Table of Contents
Trodden Path
ಬೌದ್ಧರು ನಿರ್ಮಿಸಿದ ಪ್ರಾಕೃತ ಜಗದ್ವಲಯ
1 to 25
ಕ್ರಿ.ಪೂ. ಆರನೆಯ ಶತಮಾನದಲ್ಲಿ ಬೌದ್ಧ, ಜೈನರಂತಹ ಅವೈದಿಕ ಮತಪ್ರವರ್ತಕರು ತಮ್ಮ ತತ್ವಗಳನ್ನು ಹಂಚಿಕೊಳ್ಳಲು ಜನಸಾಮಾನ್ಯರ ಪ್ರಾಕೃತ ನುಡಿಗಟ್ಟುಗಳನ್ನು ಆಯ್ಕೆ ಮಾಡಿಕೊಂಡ ಹಿನ್ನೆಲೆಯನ್ನು ಐತಿಹಾಸಿಕವಾಗಿ ವಿಶ್ಲೇಷಿಸಲಾಗಿದೆ. ಅಶೋಕ ಚಕ್ರವರ್ತಿಯು ಪ್ರಾಕೃತ ಭಾಷೆ ಬಳಸಿ ರೂಪಿಸಿದ ವಿಶಾಲವಾದ ಭಾಷಾ ಜಗದ್ವಲಯದ ಬೆಳವಣಿಗೆಯನ್ನು ಚರ್ಚಿಸಲಾಗಿದೆ. ತದನಂತರ ಬೌದ್ಧ-ಜೈನ ಪರಂಪರೆಗಳು ಸಂಸ್ಕೃತದತ್ತ ಹೊರಳಿದ ಮತ್ತು ವೈದಿಕರು ಪ್ರಾಕೃತದತ್ತ ಒಲವು ತೋರಿದ ವಿಶಿಷ್ಟ ಭಾಷಿಕ ಸ್ಥಿತ್ಯಂತರಗಳನ್ನು ಶಾಸನಗಳ ಆಧಾರದ ಮೇಲೆ ಮಂಡಿಸಲಾಗಿದೆ. ಪ್ರಾಕೃತದ ಏಕಸ್ವಾಮ್ಯ ಅಂತ್ಯಗೊಂಡು, ಸಂಸ್ಕೃತ-ಪ್ರಾಕೃತ ಮಿಶ್ರಭಾಷಾ ಸಾಹಿತ್ಯ ಹುಟ್ಟಿಕೊಂಡ ಐತಿಹಾಸಿಕ ಘಟ್ಟಗಳನ್ನು ಕೂಡ ಇಲ್ಲಿ ಗುರುತಿಸಲಾಗಿದೆ.
Research Articles
Dravidian Novels through Ecological Perspectives
26 to 34
The present research paper is intended to explore the selected three novels in South Indian languages through an ecological perspective as the comparative study in this particular area has not been conducted so far. Carvalho (1980) by K.P. Purnachandra Tejasvi in Kannada, Enmakaje (2009) by AmbikaSutanMangad in Malayalam, Ini... by MalanmyPonnuchami in Tamil are the selected novels to be investigated. Though the Novelists of South India are unfurling the local ecological concerns, they also reveal the global connections behind these issues. Therefore the hypothesis here is that ecology-based local novels are having dialogues with global issues. Carvalho, a scientist with an international background and funding, fails to find a flying lizard and Mandanna, a rural truant claims to have seen the flying wonder. Thus the dialogical imagination of the global and local knowledge of ecology has been depicted. Devayaani and Neelakanta in Enmakaje discard their urban life and wish to lead a peaceful rural life. They reach Enmakaje and witness the sufferings of the people due to the aerial spray of the pesticide over the cashew grove. The novel Ini strongly argues that agriculture is not merely a job but is a culture. Chemical fertilizers infused into the soil will delete the goodness of the earth. In depth study of these three novels as a part of the ecological discourse in Dravidian languages will provide a vivid picture of Human-Nature, Urban-Rural conflicts also.
Impact of COVID-19 on online shopping- A study with special reference to Belthangady Taluk
35 to 45
The corona virus (COVID-19) pandemic is first and prime human tragedy across the globe, affecting the lives of millions of people. It has greatly impacted the global economy. The worldwide spread of the COVID-19 pandemic has disrupted how people buy products and services and how they perceive e-commerce. The standardized lockdown rules across India and the growing hesitation among consumers to go outside and shop for essential goods have tilted the nation towards e-commerce. With the emergence of globalization and digitization, people, places, and products have started coming close, approachable as well as affordable. Life was very fast, as everything from toilet roll to airplane ticket was just one click away. All the business plans, meetings, trips came to halt with the introduction of COVID-19 to the globe. The situation of the COVID-19 outbreak, made people think, dynamically and timely diagnosis of how families have adjusted their spending and online shopping, and what are the characteristics of the households who have responded the fastest and strongest. This study is an attempt to see the impact of COVID-19 on buying behaviour of consumers through online shopping with Special reference to Belthangady Taluk.
ಪ್ರಭಾಕರ ನೀರ್ಮಾರ್ಗರ 'ತಿಲ್ಲಾನ' ಕಾದಂಬರಿಯಲ್ಲಿ ಭೂತಾರಾಧನೆಯ ಮುಂದಿರುವ ತಲ್ಲಣಗಳು
46 to 55
ಪ್ರಭಾಕರ ನೀರ್ಮಾರ್ಗರ 'ತಿಲ್ಲಾನ' ಕಾದಂಬರಿಯು ಕರಾವಳಿಯ ಭೂತಾರಾಧನೆಯ ಸ್ವರೂಪದ ಹಿನ್ನೆಲೆಯನ್ನು ಕುರಿತ ಕಥನವಾಗಿದೆ. ಭೂತಾರಾಧನೆಯಲ್ಲಿ ಹಿಂದಿನಿಂದಲೂ ನರ್ತಕರಾಗಿ ವೇಷಧಾರಿಗಳಾಗಿ ಭಾಗವಹಿಸಿ, ಭೂತ ಮಾಧ್ಯಮಗಳಾಗಿ ಭಾಗವಹಿಸಿ ದುಡಿಯುತ್ತಿರುವ ನಲಿಕೆ ಜನಾಂಗದ ಸಾಮಾಜಿಕ, ಸಾಂಸ್ಕೃತಿಕ ಬದುಕನ್ನು ಅನಾವರಣಗೊಳಿಸುವ ಕಾದಂಬರಿ ಇದಾಗಿದೆ. ಭೂತಾರಾಧನೆಗೆ ಸಂಬಂಧಿಸಿದ ತಮ್ಮ ಕುಲಕಸುಬನ್ನು ಆಧುನಿಕ ಕಾಲಘಟ್ಟದಲ್ಲಿ ಮುಂದುವರಿಸಿಕೊಂಡು ಹೋಗುವ ಸಂದರ್ಭದಲ್ಲಿ ಆ ಸಮುದಾಯದವರು ಎದುರಿಸುವ ಸವಾಲುಗಳ ಕುರಿತಂತೆ ಈ ಕಾದಂಬರಿ ಕೆಲವು ಮಹತ್ವದ ಒಳನೋಟಗಳನ್ನು ಪರಿಚಯಿಸುತ್ತದೆ. ಭೂತಾರಾಧನೆಯ ಪಠ್ಯ ಮತ್ತು ಪ್ರದರ್ಶನಕ್ಕೆ ಸಂಬಂಧಿಸಿದಂತೆ ಈವರೆಗೆ ಶೈಕ್ಷಣಿಕ ನೆಲೆಯಲ್ಲಿ ನಡೆದ ಕ್ಷೇತ್ರಕಾರ್ಯ, ಅಧ್ಯಯನ ಮತ್ತು ಸಂಶೋಧನೆಯ ಕುರಿತಂತೆ ಕೆಲಸಗಳು ಈ ಆರಾಧನಾ ಪ್ರಕಾರದ ಉಳಿವಿಗೆ ಯಾವ ನೆಲೆಯಲ್ಲಿ ನೆರವಾಗಿದೆ ಎಂಬುದು ಈ ಕಾದಂಬರಿ ಎತ್ತುವ ಒಂದು ಮಹತ್ವದ ಪ್ರಶ್ನೆಯಾಗಿದೆ. ಅಂತೆಯೆ ಈ ಮಾದರಿಯ ಅಧ್ಯಯನಗಳ ಪರಿಣಾಮವಾಗಿ ಭೂತಾರಾಧನೆಯಲ್ಲಿ ತಮ್ಮ ಬದುಕನ್ನೇ ಅರ್ಪಿಸಿಕೊಂಡ ಕಲಾವಿದರಿಗೆ ಸಿಗಬಹುದಾದ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಮನ್ನಣೆ ಎಂತಹದ್ದು ಎಂಬುದು ಕಾದಂಬರಿ ಎದುರುಗೊಳ್ಳುವ ಇನ್ನೊಂದು ಮಹತ್ವದ ಸವಾಲು ಸಹ ಹೌದು. ಈ ಬಗೆಯ ಮಹತ್ವದ ಸವಾಲುಗಳ ಜತೆಯಲ್ಲಿಯೇ ಕಾದಂಬರಿ ತನ್ನನ್ನು ತಾನು ಮತ್ತೆ ಪರಿಚಯಿಸಿಕೊಳ್ಳುತ್ತದೆ.
ಉತ್ತರ ರಾಮಾಯಣ ಆಧಾರಿತ ಕನ್ನಡ ಕಾವ್ಯಗಳು
56 to 62
ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡಿರುವ ರಾಮಾಯಣ ಶಕ್ತಿಯುತ ಶ್ರವ್ಯಕಾವ್ಯವಾಗಿ ರಚನೆಯಾಗಿದ್ದು, ಈ ರಾಮಾಯಣದ ಮೂಲಕ ಸಾವಿರಾರು ವರ್ಷಗಳ ಹಿಂದಿನ ಇನ್ನು ಮುಂಬರುವ ಲಕ್ಷಾಂತರ ವರ್ಷಗಳ ಜನರ ಬದುಕಿಗೆ ಪ್ರಜ್ಞಾವಂತ ಪ್ರಗತಿಯನ್ನು, ಪ್ರಜ್ಞೆಯ ಜೀವನವನ್ನು ಕಟ್ಟಿ ಕೊಡುತ್ತದೆ. ವಾಲ್ಮೀಕಿ ವಿರಚಿತ ರಾಮಾಯಣದ ಉತ್ತರ ರಾಮಾಯಣ ಭಾಗವು 14 ವರ್ಷ ವನವಾಸ ಮುಗಿಸಿ ಸೀತೆಯನ್ನು ಅಪಹರಿಸಿದ್ದ ರಾವಣನನ್ನು ಸಂಹರಿಸಿ, ಅಯೋಧ್ಯೆಗೆ ಹಿಂತಿರುಗಿ, ಪಟ್ಟಾಭಿಷೇಕವಾದ ನಂತರದ ಭಾಗವೇ ಉತ್ತರ ರಾಮಾಯಾಣ. ಈ ಭಾಗ ಪ್ರಕ್ಷಿಪ್ತ ಎಂಬ ವಾದ ವಿವಾದಗಳು ನಡೆದರೂ ಉತ್ತರ ರಾಮಾಯಣಕ್ಕೆ ಸಂಬಂಧಿಸಿದ ಹಲವಾರು ಭಾಗಶಃ ಹಾಗೂ ಪೂರ್ಣ ಪ್ರಮಾಣದ ಕೃತಿಗಳು ಕನ್ನಡದಲ್ಲಿ ರಚನೆಯಾದವು. ಕನ್ನಡ ಉತ್ತರ ರಾಮಾಯಣದಲ್ಲಿ ನಾರಾಯಣ, ನರಸ, ತಿರುಮಲೆ ವೈದ್ಯ, ಯೋಗೀಂದ್ರ, ಸೋಸಲೆ ಅಯ್ಯಶಾಸ್ತ್ರಿ ಇವರು ಕೃತಿ ರಚನೆ ಮಾಡಿದರೂ, ಕನ್ನಡ ಸಾಹಿತ್ಯದಲ್ಲಿ ಅಲಕ್ಷ್ಯಕ್ಕೆ ಒಳಪಟ್ಟ ಕವಿಗಳು. ಸಂಸ್ಕೃತ ರಾಮಾಯಣದ ವಸ್ತುವನ್ನು ಅನುಸರಿಸಿ ಕನ್ನಡ ಉತ್ತರ ರಾಮಾಯಣ ಕೃತಿಯನ್ನು ಸಮರ್ಥವಾಗಿ ರಚಿಸಿದರೂ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿಲ್ಲ. ಸುಮಾರು 15ನೇ ಶತಮಾನದಿಂದ 19ನೇ ಶತಮಾನದವರೆಗೆ ಕನ್ನಡದಲ್ಲಿ ರಚಿತವಾಗಿರುವ ಉತ್ತರ ರಾಮಾಯಣಕ್ಕೆ ಸಂಬಂಧಿಸಿದ ಕಾವ್ಯ ಕೃತಿಗಳಲ್ಲಿ ಲಕ್ಷ್ಮೀಶನನ್ನು ಹೊರತುಪಡಿಸಿದರೆ, ಪೂರ್ಣ ಪ್ರಮಾಣದಲ್ಲಿದ್ದ ಉತ್ತರ ರಾಮಾಯಣ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ ಕವಿಗಳ ಹಾಗೂ ಅವರ ಕಾವ್ಯಗಳನ್ನು ಕನ್ನಡ ಸಾಹಿತ್ಯಕ್ಕೆ ತಿಳಿಸುವ ಉದ್ದೇಶವಾಗಿದೆ.
'ಅಮ್ಮ'ನವರ ಆರಾಧನೆಯಲ್ಲಿನ ಸಾಂಸ್ಕೃತಿಕ ಅನನ್ಯತೆ
63 to 70
ಜನಪದರಲ್ಲಿ ಆರಾಧನೆ ಎಂಬುದು ಬದುಕಿನ ಅವಿಭಾಜ್ಯ ಅಂಗವಾಗಿದೆ. ಆಚಾರ-ವಿಚಾರ, ನಂಬಿಕೆಗಳಿಂದ ಕೂಡಿರುವ ಆರಾಧನೆಯು ಇಷ್ಟಾರ್ಥ ಸಿದ್ಧಿಯ ನೆಲೆಯಲ್ಲಿ ಮಹತ್ವವನ್ನು ಪಡೆಯುತ್ತದೆ. ಭಯದಿಂದ ಮುಕ್ತವಾಗಲು ಕಷ್ಟ ಪರಿಹಾರವಾಗಲು ದೇವರುಗಳ ಮೊರೆ ಹೋಗುವುದು ಜನಪದರ ಬಹುಮುಖ್ಯ ಚಟುವಟಿಕೆ. ತಮಗೆ ಎದುರಾದ ಕಷ್ಟಗಳನ್ನು ರೋಗರುಜಿನಗಳನ್ನು ನಂಬಿಕೆ, ವಿಶ್ವಾಸಕ್ಕೆ ಪಾತ್ರರಾಗಿರುವ ಪ್ರೀತಿಯ ವ್ಯಕ್ತಿಗಳಲ್ಲಿ ಹೇಳಿಕೊಂಡು ಮನೋಭಾರವನ್ನು ಕಳೆದುಕೊಳ್ಳಲು ಸಾಧ್ಯವಾಗುವುದಿಲ್ಲ. ತಮ್ಮತಮ್ಮಲ್ಲೇ ಎಷ್ಟೇ ಕಷ್ಟಗಳನ್ನು ತೋಡಿಕೊಂಡರೂ ಸಮಾಧಾನ ಅನ್ನಿಸುವುದಿಲ್ಲ. ಅಂದರೆ ಮನುಷ್ಯರ ಶಕ್ತಿಗೆ ಒಂದು ಮಿತಿ ಎನ್ನುವುದು ಇದೆ. ಎಲ್ಲವೂ ಮನುಷ್ಯರ ಕೈಯಿಂದ ಅಸಾಧ್ಯ ಎಂಬ ವಿಚಾರವನ್ನು ಜನಪದರು ನಂಬಿದ್ದಾರೆ. ಮಾನವನ ಶಕ್ತಿಗಿಂತ ಮಿಗಿಲಾದ ಶಕ್ತಿ ಇದೆ ಎಂದು ನಂಬುವ ಜನಪದರು, ಆ ಶಕ್ತಿಯನ್ನು ದೇವರು ಎಂದು ಕೊಂಡಿದ್ದಾರೆ. ಭಯದ ಅತ್ಯುನ್ನತ ಹಂತವೇ ಭಕ್ತಿಯಾದುದರಿಂದ ಆ ನೆಲೆಯಲ್ಲಿ ದೇವರನ್ನು ಕಲ್ಪಿಸಿಕೊಂಡು ಆರಾಧನೆಗೆ ತೊಡಗಿದ್ದಾರೆ
ಚಂದ್ರಶೇಖರ ಕಂಬಾರರ ನಾಟಕಗಳಲ್ಲಿನ ಮೇಲ್ವರ್ಗದ ಸ್ತ್ರೀಯರ ಪಾತ್ರ ಚಿತ್ರಣ
71 to 78
ಕಂಬಾರರ ನಾಟಕಗಳಲ್ಲಿ ಮೇಲ್ವರ್ಗದ ಸ್ತ್ರೀಯರ ಮನದ ಬಯಕೆಗಳನ್ನು ಕುರಿತು ಚರ್ಚಿಸಲಾಗಿದೆ. ಕಂಬಾರರು ಸ್ತ್ರೀಯನ್ನು ಜೈವಿಕ ಪತ್ರಗಳಾಗಿ ಗಮನಿಸುತ್ತಾರೆಯೇ ಹೊರತು ಸಂಸ್ಕೃತಿಯ ಆಳವಿನ್ಯಾಸದಲ್ಲಿ ಕಾಣಿಸುವ ಸ್ತ್ರೀ ವ್ಯಕ್ತಿತ್ವದ ಮೌಲ್ಯಮಾಪನಕ್ಕೆ ತೊಡಗುವುದಿಲ್ಲ. ಕುಟುಂಬದೊಳಗಿನ ಲೈಂಗಿಕ ಹಿಂಸೆಗಳನ್ನು ಪ್ರತಿಭಟಿಸುವ ನೆಲೆಯಲ್ಲಿ ಅವರ ನಾಟಕಗಳ ಆಶಯಗಳು ಕಾಣಿಸಿಕೊಳ್ಳುತ್ತವೆಯಾದರೂ, ಅಸ್ತಿತ್ವವನ್ನು ಮಾನ್ಯ ಮಾಡುವುದಿಲ್ಲ. ಅದರಲ್ಲೂ ಮೇಲ್ವರ್ಗದ ಸ್ತ್ರೀಯರ ಬದುಕಿನ ಚಿತ್ರಣವನ್ನು ವಿವರವಾಗಿ ಚಿತ್ರಿಸಿದ್ದಾರೆ. ಕಂಬಾರರ ನಾಟಕಗಳಲ್ಲಿ ಮಹಿಳಾ ಪಾತ್ರಗಳು ಪಿತೃಪ್ರಭುತ್ವದ ದಬ್ಬಾಳಿಕೆಯನ್ನು ಬಹಿರಂಗಪಡಿಸಲು ಮತ್ತು ವಿರೋಧಿಸುವಂತೆ ಮಾಡುತ್ತಾರೆ. ಜೋಕುಮಾರಸ್ವಾಮಿಯಲ್ಲಿ ಗೌಡರು ಪ್ರಾಬಲ್ಯದ ರಚನೆಗಳನ್ನು ಉಳಿಸಿಕೊಳ್ಳುವ ಪಿತೃಪ್ರಧಾನ ಸಮಾಜದ ಉತ್ಪನ್ನವಾಗಿದ್ದಾರೆ. ಅವರು ಮಹಿಳೆ ಮತ್ತು ಪ್ರಕೃತಿಯನ್ನು ಅಭಾಗಲಬ್ಧ ಜೀವಿಗಳಾಗಿ ಪರಿಗಣಿಸುತ್ತಾರೆ. ಅದು ಪುರುಷನ ಅಗತ್ಯಗಳಿಗಾಗಿ ಪ್ರಾಬಲ್ಯ ಮತ್ತು ಶೋಷಣೆಗೆ ಒಳಗಾಗುತ್ತದೆ. ಜೋಕುಮಾರಸ್ವಾಮಿಯ ನಾಟಕದ ಗೌಡ್ತಿ, ಹರಕೆಯಕುರಿ ನಾಟಕದ ಗೌಡ್ತಿ ಮತ್ತು ಸಿರಿಸಂಪಿಗೆಯ ಮೂಲಕ ಮಹಿಳೆಯ ಆಂತರಿಕ ಪರಿಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.
ಮರಾಠಿ ದಲಿತ ಕಾವ್ಯ ನಡೆದುಬಂದ ದಾರಿ
79 to 86
ಮರಾಠಿ ದಲಿತ ಕಾವ್ಯ ಬೆಳೆದುಬಂದ ಹಾದಿಯನ್ನು ಕುರಿತು ಚರ್ಚಿಸಲಾಗಿದೆ. ಮಹಾರಾಷ್ಟ್ರದಲ್ಲಿ ದಲಿತ ಸಾಹಿತ್ಯ ಹುಟ್ಟುಪಡೆಯಲು ದೊರೆತ ಸ್ಫೂರ್ತಿ ಹಾಗೂ ಪ್ರೇರಣೆಗಳ ಹುಡುಕಾಟದ ನೆಲೆಯನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡಲಾಗಿದೆ. ಮರಾಠಿ ದಲಿತ ಸಾಹಿತ್ಯ ಇಡೀ ಭಾರತೀಯ ಇತರೆ ಭಾಷೆಗಳ ದಲಿತ ಸಾಹಿತ್ಯಗಳಿಗಿಂತ ಹೆಚ್ಚು ಪ್ರಬಲವಾಗಿ ರೂಪುಗೊಳ್ಳಲು ಕಾರಣವಾದ ಐತಿಹಾಸಿಕ ಮೈಲಿಗಲ್ಲುಗಳನ್ನು ಗುರುತಿಸಲಾಗಿದೆ. ಮರಾಠಿ ದಲಿತ ಸಾಹಿತ್ಯ 1970 ರಿಂದೀಚೆಗೆ ಬಹಳಷ್ಟು ಪ್ರಚಲಿತಕ್ಕೆ ಬಂದಿದ್ದರೂ, ಅದರ ಮೂಲ ಬೇರುಗಳು ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಜ್ಯೋತಿ ಬಾಪುಲೆ ಹಾಗೂ ಅಕ್ಷರದವ್ವ ಸಾವಿತ್ರಿ ಬಾಪುಲೆ ಅವರ ಚಳುವಳಿಗೆ ಹೋಗುತ್ತದೆ. ಮರಾಠಿ ದಲಿತ ಸಾಹಿತ್ಯಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬಹುದೊಡ್ಡ ನಿಧಿಯ ಆಗರವಾಗಿದ್ದರು. ಶೋಷಿತ ಸಮುದಾಯಗಳ ಪರವಾದ ಅವರ ವಿಚಾರಗಳು, ಚಿಂತನೆಗಳು ಹೇಗೆ ಇಡೀ ಭಾರತೀಯ ದಲಿತ ಸಾಹಿತ್ಯವನ್ನು ಬಹದೊಡ್ಡ ಮಟ್ಟದಲ್ಲಿ ಪ್ರಭಾವಿಸಿತ್ತು ಎಂಬುದರ ಶೋಧವನ್ನು ಇಲ್ಲಿ ಮಾಡಲಾಗಿದೆ.
ಕುವೆಂಪು ಮತ್ತು ಬಿ.ಟಿ. ಲಲಿತ ನಾಯಕ್ ಅವರ ಕಾವ್ಯಗಳ ತೌಲನಿಕ ವಿಶ್ಲೇಷಣೆ
87 to 99
ಕುವೆಂಪು ಮತ್ತು ಬಿ.ಟಿ. ಲಲಿತನಾಯಕ್ ರವರು ಕನ್ನಡದ ಶ್ರೇಷ್ಠ ಸಾಹಿತಿಗಳಾಗಿದ್ದಾರೆ. ಕುವೆಂಪುರವರು ಕನ್ನಡ ನವೋದಯ ಕಾಲದವರಾದರೆ, ಬಿ.ಟಿ. ಲಲಿತನಾಯಕ್ ಅವರು ದಲಿತ-ಬಂಡಾಯ ಪಂಥದವರಾಗಿದ್ದಾರೆ. ಇವರೀರ್ವರ ಕಾವ್ಯದೃಷ್ಟಿ ಹಾಗೂ ಕಾವ್ಯ ಸೃಷ್ಟಿಯಲ್ಲಿ ಅಪಾರವಾದ ಭಿನ್ನತೆ ಇದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪರಿಸರದ ನಿರ್ಮಿತಿಯಾಗಿರುತ್ತಾನೆ. ಮೇಲಿನ ಈರ್ವರೂ ಸಾಹಿತಿಗಳೂ ತಮ್ಮದೇ ಪರಿಸರದ ನಿರ್ಮಿತಿಯಾಗಿರುತ್ತಾರೆ. ಅವರ ಕಾವ್ಯದ ಅಧ್ಯಯನವು ಈ ಕಾವ್ಯ ದಿಗ್ಗಜಗಳ ಮೇಲಿನ ಪರಿಸರದ ಪ್ರಭಾವವನ್ನು ವ್ಯಕ್ತಪಡಿಸುತ್ತದೆ. ಬಿ.ಟಿ. ಲಲಿತನಾಯಕ್ ಅವರ ಕಾವ್ಯದಲ್ಲಿ ಸರಳತೆ ಎದ್ದು ಕಾಣುವುದು. ಕುವೆಂಪುರವರ ಕಾವ್ಯದಲ್ಲಿ ಕ್ಲಿಷ್ಟ ಪದಪುಂಜಗಳು ಸಾಮಾನ್ಯ. ಬಿ.ಟಿ. ಲಲಿತನಾಯಕ್ ಅವರಲ್ಲಿ ದೇಸೀಪದಗಳೇ ಜಾಸ್ತಿ; ಕುವೆಂಪು ಕಾವ್ಯದಲ್ಲಿ ಸಂಸ್ಕೃತ ಹಾಗೂ ಹಳಗನ್ನಡ ಪದಗಳೇ ಹೆಚ್ಚು. ಲಲಿತನಾಯಕ್ ಅವರ ಉಪಮೆಗಳು ನೆಲದ ಮೇಲೆ ನಿಂತಿವೆ. ಕುವೆಂಪುರವರ ಪ್ರತಿಮೆಗಳು ಆಕಾಶದಲ್ಲಿ ಮೋಹಕವಾಗಿ ಹಾರಾಡುತ್ತಿವೆ.
ಪಂಪನ ದ್ರೌಪದಿ: ಮನಶಾಸ್ತ್ರೀಯ ಅಧ್ಯಯನ
100 to 110
ಕನ್ನಡ ಸಾಹಿತ್ಯವನ್ನು ಅನೇಕ ವಿಮರ್ಶಾ ಪ್ರಕಾರಗಳ ಮೂಲಕ ಪರಿಭಾವಿಸುವ ಕ್ರಮಗಳು ಬೆಳೆದು ಬಂದಿವೆ. ಅದರಲ್ಲಿ ಮನಶಾಸ್ತ್ರ ಸಹ ಮುಖ್ಯವಾಗಿದೆ. ಪಂಪಭಾರತದ ಪ್ರಮುಖ ಪಾತ್ರವಾದ ದೌಪದಿಯ ಪಾತ್ರದ ಸ್ವಭಾವ, ನಡವಳಿಕೆಗಳನ್ನು ಮನೋನೆಲೆಯಲ್ಲಿ ವಿಶ್ಲೇಷಿಸಲಾಗಿದೆ. ಪಂಪ ಜನಮುಖಿಯಾದ ಕವಿ. ಅವನ ಪರಿಕಲ್ಪನೆಗಳು ದ್ರಷ್ಟಾರತೆಯನ್ನು ಹೊಂದಿದ್ದು ಕಾಲವನ್ನು ಮೀರುವ ಗುಣವನ್ನು ಅಂತರರ್ಗತಗೊಳಿಸಿಕೊಂಡಿವೆ. ಇಲ್ಲಿ ಮಹಾಭಾರತದ ಸಂಚಾಲತೆಗೆ ಕಾರಣವಾದ, ಪ್ರಮುಖ ವ್ಯಕ್ತಿಯಾದ ದೌಪದಿಯನ್ನು, ವೈಜ್ಞಾನಿಕವಾದ ವಿಮರ್ಶೆಯ ಗ್ರಹಿಕೆಯ ಮೂಲಕ ನೋಡಲಾಗಿದೆ.
Book Review
ಕುವೆಂಪು ಮತ್ತು ಕಂಬಾರರ ನಾಟಕಗಳು ಮುಂದಿಡುವ ರಂಗಕಲ್ಪನೆ
111 to 121
ಕುವೆಂಪು ಮತ್ತು ಕಂಬಾರರ ಕೃತಿಗಳಲ್ಲಿ ಹೊಸತನು ಹುಡುಕುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಕುಂವೆಪು ಅವರಲ್ಲಿ ನವೋದಯ ಪ್ರಜ್ಞೆ ಕಾಣಿಸಿದ್ದರೆ, ಕಂಬಾರರಲ್ಲಿ ದಲಿತರ ಪರ ಪ್ರಜ್ಞೆ ಕಾಣಿಸಿಕೊಂಡಿದೆ. ವೀರೇಶ್ ಬಡೀಗಾರ್‌ರವರ 'ಕನ್ನಡ ಸಾಹಿತ್ಯ ಪರಂಪರೆ ಮತ್ತು ಕಂಬಾರರು' ಹಾಗೂ ಉತ್ಥಾನಭಾರೀಘಾಟ್‌ರವರ 'ಕುವೆಂಪು ನಾಟಕಗಳು ಮುಂದಿಡುವ ರಂಗಕಲ್ಪನೆ' ಎಂಬ ಪುಸ್ತಕಗಳ ಹಿನ್ನೆಲೆಯಲ್ಲಿ ಈ ಅಧ್ಯಯನವನ್ನು ರೂಪಿಸಲಾಗಿದೆ. ಕಂಬಾರರ ಸೃಜನಶೀಲ ಹಾಗೂ ಸೃಜನೇತರ ಬರಹಗಳ ಆಳವಾದ ಒಳನೋಟಗಳ ಜೊತೆಗೆ, ಕುವೆಂಪು ನಾಟಕಗಳು ಕನ್ನಡದ್ದೇ ಆದ ರಂಗಕಲ್ಪನೆಯನ್ನು ಹೇಗೆ ಸೃಜಿಸಿಕೊಳ್ಳುತ್ತವೆ ಹಾಗೂ ನಾಟಕದ ವಸ್ತುವಿಗಿಂತ ಸ್ವರೂಪದ ಚರ್ಚೆಯನ್ನು ಹೇಗೆ ಮಂಡಿಸುತ್ತವೆ ಎಂಬುದನ್ನು ವಿಶ್ಲೇಷಿಸಲಾಗಿದೆ.
Essay
ಸಾಂಸ್ಕೃತಿಕ ನಗರ: ಮೈಸೂರು
122 to 130
ಮೈಸೂರಿನ ರಾಜಮಹಾರಾಜರು ಹಾಗು ಟಿಪ್ಪುಸುಲ್ತಾನರ ಕಾಲದಲ್ಲಾದ ಮಹತ್ವದ ಕಾರ್ಯ ಮತ್ತು ಬೆಳವಣಿಗೆಯ ಇತಿಹಾಸವನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ರಣಧೀರ ಕಂಠೀರವ ನರಸರಾಜ ಒಡೆಯರು ಅರಮನೆಯನ್ನು ಕಟ್ಟಿಸಿದ್ದು, ಹೈದರಾಲಿ ಮತ್ತು ಟಿಪ್ಪುಸುಲ್ತಾನರ ಕಾಲದ ವೀರನಗೆರೆ ಹಾಗೂ ನಜರಬಾದ್ ಕೋಟೆಗಳ ನಿರ್ಮಾಣದ ವಿವರಗಳಿವೆ. ಮುಮ್ಮಡಿ ಕೃಷ್ಣರಾಜ ಒಡೆಯರು ಕಟ್ಟಿಸಿದ ಜಗನ್ಮೋಹನ ಅರಮನೆ, ನಾಲ್ವಡಿ ಕೃಷ್ಣರಾಜ ಒಡೆಯರು ಕಟ್ಟಿಸಿದ ಲಲಿತಮಹಲ್ ಅರಮನೆ, ಚಾಮುಂಡಿ ಬೆಟ್ಟ, ಚಾಮರಾಜ ಒಡೆಯರು ಸ್ಥಾಪಿಸಿದ ಮೃಗಾಲಯ ಹಾಗೂ ಕೃಷ್ಣರಾಜ ಸಾಗರ ಜಲಾಶಯಗಳ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ವಿವರಿಸಲಾಗಿದೆ. ರಾಜಮಹಾರಾಜರ ಆಡಳಿತ ವೈಖರಿ ಹಾಗೂ ಮೈಸೂರು ಸಾಂಸ್ಕೃತಿಕ ನಗರವಾಗಿ ರೂಪುಗೊಂಡ ಬಗೆಯನ್ನು ಇದು ಕಟ್ಟಿಕೊಡುತ್ತದೆ.
ಭೂರಹಿತ ದುಡಿಮೆಗಾರರು ಮತ್ತು ವಲಸೆಯ ಸ್ವರೂಪ
131 to 140
ಮಾನವನ ವಿಕಾಸದ ಹಾದಿಯಲ್ಲಿ ಅನ್ನ, ನೀರು ಹಾಗೂ ಉತ್ತಮ ಬದುಕಿಗಾಗಿ ನಡೆಯುವ ಹುಡುಕಾಟ ನಿರಂತರವಾದದ್ದು; ಇದೇ ಹಿನ್ನೆಲೆಯಲ್ಲಿ ಭೂರಹಿತ ದುಡಿಮೆಗಾರರು ಮತ್ತು ವಲಸೆಯ ಸ್ವರೂಪವನ್ನು ಆಳವಾಗಿ ಚರ್ಚಿಸಲಾಗಿದೆ. ನಾಗರಿಕತೆಗಳು ನದಿ ದಡದಲ್ಲಿ ಬೆಳೆದರೂ, ಆಧುನಿಕ ಕಾಲದಲ್ಲಿ ಭೂರಹಿತರು ಹೊಟ್ಟೆಪಾಡಿಗಾಗಿ ಅಸಂಘಟಿತ ವಲಯಗಳಲ್ಲಿ ದಿನಗೂಲಿಗಳಾಗಿ ಹೇಗೆ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂಬುದನ್ನು ವಿವರಿಸಲಾಗಿದೆ. ಋತುಮಾನದ ಕೃಷಿ ಮುಗಿದ ನಂತರ ಜೀವನ ನಿರ್ವಹಣೆಗಾಗಿ ನಡೆಯುವ ವಲಸೆ, ಅವರು ಎದುರಿಸುವ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ತಾರತಮ್ಯಗಳು ಮತ್ತು ಉದ್ಯೋಗ ಖಾತ್ರಿಯಂತಹ ಸರ್ಕಾರದ ಯೋಜನೆಗಳ ವೈಫಲ್ಯದ ನೈಜ ಚಿತ್ರಣವನ್ನು ಬಿಚ್ಚಿಡಲಾಗಿದೆ.
ಸರ್ವಜ್ಞನ ತ್ರಿಪದಿಗಳಲ್ಲಿ ಗುರುವಿನ ಮಹತ್ವ
141 to 145
ಸರ್ವಜ್ಞನ ತ್ರಿಪದಿಗಳಲ್ಲಿ ಗುರುವಿನ ಮಹತ್ವ ಮತ್ತು ಗುರು ಹಾಗೂ ಶಿಷ್ಯರ ನಡುವಿನ ಸಂಬಂಧದ ಕುರಿತು ಆಳವಾಗಿ ಚರ್ಚಿಸಲಾಗಿದೆ. ಈ ಕುರಿತಾಗಿ ಸರ್ವಜ್ಞನ 80ಕ್ಕೂ ಹೆಚ್ಚು ತ್ರಿಪದಿಗಳಿದ್ದು, ಆತನನ್ನು ಶಿಕ್ಷಣದ ದೃಷ್ಟಿಯಿಂದ ಒಬ್ಬ ಸಾಮಾಜಿಕ ಗುರುವಾಗಿ ಗುರುತಿಸಲಾಗಿದೆ. ಗುರು ಪದ್ಧತಿ, ಗುರುಬೋಧ ವಿಷಯ, ಗುರುಕರಣ ವಿಷಯ ಮತ್ತು ಗುರುವಿನಿಂದ ಮುಕ್ತಿ ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಸರ್ವಜ್ಞನ ದೃಷ್ಟಿಯಲ್ಲಿ ಗುರುವೆಂದರೆ ಕರುಣಾಮಯಿ, ಶಿವ, ಜ್ಯೋತಿ, ಮಾರ್ಗದರ್ಶಕ, ಬಂಧು, ದೈವ, ಕಲ್ಪವೃಕ್ಷ, ಮತ್ತು ಕಾಮಧೇನು ಎಂಬುದನ್ನು ಉಪಮಾ, ಯಮಕ, ರೂಪಕ ಮತ್ತು ದೃಷ್ಟಾಂತ ಅಲಂಕಾರಗಳ ಮೂಲಕ ಇಲ್ಲಿ ವಿವರಿಸಲಾಗಿದೆ.
ಹಂಪಿ ಶಾಸನೋಕ್ತ ನೀರಿನ ನೆಲೆಗಳು
146 to158
ವಿಜಯನಗರ ಕಾಲದಲ್ಲಿ ಹಂಪಿ ರಾಜಧಾನಿಯಾದ ಕಾರಣ ಜನನಿಬಿಡ ಪ್ರದೇಶವಾಗಿತ್ತು. ಜನರ ದಿನನಿತ್ಯದ ಬದುಕಿಗೆ ನೀರು ಅತ್ಯಂತ ಅವಶ್ಯಕವಾಗಿದ್ದರಿಂದ, ನೀರಿನ ಅವಶ್ಯಕತೆ ಪೂರೈಸಲು ವಿಜಯನಗರ ಸಾಮ್ರಾಟರು ಹಂಪಿ ಮಹಾನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಅನೇಕ ಕೆರೆ, ಬಾವಿ, ಕೊಳ, ಕಟ್ಟೆಗಳನ್ನು ನಿರ್ಮಿಸಿದ್ದರು. ನೀರಾವರಿಗಾಗಿ ಹೊಲ ಗದ್ದೆಗಳಿಗೆ ನೀರು ಸರಾಗವಾಗಿ ಹರಿಯಲು ಕಾಲುವೆಗಳನ್ನು ಮಾಡಿಸಿದ್ದರು. ಶಾಸನಗಳಲ್ಲಿ ಉಕ್ತವಾಗಿರುವ ಹೊಳೆಗಳು, ಕೆರೆಗಳು ಹಾಗೂ ಬಾವಿಗಳ ಐತಿಹಾಸಿಕ ವಿವರಗಳನ್ನು ಮತ್ತು ಪ್ರಾಚೀನ ನೀರಾವರಿ ವ್ಯವಸ್ಥೆಯು ಕೃಷಿ ಹಾಗೂ ಪೂಜಾ ಕಾರ್ಯಗಳಿಗೆ ಹೇಗೆ ಬಳಕೆಯಾಗುತ್ತಿತ್ತು ಎನ್ನುವುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ.