ಕನ್ನಡ ಚಲನಚಿತ್ರಗಳಲ್ಲಿ ಚದುರಂಗ ಮತ್ತು ತ. ರಾ. ಸು. ಅವರ ಕಾದಂಬರಿಗಳು

Main Article Content

ಉಮಾಶಂಕರ ಓ.ಎಂ.

Abstract

ಸಾಹಿತ್ಯ ಮತ್ತು ಸಿನಿಮಾ ಸದಭಿರುಚಿಯ ಸೃಜನಾತ್ಮಕ ಕಲೆಗಳಾಗಿವೆ. ಒಂದು ಅಕ್ಷರ ರೂಪವಾಗಿದ್ದರೆ ಮತ್ತೊಂದು ದೃಶ್ಯ ರೂಪದ್ದಾಗಿದೆ. ಜಗತ್ತಿನ ಬಹುತೇಕ ಭಾಷೆಯ ಸಿನಿಮಾ ರಂಗಗಳು ಸಾಹಿತ್ಯ ಕ್ಷೇತ್ರದ ಕಥೆ, ಕಾದಂಬರಿ ಹಾಗೂ ಭಾವಗೀತೆಗಳನ್ನು ಆಶ್ರಯಿಸಿ ಬೆಳೆದಿವೆ. ಇಂತಹ ಪಯಣಕ್ಕೆ ದೀರ್ಘವಾದ ಇತಿಹಾಸವಿದೆ. ಕನ್ನಡ ಚಲನಚಿತ್ರ ಕ್ಷೇತ್ರದ ಇತಿಹಾಸವನ್ನು ಗಮನಿಸಿದಾಗ ಪ್ರಗತಿಶೀಲ ಸಾಹಿತ್ಯ ಪಂಥದ ಸಾಹಿತಿಗಳು ರಚಿಸಿದ ಕಥೆ, ಕಾದಂಬರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚಲನಚಿತ್ರಗಳಾಗಿರುವುದು ಕಂಡುಬರುತ್ತದೆ. ಇಲ್ಲಿ ಕೆಲವೊಮ್ಮೆ ಸಾಹಿತ್ಯ ಗೆದ್ದು ಸಿನಿಮಾ ಸೋತಿರುವ ನಿದರ್ಶನಗಳಿವೆ. ಕೆಲವು ಸಿನಿಮಾಗಳ ಕಥೆ ಸೋತು ಹಾಡುಗಳಿಂದಾಗಿ ಜನಪ್ರಿಯಗೊಂಡ ಪ್ರಸಂಗಗಳಿವೆ. 

Article Details

Section

Research Articles

Author Biography

ಉಮಾಶಂಕರ ಓ.ಎಂ.

ಸಹಾಯಕ ಪ್ರಾಧ್ಯಾಪಕ, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಶಿವಮೊಗ್ಗ.

 

How to Cite

ಉಮಾಶಂಕರ ಓ.ಎಂ. (2025). ಕನ್ನಡ ಚಲನಚಿತ್ರಗಳಲ್ಲಿ ಚದುರಂಗ ಮತ್ತು ತ. ರಾ. ಸು. ಅವರ ಕಾದಂಬರಿಗಳು. ಅಕ್ಷರಸೂರ್ಯ (AKSHARASURYA), 7(01), 57 to 63. https://aksharasurya.com/index.php/latest/article/view/1171

References

ಬೆಳಗಲಿ ದು.ನಿಂ., (1994), ಸಾಹಿತ್ಯ, ಸಾಧನ ಮತ್ತು ಜೀವನ, ವಿಶ್ವ ಕರ್ನಾಟಕ ಸಾಹಿತ್ಯ ಮಂಟಪ, ಬಿಜಾಪುರ.

ಸುಬ್ಬರಾವ್ ತ.ರಾ., (2018), ಚಂದನದಗೊಂಬೆ, ಹೇಮಂತ ಸಾಹಿತ್ಯ ಪ್ರಕಾಶನ, ಬೆಂಗಳೂರು.

ಸುಬ್ಬರಾವ್ ತ.ರಾ., (2001), ಹಂಸಗೀತೆ, ಗೀತಬುಕ್ ಹೌಸ್, ಮೈಸೂರು.

ಶ್ರೀನಿವಾಸಮೂರ್ತಿ ಪಿ.ಜಿ., (1995), ಕನ್ನಡ ಚಿತ್ರರಂಗ, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು.

ನಾರಾಯಣ ಕೆ.ವಿ., (2020), ತೊಂಡುಮೇವು: ಕಂತೆ-ಮೂರು, ಪ್ರಗತಿ ಗ್ರಾಫಿಕ್ಸ್, ಬೆಂಗಳೂರು.

ಕೇಶವಮೂರ್ತಿ ಆರ್., ಸಾಪ್ತಾಹಿಕ ಪ್ರಭ, ಕನ್ನಡ ಪ್ರಭ ಪತ್ರಿಕೆ, ದಿನಾಂಕ: 30. 11.2013.

ರಾಘವೇಂದ್ರ ಅಡಿಗ, ಎಚ್ಚೆನ್, ಸಂಕ್ರಾಂತಿ ಬ್ಲಾಗ್, ದಿನಾಂಕ: 01.01.2025.