ಕನ್ನಡ ಕಲಾ ಸಿನೆಮಾ ಪರಂಪರೆ: ಸಾಹಿತ್ಯಕ-ಸಾಮಾಜಿಕ ಬದ್ಧತೆ
Main Article Content
Abstract
ಸಿನೆಮಾ ಆರಂಭದಿಂದಲೂ ಒಂದು ಪ್ರಭಾವಿಶಾಲಿಯಾದ ಮಾಧ್ಯಮವಾಗಿದೆ. ಇದಕ್ಕೆ ಅದು ಒಳಗೊಳ್ಳುವ ಕಲೆಯ ಹಲವು ಸಂಗತಿಗಳು ಕಾರಣವಾಗಿವೆ. ಹೀಗಾಗಿ ಸಿನೆಮಾ ಜನರ ಬದುಕನ್ನು ಪ್ರಭಾವಿಸಬಲ್ಲ ಮಾಧ್ಯಮ ಎನಿಸಿದೆ ಮತ್ತು ಆಕರ್ಷಣೆಗೆ ಪಾತ್ರವಾಗಿದೆ. ಈ ಹಿನ್ನೆಲೆಯಲ್ಲಿ ಸಾಹಿತ್ಯದಂತೆ ಇದನ್ನು ಸಹ ಸಮಾಜದ ʼಪ್ರತಿ ಬಿಂಬʼ ಇಲ್ಲವೆ ʼಗತಿಬಿಂಬʼ ಎನ್ನಬಹುದಾಗಿದೆ. ಅಂದರೆ ಒಂದು ಸಾಹಿತ್ಯ ಕೃತಿ ಓದುಗನ ಮೇಲೇ ಪ್ರಭಾವವನ್ನು ಬೀರು ವಂತೆ, ಪ್ರೇಕ್ಷಕನು ಕೂಡ ಒಂದು ಸಿನೆಮಾದ ವೀಕ್ಷಣೆಯಿಂದ ಪ್ರಭಾವಿತನಾಗುವನೆಂದು ಭಾವಿಸಬಹುದಾಗಿದೆ. ಆದರೂ ಇವೆರಡು ಭಿನ್ನ ಮಾಧ್ಯಮಗಳು ಎಂಬ ತಿಳುವಳಿಕೆ ಅಗತ್ಯ. ಏಕೆಂದರೆ ಸಾಹಿತ್ಯ ಕೃತಿಯೊಂದು ಸಿನೆಮಾ ಮಾಧ್ಯಮಕ್ಕೆ ಬಂದಾಗ ಅದು ತನ್ನ ಸ್ವರೂಪ ದಲ್ಲಿ ಪರಿವರ್ತನೆ ಹೊಂದಿ ʼಚಿತ್ರಕಥೆʼ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತದೆ. ಹೀಗೆ ಸಾಹಿತ್ಯದ ರೂಪವೊಂದು ಚಿತ್ರಕಥೆಯಾಗಿ ಸಿನೆಮಾ ಮಾಧ್ಯಮದ ಮೂಲಕ ಅಭಿವ್ಯಕ್ತಿ ಗೊಳ್ಳುವಾಗ ಅದು ಒಳಗೊಳ್ಳುವ ಸಾಹಿತ್ಯಕ-ಸಾಮಾಜಿಕ ಬದ್ಧತೆಯನ್ನು ಕನ್ನಡದ ʼಕಲಾ ಸಿನೆಮಾʼ, ʼಪರ್ಯಾಯ ಸಿನೆಮಾʼ, ʼಸಮಾನಾಂತರ ಸಿನೆಮಾʼಗಳು ಎಂದು ಕರೆಸಿಕೊಳ್ಳುವ ಚಿತ್ರಗಳ ಪರಂಪರೆಯನ್ನು ಆಧರಿಸಿ ವಿಶ್ಲೇಷಿಸುವುದು ಈ ಲೇಖನದ ಪ್ರಮುಖ ಉದ್ದೇಶ ವಾಗಿರುತ್ತದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಪುಟ್ಟಸ್ವಾಮಿ ಕೆ. , (2009), ಸಿನಿಮಾ ಯಾನ, ಹಸಿರು ಪ್ರಕಾಶನ, ಬೆಂಗಳೂರು.
ವಿಠ್ಠಲ್‌ರಾವ್, (2022), ಕನ್ನಡ ಸಿನಿಮಾ ಹೊಸ ಅಲೆ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು.
ಶಂಕರ್ ಎನ್. ಎಸ್. , (2018), ಚಿತ್ರಕಥೆ ಹಾಗೆಂದರೇನು? ಕರ್ನಾಟಕ ಚಲನಚಿತ್ರ ಅಕಾಡೆಮಿ, ಬೆಂಗಳೂರು.
ನಮ್ಮ ಕರ್ನಾಟಕ, (೨೦೨೫), ಈದಿನ.ಕಾಂ, ಬೆಂಗಳೂರು.