ರೇಮಂಡ್ ಎಫ್.ಸಿ. ಮಸ್ಕರೇನ್ಹಸ್ ಅವರ ಸಾಹಿತ್ಯದಲ್ಲಿ ಧಾರ್ಮಿಕ ಚಿಂತನೆ: ಮೌನ
Main Article Content
Abstract
ರೇಮಂಡ್ ಎಫ್.ಸಿ. ಮಸ್ಕರೇನ್ಹಸ್ ಅವರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳಲ್ಲಿ ‘ಮೌನ’ಕ್ಕಿರುವ ವಿಶಿಷ್ಟ ಸ್ಥಾನ ಹಾಗೂ ಮಹತ್ವವನ್ನು ಇಲ್ಲಿ ತಾತ್ವಿಕವಾಗಿ ವಿಶ್ಲೇಷಿಸಲಾಗಿದೆ. ಮೌನವೆಂದರೆ ಕೇವಲ ಶಬ್ದದ ಅನುಪಸ್ಥಿತಿಯಲ್ಲ; ಅದು ಮನಸ್ಸಿನ ಚಂಚಲತೆಯನ್ನು ನಿಯಂತ್ರಿಸಿ, ದೇವರ ಸನ್ನಿಧಿಯನ್ನು ಆಲಿಸುವ ಹಾಗೂ ಆತ್ಮಾವಲೋಕನ ಮಾಡಿಕೊಳ್ಳುವ ಆಂತರಿಕ ಶಿಸ್ತಾಗಿದೆ. ಬೈಬಲ್‌ನ ಮರಿಯ ಮಗ್ದಲೆಯ ಆದರ್ಶವನ್ನು ಮುಂದಿಟ್ಟುಕೊಂಡು, ಮೌನವನ್ನು ಕ್ರಿಯಾಶೀಲ ಆಧ್ಯಾತ್ಮಿಕ ಆಲಿಸುವಿಕೆಯಾಗಿ ನಿರೂಪಿಸಲಾಗಿದೆ. ವಿನಯ, ವಿಧೇಯತೆ, ತಾಳ್ಮೆ, ಪಾವಿತ್ರ್ಯ ಮತ್ತು ವಿವೇಕದ ಮೌನ ಎಂಬ ಐದು ಪ್ರಮುಖ ಮಜಲುಗಳನ್ನು ಪರಿಚಯಿಸುತ್ತಾ, ಇವು ಮಾನವನ ಆಂತರಿಕ ಶುದ್ಧೀಕರಣ, ಭಾವನಾತ್ಮಕ ಸಮತೋಲನ ಮತ್ತು ನೈತಿಕ ಬೆಳವಣಿಗೆಗೆ ಹೇಗೆ ಪೂರಕವಾಗಿವೆ ಎಂಬುದನ್ನು ಚರ್ಚಿಸಲಾಗಿದೆ. ಅಂತಿಮವಾಗಿ, ಮೌನವು ನಿಷ್ಕ್ರಿಯತೆಯಲ್ಲ, ಬದಲಾಗಿ ಸಮಯೋಚಿತ ಮಾತು ಮತ್ತು ಅಂತರಂಗದ ಶಾಂತಿಯ ನಡುವಿನ ವಿವೇಕಪೂರ್ಣ ಸಮನ್ವಯ ಎಂಬ ಸತ್ಯವನ್ನು ಕಟ್ಟಿಕೊಡಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಭಗಿನಿ ಬರ್ತಾ, (1943-1949), ಸಂಸ್ಥಾಪಕರ ವಚನಗಳು, ಮಂಗಳೂರು: ಬೆಥನಿ ಪ್ರಕಾಶನ.
ಬೈಬಲ್ ಸೊಸೈಟಿ ಆಫ್ ಇಂಡಿಯಾ, (1993), ಪವಿತ್ರ ಬೈಬಲ್ ಹಳೆಯ ಮತ್ತು ಹೊಸ ಒಡಂಬಡಿಕೆಗಳು ಮತ್ತಿತರ ಅನುಗ್ರಂಥಗಳು, ಬೆಂಗಳೂರು: ಬೈಬಲ್ ಸೊಸೈಟಿ ಆಫ್ ಇಂಡಿಯಾ.
ಥಾಮಸ್ ಮೆರ್ಟನ್, (1971), ಧ್ಯಾನ, ಮೌನ ಮತ್ತು ಸಕ್ರಿಯ ಧಾರ್ಮಿಕ ಜೀವನದ ನಡುವಿನ ಸಂಬಂಧ, ಅಂತರ್ಜಾಲ: ವಿಕಿಪೀಡಿಯಾ.
ಅವಿಲಾದ ಸಂತ ತೆರೆಸಾ, (1979), ಆಂತರಿಕ ಕೋಟೆ (The Interior Castle), ನ್ಯೂಯಾರ್ಕ್: ಪಾಲಿಸ್ಟ್ ಪ್ರೆಸ್.
ಥಾಮಸ್ ಮೆರ್ಟನ್, (1958), ಏಕಾಂತ, ಅಂತರಂಗದ ಚಿಂತನೆ ಮತ್ತು ದೇವರೊಂದಿಗೆ ಸಂಬಂಧ, ಅಂತರ್ಜಾಲ: ವಿಕಿಪೀಡಿಯಾ.
ಕಥೋಲಿಕ ಚರ್ಚ್, (1994), ಕಥೋಲಿಕ ಚರ್ಚಿನ ಧರ್ಮಶಿಕ್ಷಣ (Catechism of the Catholic Church), ಬೆಂಗಳೂರು: ಥಿಯೋಲಾಜಿಕಲ್ ಪಬ್ಲಿಕೇಶನ್ ಇನ್ ಇಂಡಿಯಾ.