ಚಲನಚಿತ್ರದಲ್ಲಿನ ಲಿಂಗ ಸಂಬಂಧಿತ ಸಮಸ್ಯೆಗಳು
Main Article Content
Abstract
ಚಲನಚಿತ್ರವು ಸಮಾಜದ ಜೀವನಶೈಲಿ ಸಂಸ್ಕೃತಿಯ ಪ್ರತಿಬಿಂಬ. ಹಾಗೂ ಸಮಾಜದ ಮೇಲೆ ಪ್ರಭಾವ ಬೀರುವ ಶಕ್ತಿಯುತವಾದ ಮಾಧ್ಯಮವಾಗಿದೆ. ಆದರೆ ಇದರಲ್ಲಿ ಲಿಂಗ ಸಂಬಂಧಿತ ಅಸಮಾನತೆ ಹಾಗೂ ಸವಾಲುಗಳು ಹೆಚ್ಚಿವೆ. ಈ ಪ್ರಬಂಧವು ಸಿನಿಮಾ ಮಾಧ್ಯಮದಲ್ಲಿ ಲಿಂಗಗಳ ಆಧಾರದ ಮೇಲೆ ನಡೆಯುತ್ತಿರುವ ತಾರತಮ್ಯ ಹಾಗೂ ತುಳಿತ ಮತ್ತು ಸಂವೇದನೆ ಸಂಬಂಧಿತ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತದೆ. ಚಿತ್ರೋದ್ಯಮವು ಒಂದು ಸಾರ್ವಜನಿಕ ಅರಿವು, ವಿನೋದ ಹಾಗೂ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಒಂದು ಪ್ರಧಾನವಾದ ಮಾಧ್ಯಮವಾಗಿದೆ. ಅದರಲ್ಲಿ ನಡೆಯುವ ಮಹಿಳಾ ಪಾತ್ರಗಳ ಚಿತ್ರಣ, ಲಿಂಗ ಅಸಮಾನತೆ, ಶೋಷಣೆ, ದೇಹ ಸೌಂದರ್ಯವನ್ನು ಪ್ರಧಾನವಾಗಿರಿಸಿ ಚಿತ್ರಿಸುವುದು ಹಾಗೂ ಲೈಂಗಿಕ ಶೋಷಣೆಗಳು ಮತ್ತು ಲಿಂಗಗಳ ಆಧಾರದ ಮೇಲೆ ನಡೆಯುವ ಭತ್ಯೆ ವಿತರಣೆಯು ಸೇರಿದ ಸಮಸ್ಯೆಗಳಾಗಿವೆ.
ಸಿನಿಮಾ ಕ್ಷೇತ್ರದಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳು, ಕೌಶಲ್ಯ ಹೊಂದಿದ ಅಥವಾ ಹೊಂದಿರದ ಸಂವೇದನಶೀಲ ಪಾತ್ರಗಳ ಕೊರತೆ, ಜಾಹೀರಾತುಗಳಲ್ಲಿ ಸ್ತ್ರೀಯರನ್ನು ತೊಡಗಿಸಿಕೊಳ್ಳುವ ರೀತಿ ಇವು ಸಮಾಜದ ಮೇಲೆ ಬೀರುತ್ತಿರುವ ಪರಿಣಾಮಗಳು ಈ ಪ್ರಬಂಧದ ಪ್ರಮುಖ ಚಿಂತನೆಗಳಾಗಿವೆ. ಜೊತೆಗೆ ಭಾರತೀಯ ಹಾಗೂ ಕನ್ನಡ ಚಿತ್ರರಂಗ ಉದ್ಯಮದಲ್ಲಿ ಲಿಂಗ ಅಸಮಾನತೆಯ ಶ್ರೇಣಿಗಳನ್ನು ವಿಶ್ಲೇಷಿಸಲಾಗಿದ್ದು, ಸಮಾಜದಲ್ಲಿ ಸಮಾನವಾದ ಲಿಂಗ ಭಾವನೆಗಳು ಚಿತ್ರ ಮಾಧ್ಯಮದಲ್ಲಿ ಹೇಗೆ ಬಳಸಬೇಕು ಎಂದು ವಿವರಿಸಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಜ್ಯೋತಿ ಶಂಕರ್, (2009), ಮಹಿಳಾ ಸಾಹಿತ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.
ಕಮಲ್ ಕುಮಾರ್ & ಸಂತೋಷ್ ಕುಮಾರ್, (2012) ಉದ್ಯೋಗಸ್ಥ ಮಹಿಳೆಯರ ಹಕ್ಕುಗಳು, ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ, ನವದೆಹಲಿ.