ಶಿವರಾಮ ಕಾರಂತರ ಮುಕ್ತದ್ವಾರ - ಗೀತನಾಟಕ ಒಂದು ಅಧ್ಯಯನ

Main Article Content

ಸೌಮ್ಯ ಹೊಳ್ಳ ಟಿ.
ಡಾ. ರಾಜಶೇಖರ ಜಮದಂಡಿ

Abstract

ಶಿವರಾಮ ಕಾರಂತರ ‘ಮುಕ್ತದ್ವಾರ’ ಕನ್ನಡ ಗೀತನಾಟಕ ಪರಂಪರೆಯಲ್ಲಿ ಮಹತ್ವದ ಸ್ಥಾನ ಪಡೆದಿರುವ ಕೃತಿಯಾಗಿದೆ. ಸಾಹಿತ್ಯ, ಸಂಗೀತ ಮತ್ತು ರಂಗಕಲೆಯ ಸಮನ್ವಯದಿಂದ ರೂಪುಗೊಂಡಿರುವ ಈ ಗೀತನಾಟಕವು ಮಾನವ ಜೀವನ, ಧರ್ಮ, ತತ್ವಚಿಂತನೆ ಹಾಗೂ ಮಾನವೀಯ ಮೌಲ್ಯಗಳನ್ನು ವಿಶಿಷ್ಟವಾಗಿ ನಿರೂಪಿಸುತ್ತದೆ. ಈ ಅಧ್ಯಯನವು ‘ಮುಕ್ತದ್ವಾರ’ ಗೀತನಾಟಕದ ವಸ್ತು, ರಚನಾ ವೈಶಿಷ್ಟ್ಯ, ಸಂಗೀತ ಮತ್ತು ರಂಗಪ್ರಯೋಗ, ಹಾಗೂ ಅದರಲ್ಲಿನ ತಾತ್ವಿಕ ಮತ್ತು ಸಾಮಾಜಿಕ ಆಶಯಗಳನ್ನು ವಿಶ್ಲೇಷಿಸುವ ಉದ್ದೇಶವನ್ನು ಹೊಂದಿದೆ. ಕಾರಂತರ ಗೀತನಾಟಕಗಳ ಬೆಳವಣಿಗೆಯಲ್ಲಿ ಯಕ್ಷಗಾನ, ಜನಪದ ರಂಗಭೂಮಿ, ಸಂಸ್ಕೃತ ರೂಪಕಗಳು ಮತ್ತು ಪಾಶ್ಚಾತ್ಯ ಒಪೆರಾ ಪರಂಪರೆಯ ಪ್ರಭಾವಗಳನ್ನು ಗುರುತಿಸಬಹುದಾಗಿದೆ.
ಮುಕ್ತದ್ವಾರದಲ್ಲಿ ಸೃಷ್ಟಿಪೂರ್ವದ ಶೂನ್ಯತೆಯಿಂದ ಆರಂಭಿಸಿ ವಿವಿಧ ಯುಗಗಳ ಮೂಲಕ ಮಾನವ ನಾಗರಿಕತೆಯ ಬೆಳವಣಿಗೆಯನ್ನು ಕಾಲಚಕ್ರದ ರೂಪಕದ ಮೂಲಕ ನಿರೂಪಿಸಲಾಗಿದೆ. ಉಪನಿಷತ್ ಯುಗ, ದ್ವಾಪರಯುಗ, ಬೌದ್ಧಯುಗ, ಏಸುಯುಗ ಹಾಗೂ ವಿಜ್ಞಾನಯುಗಗಳ ಸಂದರ್ಭದಲ್ಲಿ ಧರ್ಮ, ಕರ್ಮ, ಅಹಿಂಸೆ, ಪ್ರೀತಿ, ಕರುಣೆ, ಸತ್ಯ, ಶಾಂತಿ ಮತ್ತು ಮಾನವೀಯತೆಯಂತಹ ಮೌಲ್ಯಗಳನ್ನು ನಾಟಕ ಪರಿಶೀಲಿಸುತ್ತದೆ.

Article Details

Section

Research Articles

Author Biographies

ಸೌಮ್ಯ ಹೊಳ್ಳ ಟಿ.

ಸಂಶೋಧನಾರ್ಥಿ, ಶ್ರೀನಿವಾಸ ವಿಶ್ವವಿದ್ಯಾಲಯ, ಮಂಗಳೂರು.

ಡಾ. ರಾಜಶೇಖರ ಜಮದಂಡಿ

ಪ್ರಾಧ್ಯಾಪಕರು, ಶ್ರೀನಿವಾಸ ವಿಶ್ವವಿದ್ಯಾಲಯ, ಮಂಗಳೂರು.

How to Cite

ಸೌಮ್ಯ ಹೊಳ್ಳ ಟಿ., & ರಾಜಶೇಖರ ಜಮದಂಡಿ. (2026). ಶಿವರಾಮ ಕಾರಂತರ ಮುಕ್ತದ್ವಾರ - ಗೀತನಾಟಕ ಒಂದು ಅಧ್ಯಯನ. ಅಕ್ಷರಸೂರ್ಯ (AKSHARASURYA), 18(01), 35 to 42. https://aksharasurya.com/index.php/latest/article/view/2418

References

ಶಿವರಾಮ ಕಾರಂತ, (1945), ಗೀತ ನಾಟಕಗಳು, ಪುತ್ತೂರು (ದ. ಕ.): ಹರ್ಷ ಮುದ್ರಣ ಪ್ರಕಟಣಾಲಯ.

ವಿಜಯಾ ಸುಬ್ಬರಾಜ್, (2011), ಗೀತ ನಾಟಕಗಳು, ರಾಮನಗರ (ನೆಲಮಲೆ): ನೆಲಮಲೆ ಪಬ್ಲಿಷಿಂಗ್ ಹೌಸ್.

ಮರುಳಸಿದ್ಧಪ್ಪ ಕೆ., (2013), ಆಧುನಿಕ ಕನ್ನಡ ನಾಟಕ, ಬೆಂಗಳೂರು: ಅಂಕಿತ ಪುಸ್ತಕ.

ರಂಗನಾಥ್ ಎಚ್. ಕೆ., (2024), ಕನ್ನಡ ರಂಗಭೂಮಿ, ಬೆಂಗಳೂರು: ಹೇಮಂತ ಸಾಹಿತ್ಯ.

Most read articles by the same author(s)