'ಅಮ್ಮ'ನವರ ಆರಾಧನೆಯಲ್ಲಿನ ಸಾಂಸ್ಕೃತಿಕ ಅನನ್ಯತೆ

Main Article Content

ಗೀತಾ ಎ. ಸಿ.

Abstract

ಜನಪದರಲ್ಲಿ ಆರಾಧನೆ ಎಂಬುದು ಬದುಕಿನ ಅವಿಭಾಜ್ಯ ಅಂಗವಾಗಿದೆ. ಆಚಾರ-ವಿಚಾರ, ನಂಬಿಕೆಗಳಿಂದ ಕೂಡಿರುವ ಆರಾಧನೆಯು ಇಷ್ಟಾರ್ಥ ಸಿದ್ಧಿಯ ನೆಲೆಯಲ್ಲಿ ಮಹತ್ವವನ್ನು ಪಡೆಯುತ್ತದೆ. ಭಯದಿಂದ ಮುಕ್ತವಾಗಲು ಕಷ್ಟ ಪರಿಹಾರವಾಗಲು ದೇವರುಗಳ ಮೊರೆ ಹೋಗುವುದು ಜನಪದರ ಬಹುಮುಖ್ಯ ಚಟುವಟಿಕೆ. ತಮಗೆ ಎದುರಾದ ಕಷ್ಟಗಳನ್ನು ರೋಗರುಜಿನಗಳನ್ನು ನಂಬಿಕೆ, ವಿಶ್ವಾಸಕ್ಕೆ ಪಾತ್ರರಾಗಿರುವ ಪ್ರೀತಿಯ ವ್ಯಕ್ತಿಗಳಲ್ಲಿ ಹೇಳಿಕೊಂಡು ಮನೋಭಾರವನ್ನು ಕಳೆದುಕೊಳ್ಳಲು ಸಾಧ್ಯವಾಗುವುದಿಲ್ಲ. ತಮ್ಮತಮ್ಮಲ್ಲೇ ಎಷ್ಟೇ ಕಷ್ಟಗಳನ್ನು ತೋಡಿಕೊಂಡರೂ ಸಮಾಧಾನ ಅನ್ನಿಸುವುದಿಲ್ಲ. ಅಂದರೆ ಮನುಷ್ಯರ ಶಕ್ತಿಗೆ ಒಂದು ಮಿತಿ ಎನ್ನುವುದು ಇದೆ. ಎಲ್ಲವೂ ಮನುಷ್ಯರ ಕೈಯಿಂದ ಅಸಾಧ್ಯ ಎಂಬ ವಿಚಾರವನ್ನು ಜನಪದರು ನಂಬಿದ್ದಾರೆ. ಮಾನವನ ಶಕ್ತಿಗಿಂತ ಮಿಗಿಲಾದ ಶಕ್ತಿ ಇದೆ ಎಂದು ನಂಬುವ ಜನಪದರು, ಆ ಶಕ್ತಿಯನ್ನು ದೇವರು ಎಂದು ಕೊಂಡಿದ್ದಾರೆ. ಭಯದ ಅತ್ಯುನ್ನತ ಹಂತವೇ ಭಕ್ತಿಯಾದುದರಿಂದ ಆ ನೆಲೆಯಲ್ಲಿ ದೇವರನ್ನು ಕಲ್ಪಿಸಿಕೊಂಡು ಆರಾಧನೆಗೆ ತೊಡಗಿದ್ದಾರೆ

Article Details

Section

Research Articles

Author Biography

ಗೀತಾ ಎ. ಸಿ.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಡಾ.ಎನ್.ಎಸ್.ಎ.ಎಂ. ಪ್ರಥಮ ದರ್ಜೆ ಕಾಲೇಜು, ಕೃಷ್ಣರಾಜಪುರ, ಬೆಂಗಳೂರು.

How to Cite

ಗೀತಾ ಎ. ಸಿ. (2024). ’ಅಮ್ಮ’ನವರ ಆರಾಧನೆಯಲ್ಲಿನ ಸಾಂಸ್ಕೃತಿಕ ಅನನ್ಯತೆ. ಅಕ್ಷರಸೂರ್ಯ (AKSHARASURYA), 3(03), 63 to 70. https://aksharasurya.com/index.php/latest/article/view/710

References

ಕನ್ನಡ ರತ್ನಕೋಶ. (2016). ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು. Kittels. (1975). kannada English Dictionary: volume three. University of Madras. Madras. ವಿಶ್ವನಾಥ ಬದಿಕಾನ. (1994). ಗೌಡ ಜನಪದ ಕಥೆಗಳು: ವರ್ಗ ಮತ್ತು ಆಶಯಸೂಚಿ. ಮುದಿಪು ಪ್ರಕಾಶನ, ಮಂಗಳೂರು. ಪುರುಷೋತ್ತಮ ಬಿಳಿಮಲೆ. (1990). ಕರಾವಳಿ ಜಾನಪದ. ಮಂಗಳೂರು ವಿಶ್ವವಿದ್ಯಾಲಯ. ಮಂಗಳಗಂಗೋತ್ರಿ. ಸುರೇಶ್ ಸಿ. ಎಸ್. (2014). ಕೊಡಗಿನ ಧಾರ್ಮಿಕ ಕೇಂದ್ರಗಳು ಮತ್ತು ಗ್ರಾಮೀಣ ಉತ್ಸವಗಳು. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.

Most read articles by the same author(s)