ಕುವೆಂಪು ಮತ್ತು ಬಿ.ಟಿ. ಲಲಿತ ನಾಯಕ್ ಅವರ ಕಾವ್ಯಗಳ ತೌಲನಿಕ ವಿಶ್ಲೇಷಣೆ
Main Article Content
Abstract
ಕುವೆಂಪು ಮತ್ತು ಬಿ.ಟಿ. ಲಲಿತನಾಯಕ್ ರವರು ಕನ್ನಡದ ಶ್ರೇಷ್ಠ ಸಾಹಿತಿಗಳಾಗಿದ್ದಾರೆ. ಕುವೆಂಪುರವರು ಕನ್ನಡ ನವೋದಯ ಕಾಲದವರಾದರೆ, ಬಿ.ಟಿ. ಲಲಿತನಾಯಕ್ ಅವರು ದಲಿತ-ಬಂಡಾಯ ಪಂಥದವರಾಗಿದ್ದಾರೆ. ಇವರೀರ್ವರ ಕಾವ್ಯದೃಷ್ಟಿ ಹಾಗೂ ಕಾವ್ಯ ಸೃಷ್ಟಿಯಲ್ಲಿ ಅಪಾರವಾದ ಭಿನ್ನತೆ ಇದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪರಿಸರದ ನಿರ್ಮಿತಿಯಾಗಿರುತ್ತಾನೆ. ಮೇಲಿನ ಈರ್ವರೂ ಸಾಹಿತಿಗಳೂ ತಮ್ಮದೇ ಪರಿಸರದ ನಿರ್ಮಿತಿಯಾಗಿರುತ್ತಾರೆ. ಅವರ ಕಾವ್ಯದ ಅಧ್ಯಯನವು ಈ ಕಾವ್ಯ ದಿಗ್ಗಜಗಳ ಮೇಲಿನ ಪರಿಸರದ ಪ್ರಭಾವವನ್ನು ವ್ಯಕ್ತಪಡಿಸುತ್ತದೆ. ಬಿ.ಟಿ. ಲಲಿತನಾಯಕ್ ಅವರ ಕಾವ್ಯದಲ್ಲಿ ಸರಳತೆ ಎದ್ದು ಕಾಣುವುದು. ಕುವೆಂಪುರವರ ಕಾವ್ಯದಲ್ಲಿ ಕ್ಲಿಷ್ಟ ಪದಪುಂಜಗಳು ಸಾಮಾನ್ಯ. ಬಿ.ಟಿ. ಲಲಿತನಾಯಕ್ ಅವರಲ್ಲಿ ದೇಸೀಪದಗಳೇ ಜಾಸ್ತಿ; ಕುವೆಂಪು ಕಾವ್ಯದಲ್ಲಿ ಸಂಸ್ಕೃತ ಹಾಗೂ ಹಳಗನ್ನಡ ಪದಗಳೇ ಹೆಚ್ಚು. ಲಲಿತನಾಯಕ್ ಅವರ ಉಪಮೆಗಳು ನೆಲದ ಮೇಲೆ ನಿಂತಿವೆ. ಕುವೆಂಪುರವರ ಪ್ರತಿಮೆಗಳು ಆಕಾಶದಲ್ಲಿ ಮೋಹಕವಾಗಿ ಹಾರಾಡುತ್ತಿವೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಅನಂತಮೂರ್ತಿ ಯು.ಆರ್. (1976). ಪ್ರಜ್ಞೆ ಮತ್ತು ಪರಿಸರ. ಅಕ್ಷರ ಪ್ರಕಾಶನ. ಸಾಗರ.
ಅರವಿಂದ ಮಾಲಗತ್ತಿ, (2006). ಕುವೆಂಪು ಕೃತಿ ವಿಮರ್ಶೆ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.
ಅಮೂರ ಜಿ.ಎಸ್. (2000). ಭುವನದ ಭಾಗ್ಯ: ಬೇಂದ್ರೆ ಕಾವ್ಯದ ಪ್ರತಿಮಾಲೋಕ. ಪ್ರಸಾರಂಗ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ.
ಕಲಬುರ್ಗಿ ಎಂ.ಎಂ. (2000) ಕುವೆಂಪು ಸಮಗ್ರ ಕಾವ್ಯ ಸಂಪುಟ. ಪ್ರಸಾರಂಗ, ಹಂಪಿ ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಲಲಿತನಾಯಕ್ ಬಿ.ಟಿ. (2019). ಬಿ.ಟಿ. ಲಲಿತನಾಯಕ್ ಸಮಗ್ರ ಸಾಹಿತ್ಯ: ಸಂಪುಟ-1. ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು.
ಕೀರ್ತಿನಾಥ ಕುರ್ತಕೋಟಿ. (1991). ಯುಗಧರ್ಮ ಮತ್ತು ಸಾಹಿತ್ಯ ವಿಕಾಸ. ಶಿವಶಂಕರ ಪ್ರಿಂಟಿಂಗ್ ಪ್ರೆಸ್. ಧಾರವಾಡ.
ಕೃಷ್ಣಕುಮಾರ್ ಸಿ.ಪಿ. (1939), ಆಲೋಚನ. ಉಷಾ ಸಾಹಿತ್ಯ ಮಾಲೆ. ಮೈಸೂರು.