀವನಾಡಿಯಿಂದ ಬಂದ ಮೌಖಿಕ ಪರಂಪರೆ. ಭಾರತವು ಬಹು ಸಂಸ್ಕೃತಿಯನ್ನು ಹೊಂದಿರುವ ದೇಶ. ಇಲ್ಲಿ ಎಲ್ಲಾ ಜನಾಂಗಗಳು ತಮ್ಮದೇ ಆದ ಆಚಾರ, ವಿಚಾರ, ಸಂಸ್ಕೃತಿ, ಪರಂಪರೆಯನ್ನು ತಮ್ಮದೇ ರೀತಿಯಲ್ಲಿ ಆಚರಿಸಿಕೊಂಡು ಬಂದಿರುವುದನ್ನು ನೋಡಬಹುದು. ಜನಪದ ಸಾಹಿತ್ಯವು ಮನರಂಜನೆಯ ಭಾಗವಾಗಿ ಆರಂಭದಲ್ಲಿ ಬಂದರೂ ಅವುಗಳಲ್ಲಿ ಸಾಮಾಜಿಕ ಸಂವೇದನೆಗಳು, ನೆಲ ಸಂಸ್ಕೃತಿಯ ಮೂಲ ಬೇರುಗಳು, ಸಹಬಾಳ್ವೆಯ ಬದುಕು ಇರುವುದನ್ನು ವಿದ್ವಾಂಸರು ಗುರುತಿಸಿದರು. ಇಂತಹ ನೆಲಮೂಲ ಸಂಸ್ಕೃತಿಯನ್ನು ತನ್ನಲ್ಲಿ ಇಟ್ಟುಕೊಂಡು ಬಂದ ಜನಾಂಗಗಳಲ್ಲಿ ಲಂಬಾಣಿ ಸಮುದಾಯವು ಒಂದು. ಆ ಸಮುದಾಯದಲ್ಲಿನ ಒಗಟುಗಳನ್ನು ಪ್ರಾತಿನಿಧಿಕವಾಗಿ ಆಯ್ಕೆಮಾಡಿಕೊಂಡು, ಅವುಗಳಲ್ಲಿನ ಸಾಮಾಜಿಕ ಸಂವೇದನೆಯನ್ನು ವಿವೇಚಿಸುವುದು ಈ ಲೇಖನದ ಉದ್ದೇಶ.
ಒಗಟುಗಳ ಕಾರ್ಯ ಕುಶಲತೆಯು ಜನಾಂಗದಿಂದ ಜನಾಂಗಕ್ಕೆ ಭಿನ್ನವಾಗಿ ಕಂಡುಬಂದರು ಅವುಗಳ ಉದ್ದೇಶ ಮಾತ್ರ ಒಂದೇ ಆಗಿ ಮೇಲ್ನೋಟಕ್ಕೆ ಕಂಡುಬರುತ್ತದೆ. ಅದು ಆ ಸಮುದಾಯದ ಜೀವನಾಡಿಯಾಗಿ ತಲೆಮಾರಿನಿಂದ ತಲೆಮಾರಿಗಿ ಹರಿದು ಬಂದಿರುತ್ತದೆ. ಅಂತೆಯೇ ಹಿಂದುಳಿದ ಹಾಗೂ ಗಿರಿಜನ ವರ್ಗಗಳಲ್ಲಿ ಒಂದಾದ ಲಂಬಾಣಿಗರ ಭಾಷೆಯಲ್ಲಿ ಹಾಡು, ಕಥೆ, ಗಾದೆಗಳಂತೆಯೇ ಒಗಟುಗಳು ಕೂಡ ಅಪಾರ ಪ್ರಮಾಣದಲ್ಲಿ ಇವೆ. ಇವು ಒಂದು ಸಮುದಾಯದ ಜನಾಂಗಿಕ ವೈಶಿಷ್ಟ್ಯವನ್ನು, ಸಂಸ್ಕೃತಿಯ ಮೂಲ ಭೇರುಗಳನ್ನು ದಟ್ಟವಾಗಿ ಗರ್ಭಿಕರಿಸಿಕೊಂಡಿವೆ. ಅವುಗಳನ್ನು ಸಾಂಸ್ಕೃತಿಕ ಒಗಟುಗಳು, ಒಗಟು ಕಥೆಗಳು, ಸವಾಲುಗಳು, ಗೌಪ್ಯ ಸಂಭಾಷಣೆಗಳು ಮುಂತಾಗಿ ಈ ಒಗಟುಗಳನ್ನು ವರ್ಗಿಕರಿಸಿ ಅಧ್ಯಯನ ಮಾಡಲಾಗಿದೆ.
ಲಂಬಾಣಿ ಒಗಟುಗಳು ಆ ಸಮುದಾಯದ ನಿಗೂಢ ಲೋಕವನ್ನು ಹಾಗೂ ಅದರ ಅಂತರ್ಯದಲ್ಲಿರುವ ಸಮಾಜದ ಹಲವು ನೆಲೆಗಳನ್ನು, ನೆಲ ಸಂಸ್ಕೃತಿಯ ಬೇರುಗಳನ್ನು ತೆರೆದಿಡುತ್ತವೆ. ಹೀಗೆ ಒಂದು ಜನಾಂಗದ ಮೌಖಿಕ ಸಂಸ್ಕೃತಿಯ ಜಗತ್ತನ್ನು ಆಪ್ಯವಾಗಿ ತೆರೆದಿಡುವ ಕರ್ಯವನ್ನು ಈ ಒಗಟುಗಳು ನಿರ್ವಹಿಸುತ್ತವೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಸಣ್ಣರಾಮ, (2016), ದಲಿತ ಚಳವಳಿ ನೆನ್ನೆ-ಇಂದು-ನಾಳೆ, ನೇಕಾರ ಪ್ರಕಾಶನ, ಶಿವಮೊಗ್ಗ.
ಮೊಗಳ್ಳಿ ಗಣೇಶ, (2006), ದಲಿತ ಕಥನ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ.
ಇಂದಿರಾ ಕೃಷ್ಣಪ್ಪ (ಸಂ), (2007), ಬಯಲು? ಬೆತ್ತಲೆ! ಚಂದ್ರಗುತ್ತಿ, ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್, ಬೆಂಗಳೂರು.
ಅರವಿಂದ ಮಾಲಗತ್ತಿ (ಸಂ), (2006), ದಲಿತ ಮಾರ್ಗ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
ಅಣ್ಣಪ್ಪ ಎನ್. ಮಳೀಮಠ್, (2015, ಸ್ವಾತಂತ್ರ್ಯ ಚಳವಳಿ ಮತ್ತು ಕನ್ನಡ ಸಾಹಿತ್ಯ, ಮೇಘ ಪಬ್ಬಿಕೇಷನ್ಸ್, ಬೆಂಗಳೂರು.
ಶ್ರೀಕಂಠ ಕೂಡಿಗೆ, (1999), ಕನ್ನಡ ಲಾವಣಿಗಳು, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
ಪ್ರಶಾಂತ ನಾಯಕ ಜಿ. , (2007), ಕನ್ನಡ ಸಾಹಿತ್ಯ ಮತ್ತು ದಲಿತ ಪರಂಪರೆ, ಕುವೆಂಪು ವಿಶ್ವವಿದ್ಯಾಲಯ, ಜ್ಞಾನ ಸಹ್ಯಾದ್ರಿ, ಶಂಕರಘಟ್ಟ, ಶಿವಮೊಗ್ಗ.
ಸಣ್ಣರಾಮ, (2020), ಲಂಬಾಣಿ ಸಂಸ್ಕೃತಿ, ನೇಕಾರ ಪ್ರಕಾಶನ, ಸೊರಬ.