ಮರಾಠಿ ದಲಿತ ಕಾವ್ಯ ನಡೆದುಬಂದ ದಾರಿ
Main Article Content
Abstract
ಮರಾಠಿ ದಲಿತ ಕಾವ್ಯ ಬೆಳೆದುಬಂದ ಹಾದಿಯನ್ನು ಕುರಿತು ಚರ್ಚಿಸಲಾಗಿದೆ. ಮಹಾರಾಷ್ಟ್ರದಲ್ಲಿ ದಲಿತ ಸಾಹಿತ್ಯ ಹುಟ್ಟುಪಡೆಯಲು ದೊರೆತ ಸ್ಫೂರ್ತಿ ಹಾಗೂ ಪ್ರೇರಣೆಗಳ ಹುಡುಕಾಟದ ನೆಲೆಯನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡಲಾಗಿದೆ. ಮರಾಠಿ ದಲಿತ ಸಾಹಿತ್ಯ ಇಡೀ ಭಾರತೀಯ ಇತರೆ ಭಾಷೆಗಳ ದಲಿತ ಸಾಹಿತ್ಯಗಳಿಗಿಂತ ಹೆಚ್ಚು ಪ್ರಬಲವಾಗಿ ರೂಪುಗೊಳ್ಳಲು ಕಾರಣವಾದ ಐತಿಹಾಸಿಕ ಮೈಲಿಗಲ್ಲುಗಳನ್ನು ಗುರುತಿಸಲಾಗಿದೆ. ಮರಾಠಿ ದಲಿತ ಸಾಹಿತ್ಯ 1970 ರಿಂದೀಚೆಗೆ ಬಹಳಷ್ಟು ಪ್ರಚಲಿತಕ್ಕೆ ಬಂದಿದ್ದರೂ, ಅದರ ಮೂಲ ಬೇರುಗಳು ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಜ್ಯೋತಿ ಬಾಪುಲೆ ಹಾಗೂ ಅಕ್ಷರದವ್ವ ಸಾವಿತ್ರಿ ಬಾಪುಲೆ ಅವರ ಚಳುವಳಿಗೆ ಹೋಗುತ್ತದೆ. ಮರಾಠಿ ದಲಿತ ಸಾಹಿತ್ಯಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬಹುದೊಡ್ಡ ನಿಧಿಯ ಆಗರವಾಗಿದ್ದರು. ಶೋಷಿತ ಸಮುದಾಯಗಳ ಪರವಾದ ಅವರ ವಿಚಾರಗಳು, ಚಿಂತನೆಗಳು ಹೇಗೆ ಇಡೀ ಭಾರತೀಯ ದಲಿತ ಸಾಹಿತ್ಯವನ್ನು ಬಹದೊಡ್ಡ ಮಟ್ಟದಲ್ಲಿ ಪ್ರಭಾವಿಸಿತ್ತು ಎಂಬುದರ ಶೋಧವನ್ನು ಇಲ್ಲಿ ಮಾಡಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಸರಜೂ ಕಾಟ್ಕರ್. (1999). ಮರಾಠಿ ದಲಿತ ಕಾವ್ಯ. ಲೋಹಿಯಾ ಪ್ರಕಾಶನ. ಬಳ್ಳಾರಿ.
ಸರಜೂ ಕಾಟ್ಕರ್. (1996), ಕನ್ನಡ-ಮರಾಠಿ ದಲಿತ ಸಾಹಿತ್ಯ. ರೂಪ ಪ್ರಕಾಶನ, ಮೈಸೂರು.
ಅನುಪಮಾ ಎಚ್. ಎಸ್. (2012). ಉರಿಯ ಪದವು ನಾಮದೇವ್ ಢಸಾಳ್ ಕವಿತೆಗಳು (ಅನು). ಲಡಾಯಿ ಪ್ರಕಾಶನ. ಗದಗ.
ಕಮಲಾಕರ ಕಡವೆ. ನಿಮಿಷಾ ಬಂಡೆಲು ಮತ್ತು ಸಾಜಿಭಟ್ (ಸಂ), (2017). ನಾಮದೇವ ಢಸಾಳ ವಾಚಿಕೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ. ಬೆಂಗಳೂರು.
ದಂಡಪ್ಪ ಕೊಂಡ್ರಹಳ್ಳಿ. (2012). ಸಿದ್ಧಲಿಂಗಯ್ಯ ವಾಚಿಕೆ (ಸಂ). ನುಡಿ ಪುಸ್ತಕ ಪ್ರಕಾಶನ. ಬೆಂಗಳೂರು.