ಮಹಿಳಾ ಸಬಲೀಕರಣದಲ್ಲಿ ಕನ್ನಡ ನಿಯತಕಾಲಿಕೆಗಳ ಪಾತ್ರ

Main Article Content

ಸುಜೀಶ್ ಎಸ್.

Abstract

ಭಾರತೀಯ ಸಮಾಜ ಪುರುಷ ಪ್ರಧಾನವಾದುದು. ಶತಶತಮಾನಗಳಿಂದಲೂ ಹೆಣ್ಣನ್ನು ಎರಡನೇಯ ದರ್ಜೆಯ ಪ್ರಜೆಯನ್ನಾಗಿ ನಡೆಸಿಕೊಂಡು ಬಂದಿರುವುದನ್ನು ಕಾಣಬಹುದಾಗಿದೆ. ಈ ಬಗೆಯ ಸಾಮಾಜಿಕ ವ್ಯವಸ್ಥೆಯಿಂದ ಶೋಷಣೆಗೆ ಗುರಿಯಾದ ಹೆಣ್ಣು ಆ ಶೋಷಣೆಯಿಂದ ಹೊರಬರಲು ನಿರಂತರವಾದ ಪ್ರಯತ್ನ ಮಾಡಿದ ಫಲವೆಂಬಂತೆ ಇಂದು ಆಕೆಯ ಸಾಮಾಜಿಕ ಸ್ಥಿತಿ-ಗತಿಯಲ್ಲಿ ಕೊಂಚ ಸುಧಾರಣೆಯನ್ನು ಕಾಣಲು ಸಾಧ್ಯವಾಗುತ್ತಿದೆ. ಈ ಬಗೆಯ ಸುಧಾರಣೆಯಲ್ಲಿ ಸಮೂಹ ಮಾಧ್ಯಮಗಳ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. 
ಸಮೂಹ ಮಾಧ್ಯಮಗಳು ಸುಂದರ ಸಮಾಜ ನಿರ್ಮಾಣದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಪ್ರಸ್ತುತ ಸಮೂಹ ಮಾಧ್ಯಮಗಳು ಹಣ ಗಳಿಕೆಯ ಭರದಲ್ಲಿ ತನ್ನ ನೈತಿಕ ಮೌಲ್ಯವನ್ನು ಮರೆತಂತಿದೆ. ಆದಾಗಿಯೂ ಕೆಲವು ಸಮೂಹ ಮಾಧ್ಯಮಗಳು ತಮ್ಮ ಸಾಮಾಜಿಕ ಜವಾಬ್ದಾರಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿರುವುದು ಸಹ ಪ್ರಶಂಸನೀಯ ಸಂಗತಿಯಾಗಿದೆ. ಸಮೂಹ ಮಾಧ್ಯಮಗಳಲ್ಲಿ ನಿಯತಕಾಲಿಕೆಯೂ ಸಹ ಒಂದಾಗಿದೆ. ಆಧುನೀಕರಣದ ಆವಿಷ್ಕಾರದಿಂದಾಗಿ ನಿಯತಕಾಲಿಕೆಗಳು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿರುವ ಪ್ರಸ್ತುತ ದಿನಮಾನಗಳಲ್ಲಿಯೂ ಸಹ ಕೆಲವು ನಿಯತಕಾಲಿಕೆಗಳು ಸಾಮಾಜಿಕ ಜವಬ್ದಾರಿಯನ್ನು ಹೊತ್ತು ಕಾರ್ಯನಿರ್ವಹಿಸುತ್ತ ಬರುತ್ತಿವೆ. 
ಈ ನಿಯತಕಾಲಿಕೆಗಳು ಸಮಾಜಮುಖಿಯಾದ ವಸ್ತುವನ್ನು ಆಯ್ಕೆ ಮಾಡಿಕೊಂಡು ಲೇಖನ, ಕಥೆ, ಕವನಗಳನ್ನು ಪ್ರಕಟಿಸುವ ಮೂಲಕ ಸಮಾಜವನ್ನು ತಿದ್ದುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿವೆ. ಈ ನೆಲೆಯಲ್ಲಿ ಕನ್ನಡ ನಿಯತಕಾಲಿಕೆಗಳು ಮಹಿಳೆಯರ ಸಬಲೀಕರಣದಲ್ಲಿ ಬೀರಿರುವ ಪ್ರಭಾವವನ್ನು ಗುರುತಿಸುವ ಪ್ರಯತ್ನವನ್ನು ಈ ಲೇಖನದ ಮೂಲಕ ಮಾಡಲಾಗಿದೆ. 

Article Details

Section

Research Articles

Author Biography

ಸುಜೀಶ್ ಎಸ್.

ಸಹಾಯಕ ಪ್ರಾಧ್ಯಾಪಕರು, ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜು, ಮಂಜೇಶ್ವರ, ಕಾಸರಗೋಡು, ಕೇರಳ. 

 

How to Cite

ಸುಜೀಶ್ ಎಸ್. (2025). ಮಹಿಳಾ ಸಬಲೀಕರಣದಲ್ಲಿ ಕನ್ನಡ ನಿಯತಕಾಲಿಕೆಗಳ ಪಾತ್ರ. ಅಕ್ಷರಸೂರ್ಯ (AKSHARASURYA), 7(01), 52 to 56. https://aksharasurya.com/index.php/latest/article/view/1170

References

ಸರೋಜಾ ಕೆ., (2004), ಮಹಿಳೆ ಮತ್ತು ಸಮೂಹ ಮಾಧ್ಯಮಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಕಲಾವತಿ ಬಿ.ಜಿ., (2010), ಜಾಹಿರಾತುಗಳಲ್ಲಿ ಮಹಿಳಾ ಪ್ರಾತಿನಿಧೀಕರಣ, ಪ್ರಗತಿಗ್ರಾಫಿಕ್ಸ್, ಬೆಂಗಳೂರು.