ಹರಿಹರನ ರಗಳೆಯಲ್ಲಿ ಕೊಂಡಗುಳಿ ಕೇಶಿರಾಜ ಮತ್ತು ಪ್ರಭುತ್ವ
Main Article Content
Abstract
ವಚನಕಾರರ ನಂತರದಲ್ಲಿ ಬಂದ ಹರಿಹರ ತನ್ನ ರಗಳೆಗಳಲ್ಲಿ ಚಿತ್ರಿಸಿರುವ ಹಲವು ಪಾತ್ರಗಳು ರಾಜತ್ವವನ್ನು ಪ್ರತಿಭಟಿಸಿರುವುದು ಸ್ಪಷ್ಟವಾಗಿ ಕಾಣುತ್ತವೆ. ಮೂಲತಃ ಕವಿ ಹರಿಹರ ರಾಜ ವ್ಯವಸ್ಥೆಯಲ್ಲಿದ್ದವನು. ಪ್ರಭುತ್ವ ಜನಸಾಮಾನ್ಯರೊಂದಿಗೆ ನಡೆದುಕೊಂಡ ಸತ್ಯಾಸತ್ಯತೆಗಳನ್ನು ಅವಲೋಕಿಸಿ ಅನುಭವಿಸಿದವನು. ರಾಜ ಸೇವೆಗಿಂತಲೂ ಹಂಪೆಯ ವಿರೂಪಾಕ್ಷನ ಸೇವೆಯೇ ಶ್ರೇಷ್ಟವೆಂದು ರಾಜನ ಆಸ್ಥಾನವನ್ನು ತೊರೆದು ಬಂದವನು. ಈತನ ರಗಳೆಗಳಲ್ಲಿ ಬರುವ ಪಾತ್ರಗಳು ಕೂಡ ರಾಜತ್ವವನ್ನು ವಿರೋಧಿಸಿದವರೇ. ತೆಲುಗು ಬೊಮ್ಮಯ್ಯ, ಬಾಹೂರ ಬೊಮ್ಮಯ್ಯ, ಶಂಕರದಾಸಿಮಯ್ಯ, ಅಕ್ಕಮಹಾದೇವಿ ಹೀಗೆ ಹಲವು ರಗಳೆಗಳಲ್ಲಿ ಪ್ರಭುತ್ವವನ್ನು ದಿಕ್ಕರಿಸಿ ಹೋರಾಡಿದವರನ್ನೇ ವಸ್ತು ವಿಷಯವನ್ನಾಗಿ ಆಯ್ಕೆಮಾಡಿಕೊಂಡಿರುವುದು ಇದಕ್ಕೆ ಸಾಕ್ಷಿ. ಅವುಗಳಲ್ಲಿ ಕೊಂಡಗುಳಿ ಕೇಶಿರಾಜನ ರಗಳೆಯೂ ಒಂದು.
ಕೊಂಡಗುಳಿ ಕೇಶಿರಾಜ ಚಾಳುಕ್ಯ ಚಕ್ರವರ್ತಿ ಆರನೆಯ ವಿಕ್ರಮಾದಿತ್ಯನ ಆಸ್ಥಾನದಲ್ಲಿ ವಿದ್ವಾಂಸನಾಗಿ, ದಂಡನಾಯಕನಾಗಿ ಪ್ರಾಮಾಣಿಕವಾಗಿ ಕಾಯಕ ನಿರ್ವಹಿಸಿದ ಶರಣ. ಶಿವಯೋಗಧ್ಯಾನದಲ್ಲಿ ನಿರತನಾಗಿ ಜಗವೆಲ್ಲವನ್ನು ಮರೆತು ದಕ್ಷತೆಯಿಂದ, ನಿಷ್ಠೆಯಿಂದ ಕಾಯಕ ಮಾಡುವುದಲ್ಲದೇ, ನೇರವಾಗಿ ಮಾತನಾಡುವ ಮಹಾಯೋಗಿ. ಅಸಮಾನತೆಯ ವಿರುದ್ಧ, ಪ್ರಭುತ್ವದ ದುರಾಡಳಿತದ ವಿರುದ್ಧ ಯಾವುದೇ ಮುಲಾಜಿಲ್ಲದೇ ಧ್ವನಿಯೆತ್ತುವ ವೀರಶರಣ. ಇಂಥ ಶರಣನ ಬದುಕಿನ ಚರಿತ್ರೆಯನ್ನು ಹರಿಹರ ತಮ್ಮ ರಗಳೆಗಳ ಮೂಲಕ ಸಾರ್ವಜನಿಕವಾಗಿಸಿದ. ಎಲ್ಲರೂ ಕೊಂಡಗುಳಿ ಕೇಶಿರಾಜನ ವ್ಯಕ್ತಿತ್ವವನ್ನು ಅರಿತುಕೊಳ್ಳಲು ಸಾಧ್ಯವಾಗಿಸಿದ. ಹಾಗಾಗಿ ಈ ಲೇಖನದಲ್ಲಿ ಕೇಶಿರಾಜನ ವೀರ ಜೀವನದ ಕುರಿತು ತಿಳಿದುಕೊಳ್ಳುವ ಸಂಗತಿಗಳನ್ನು ಚರ್ಚಿಸಲಾಗಿದೆ. ನಿಷ್ಠಾವಂತ ಶರಣನ ಕಾಯಕ ಮತ್ತು ದಾಸೋಹದ ಮಹತ್ವವನ್ನು ತಿಳಿಯುವ ಉದ್ದೇಶ ಹೊಂದಲಾಗಿದೆ. ಅನ್ಯಾಯಕ್ಕೆ ಒಳಗಾದವರು ಹೇಗೆ ಧೈರ್ಯದಿಂದ ಪ್ರಭುತ್ವವನ್ನು ಎದುರಿಸಬೇಕು ಎನ್ನುವ ಮನೋಬಲದ ಮೌಲ್ಯವನ್ನು ತಿಳಿಯುವುದು ಇಲ್ಲಿನ ಸಂಗತಿಯಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಕಲಬುರ್ಗಿ ಎಂ. ಎಂ. (ಸಂ), (2013), ಹರಿಹರನ ರಗಳೆಗಳು, ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
ಕಲಬುರ್ಗಿ ಎಂ. ಎಂ. (ಸಂ), (1999), ಹರಿಹರನ ರಗಳೆಗಳು, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಕಲಬುರ್ಗಿ ಎಂ. ಎಂ. (ಸಂ), (2011), ಬಸವಣ್ಣನವರ ವಚನ ಸಂಪುಟ, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.
ವಿದ್ಯಾಶಂಕರ ಎಸ್. (ಸಂ), (2001), ಸಂಕೀರ್ಣ ವಚನಸಂಪುಟ-2, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.
ಸುಂಕಾಪುರ ಎಂ. ಎಸ್. (ಸಂ), (1976), ಮಹಾಕವಿ ಹಂಪೆಯ ಹರಿಹರದೇವಕೃತ ನೂತನ ಪುರಾತನರ ರಗಳೆಗಳು, ಧಾರವಾಡ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ.