Published: 2024-06-05

Table of Contents

Table of Contents

I to V

ಎರಡು ಶಬ್ದಗಳ ನಿಷ್ಪತ್ತಿ ಮತ್ತು ಅರ್ಥವಿಚಾರ

ಜಿ. ವೆಂಕಟಸುಬ್ಬಯ್ಯ

01 to 17

ಜಗಮೆಚ್ಚಿದ ನುಡಿಗಾರುಡಿಗ ಪ್ರೊ.ಜಿ.ವೆಂಕಟಸುಬ್ಬಯ್ಯನವರು
ಕರುನಾಡು ಕಂಡ ಕನ್ನಡದ ಮೇರು ನಿಘಂಟು ತಜ್ಞ, ನುಡಿ ಗಾರುಡಿಗ, ನುಡಿಬ್ರಹ್ಮ, ಶಬ್ದಬ್ರಹ್ಮ, ಅಕ್ಷರಬ್ರಹ್ಮ, ನಡೆದಾಡುವ ನಿಘಂಟು, ಅಪ್ರತಿಮ ಸಂಶೋಧಕ, ಜಗಮೆಚ್ಚಿದ ಕನ್ನಡ ಪ್ರಾಧ್ಯಾಪಕ ಎಂದೇ ಜನಪ್ರಿಯರಾದವರು ನಾಡೋಜ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು. ನುಡಿಸಾಗರದ ಆಳಕ್ಕೂ ಉದ್ದಗಲಕ್ಕೂ ಮುಳುಗೆದ್ದು ಈಜಾಡಿ ‘ಕನ್ನಡ ನಿಘಂಟು’ಗಳೆಂಬ ಮುತ್ತುರತ್ನಗಳನ್ನು ಹೊರತಂದುಕೊಟ್ಟ ಶೋಧನವೀರ ನುಡಿಕಾರರು ಜಿವಿ. ಆಂಗ್ಲಮುಖಿ ಹಾಗೂ ಕಲಾರಾಹಿತ್ಯ ಶಿಕ್ಷಣಯಾನದಲ್ಲಿ ಕನ್ನಡಪ್ರಜ್ಞೆಯನ್ನು ಬೆಳಗುವ ಮೂಲಕ ಅಸಂಖ್ಯ ಕನ್ನಡ ಕಟ್ಟಾಳುಗಳನ್ನು ರೂಪುಗೊಳಿಸುವ ಮೂಲಕ ಈ ನೆಲಕ್ಕೆ ಅಪೂರ್ವ ಕಾಣಿಕೆಯಿತ್ತ ಜಿವಿ ಅವರು ಶ್ರೇಷ್ಠ ಪ್ರಾಧ್ಯಾಪಕರಾಗಿದ್ದಾರೆ. ಸಂಶೋಧಕರಾಗಿ ಹಾಗೂ ಪ್ರಾಧ್ಯಾಪಕರಾಗಿ ಮಾತ್ರವಲ್ಲದೇ ಡೈನಮಿಕ್ ಅಧಿಕಾರಿಯಾಗಿಯೂ ಕನ್ನಡ ನಾಡು-ನುಡಿಗೆ ನೀಡಿದ ಮಹತ್ತರವಾದ ಕೊಡುಗೆಗಳು ಪ್ರಾತಃಸ್ಮರಣೀಯವಾಗಿವೆ.
ಮೂಲತಃ ಗಂಜಮ್ ವೆಂಕಟಸುಬ್ಬಯ್ಯ ಅವರು ಪ್ರೊ.ಜಿ.ವೆಂಕಟಸುಬ್ಬಯ್ಯ (ಜಿವಿ) ಎಂದೇ ಜನಪ್ರಿಯ. ಇವರು ಹುಟ್ಟಿದ್ದು 1913ರ ಆಗಸ್ಟ್ 23ರಂದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಮ್ ಗ್ರಾಮದಲ್ಲಿ. ಅವರ ತಂದೆ ಗಂಜಮ್ ತಿಮ್ಮಯ್ಯ; ಆ ಕಾಲದಲ್ಲಿ ಅವರು ಪ್ರಸಿದ್ಧ ವಿದ್ವಾಂಸರು; ಕನ್ನಡ ಮತ್ತು ಸಂಸ್ಕೃತಗಳಲ್ಲಿ ಅವರದ್ದು ಅಗಾಧ ಪಾಂಡಿತ್ಯ; ಅರಮನೆಯ ವಿದ್ವಾಂಸರಾಗಿದ್ದರು. ‘ಪುರಾಣ ಕಥಾವಳಿ’ ಎಂಬ ಮಾಸಪತ್ರಿಕೆಯನ್ನು ಆರಂಭಿಸಿ ಅದರಲ್ಲಿ ಶಿವಪುರಾಣ, ವಿಷ್ಣುಪುರಾಣ ಮತ್ತಿತರವುಗಳಿಂದ ಕತೆಗಳನ್ನು ಪ್ರಕಟಿಸುತ್ತಿದ್ದರು. ಇವುಗಳ ಸರಳ ಶೈಲಿಯ ಬಗ್ಗೆ ರಾ.ನರಸಿಂಹಾಚಾರ್ಯರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ‘ರಘುವೀರಚರಿತೆ’ ಎಂಬ ನಾಟಕ ಹಾಗೂ ‘ಮಾಲತೀಮಾಧವ’ದ ಅನುವಾದಗಳು ಅವರವೇ. ತಂದೆಯ ಪ್ರೇರಣೆ ಮತ್ತು ಮಾರ್ಗದರ್ಶನಗಳಿಂದ ಜಿವಿ ಅವರು ವಿದ್ವತ್ತನ್ನು ಮೈಗೂಡಿಸಿಕೊಂಡರು. ಇದರಿಂದಾಗಿಯೇ ಬಾಲಕನಾಗಿದ್ದಾಗಲೇ ವೆಂಕಟಸುಬ್ಬಯ್ಯನವರಿಗೆ ಸಾಹಿತ್ಯದಲ್ಲಿ ಒಲವು ಬೆಳೆಯಿತು. 
ಜಿವಿ ಅವರ ತಂದೆ ಸರ್ಕಾರಿ ಉದ್ಯೋಗದಲ್ಲಿದ್ದ ಕಾರಣ ಒಂದು ಕಡೆಯಿಂದ ಇನ್ನೊಂದು ಕಡೆಗೆ ವರ್ಗಾವಣೆಯಾಗುತ್ತಿದ್ದರು. ಹೀಗಾಗಿ ವೆಂಕಟಸುಬ್ಬಯ್ಯನವರು ಪ್ರಾಥಮಿಕ ಶಿಕ್ಷಣವನ್ನು ಬನ್ನೂರು ಮತ್ತು ಮಧುಗಿರಿಯಲ್ಲಿ ಪೂರೈಸಿದರು. 1930ರ ದಶಕದ ಆರಂಭದ ವೇಳೆಗೆ, ಜಿವಿ ಅವರ ಕುಟುಂಬವು ಮೈಸೂರು ನಗರಕ್ಕೆ ಸ್ಥಳಾಂತರಗೊಂಡ ಕಾರಣದಿಂದ ವೆಂಕಟಸುಬ್ಬಯ್ಯನವರು ಮೈಸೂರಿನ ಯುವರಾಜ ಕಾಲೇಜಿಗೆ ಸೇರುವಂತಾಯಿತು. ಇಲ್ಲಿ ಕುವೆಂಪು ಅವರ ಪ್ರಭಾವಕ್ಕೆ ಒಳಗಾದರು. ನಂತರ ತಮ್ಮ ಕಲಾ ಪದವಿ ಪಡೆಯಲು ಮೈಸೂರಿನ ಮಹಾರಾಜ ಕಾಲೇಜಿಗೆ ಸೇರಿದರು. ಅಲ್ಲಿ ಅವರು ಆಯ್ಕೆಮಾಡಿದ್ದ ವಿಷಯ ಪ್ರಾಚೀನ ಇತಿಹಾಸ, ಸಂಸ್ಕೃತ ಮತ್ತು ಹಳಗನ್ನಡವಾಗಿದ್ದು, ಇಲ್ಲಿ ಪಂಪಭರತವನ್ನು ಟಿ.ಎಸ್.ವೆಂಕಣ್ಣಯ್ಯ, ಗ್ರಂಥಸಂಪಾದನಾ ವಿಜ್ಞಾನವನ್ನು ಡಿ.ಎಲ್.ನರಸಿಂಹಾಚಾರ್, ಕಾವ್ಯಮೀಮಾಂಸೆಯನ್ನು ತೀ.ನಂ.ಶ್ರೀಕಂಠಯ್ಯ ಮತ್ತು ಕರ್ನಾಟಕ ಇತಿಹಾಸವನ್ನು ಎಸ್.ಶ್ರೀಕಂಠಶಾಸ್ತ್ರಿ ಅವರಂತಹ ಮೇರುವಿದ್ವಾಂಸರಿಂದ ಕಲಿಯುವ ಸುಸಂದರ್ಭ ಜಿವಿ ಅವರದಾಗಿತ್ತು.
“A Great Teacher Inspires” ಎಂಬ ಮಾತು ಪ್ರಾಧ್ಯಾಪಕರಾಗಿದ್ದ ಜಿವಿ ಅವರ ಜೀವನಯಾನದಲ್ಲಿ ಅಕ್ಷರಶಃ ಸತ್ಯವಾಗಿತ್ತು. ಜಿವಿ ಅವರು ಉಪಾಧ್ಯಾಯರಾಗಿ ಶಾಲೆ ಸೇರಿದ ಮೊದಲು ಪಾಠಮಾಡಬೇಕಾಗಿ ಬಂದದ್ದು ಕನ್ನಡವನ್ನಲ್ಲ, ಇಂಗ್ಲಿಷನ್ನು; ಅದೂ ಇಂಗ್ಲಿಷ್ ವ್ಯಾಕರಣವನ್ನು, ಜಿವಿ ಅವರ ಸಹಜವಾದ ಅಧ್ಯಾಪನ ಸಾಮರ್ಥ್ಯದ ಜೊತೆ ಕಲಿತಿದ್ದ ಬೋಧನವಿಧಾನ ಸೇರಿ ಅವರನ್ನು ಮತ್ತಷ್ಟು ಪರಿಣಾಮಕಾರೀ ಅಧ್ಯಾಪಕರನ್ನಾಗಿ ರೂಪಿಸಿತ್ತು. ಆದ್ದರಿಂದ ಅವರು ಮಾಡಿದ ಇಂಗ್ಲಿಷ್ ವ್ಯಾಕರಣ ಪಾಠಗಳು ವಿದ್ಯಾರ್ಥಿಸಮೂಹಕ್ಕೆ ಮೆಚ್ಚಿಗೆಯಾದವು. ಇಂಗ್ಲಿಷ್ ವ್ಯಾಕರಣ ತರಗತಿಗಳನ್ನು ಬೇರೆ ಅಧ್ಯಾಪಕರಿಗೆ ಕೊಟ್ಟಾಗ ವಿದ್ಯಾರ್ಥಿಗಳು ಮುಷ್ಕರ ಹೂಡಿ ಮತ್ತೆ ಜಿವಿ ಅವರೇ ಪಾಠ ಮಾಡುವ ಹಾಗಾಯಿತು. ಇದು ಜಿವಿ ಅವರ ಬೋಧನೆ ಮಾಡಿದ್ದ ಪ್ರಭಾವಳಿ. ಮುಂದೆ ಬಿಎಚ್‌ಎಸ್ ಪ್ರೌಢಶಾಲೆಯು ಇಂಟರ್‌ಮೀಡಿಯಟ್ ಕಾಲೇಜಾಗಿ, ಆ ಮುಂದೆ ವಿಜಯ ಕಾಲೇಜು ಎಂಬ ಹೆಸರಲ್ಲಿ ಪದವಿ ಕಾಲೇಜು ಆದ ಮೇಲೆಯೂ ಜಿವಿ ಅವರು ಅಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಮುಂದುವರಿದರು. ಬೆಂಗಳೂರು ವಿಶ್ವವಿದ್ಯಾಲಯವು ಆರಂಭಗೊಂಡ ನಂತರ ಆನರ್ಸ್ ತರಗತಿಗಳು ಜನ್ಮ ತಳೆದಾಗ ಜಿವಿ ಅವರ ಪ್ರಯತ್ನದಿಂದ ವಿಜಯ ಕಾಲೇಜಿನಲ್ಲಿ ಭೌತಶಾಸ್ತ್ರದ ಜೊತೆಗೆ ಕನ್ನಡ ಆನರ್ಸ್ ತರಗತಿಯೂ ಶುರುವಾಯಿತು. ಜಿವಿ ಅವರ ತರಗತಿಯ ಪಾಠ ಸಾವಿರಾರು ವಿದ್ಯಾರ್ಥಿಗಳಲ್ಲಿ ವಿಷಯದ ಬಗ್ಗೆ ತಿಳಿವಳಿಕೆ ಕೊಡುವುದರಲ್ಲಿ ಹೇಗೆಯೋ ಕನ್ನಡದ ಬಗ್ಗೆ ಶ್ರದ್ಧೆ ಬೆಳೆಯಲೂ ಹಾಗೆಯೇ ಕಾರಣವಾಗಿದೆ. ಪಾಠ ಮಾಡುವುದೊಂದಷ್ಟೇ ಅಲ್ಲ, ಕಿರಿಯರ ಜೊತೆ ಅವರು ಆತ್ಮೀಯತೆಯಿಂದ ನಡೆದುಕೊಳ್ಳುತ್ತಿದ್ದ ರೀತಿ ಅವರ ಯಶಸ್ಸಿನ ಒಂದು ಗುಟ್ಟಾಗಿತ್ತು ಎಂಬುದನ್ನು ಅವರ ಅಸಂಖ್ಯ ವಿದ್ಯಾರ್ಥಿಗಳ ಅನುಭವದ ಹಾಗೂ ಅಭಿಮಾನದ ನುಡಿಯಾಗಿದೆ.
ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಮೊದಲೆಲ್ಲ ಸೂಟ್ ತೊಡುತ್ತಿದ್ದರು. “ಕನ್ನಡಕ್ಕೆ ಸೂಟ್ ತೊಡಿಸಿದವರು” ಎಂದು ಅವರ ಬಗ್ಗೆ ‘ಪ್ರಜಾವಾಣಿ’ಯ ಸಂಪಾದಕರಾಗಿದ್ದ ಟಿಎಸ್‌ಆರ್ ಹೇಳಿದ್ದರು. ವಿದ್ವಾಂಸರಾದ ಪಿ.ವಿ.ನಾರಾಯಣ ಅವರು ಹೇಳುವಂತೆ, “ಅದೊಂದು ರೂಪಕ; ಕನ್ನಡ ಮೇಷ್ಟರೆಂದರೆ ಒಂದು ಸಿದ್ಧ ಚಿತ್ರ ಜನರ ಮನಸ್ಸಿನಲ್ಲಿತ್ತು. ಅದನ್ನು ಹೋಗಲಾಡಿಸಿ, ಕನ್ನಡ ಅಧ್ಯಾಪಕರು ಆಧುನಿಕ ಮನೋಭಾವವನ್ನು ಮೈಗೂಡಿಸಿಕೊಂಡದ್ದರ ಪ್ರತಿಮೆ ಅದು. ಅದಕ್ಕೆ ಮೊದಲಿಟ್ಟವರು ಜಿವಿ ಎಂಬುದು ಅದರರ್ಥ.” ಆದರೆ ಸೂಟ್ ತೊಟ್ಟವರೆಲ್ಲ ಹೀಗೇ ಇರುವರೆಂದು ಹೇಳಲಾಗುವುದಿಲ್ಲ. ಕನ್ನಡ ನಾಡಿನಾದ್ಯಂತ ಅವರ ಅನೇಕ ವಿದ್ಯಾರ್ಥಿಗಳು ಪ್ರಭಾವೀ ಸ್ಥಾನಗಳಲ್ಲಿದ್ದವರು ಕೇವಲ ಸಾಹಿತ್ಯದ ವಿದ್ಯಾರ್ಥಿಗಳಲ್ಲ. ಸಾಹಿತ್ಯೇತರ ಉಳಿದ ವಿದ್ಯಾರ್ಥಿಗಳಲ್ಲೂ ಜಿವಿ ಎಂತಹ ಪ್ರಭಾವ ಬೀರಿ ಹೆಸರು ಪಡೆದಿದ್ದಾರೆ ಎಂಬುದನ್ನು ತಿಳಿದರೆ ಅವರ ಅಧ್ಯಾಪನ ಬಹುಸಾಮರ್ಥ್ಯದ ಬಗ್ಗೆ ಅಚ್ಚರಿಯೂ ಹೆಮ್ಮೆಯೂ ಉಂಟಾಗುತ್ತದೆ.
ವಿದ್ವತ್ ಕ್ಷೇತ್ರದಲ್ಲಿ ಮಾತ್ರವಲ್ಲದೆ ವ್ಯಾವಹಾರಿಕ ಮಟ್ಟದಲ್ಲಿಯೂ ಕನ್ನಡಕ್ಕೆ ಸಿಕ್ಕಬೇಕಾದ ಸ್ಥಾನಮಾನಗಳನ್ನು ಒದಗಿಸಲು ಜಿವಿ ಅವಿರತವಾಗಿ ಪ್ರಯತ್ನಿಸಿದ್ದಾರೆ. 1964ರಿಂದ 1969 ರವರೆಗೆ ಜಿವಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕರಾಗಿದ್ದರು. ಅವರು ಆ ಅಧಿಕಾರ ವಹಿಸಿಕೊಂಡಾಗ ಪರಿಷತ್ತಿನ ಆರ್ಥಿಕ ಸ್ಥಿತಿ ಶೋಚನೀಯವಾಗಿತ್ತು, ಅದನ್ನಿವರು ಉತ್ತಮಪಡಿಸಿದರು. ಅಲ್ಲದೆ, ಆಗ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯಲ್ಲಿ ಕೆಲವೇ ಸದಸ್ಯರಿದ್ದರು; ಕರ್ನಾಟಕದ ಎಲ್ಲ ಜಿಲ್ಲೆಗಳಿಂದಲೂ ಪ್ರಾತಿನಿಧ್ಯ ಒದಗಿಸಿ ಅದಕ್ಕೆ ನಿಜವಾದ ರಾಜ್ಯವ್ಯಾಪ್ತಿಯನ್ನು ಒದಗಿಸಿದರು. ಕನ್ನಡನಾಡನ್ನೆಲ್ಲ ಸಂಚರಿಸಿ ತಮ್ಮ ಉಪನ್ಯಾಸಗಳ ಮೂಲಕ ಜನರಲ್ಲಿ ತಾಯಿನುಡಿಯ ಬಗ್ಗೆ ಅಭಿಮಾನ ಮೂಡಿಸಿದ್ದಾರೆ. 1956ರ ನವೆಂಬರ್ 1ರಂದು ಕರ್ನಾಟಕದ ಏಕೀಕರಣವಾದರೂ ಬೀದರಿನ ಬಸವಕಲ್ಯಾಣವು ಕರ್ನಾಟಕಕ್ಕೆ ಸೇರಿರಲಿಲ್ಲ. ಈ ಸಮಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯನ್ನು ಬೀದರ್ ನಗರದಲ್ಲಿ ಸಭೆ ಸೇರಿಸಿ ಈ ವಿಷಯವನ್ನು ಪರಿಶೀಲಿಸಬೇಕೆಂಬ ಜಿವಿ ಅವರ ಮನವಿಯನ್ನು ಅಧಿಕಾರಿಗಳು ಒಪ್ಪಿಕೊಂಡರು. ಬೀದರ್ ನಗರಕ್ಕೆ ಪರಿಷತ್ತಿನ ಕಾರ್ಯ ಸಮಿತಿಯು ಹೋದಾಗ ಆಶ್ಚರ್ಯ ಕಾದಿತ್ತು. ಬೀದರ್ ನಗರದಲ್ಲಿ ಅಂಗಡಿ ಬೀದಿಯಲ್ಲಿ ಒಂದು ಕನ್ನಡದ ಬೋರ್ಡ್ ಇರಲಿಲ್ಲ, ಅಲ್ಲಿ ಕನ್ನಡದ ಶಾಲೆಗಳಿರಲಿಲ್ಲ. ಅಲ್ಲಿಯ ಜನಕ್ಕೆ ಕನ್ನಡಕ್ಕೆ ಒಂದು ವರ್ಣಮಾಲೆ ಇದೆ ಎಂಬುದು ಗೊತ್ತಿರಲಿಲ್ಲ. ಎಲ್ಲಾ ಮರಾಠೀಮಯ. ಮನೆಯಲ್ಲಿ ಎಲ್ಲರೂ ಕನ್ನಡ ಮಾತನಾಡುತ್ತಿದ್ದರು. ಹೊರಗೆ ಮರಾಠಿ. ಇಷ್ಟೊಂದು ಹಿಂದೆ ಬಿದ್ದಿರುವ ಕನ್ನಡ ಪ್ರದೇಶವನ್ನು ಕನ್ನಡ ಭಾಷೆಯ ಅಕ್ಷರಗಳಿಂದ ಪ್ರಾರಂಭಿಸಿ ಕನ್ನಡಮಯವನ್ನಾಗಿ ಮಾಡಬೇಕಾಗಿತ್ತು. ಆಗ ಸಮಿತಿಯ ಎಲ್ಲ ಸದಸ್ಯರೂ ಅನೇಕ ಕಡೆಗಳಲ್ಲಿ ಪ್ರಯಾಣ ಮಾಡಿ, ಕನ್ನಡದಲ್ಲಿ ಉಪನ್ಯಾಸ ಮಾಡಿ ಜನರ ಮನಸ್ಸಿನಲ್ಲಿ ಕನ್ನಡದ ಹಿರಿಮೆಯನ್ನು ಮೂಡಿಸಬೇಕಾಯಿತು. ಜೀವಿ ಮತ್ತವರ ಅಧಿಕಾರಿ ಬಳಗದ ಕನ್ನಡ ಬದ್ಧತೆ ಹಾಗೂ ಕ್ರಿಯಾಶೀಲ ಆಂದೋಲನದ ಫಲವಾಗಿ ಬಸವಕಲ್ಯಾಣವು ಕನ್ನಡಮಯವಾಯಿತು.
ಪ್ರೊ.ಜಿ.ವಿ ಅವರ ಮತ್ತೊಂದು ಮಹತ್ವದ ಸಾಧನೆಯೆಂದರೆ ‘ರಾಮಕೃಷ್ಣ ಸ್ಟೂಡೆಂಟ್ ಹೋಂ’ ಅನ್ನು ಕಟ್ಟಿ ಬೆಳೆಸಿದುದು. ಬೆಂಗಳೂರಿನ ಶ್ರೀ ರಾಮಕೃಷ್ಣ ಸೂಡೆಂಟ್ಸ್ ಹೋಂನ ಅಧ್ಯಕ್ಷರಾಗಿ ಅದರ ಏಳಿಗೆಗಾಗಿ ನಿರ್ಮಲವಾಗಿ ದುಡಿದವರು. ಅದಕ್ಕೆ ಮೊದಲು ಜಿವಿ ಅವರನ್ನು ಸದಸ್ಯರಾಗಿಸಿದವರು ಎಂ.ಬಿ.ಗೋಪಾಲಸ್ವಾಮಿ ಅವರು. ಗೋಪಾಲಸ್ವಾಮಿ ಅವರು, ನೀವು ಮಕ್ಕಳಿಗೆ ಪ್ರೀತಿಯಿಂದ ಪಾಠ ಹೇಳುವುದರಲ್ಲಿ ಎತ್ತಿದ್ದ ಕೈಯಿ. ಹಾಗಾಗಿ ನೀವು ಈ ಕೆಲಸ ಮಾಡಬೇಕು ಎಂದಾಗ ಜಿವಿ ಅವರು ಪ್ರತಿನಿತ್ಯ ಬಿಡುವಿನ ಹೊತ್ತಿನಲ್ಲಿ ಹೋಗಿ ಅಲ್ಲಿನ ಬಡ ಮಕ್ಕಳಿಗೆ ಪಾಠ ಹೇಳುತ್ತಿದ್ದರು. ಅಲ್ಲಿ ಅವರು ವಿದ್ಯಾರ್ಥಿಗಳಿಂದ ಅದೆಷ್ಟು ಪ್ರೀತಿ ಸಂಪಾದಿಸಿದ್ದರು ಅಂದರೆ ಅವರನ್ನೇ ವಾರ್ಡನ್ ಮಾಡಲಾಯಿತು. ಈ ವಿದ್ಯಾರ್ಥಿನಿಲಯವು ಸುಸಜ್ಜಿತವಾದ ಸ್ವಂತ ಕಟ್ಟಡ ಹಾಗೂ ಅಚ್ಚುಕಟ್ಟಾದ ಏರ್ಪಾಟುಗನ್ನು ಹೊಂದಿರುವುದಕ್ಕೆ ಜಿವಿ ಅವರ ಶ್ರಮ ಹಾಗೂ ದೂರದರ್ಶಿತ್ವಗಳೂ ಕಾರಣವಾಗಿವೆ. ಈ ತನಕ ಸಾವಿರಾರು ವಿದ್ಯಾರ್ಥಿಗಳು ಆ ವಿದ್ಯಾರ್ಥಿನಿಲಯದ ಲಾಭ ಪಡೆದಿದ್ದಾರೆ; ಅನೇಕ ಕ್ಷೇತ್ರಗಳಲ್ಲಿ ಉನ್ನತ ಸ್ಥಾನ ಪಡೆದು ತಮಗೂ ನಿಲಯಕ್ಕೂ ಗೌರವ ತಂದುಕೊಂಡಿದ್ದಾರೆ. ಜಿವಿ ಅವರು ತಮ್ಮ ಬಾಲ್ಯದಲ್ಲಿ ಅನುಭವಿಸಿದ ಬಡತನದ ಬೇಗೆಯನ್ನು ಮರೆಯದೆ ಬಡ ವಿದ್ಯಾರ್ಥಿಗಳ ಹಿತಕ್ಕಾಗಿ ಶ್ರಮಿಸಿದ ಮಾನವೀಯ ಜೀವನಯಾನವು ಅವಿಸ್ಮರಣೀಯ.
ಪ್ರೊ.ಜಿ.ವಿ. ಅವರು ಸಂಶೋಧನೆ, ಸಂಪಾದನೆ, ಅನುವಾದ, ನಿಘಂಟು ರಚನೆ, ಸಾಹಿತ್ಯ ವಿಮರ್ಶೆ, ಸಾಹಿತ್ಯ ಚರಿತ್ರೆ ಮೊದಲಾದ ಕ್ಷೇತ್ರಗಳಲ್ಲಿ ಗ್ರಂಥ ರಚನೆ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಪಾರವಾದುದು. ಅನುಕಲ್ಪನೆ, ನಯಸೇನ, ಕಬೀರ್, ಸರ್ವಜ್ಞ, ಕವಿಜನ್ನ, ಕನ್ನಡ ಸಾಹಿತ್ಯ ಬೆಳೆದು ಬಂದ ದಾರಿ, ಕನ್ನಡವನ್ನು ಉಳಿಸಿ ಬೆಳಸಿದವರು, ಕನ್ನಡ ನಿಘಂಟು, ಎರವಲು ಶಬ್ದಕೋಶ, ಇಂಗ್ಲಿಷ್-ಕನ್ನಡ ನಿಘಂಟು, ಕ್ಲಿಷ್ಟಪದಕೋಶ, ಇಗೋ ಕನ್ನಡ ಮೊದಲಾದ ಕೃತಿಜ್ಯೋತಿಗಳ ಮೂಲಕ ಕನ್ನಡ ನಾಡು-ನುಡಿಯನ್ನು ಬೆಳಗಿದ ಜಿವಿ ಅವರು ದಣಿವರಿಯದ ದುಡಿಮೆಗಾರರು ಹಾಗೂ ಸುದೀರ್ಘ ಆಯುಷ್ಯದ ಹಿರಿಮೆಯುಳ್ಳ ಚೇತನವಾಗಿದ್ದವರು.
ವಿಮರ್ಶಕರ ಅಭಿಮತದಂತೆ, ಜಿವಿ ಅವರ ಸಾಹಿತ್ಯಾನುಸಂಧಾನ ಬಹು ಸೂಕ್ಷ್ಮವಾದುದು. ಅವರು ಬರೆದ ‘ಅನುಕಲ್ಪನೆ’ ಅವರ ಮೊದಲ ಗಂಭೀರ ವಿಮರ್ಶಾ ಲೇಖನಗಳ ಸಂಕಲನ. “ಕವಿಯ ಪ್ರತಿಭೆಯನ್ನನುಸರಿಸಿದ ಅವನ ಕಲ್ಪನೆಗೆ ಸರಿಯಾದ ಪುನಃಕಲ್ಪನೆಯನ್ನು ಅನುಕಲ್ಪನೆ ಎಂದು ಕರೆಯಬಹುದೆ” ಎಂದು ಅದರಲ್ಲಿ ವಿವರಣೆಯಿದೆ. ಇದು ಸಹೃದಯ ಎಂಬ ಭಾರತೀಯ ಕಾವ್ಯಮೀಮಾಂಸೆಯ ಪರಿಕಲ್ಪನೆಗೆ ಅನುಗುಣವಾದ ವಿವರಣೆ. ಅದಕ್ಕನುಗುಣವಾದ ಕೃತಿ ಪರಿಶೀಲನೆಯ ಪ್ರಯತ್ನವನ್ನಿಲ್ಲಿ ಕಾಣಬಹುದು. ಹಳಗನ್ನಡದ ಕೆಲವು ಕಾವ್ಯಗಳು ಹಾಗೂ ಹೊಸಗನ್ನಡದ ವಿವಿಧ ಸಾಹಿತ್ಯ ಪ್ರಕಾರಗಳ ಕೆಲವು ಕೃತಿಗಳ ಸಹೃದಯ ವಿಮರ್ಶೆ ಇದರಲ್ಲಿದೆ. ತಮ್ಮ ಪರಿಶೀಲನೆಗೆ ಅವರು ಆಯ್ದುಕೊಂಡಿರುವ ಕೃತಿವೈವಿಧ್ಯವೇ ಅವರ ವಿಶಾಲವಾದ ಅಧ್ಯಯನ, ವಿಸ್ತಾರವಾದ ಆಸಕ್ತಿ ಮತ್ತು ಅಭಿರುಚಿಗಳಿಗೆ ಸಾಕ್ಷಿಯಾಗಿದೆ. ಹರಿಹರನ ‘ಗಿರಿಜಾ ಕಲ್ಯಾಣ’ದಿಂದ ಹಿಡಿದು ‘ಗದಾಯುದ್ಧ ನಾಟಕಂ’, ವಿಸೀ ಅವರ ‘ದ್ರಾಕ್ಷಿ-ದಾಳಿಂಬೆ’ ಸಂಕಲನ, ಮಾಸ್ತಿಯವರ ‘ಯಶೋಧರಾ’ ನಾಟಕ, ಕಾರಂತರ ‘ಕುಡಿಯರ ಕೂಸು’ ಕಾದಂಬರಿ, ಭಾರತೀಪ್ರಿಯರ ‘ರುದ್ರವೀಣೆ’ ಕಥಾ ಸಂಕಲನ, ಗೋಕಾಕ್, ಚೆನ್ನವೀರ ಕಣವಿ, ರಾಮಚಂದ್ರಶರ್ಮರ ಕವನಗಳ ಪರಿಶೀಲನೆಯನ್ನೊಳಗೊಂಡ ಲೇಖನಗಳ ಸಂಕಲನ ಇದಾಗಿದ್ದು, ಪುಸ್ತಕದ ಹೆಸರಿಗೆ ಅನುಗುಣವಾಗಿ ಕವಿಯ ಕಾಲ ಹಾಗೂ ಅವನ ಮನೋಭಾವಗಳ ಹಿನ್ನೆಲೆಯಲ್ಲಿ ಕೃತಿ ಪರಿಶೀಲನೆ ನಡೆಸಿರುವುದು ಇಲ್ಲಿನ ಲೇಖನಗಳ ವೈಶಿಷ್ಟ್ಯವಾಗಿದೆ.
‘ಕನ್ನಡ ಸಾಹಿತ್ಯ ನಡೆದು ಬಂದ ದಾರಿ’ ಕೃತಿಯಲ್ಲಿ ಸಂಕ್ಷಿಪ್ತವಾಗಿ ಕನ್ನಡ ಸಾಹಿತ್ಯವನ್ನು ನಿರೂಪಿಸುವ ಪ್ರಯತ್ನ ಕಂಡುಬರುತ್ತದೆ. ಅದಕ್ಕೆ ಪೂರಕವಾಗಿ ‘ಕರ್ನಾಟಕ ವೈಭವ ಮತ್ತು ಇತರ ಶಬ್ದಚಿತ್ರಗಳು’ ಎಂಬ ಪುಸ್ತಕವಿದೆ. ಇವುಗಳೊಡನೆ ಹೊಸಗನ್ನಡವನ್ನು ಕಟ್ಟಿದ ಅನೇಕರ ಜೀವನಸಾಧನೆಗಳನ್ನು ಪರಿಚಯಿಸುವ ಹತ್ತಾರು ಬರಹಗಳನ್ನು ಜಿವಿ ಮಾಡಿದ್ದಾರೆ. ‘ಪ್ರೊ.ಟಿ.ಎಸ್.ವೆಂಕಣ್ಣಯ್ಯನವರು’ ಮತ್ತು ‘ಡಿ.ವಿ.ಗುಂಡಪ್ಪ’ ವ್ಯಕ್ತಿಚಿತ್ರ ಸಂಕಲನಗಳು. ಇವುಗಳಲ್ಲಿ ಕನ್ನಡ ನುಡಿಸೇವಕರ ಆತ್ಮೀಯ ಚಿತ್ರಣಗಳಿವೆ. ರೆವೆರೆಂಡ್ ಜಾನ್ ಹ್ಯಾಂಡ್ಸ್, ಕಿಟೆಲ್, ರಾ.ನರಸಿಂಹಾಚಾರ್, ಬಿ.ಎಂ.ಶ್ರೀ., ಗೋವಿಂದ ಪೈ, ಎಆರ್‌ಕೆ, ಮಾಸ್ತಿ, ಸಂಸ, ಪಂಡಿತ ತಾರಾನಾಥ, ನಾ.ಕಸ್ತೂರಿ, ಕಾರಂತ, ಸೇಡಿಯಾಪು, ಡಿಎಲ್‌ಎನ್, ಕುವೆಂಪು, ತೀನಂಶ್ರೀ ಮುಂತಾದವರ ಹತ್ತಿರದ ನೆನಪುಗಳ ಜೊತೆಗೆ ಅವರ ಸಾಧನೆಗಳ ಪರಿಚಯವೂ ಸೇರಿ ಒಟ್ಟಾಗಿ ಕನ್ನಡ ನವೋದಯದ ಚರಿತ್ರೆಯೇ ಇವುಗಳ ಮೂಲಕ ನಿರೂಪಿತವಾಗಿದೆ. ಇಪ್ಪತ್ತನೆಯ ಶತಮಾನದ ಮೊದಲ ದಶಕದಲ್ಲಿ ಹುಟ್ಟಿದ ಅನೇಕರು ಆಧುನಿಕ ಕನ್ನಡಕ್ಕೆ ಹೊಸ ದಿಗಂತಗಳನ್ನು ತೆರೆದವರು. ಜಿವಿ ಎರಡನೇ ದಶಕದಲ್ಲಿ ಹುಟ್ಟಿದವರು; ಹಿರಿಯರ ಸಾಧನೆಗಳನ್ನು ಖುದ್ದಾಗಿ ಕಾಣುತ್ತಾ ಅವರ ಮಾರ್ಗದಲ್ಲಿಯೇ ನಡೆದವರು. ಪ್ರಾಯಶಃ ಈ ಮಹನೀಯರ ಬಗ್ಗೆ ಜಿವಿ ಅವರಷ್ಟು ಅಧಿಕಾರಯುತವಾಗಿ, ವೈಯಕ್ತಿಕ ಪರಿಚಯದ ಹಿನ್ನೆಲೆಯಲ್ಲಿ ಬರೆಯುವವರು ಈಗ ಯಾರೂ ಇಲ್ಲ. ಆದ್ದರಿಂದಲೇ ಈ ವ್ಯಕ್ತಿಚಿತ್ರಗಳಿಗೆ ವಿಶೇಷ ಮಹತ್ವ ಪ್ರಾಪ್ತವಾಗಿದೆ ಎನ್ನಬಹುದು.
ಜಿವಿ ಅವರಿಗೆ ಕನ್ನಡದ ಜೊತೆಗೆ ಸಂಸ್ಕೃತ ಸಂಪರ್ಕ ಮೊದಲಿನಿಂದಲೇ ಬಂದದ್ದು; ಚಿಕ್ಕವಯಸ್ಸಿನಿಂದ ಇಂಗ್ಲಿಷ್ ಜ್ಞಾನವನ್ನು ಚೆನ್ನಾಗಿ ರೂಢಿಸಿಕೊಂಡವರು. ಜಿವಿ ಅವರಿಗೆ ಕೊಟ್ಟ ಪರಿಚಯಪತ್ರದಲ್ಲಿ ಇವರನ್ನು ಬಿಎಂಶ್ರೀ “ಇಂಗ್ಲಿಷ್ ಚೆನ್ನಾಗಿ ಬಲ್ಲ ಕನ್ನಡ ವಿದ್ವಾಂಸ” ಎಂದು ವರ್ಣಿಸಿದ್ದರಂತೆ. ಅದಕ್ಕನುಗುಣವಾಗಿ ಅವರು ಅನುವಾದ ಕ್ಷೇತ್ರಕ್ಕೂ ಸಾಕಷ್ಟು ಕೊಡುಗೆಯನ್ನು ಕೊಡುವಂತಾಯಿತು. ಪದವಿ ತರಗತಿಗಳ ಕನ್ನಡ ಪಠ್ಯಕ್ರಮದಲ್ಲಿ ಹಿಂದೆ ಭಾಷಾಂತರವೂ ಇರುತ್ತಿತ್ತು. ಜಿವಿ ಪಾಠಮಾಡಿದ್ದಲ್ಲದೆ, ‘ಭಾಷಾಂತರ ಪಾಠಗಳು’ ಎಂದು ಮೂರು ಭಾಗಗಳಲ್ಲಿ ಹಾಗೂ ‘ಕಾಲೇಜ್ ಭಾಷಾಂತರ’ ಎಂಬ ಅನುವಾದದ ಬಗೆಗಿನ ಪುಸ್ತಕಗಳನ್ನು ಪ್ರಕಟಿಸಿದರು. ನ್ಯಾಷನಲ್ ಬುಕ್ ಟ್ರಸ್ಟ್, ಸಾಹಿತ್ಯ ಅಕಾಡೆಮಿ ಮುಂತಾದ ಸಂಸ್ಥೆಗಳಿಗೆ ಅವರು ಸಿದ್ಧಪಡಿಸಿರುವ ಅನುವಾದಗಳನ್ನು ನೋಡಿದರೆ ಅವು ಇತರ ಭಾಷೆಗಳಿಂದ ಕನ್ನಡಕ್ಕೆ ಬಂದವೆಂದೇ ಅನ್ನಿಸುವುದಿಲ್ಲ. ಅವರು ಹಿಂದೆಯೇ ಮಾಡಿಟ್ಟುಕೊಂಡಿದ್ದ ಜಿಡ್ಡು ಕೃಷ್ಣಮೂರ್ತಿಯವರ ಕೃತಿಯ ಅನುವಾದ ‘ತಿಳಿದುದೆಲ್ಲವ ಬಿಟ್ಟು’ ಕೃತಿಯಲ್ಲಿ ಜೆಕೆ ಅವರ ಸೂಕ್ಷ ಒಳನೋಟಗಳ ಈ ಬರಹವನ್ನು ಜಿವಿ ಸರಳವಾಗಿಯೂ ಸಹಜವಾಗಿಯೂ ಕನ್ನಡಕ್ಕೆ ತಂದಿರುವುದು ಅವರ ಅನುವಾದ ಕೌಶಲಕ್ಕೆ ಹಿಡಿದ ಕನ್ನಡಿಯಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸಿದ ಅನೇಕ ಅನುವಾದ ಕಮ್ಮಟಗಳಲ್ಲಿ ಜಿವಿ ಭಾಗಿಯಾಗಿ ಕಿರಿಯರಿಗೆ ಮಾರ್ಗದರ್ಶನ ಮಾಡಿದುದು ಹಾಗೂ ಆ ಇಲಾಖೆಯ ಅನುವಾದ ಯೋಜನೆಯ ಮಾರ್ಗದರ್ಶನ ಮಾಡಿ ಅನೇಕ ಅನುವಾದಗಳ ಪ್ರಕಟಣೆಗೆ ನೆರವಾದುದು ಸಮಂಜಸವೇ ಆಗಿದೆ. ಬಿ.ಎಂ.ಶ್ರೀ ಅವರು ತಮ್ಮ ‘ಇಂಗ್ಲಿಷ್ ಗೀತಗಳು’ ಮೂಲಕ ಹೇಗೆ ಅನುವಾದದ ದಾರಿ ಹಾಕಿಕೊಟ್ಟರು ಎಂಬುದನ್ನು ವಿವರಿಸುವ ಅವರ ಲೇಖನ ಅನುವಾದದ ಬಗೆಗಿನ ಜಿವಿ ಅವರ ಕಲ್ಪನೆಗಳನ್ನು ಬಿಂಬಿಸುತ್ತದೆ.
‘ನಿಘಂಟು’ ಕ್ಷೇತ್ರದಲ್ಲಿ ಜಿವಿ ಅವರು ಮಾಡಿರುವ ಕೆಲಸವಂತೂ ತುಂಬ ಪ್ರೌಢಿಮೆಯದು; ಅವರ ವಿಶೇಷ ಕಾರ್ಯಕ್ಷೇತ್ರವೆಂದು ಜನತೆ ಮಾನ್ಯಮಾಡಿರುವುದೂ ಇದನ್ನೇ. ಅವರು ಪ್ರಧಾನ ಸಂಪಾದಕತ್ವನ್ನು ವಹಿಸಿಕೊಂಡು ಕನ್ನಡ ಸಾಹಿತ್ಯ ಪರಿಷತ್ತಿನ ‘ಕನ್ನಡ-ಕನ್ನಡ ನಿಘಂಟು ಸಂಪುಟ’ಗಳಲ್ಲಿ ಆರರ ಪ್ರಕಟಣೆಗೆ ನೆರವಾಗಿದ್ದಾರೆ. ಆ ಕಾರ್ಯಕ್ಕಾಗಿ ಅವರು ಮಾಡಿದ ವ್ಯಾಪಕ ಓದು ಮತ್ತು ಸಿದ್ಧತೆಗಳು ಅವರಿಂದ ಸ್ವತಂತ್ರವಾದ ನಿಘಂಟುಗಳ ರಚನೆಗೆ ದೃಢವಾದ ಭೂಮಿಕೆಯನ್ನೊದಗಿದವು. ಇತರರ ಜೊತೆ ಸೇರಿ ಮೊದಲು ಐಬಿಎಚ್ ಹೊರತಂದ ‘ಕನ್ನಡ-ಕನ್ನಡ-ಇಂಗ್ಲಿಷ್ ನಿಘಂಟು’ ಮತ್ತು ‘ಕನ್ನಡ-ಕನ್ನಡ ಸಂಕ್ಷಿಪ್ತ ನಿಘಂಟು’ಗಳನ್ನು ಜಿವಿ ಸಿದ್ಧಪಡಿಸಿಕೊಟ್ಟರು. ಮುದ್ದಣನ ಕಾವ್ಯಗಳ ಸಂಪಾದನೆಯನ್ನು ಯಶಸ್ವಿಯಾಗಿ ನೆರೆವೇರಿಸಿದ ಅವರು ಕವಿಯ ಅಧ್ಯಯನಕ್ಕೆ ಪೂರಕವಾಗಿ ‘ಮುದ್ದಣ ಪದಪ್ರಯೋಗ ಕೋಶ’ವನ್ನು ತಯಾರಿಸಿದರು. ಮುದ್ದಣನ ಶಬ್ದಪ್ರಪಂಚ ಬಹು ವಿಸ್ತಾರವಾದುದು; ಅಲ್ಲದೆ, ಆಂಡಯ್ಯನಾದ ಮೇಲೆ ಅವನಂತೆ ದೇಶಿ ಪದಗಳನ್ನು ಬಳಸಿದವರು ಮತ್ತು ಹೊಸ ಶಬ್ದಸೃಷ್ಟಿಯಲ್ಲಿ ಪ್ರಯೋಗಗಳನ್ನು ಮಾಡಿದವರು ಬಹುಮಂದಿ ಇಲ್ಲ. ಇದನ್ನೆಲ್ಲ ಲಕ್ಷಿಸಿ ಮುದ್ದಣ ತನ್ನ ಕಾವ್ಯಗಳಲ್ಲಿ ಪ್ರಯೋಗಿಸಿರುವ ನಾಲ್ಕು ಸಾವಿರಕ್ಕೂ ಹೆಚ್ಚಿನ ವಿಶಿಷ್ಟ ಶಬ್ದಗಳನ್ನು ಅರ್ಥಸಹಿತ ಇದರಲ್ಲಿ ಜೋಡಿಸಿಕೊಟ್ಟಿದ್ದಾರೆ. ಹೀಗಾಗಿ, ನಿಘಂಟುತಜ್ಞರಾದ ಜಿವಿ ಅವರಿಗೆ ಮುದ್ದಣ ತುಂಬ ವಿಶಿಷ್ಟಕವಿಯಾಗಿ ಕಾಣಿಸಿದ್ದಾನೆ ಎನ್ನುತ್ತಾರೆ ವಿದ್ವಾಂಸರಾದ ಪಿವಿಎನ್ ಅವರು. ಅದಕ್ಕೇ ಈ ಕೋಶದ ಪ್ರಾರಂಭದಲ್ಲಿ ಬರೆದಿರುವ ‘ಮುದ್ದಣನ ಶಬ್ದಕಲ್ಪ’ ಮತ್ತು ಎರಡು ಪ್ರಸ್ತಾವನೆಗಳು ಆ ಕವಿಯ ಶಬ್ದಕೌಶಲದ ಮೂಲಚೂಲಗಳನ್ನು ಕೆದಕಿ ಹೊಸ ಸಂಶೋಧನೆಯನ್ನು ನಮ್ಮ ಮುಂದಿರಿಸುತ್ತಾರೆ. ಮುದ್ದಣ ಹೊಸ ಶಬ್ದಗಳನ್ನು ಸೃಷ್ಟಿಸಿಕೊಳ್ಳುವ ಬಗ್ಗೆ, ಅವನು ತಪ್ಪಿರಬಹುದಾದ ಸಂಭಾವ್ಯಗಳು, ಅವನ ಮೇಲೆ ಪ್ರಭಾವ ಬೀರಿರುವ ಇತರ ಕನ್ನಡ ಕವಿಗಳು, ಅವನು ಕಿಟೆಲ್ ನಿಘಂಟನ್ನು ಪರಿಶೀಲಿಸಿರಬಹುದಾದ ಸಂಭಾವ್ಯತೆ ಇವುಗಳನ್ನೆಲ್ಲ ಅಲ್ಲಿ ವಿವರಿಸುತ್ತಾರೆ; ಮುಂದಿನ ಅಧ್ಯಯನಕ್ಕೆ ಮಾರ್ಗ ತೋರುತ್ತಾರೆ. ಹಾಗೆಯೇ ಈ ಕೋಶದ ಕೊನೆಯಲ್ಲಿ ಸೇರಿಸಿರುವ ಅನುಬಂಧ; ‘ಶ್ರೀರಾಮಾಶ್ವಮೇಧ’ದಲ್ಲಿನ ಮುದ್ದಣ ಮನೋರಮೆಯರ ಎಲ್ಲ ಸಂಭಾಷಣೆಗಳನ್ನು ಹೊಸಗನ್ನಡದಲ್ಲಿ ಅನುವಾದಿಸಿ ಅವು ಬರುವ ಸಂದರ್ಭಗಳ ಹಿನ್ನೆಲೆಯಲ್ಲಿ ಕಾಣುವ ‘ಕಾವ್ಯವಿಮರ್ಶನ ಸಿದ್ಧಾಂತ’ವನ್ನು ಗುರುತಿಸಿರುವುದು. ಇದರಿಂದ ಮುದ್ದಣನ ವಿಶಿಷ್ಟ ಕೃತಿಯಾದ ‘ಶ್ರೀರಾಮಾಶ್ವಮೇಧ’ವನ್ನು ಪರಿಶೀಲಿಸಬೇಕಾದ ದೃಷ್ಟಿಕೋನವನ್ನು ನಿಗದಿಪಡಿಸಿಕೊಳ್ಳುವುದಕ್ಕೆ ಅನುಕೂಲವಾಗುತ್ತದೆ ಎಂಬುದನ್ನು ಮರೆಯುವಂತಿಲ್ಲ.
ಕರ್ನಾಟಕದ ಹೆಮ್ಮೆಯ ‘ಪ್ರಜಾವಾಣಿ’ ದಿನಪತ್ರಿಕೆಯ ಭಾನುವಾರದ ಪುರವಣಿಯಲ್ಲಿ ಅನೇಕ ವರ್ಷಗಳ ಕಾಲ ನಿರಂತರವಾಗಿ ವಾರವಾರವೂ ಪ್ರಕಟಗೊಳ್ಳುತ್ತಿದ್ದ ‘ಇಗೋ ಕನ್ನಡ’ ಹೆಸರಿನ ಅವರ ಅಂಕಣವಂತೂ ಸಮಸ್ತ ಕನ್ನಡಿಗರಲ್ಲಿ ಮನೆಮಾತಾಗಿತ್ತು. ಆ ಅಂಕಣವು ಪತ್ರಿಕೆಯ ಅವಿಭಾಜ್ಯ ಅಂಗವಾಗಿಹೋಗಿತ್ತು. ನಿಘಂಟಿನ ಹೊಸ ಬಗೆಯೇ ಅಲ್ಲಿ ರೂಪು ತಳೆಯಿತು. ಪ್ರಾಜ್ಞರೂ ಪಂಡಿತರೂ ಪಾಮರರೂ ಗುರ್ತಿಸುವಂತೆ ಇದೊಂದು ಅಪರೂಪವೂ ಆಪ್ತವೂ ಆದ ನುಡಿ ನಿರ್ವಚನದ ಅಪೂರ್ವ ಅಂಕಣವಾಗಿತ್ತು. ಯಾವ ಮಿತಿಗೂ ಒಳಗಾಗದ, ಸರ್ವರ ಆಸಕ್ತಿಯನ್ನೂ ಕೆರಳಿಸಬಲ್ಲ ಸಾಮರ್ಥ್ಯ ಇದರದ್ದು. ಶಬ್ದಗಳ ಹಿಂದೆ ನಡೆದಿರುವ ಸಾಮಾಜಿಕ ಪಲ್ಲಟಗಳ ಹಾಗೂ ಜನಮನಸ್ಪಂದನದ ಇತಿಹಾಸವೆಲ್ಲ ಅಲ್ಲಿ ಹರಳುಗಟ್ಟಿ ಅಪರೂಪದ ಶಬ್ದಲೋಕವನ್ನೇ ಅದು ಸೃಷ್ಟಿಸುವಂತಿತ್ತು. ಜಿವಿ ಅವರು ಇದನ್ನು ‘ಸಾಮಾಜಿಕ ನಿಘಂಟು’ ಎಂದೇ ಕರೆಯುತ್ತಾರೆ. ಜೊತೆಗೆ ಇದೊಂದು ಸಾಂಸ್ಕೃತಿಕ ಪರ್ಯಟನೆ ಎಂಬುದನ್ನೂ ಗಮನಿಸಬಹುದು. ಮೊದಲ ಸಂಪುಟದ ಆರಂಭದಲ್ಲಿ ನೀಡಿರುವ ‘ಈ ನಿಘಂಟಿಗೆ ಒಂದು ಪ್ರವೇಶ ಸಿದ್ಧತೆ’ ಎಂಬ ಪ್ರಸ್ತಾವನೆಯ ಭಾಗದಲ್ಲಿ ಭಾಷಾ ಪರಿವೀಕ್ಷಣ, ಭಾಷೆಯನ್ನು ಆಧುನಿಕಗೊಳಿಸುವುದು, ಕನ್ನಡದ ಬೆಳವಣಿಗೆ, ತಮ್ಮ ಬಳಿ ಆಸಕ್ತರು ತೋಡಿಕೊಳ್ಳುವ ಸಂದೇಹಗಳ ಸ್ವರೂಪ, ಅಧ್ಯಾಪಕರಿಗೆ ತಲೆದೋರುವ ಸಂಶಯಗಳು ಮುಂತಾದ ಅನೇಕ ವಿಷಯಗಳ ಬಗ್ಗೆ ವಿವರಣೆ ನೀಡಿ ನಿಘಂಟಿನ ಸ್ವರೂಪವನ್ನು ವಿವರಿಸಿರುವುದು ತುಂಬ ಉಪಯುಕ್ತವಾಗಿದೆ. ಶಬ್ದ-ಅರ್ಥ ಪರಿಕಲ್ಪನೆಯಲ್ಲಿ ಹೊಸ ದಿಗಂತವನ್ನು ತೆರೆದ ಈ ಅಂಕಣ ಅಷ್ಟು ಜನಪ್ರಿಯವಾಗಿರುವುದರಲ್ಲಿ ಅಚ್ಚರಿಯೇನೂ ಇಲ್ಲ. ಬರವಣಿಗೆಯ ರುಚಿ ಅಲ್ಲಿ ಎದ್ದು ಕಾಣುತ್ತದೆ. ನಾನಾ ಭಾಷೆಗಳ ಆಳವಾದ ತಿಳಿವಳಿಕೆ ಮಾತ್ರವಲ್ಲ, ಲೇಖಕರ ಸಾಹಿತ್ಯಾಭಿರುಚಿಯನ್ನೂ ಅಲ್ಲಿ ಮನಗಾಣಬಹುದು. ಅವರು ನೀಡಿರುವ ಸಾಹಿತ್ಯೋದಾಹರಣೆಗಳು, ತೀನಂಶ್ರೀ ಅವರು ತಮ್ಮ ‘ಭಾರತೀಯ ಕಾವ್ಯಮೀಮಾಂಸೆ’ಯಲ್ಲಿ ಅಲಂಕಾರಶಾಸ್ತ್ರದ ಪರಿಕಲ್ಪನೆಗಳಿಗೆ ಉದಾಹರಣೆಗಳನ್ನು ನೀಡುವ ಬಗೆಯನ್ನು ಹೋಲುತ್ತದೆ ಎನ್ನುತ್ತಾರೆ ವಿಮರ್ಶಕರು. ಸಂಸ್ಕೃತ-ಕನ್ನಡ-ಇಂಗ್ಲಿಷ್ ಭಾಷೆಗಳ ಪ್ರಾಚೀನ ಹಾಗೂ ಆಧುನಿಕ ಸಾಹಿತ್ಯ ಕೃತಿಗಳಿಂದ ಜಿವಿ ನಿದರ್ಶನ ನೀಡಲು ಆಯ್ದುಕೊಳ್ಳುವ ಉಲ್ಲೇಖ ಭಾಗಗಳು ಅವರ ವ್ಯಾಪಕ ಓದಿನ ಜೊತೆಗೆ ಅವರ ಸದಭಿರುಚಿಯ ಕಾವ್ಯಾನುಸಂಧಾನ ಸೂಕ್ಷ್ಮತೆಯ ಪ್ರತೀಕವೂ ಹೌದು. ಅವುಗಳನ್ನು ಓದುವುದು ಕಲ್ಪನಾಲೋಕದ ಸಂಚಾರದಷ್ಟೇ ರೋಚಕ ಅನುಭವವನ್ನು ನೀಡುವಂಥದು. ಈ ಅಂಕಣ ಬರಹಗಳು ಈಗಾಗಲೇ ಮೂರು ಸಂಪುಟಗಳಲ್ಲಿ ಸಂಕಲಿತವಾಗಿ ಹೊರಬಂದಿರುವುದು; ಮೊದಲನೆಯ ಸಂಪುಟವು ಮೂರು ಮುದ್ರಣಗಳನ್ನು ಕಂಡಿರುವುದು ಈ ಅಂಕಣದ ಉಪಯುಕ್ತತೆ ಮತ್ತು ಜನಪ್ರಿಯತೆಗಳ ದ್ಯೋತಕವಾಗಿದೆ. ವಿದ್ವಾಂಸರಾದ ಪಿವಿಎನ್ ಅವರು ಗುರ್ತಿಸಿದಂತೆ, “ಈ ಅಂಕಣ ಶಬ್ದಲೋಕದ ಮಟ್ಟಿಗೆ ಒಂದು ಮುಕ್ತ ವಿಶ್ವವಿದ್ಯಾಲಯವಾಗಿದೆ. ಬೇಕಾದವರು ಬೇಕಾದ ಶಬ್ದದ ಬಗೆಗೆ ಅರಿತುಕೊಳ್ಳಲು ಇದನ್ನು ಬಳಸಿಕೊಳ್ಳುವ ಅವಕಾಶ ಅಪರೂಪವಾದದ್ದು... ಹೀಗೆ ನಾಡವರ ಸಂದೇಹ ಪರಿಹಾರ ಮಾಡುವ ವಿದ್ವಾಂಸನು ನಾಡೋಜನಾಗದೆ ಬೇರಾವನು ಆದಾನು? ದೊಡ್ಡ ಸಾಹಿತಿಗಳೆಲ್ಲರೂ ನಾಡೋಜರೇ” ಆಗಿದ್ದಾರೆ.
ನಾಡೋಜ ಜೀವಿ ಅವರ ಬಹುಮುಖಿ ಸಾಧನೆಗೆ ತಕ್ಕ ಮನ್ನಣೆ ಅವರಿಗೆ ಸಿಕ್ಕಿಲ್ಲದಿದ್ದರೂ, ಕೆಲವು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ, ಹಾಗೂ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪತ್ರಿಕಾ ಅಕಾಡೆಮಿಯ ವಿಶೇಷ ಪುರಸ್ಕಾರ, ಶಂಬಾ, ಕಾರಂತ, ಸೇಡಿಯಾಪು, ಮಾಸ್ತಿ, ಮುದ್ದಣ ಅವರ ಹೆಸರಿನಲ್ಲಿ ಸ್ಥಾಪಿತವಾಗಿರುವ ಪ್ರಶಸ್ತಿಗಳು ಇವುಗಳಲ್ಲಿ ಮುಖ್ಯವಾದವು. ಕೆಲವು ಜಿಲ್ಲೆಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸುವ ಗೌರವವನ್ನೂ ಅವರು ಪಡೆದಿದ್ದರು. 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯ ಅವರಿಗೆ ‘ನಾಡೋಜ’ ಎಂಬ ಹೆಸರಿನ ಗೌರವ ಡಾಕ್ಟರೇಟ್ ಅನ್ನು ನೀಡಿ ಗೌರವಿಸಿದೆ. ಸುವರ್ಣ ಕರ್ನಾಟಕ ಆಚರಣೆಯ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಅವರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿಯನ್ನಿತ್ತು ಪುರಸ್ಕರಿಸಿದೆ. ಅವರ ಅಭಿಮಾನಿಗಳು ‘ಸಾಹಿತ್ಯಜೀವಿ’ ಎಂಬ ಗೌರವಗ್ರಂಥವನ್ನು ಹೊರತಂದಿದ್ದರು. ಜಿವಿ ಅವರ ಸಾಧನೆಗಳನ್ನು ಬಿಂಬಿಸುವ ಹಿರಿಯರ-ಅಭಿಮಾನಿಗಳ ಲೇಖನಗಳನ್ನೊಳಗೊಂಡ ‘ಶಬ್ದಸಾಗರ’ ಎಂಬ ಬೃಹತ್ ಗ್ರಂಥವನ್ನು ಹೊರತರಲಾಗಿದೆ. ಅಂತೆಯೇ ಅವರ ಬಗ್ಗೆ ‘ಪ್ರೊ.ಜಿ.ವಿ.: ಜೀವ-ಭಾವ’ ಎಂಬ ಪರಿಚಯಗ್ರಂಥವೊಂದೂ ಹೊರಬಂದಿದೆ. ಪಿ.ವಿ.ನಾರಾಯಣ ಅವರ ಸಂಪಾದಕತ್ವದಲ್ಲಿ ಶತಮಾನೋತ್ಸವ ವರ್ಷದ ಸ್ವಾಗತ ಸಮಿತಿಯು “ಶತನಾಮ” ಎಂಬ ಶೀರ್ಷಿಕೆಯ ಶತಮಾನೋತ್ಸವದ ಅಭಿನಂದನಾ ಸಂಪುಟವನ್ನು ಪ್ರಕಟಿಸಲಾಗಿದೆ. ತಮ್ಮ ಶತಾಯುಷಿ ವಯಸ್ಸಿನಲ್ಲಿಯೂ ಅತ್ಯಂತ ಕ್ರಿಯಾಶೀಲವಾಗಿರುವಂತೆ ಅವರಿಗೆ ಆರೋಗ್ಯವನ್ನು ನೀಡಿದ್ದ ಪ್ರಕೃತಿಯ ಪುರಸ್ಕಾರವಂತೂ ಎಲ್ಲಕ್ಕಿಂತ ಮಿಗಿಲಾದ ಅಪರೂಪದ ಪ್ರಶಸ್ತಿಯಾಗಿದೆ. ಅವರ ಚಟುವಟಿಕೆಯು ಯುವಕರಲ್ಲಿ ಸ್ಫೂರ್ತಿ ತುಂಬುವಂತಹುದು; ಇಂತಹವರ ಮಾರ್ಗದರ್ಶನ ಸದಾ ಕಾಲವೂ ನಾಡುನುಡಿಯನ್ನು ಬೆಳಗುವಂಥದ್ದಾಗಿದೆ. 
ಪ್ರಸ್ತುತ ಲೇಖನವು ಕನ್ನಡ ಸಾಂಸ್ಕೃತಿಕ-ಸಾರಸ್ವತಲೋಕದೊಳಗಣ ಅಪರೂಪದ ‘ಅಕ್ಕಪಕ್ಕ’ ಮತ್ತು ‘ಹರಿಮೇಖಲೆ’ ಎಂಬ ಎರಡು ಪದಗಳ ನಿಷ್ಪತ್ತಿಯನ್ನು ಕುರಿತಾದುದು. ಸುಪರಿಚಿತವಾದ ‘ಅಕ್ಕಪಕ್ಕ’ ಪದ ಹಾಗೂ ಅಪರೂಪದ ‘ಹರಿಮೇಖಲೆ’ ಪದವನ್ನು ಕನ್ನಡ ಭಾಷಿಕ ನೋಟದಿಂದ ಮಾತ್ರವಲ್ಲದೆ ಭಾರತದ ಬಹುಭಾಷಿಕ ನೋಟದಿಂದ ನಿರ್ವಚಿಸುವ ಜಿವಿ ಅವರ ವಿದ್ವತ್‌ಪೂರ್ಣ ಸಂಶೋಧನಾ ಶಿಸ್ತು ಮತ್ತು ಶ್ರಮವು ಇಲ್ಲಿ ಕಂಡುಬರುತ್ತದೆ. ಕನ್ನಡ ಭಾಷೆಯಲ್ಲಿ ಹೊಸದಾಗಿ ರೂಪಿತವಾದ ಪದಪುಂಜಗಳನ್ನು ವಿಶೇಷ ಹಿನ್ನೆಲೆಯಲ್ಲಿ ವಿವರಿಸಿರುವುದು ಜಿವಿ ಅವರ ಭಾಷಾಧೋರಣೆ ಮತ್ತು ಆಧುನಿಕತೆಗಳ ಪ್ರತೀಕವಾಗಿದೆ. ಇಲ್ಲಿ ಅವರ ಶಾಸ್ತ್ರಜ್ಞಾನ ಮತ್ತು ಪ್ರಾಯೋಗಿಕ ಅನುಭವಗಳು ಘನೀಭೂತಗೊಂಡಿವೆ. ಜಿವಿ ಅವರು ಶಾಸ್ತ್ರಜಡರೂ ಅಲ್ಲ, ಸತ್ಯವಿಮುಖರೂ ಅಲ್ಲ. ಹಾಗಾಗಿ ಅವರ ನಿರೂಪಣೆಯು ಆಕರ್ಷಕವಾಗಿಯೂ ಇದೆ, ಕರಾರುವಾಕ್ಕಾಗಿಯೂ ಇದೆ; ನುಡಿಶೋಧನೆಗೆ ಅನನ್ಯವಾದ ಮಾರ್ಗದರ್ಶಿಯಾಗಿದೆ.ಜಗಮೆಚ್ಚಿದ ನುಡಿಗಾರುಡಿಗ ಪ್ರೊ.ಜಿ.ವೆಂಕಟಸುಬ್ಬಯ್ಯನವರು

ಪ್ರಸ್ತುತ ಲೇಖನವು ಕನ್ನಡ ಸಾಂಸ್ಕೃತಿಕ-ಸಾರಸ್ವತಲೋಕದೊಳಗಣ ಅಪರೂಪದ ‘ಅಕ್ಕಪಕ್ಕ’ ಮತ್ತು ‘ಹರಿಮೇಖಲೆ’ ಎಂಬ ಎರಡು ಪದಗಳ ನಿಷ್ಪತ್ತಿಯನ್ನು ಕುರಿತಾದುದು. ಸುಪರಿಚಿತವಾದ ‘ಅಕ್ಕಪಕ್ಕ’ ಪದ ಹಾಗೂ ಅಪರೂಪದ ‘ಹರಿಮೇಖಲೆ’ ಪದವನ್ನು ಕನ್ನಡ ಭಾಷಿಕ ನೋಟದಿಂದ ಮಾತ್ರವಲ್ಲದೆ ಭಾರತದ ಬಹುಭಾಷಿಕ ನೋಟದಿಂದ ನಿರ್ವಚಿಸುವ ಜಿವಿ ಅವರ ವಿದ್ವತ್‌ಪೂರ್ಣ ಸಂಶೋಧನಾ ಶಿಸ್ತು ಮತ್ತು ಶ್ರಮವು ಇಲ್ಲಿ ಕಂಡುಬರುತ್ತದೆ. ಕನ್ನಡ ಭಾಷೆಯಲ್ಲಿ ಹೊಸದಾಗಿ ರೂಪಿತವಾದ ಪದಪುಂಜಗಳನ್ನು ವಿಶೇಷ ಹಿನ್ನೆಲೆಯಲ್ಲಿ ವಿವರಿಸಿರುವುದು ಜಿವಿ ಅವರ ಭಾಷಾಧೋರಣೆ ಮತ್ತು ಆಧುನಿಕತೆಗಳ ಪ್ರತೀಕವಾಗಿದೆ. ಇಲ್ಲಿ ಅವರ ಶಾಸ್ತ್ರಜ್ಞಾನ ಮತ್ತು ಪ್ರಾಯೋಗಿಕ ಅನುಭವಗಳು ಘನೀಭೂತಗೊಂಡಿವೆ. ಜಿವಿ ಅವರು ಶಾಸ್ತ್ರಜಡರೂ ಅಲ್ಲ, ಸತ್ಯವಿಮುಖರೂ ಅಲ್ಲ. ಹಾಗಾಗಿ ಅವರ ನಿರೂಪಣೆಯು ಆಕರ್ಷಕವಾಗಿಯೂ ಇದೆ, ಕರಾರುವಾಕ್ಕಾಗಿಯೂ ಇದೆ; ನುಡಿಶೋಧನೆಗೆ ಅನನ್ಯವಾದ ಮಾರ್ಗದರ್ಶಿಯಾಗಿದೆ.

Read More »

ಇದು ಎಂದೆಂದಿಗೂ ‘ನಿಚ್ಚಂ ಪೊಸತು’!

ವಿ. ಚಂದ್ರಶೇಖರ ನಂಗಲಿ

18 to 26

‘ನಿಚ್ಚಂ ಪೊಸತು’ ಕೃತಿಯಲ್ಲಿ ಕನ್ನಡದಲ್ಲಿ ಪ್ರಕಟವಾದ ಬುದ್ಧ ಕೇಂದ್ರಿತ ಕವನಗಳನ್ನು ಕುರಿತ ಸಮಾಲೋಚನೆ, ಮೈಸೂರು ಕೇಂದ್ರಿತ ಸಾಂಸ್ಕೃತಿಕ ಮಹತ್ವವನ್ನು ಕುರಿತ ಪರಿಶೀಲನೆ, ಯೆಹೂದ್ಯರಿಗಾಗಿ ಮುಂದೆ ಬಂದು ಪೀಡಿತನಾಗುವ ಮೋಸೆಸ್‌ನ ಮಹಾಯಾನ, ಮುಲ್ಕ್ರಾಜ್ ಆನಂದ್ ಮತ್ತು ಬಾಬಾಸಾಹೇಬ ಅಂಬೇಡ್ಕರ್ ಅವರ ಮಾತುಕತೆ, ಭೀಮಜ್ಯೋತಿ ಬಿ.ಬಸವಲಿಂಗಪ್ಪ ಅವರ ಅರಿವಿನ ಯಾನ, ಜಾತಿಪದ್ಧತಿ ಮತ್ತು ಅಸ್ಪೃಶ್ಯತೆಯ ಮನೋವಿಕಾರಗಳನ್ನು ಮೀರಿ ಸೋದರಸ್ನೇಹದಿಂದ ಬಾಳಿದ ಎಸ್‌ಪಿಬಿ+ಜೇಸುದಾಸ್ ಕುರಿತ ಲೇಖನಗಳೂ ಇವೆ. ಇವೆಲ್ಲವನ್ನೂ ‘ನಿಚ್ಚಂ ಪೊಸತು’ ಎಂಬ ಹೃದ್ಯಭಾವದಿಂದ ಭೈರಪ್ಪನವರು ಒಳಗೊಂಡಿರುವುದು ಸ್ತುತ್ಯಾರ್ಹವಾಗಿದೆ. ಭೈರಪ್ಪನವರ ಪುಸ್ತಕದ ತಾತ್ವಿಕತೆ ಎಂದರೆ ಜಾತಿ ಶ್ರೇಣೀಕರಣದ ಕೆನೆಪದರದಲ್ಲಿ ತನ್ನನ್ನು ಗುರುತಿಸಿಕೊಳ್ಳದೆ, ಬಾಳ್ವೆಯಲ್ಲಿ ಬೆಂದು ಸೀದು ಕರಿಕಾದ ಗಸಿಪದರದಲ್ಲಿ ತನ್ನನ್ನು ಗುರುತಿಸಿಕೊಂಡಿರುವುದು. ಇದು ಎಂದೆಂದಿಗೂ ‘ನಿಚ್ಚಂ ಪೊಸತು’!

Read More »

ಬಸವಣ್ಣನ ವಚನಗಳಲ್ಲಿ ಸಮ ಸಮಾಜದ ಪ್ರಸ್ತುತತೆ

ಮಾಧವ ಎಂ. ಕೆ.

27 to 32

ಕನ್ನಡ ಸಾಹಿತ್ಯದಲ್ಲಿ ೧೨ನೇ ಶತಮಾನವನ್ನು ವಚನಗಳ ಯುಗವೆಂದು ಕರೆಯಲಾಗುತ್ತದೆ. ಬಸವಣ್ಣ ವಚನ ಸಾಹಿತ್ಯಕ್ಕೆ ಹೊಸ ಭಾಷ್ಯ ಬರೆದವನು. ತನ್ನ ವಚನಗಳ ಮೂಲಕ ‘ಕಾಯಕವೇ ಕೈಲಾಸ’ ವೆಂದು ಸಾರಿ, ಜನರಲ್ಲಿ ದುಡಿದು ತಿಂದು ಬದುಕುವ ಮಹತ್ವವನ್ನು ತಿಳಿಸಿದರು. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ತ್ರೀಯರಿಗೆ ಭಾಗವಹಿಸುವ ಸಮಾನ ಅವಕಾಶ ನೀಡುವ ಮೂಲಕ ಮಹಿಳಾ ಸ್ವಾತಂತ್ರ್ಯಕ್ಕೊಂದು ಅರ್ಥವನ್ನು ಕಲ್ಪಿಸಿದರು. ಕಲುಷಿತಗೊಂಡಿದ್ದ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ದಿಕ್ಕರಿಸಿ, ಘನ ಬದಲಾವಣೆಯನ್ನು ಆರಿಸಿ ಹೊರಟ ದಾರ್ಶನಿಕ ಬಸವಣ್ಣ. ಸಾಮಾಜಿಕ ಬದಲಾವಣೆಗೆ ಹೊಸ ಭಾಷ್ಯ ಬರೆಯುವ ಮೂಲಕ ಉತ್ತಮ ಸಮಾಜ ವ್ಯವಸ್ಥೆಗೆ ನಿಜವಾದ ಅರ್ಥ ಕಲ್ಪಿಸಿ ಕೊಟ್ಟವರು. ಸಮಾಜದ ಕೀಳುಮಟ್ಟದ ಶೋಷಣೆಯಿಂದಾಗಿಯೇ ಸಮಾಜದಲ್ಲಿ ದುಡಿಯುವ ಮತ್ತು ಕೂತು ಉಣ್ಣುವ ವರ್ಗಗಳು ನಿರ್ಮಾಣವಾಗುವುದಕ್ಕೆ ಕಾರಣವಾಗಿರಬೇಕು, ಸಮಾಜದಲ್ಲಿ ಮೇಲ್ವರ್ಗವೆಂದು ಕರೆಸಿಕೊಂಡ ಜನರು ಸಮಾಜದ ಇತರರನ್ನು ಕೀಳಾಗಿ ಕಾಣುತ್ತಿದ್ದ ಸಂದರ್ಭಗಳು ಬಸವಣ್ಣನ ಮನಸ್ಸನ್ನು ಬಹಳವಾಗಿ ಕಾಡಿದ್ದರ ಪರಿಣಾಮದಿಂದಲೇ ಅವರ ಮನಸ್ಸಿನ ವಿಚಾರಗಳೆಲ್ಲ ವಚನಗಳಾಗಿ ಮಾರ್ಪಟ್ಟವಾಗಿರಬೇಕು. ಅಂದಿನಿಂದಲೇ ಬಸವಣ್ಣನವರು ಸಾಮಾಜಿಕ ಬದಲಾವಣೆಗೆ ಕ್ರಾಂತಿಕಾರಿ ಹೆಜ್ಜೆ ಇಟ್ಟರೆಂದು ಕಾಣಿಸುತ್ತದೆ. ಬಸವಣ್ಣ ವಚನಗಳ ಮೂಲಕ ಸಾಮಾಜಿಕ ವ್ಯವಸ್ಥೆಯ ಅಂಕುಡೊಂಕುಗಳನ್ನು ತಿದ್ದಿ, ಸಮ ಸಮಾಜ ವ್ಯವಸ್ಥೆಯನ್ನು ಸರಿಪಡಿಸುವ ಕಾಯಕಕ್ಕೆ ಮುಂದಾದರು. ಒಂದಷ್ಟು ಸಮಾಜ ವ್ಯವಸ್ಥೆಯನ್ನು ಬದಲಿಸಲು ಪಟ್ಟ ಪ್ರಯತ್ನ ಇಂದಿಗೂ ಮುಂದಿಗೂ ಮಾದರಿಯಾಗುವಂತಿದೆ. ಸಮಾಜದ ಬಗೆಗೆ ಬಸವಣ್ಣನಿಗಿದ್ದ ಕಾಳಜಿಯಿಂದಾಗಿಯೇ ಮತ್ತಷ್ಟು ಅವರ ಹಾದಿಯಲ್ಲಿ ಮುಂದುವರಿದರು. 

Read More »

ಜನಪದ ಕಥೆಗಳಲ್ಲಿ ಮಹಿಳಾಲೋಕ

ರಾಮಕೃಷ್ಣಯ್ಯ ಎಂ.

33 to 41

ಜನಪದ ಕಥೆಗಳಲ್ಲಿ ಮಹಿಳಾ ಲೋಕ ತಲೆಮಾರಿನಿಂದ ತಲೆಮಾರಿಗೆ ಮೌಖಿಕವಾಗಿ ಹರಿದು ಬಂದಿರುವ ಕಥೆಯನ್ನು ನಮ್ಮಲ್ಲಿ ‘ಅಜ್ಜಿಯ ಕಥೆ’, ‘ಅಡುಗೋಲಜ್ಜಿಯ’ ಕಥೆಯಂತಲೂ ಕರೆಯುವುದುಂಟು. ಕಥೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವಲ್ಲಿ ಪ್ರಧಾನ ಪಾತ್ರ ಅಜ್ಜಿಯರದೇ ಆಗಿರುತ್ತದೆ. ವಾಚಕ ಪರಂಪರೆಯ ಈ ಕಥೆಗಳು ಹರಿದು ಬರುವಾಗ ಸಾಹಿತ್ಯ ಪರಂಪರೆಗೆ ಹೋಗಿರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಕಥೆಗಳು ತಮ್ಮ ವಸ್ತುವಿನಲ್ಲಿ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸಗೊಳ್ಳಬಹುದು. ಆದರೆ ಒಂದೇ ಬಗೆಯ ಸಾಮಾಜಿಕ ಮತ್ತು ವೈಯಕ್ತಿಕ ಅಗತ್ಯಗಳು ಎಲ್ಲಾ ಕಡೆ ಇದ್ದೇ ಇರುತ್ತವೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿಯೂ ಹೆಣ್ಣು ಕೀಳು, ಅವಲಂಬಿತಳು, ಪುರುಷನಿಲ್ಲದೆ ಅವಳ ಜೀವನ ನಿರರ್ಥಕ ಎಂದೆಲ್ಲಾ ಭಾವಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಜನಪದ ಕಥೆಗಳಲ್ಲಿ ಸ್ತ್ರೀಯರ ಬದುಕು ಬವಣೆಗಳು ಹೇಗಿದ್ದಿರಬಹುದೆಂಬ ಸಂಗತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸುವ ಒಂದು ಪ್ರಯತ್ನವೇ ಈ ಲೇಖನದ ಉದ್ದೇಶವಾಗಿದೆ. ಕಥೆಗಳನ್ನು ಎಲ್ಲಾ ತಲೆಮಾರುಗಳಲ್ಲಿಯೂ ಹೇಳುತ್ತಿದ್ದರು. ಚಳಿಗಾಲ ಹಾಗೂ ಬೇಸಿಗೆ ಕಾಲಗಳಲ್ಲಿ ಶ್ರಮವನ್ನು ಮರೆಯಲು, ಮಕ್ಕಳನ್ನು ಮಲಗಿಸುವ ವೇಳೆಯಲ್ಲಿ ಕಥೆಗಳನ್ನು ಹೇಳುತ್ತಿದ್ದರು. ಜನಪದ ಕಥೆಗಳಲ್ಲಿ ಅತಿಮಾನುಷ ಪತ್ನಿಯರಾಗಿ ಬರುವ ಸ್ತ್ರೀಯರು, ದೇವತ ಸ್ತ್ರೀಯರು ನಮ್ಮ ಸಾಮಾನ್ಯ ಮಹಿಳೆಯರಿಗಿಂತ ಸಬಲರಾಗಿ, ಸ್ವತಂತ್ರರೂ ಆಗಿ ಕಾಣಿಸುತ್ತಾರೆ. ಹಣೆಬರಹ ಬರೆಯುವ ವಿಧಿಯಮ್ಮ ಅತ್ಯಂತ ಶಕ್ತಿ ದೇವತೆಯಾದರೆ, ಕಥೆಗಳಲ್ಲಿ ಬರುವ ದೇವಕನ್ನಿಕೆಯರು ಭೂಲೋಕದ ಪುರುಷರ ಮೇಲೆ ನಿಯಂತ್ರಣ ವಿರುವವರು. ಇವರಿಗೆ ಮೆಚ್ಚುಗೆಯಾದ ಗಂಡು ಸಿಕ್ಕಿದರೆ ಭೂಮಿಯ ಮೇಲೆ ಬಂದು ಸಂಸಾರ ಮಾಡವಷ್ಟು ಸ್ವತಂತ್ರರು. ಇದಕ್ಕೆ ಉದಾಹರಣೆಯಾಗಿ ಕೆಲವು ಕನ್ನಡದ ಜನಪದ ಕಥಾಸಂಕಲನಗಳಲ್ಲಿ ಗಮನಿಸಬಹುದಾಗಿದೆ. ಜನಪದರು ಅಕ್ಷರಸ್ಥರಲ್ಲದಿದ್ದರೂ, ನೀತಿವಂತರು, ಯಾರಿಗೂ ತೊಂದರೆ ಕೊಡಬಾರದು, ಅದು ನಮಗೆ ತಿರುಗು ಬಾಣವಾಗುವುದೆಂಬ ತತ್ವವನ್ನು ಕತೆಗಳ ಮೂಲಕ ಅನಾವರಣ ಮಾಡಿದ್ದಾರೆ. ಎಲ್ಲಾ ಕಥೆಗಳಲ್ಲಿ ಕಂಡು ಬರುವ ಮಹತ್ವದ ಆಶಯಗಳೆಂದರೆ ನೀತಿ ಮತ್ತು ಸಮಾಜಮುಖಿ ಚಿಂತನೆ. ಈ ಕಥೆಗಳನ್ನು ಕೇಳಿದವರು ಬದುಕಿನಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ನೀತಿ ಒಂದು ತತ್ವವಾಗಿಯೇ ಬರುತ್ತದೆ. 

Read More »

Media and Women

Ameena Kulsum Khan, Hemalata R.

42 to 50

The result of this masculinity is that the image of women working in the media has been made an image of an open, free and ‘sleeping with whomever’ woman in the society. The image of a Kameri woman in Doordarshan serials is such that she is standing alone somewhere outside the family. This image is not real. Nor does this room express sensitivity towards women. This image is an introduction to the masochistic image of men, for whom a single, free woman is the most desirable thing because he can dream of robbing his happiness from her. Not only this, the ‘juiciness’ contained in the news of rape or eve-teasing in the newspapers also suggests that the news of women for men is now like a provocative news which it presents in an even more provocative manner. It is clear from the extra imagination with which the news of rapes is written in newspapers that the men who write, rape many times even in reporting. The news of ordinary women’s ordinary life’s ordinary struggles does not get priority over women’s sensational news, that is why the world of newspapers is mostly masochistic where woman is always a sensational news. There is no serious discussion on these topics within the media.

Read More »

Manage Anxiety and Inflammation in Combat Game

Rajasab B. Sonekhan

51 to 61

Combat sports are competitive activities where two opponents engage in physical combat with the goal of achieving victory In Combat Games anxiety is a mental status which affects the performance of an athlete due to individual or due to competition stress, inflammation increases muscle tension & affect coordination, too much tension can affect the difficulties as it may affects attention. Every athlete experiences the Anxiety during/before the competition, there is no doubt that some kind of worry is important to perform well but the amount of anxiety is greater than your mind will be full of negative thoughts & due to expectation of failure athletes’ performance will be surely get effected, athlete participating in an individual sports experience more anxiety rather than team sports. Inflammation can affect the performance in many ways, there are several theories as to how stress affect the performance i.e. Drive Theory, inverted you Hypothesis, Individual Zones of Optimal Functioning, Multidimensional anxiety theory, Catastrophe Model, Reversal Theory, Anxiety direction and intensity etc. there are three signs of inflammation & anxiety that is cognitive, somatic & behavioural, its influence can be known by its various symptoms. However, there are many ways/techniques to control the anxiety i.e. The five-breath technique, Benson’s relaxation response, Visualization, Goal Setting, Relaxation Techniques, Cognitive Restructuring, Develop Self-Confidence, Distract Yourself, Focus on That Which You Can Control etc. by following these techniques athletes may get rid from the inflammation /anxiety & increase their performance, this paper contains all the details related to anxiety & methods to control over the anxiety. 

Read More »

Economic policy in an open economy

Shivaraj, Anitha M Patil

62 to 70

As Ambedkar said that the development of the mind should be the ultimate goal of the human race, the development of a country is the goal of the country’s progress, both internally and externally. No country can produce all the goods it needs by itself. They limit production capacity due to lack of capital, non-availability of manufacturing facilities, lack of technology, lack of investment, non-availability of manpower etc. They import the necessary goods from another country and export the goods produced in them to another country. Thus, a country’s economy opens up to the entire world and has economic relations with other countries of the world. In this, foreign investment into the home country and domestic investment into foreign countries. And free movement of technology is also allowed. This process has gained global importance in the late 21st century with the concept of globalization.

Read More »

ಅಡುಗೂಲಜ್ಜಿ: ಸ್ತ್ರೀ ಸಂವೇದನೆಯ ನೆಲೆಯಲ್ಲಿ

ಮಹದೇವಸ್ವಾಮಿ ಎಂ., ಬಿ. ಪ್ರಭುಸ್ವಾಮಿ

71 to 86

ನಮ್ಮ ಸಮಾಜವನ್ನು ಮೇಲು-ಕೀಳು, ಬಡವ-ಬಲ್ಲಿದ, ಸ್ತ್ರೀ-ಪುರುಷ ಎಂಬ ಅಸಮಾನತೆಗಳು ಹಿಂದಿನಿಂದಲೂ ಕಾಡುತ್ತಿವೆ. ಇವು ಕಾಲದಿಂದ ಕಾಲಕ್ಕೆ ಬದಲಾಗಿ ಬೇರೆ ಬೇರೆ ರೂಪ ತಾಳಿ ಮುಂದುವರಿಯುತ್ತಿವೆ. ಇವು ನಿರ್ಮೂಲನೆಯಾಗಬೇಕು, ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು. ಅನಾದಿ ಕಾಲದಿಂದಲೂ ನಡೆಯುತ್ತಿರುವ ಸ್ತ್ರೀ ಮೇಲಿನ ಶೋಷಣೆ, ದಬ್ಬಾಳಿಕೆಗಳು ನಿಲ್ಲಬೇಕು. ಸ್ತ್ರೀಯು ಪುರುಷನಷ್ಟೇ ಸಮರ್ಥಳು, ಅವಳನ್ನು ಅವಕಾಶ ವಂಚಿತಳನ್ನಾಗಿ ಮಾಡಬಾರದು. ಸ್ತ್ರೀ ಅಬಲೆಯಲ್ಲ ಸಬಲಳು ಎಂಬುದನ್ನು ಎಚ್. ಡುಂಡಿರಾಜ್ ಅವರು ತಮ್ಮದೇ ಹಾಸ್ಯ ಧಾಟಿಯ ಮೂಲಕ ಅಡುಗೂಲಜ್ಜಿ ನಾಟಕದಲ್ಲಿ ಚಿತ್ರಿಸಿದ್ದಾರೆ. 

Read More »

ಎ. ಪಂಕಜ ಅವರ ಕಾದಂಬರಿಗಳಲ್ಲಿ ದುರಂತ ನಾಯಕಿಯರು

ಪುಟ್ಟಸ್ವಾಮಿ ಎನ್. ಎನ್., ಪುಟ್ಟಸ್ವಾಮಿ

87 to 97

ಯಾವುದೇ ಸಾಹಿತಿಯಾದರೂ ಸಹ ಸಮಕಾಲೀನ ಸಮಾಜದ ನೈಜ ಜೀವನವನ್ನು ಇಲ್ಲವೇ ತಮ್ಮ ಮನದ ಭಾವನೆಗಳನ್ನು ಯಥಾವತ್ತಾಗಿ ಹೇಳುವಲ್ಲಿಯೂ ಕೂಡ ಆತನ ಸೃಜನಶೀಲತೆ ದುಡಿಯುತ್ತದೆ. ಎ. ಪಂಕಜ ಅವರು ಮಹಿಳಾ ಸಾಹಿತ್ಯ ಪರಂಪರೆಯಲ್ಲಿ ‘ಸಮನ್ವಯ ಸಾಹಿತ್ಯದ ಲೇಖಕಿ’ ಎಂದೇ ಪರಿಚಿತರು. ಇವರು ತಮ್ಮ ಕಾದಂಬರಿ ಮುಖೇನ ಸನ್ನಿವೇಶವನ್ನು ಪ್ರಸ್ತುತಪಡಿಸುತ್ತಾರೆಯೇ ಹೊರತು ಪ್ರತಿಭಟಿಸುವವರಲ್ಲ. ಕೆಲವೊಮ್ಮೆ ಆ ನಿಟ್ಟಿನ ಛಾಯೆಯನ್ನ ಕಾಣಬಹುದೇ ಹೊರತು ಯಾವ ಪಾತ್ರಗಳೂ ಸಹ ಬಲವಾಗಿ ಪ್ರತಿಭಟಿಸುವುದಿಲ್ಲ. ವಿಶೇಷವೆಂದರೆ ಇವರ ಕಾದಂಬರಿಗಳೆಲ್ಲವೂ ಭಾಗಶಃ ಸ್ತ್ರೀ ಕೇಂದ್ರಿತವೇ. ಆದರೂ ಸ್ತ್ರೀ ಪರವಾಗಿ ನಿಂತದ್ದು ಬಹಳ ಕಡಿಮೆ. ಸ್ತ್ರೀಯನ್ನು ಕೇಂದ್ರವಾಗಿಸಿಕೊಂಡು ಕುಟುಂಬದ ಜೊತೆಗೇ ಸಮಕಾಲೀನ ಸಾಮಾಜಿಕ ಬದುಕನ್ನು, ಹೆಣ್ಣಿನ ಸಾಮಾಜಿಕ ಸ್ಥಾನಮಾನವನ್ನು ಪ್ರಸ್ತುತಪಡಿಸುತ್ತಾರೆ. ಒಂದುವೇಳೆ ಅದು ಸ್ತ್ರೀಗೆ ತಕ್ಕುದಲ್ಲದಿದ್ದರೂ ಆ ಪಾತ್ರ ಪ್ರತಿಭಟಿಸುವ ಬದಲಿಗೆ ಒಪ್ಪಿ ನಡೆಯುತ್ತದೆ. ‘ಬಯಕೆಯ ಬೆಂಕಿ’ಯ ವಲ್ಲಿ, ನಿರ್ಮಲೆ, ಕುಮುದಾ, ‘ಮಾನಸ’ದ ಜಾನಕಿ, ‘ಬಲಿಪಶು’ವಿನ ಮಂಜುಳಾ, ‘ಅವನೇ ಕಾರಣ’ದ ಪಾರ್ವತಿ ಹೀಗೇ ಇವರ ಎಲ್ಲಾ ಸ್ತ್ರೀ ಪಾತ್ರಗಳೂ ಕೂಡ ತಮ್ಮ ಜೀವನದುದ್ದಕ್ಕೂ ಪುರುಷ ಪಾತ್ರ ಇಲ್ಲವೇ ಪುರುಷ ಪ್ರಧಾನ ಸಮಾಜದಿಂದ ಒಂದಿಲ್ಲೊಂದು ರೀತಿಯಲ್ಲಿ ಹಿಂಸೆಗೊಳಗಾಗಿವೆ. ತಮ್ಮ ಅನಿಸಿಕೆಗಳಿಗೆ ಅವಕಾಶವೇ ಇಲ್ಲವೆಂಬಂತೆ ಚಿತ್ರಿಸಲ್ಪಟ್ಟಿದ್ದು, ಕಡೆಗೆ ಅವಮಾನದಿಂದಲೋ, ಸಮಸಮಾಜವನ್ನು ಎದುರಿಸಲಾಗದೆಯೋ ಅಕಾಲಿಕವಾಗಿ ಮರಣವನ್ನಪ್ಪುತ್ತವೆ. ಸ್ತ್ರೀ ಸ್ಥಾನಮಾನ ಉನ್ನತೀಕರಣದತ್ತ ಮುಖ ಮಾಡಿದ್ದ ಕಾಲಘಟ್ಟದಲ್ಲೂ ಕೂಡ ಇವರ ಬರವಣಿಗೆ ಸ್ತ್ರೀ ವಿಚಾರದಲ್ಲಿ ತಾಟಸ್ಥ್ಯ ಧೋರಣೆ ತಾಳಿರುವುದು ವಿಪರ್ಯಾಸದ ಸಂಗತಿ.  

Read More »

ಚೆನ್ನಣ್ಣ ವಾಲೀಕಾರ ಅವರ ಕಥೆಗಳಲ್ಲಿ ಪ್ರತಿರೋಧದ ನೆಲೆ

ರಾಘವೇಂದ್ರ ಬಿ. ಎ. ದ್ರಾಕ್ಷಿ, ವಿಜಯಕುಮಾರ ಹೆಚ್‌. ವಿಶ್ವಮಾನವ

98 to 112

ಕಥೆ ಹೇಳುವುದು ಮತ್ತು ಕೇಳುವುದು ಮನುಷ್ಯನ ಆಸಕ್ತಿ ಮತ್ತು ಹವ್ಯಾಸಿ ಎರಡು ಹೌದು. ಕೆಲವು ವರ್ಷಗಳ ಹಿಂದೆ ದೂರದರ್ಶದನಂತಹ ಮಾಧ್ಯಮಗಳು ಬರುವುದಕ್ಕೆ ಮುಂಚೆ ಭಾರತದಂತಹ, ಕರ್ನಾಟಕದಂತಹ ಹಳ್ಳಿಗಳಲ್ಲಿ ಹಿರಿಯರು ಹೇಳುವ ಕತೆಗಳೇ ಮನರಂಜನೆಯ ತಾಣಗಳು ಆಗಿದ್ದವು. ನನಗೆ ನೆನಪಿರುವ ಹಾಗೆ ಚಿಕ್ಕವನಿರುವಾಗ ನಮ್ಮ ಅಜ್ಜಿಯೂ ಹಲವೂ ಕಥೆಗಳನ್ನು ಹೇಳಿ ಕಥೆ ಎಂದರೆ ಏನು ಎಂಬುದನ್ನು ಪರಿಚಯಿಸಿದ್ದಳು. ಅಷ್ಟೇ ಅಲ್ಲದೆ ಅವರು ಹೇಳುವ ಕಥೆಗಳಲ್ಲಿ ಜೀವನದ ಬದುಕಿನ ಅನುಭವದ ಸತ್ಯಾಸತ್ಯಗಳನ್ನು ಒಳಗೊಂಡಿರುವಂತಹ ಮೌಲ್ಯಯುತವಾದ, ನೀತಿಯುತವಾದ ಸಂದೇಶಗಳನ್ನು ಸಾರುವ ಕಥೆಗಳಾಗಿದ್ದವು. ಇಂತಹ ಕಥೆಗಳನ್ನು ಹಿರಿಯರಿಂದ ಕೇಳಿ ಆಧುನಿಕ ಕಥಾ ಸಾಹಿತ್ಯದಲ್ಲಿ ಹಲವಾರು ಕಥೆಗಳನ್ನು ಬರೆದ ಕಥೆಗಾರರು ಕನ್ನಡ ಸಾಹಿತ್ಯದಲ್ಲಿ ಕಂಡು ಬರುತ್ತಾರೆ. ಅವರಲ್ಲಿ ಚೆನ್ನಣ್ಣ ವಾಲೀಕಾರರು ಒಬ್ಬರೂ. ಈ ಕಥಾ ಸಾಹಿತ್ಯವೂ ತನ್ನದೇಯಾದ ಪರಂಪರೆ ಹೊಂದಿದ್ದು ಪ್ರಾಚೀನ ಸಾಹಿತ್ಯದಿಂದ ದಲಿತ ಬಂಡಾಯ ಸಾಹಿತ್ಯದವರೆಗೆ ಬೆಳೆಯುತ್ತ ಬಂದಿದೆ. ದಲಿತ-ಬಂಡಾಯ ಸಾಹಿತ್ಯದ ಪ್ರಸಿದ್ದ ಸಾಹಿತಿಗಳು, ಚಿಂತಕರು, ಹೋರಾಟಗಾರರು ಆದ ಚೆನ್ನಣ್ಣ ವಾಲೀಕಾರರು ಕಥಾ ಸಾಹಿತ್ಯದಲ್ಲಿಯೂ ತಮ್ಮ ಅನುಭವಕ್ಕೆ ಬಂದ, ತಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ನಡೆದ ಶೋಷಣೆ, ದಬ್ಬಾಳಿಕೆ, ದೌರ್ಜನ್ಯ, ಅಸಮಾನತೆ, ಅತ್ಯಾಚಾರ, ಅನೈತಿಕ ಸಂಬಂಧ ಮೊದಲಾದ ಘಟನೆಗಳನ್ನು ಕಥಾ ಸಾಹಿತ್ಯದಲ್ಲಿ ಹಿಡಿದಿಟ್ಟಿದ್ದಾರೆ. ಅವರ ಕಥೆಗಳನ್ನು ಒಳಗೊಂಡ “ಚೆನ್ನಣ್ಣ ವಾಲೀಕಾರ ಕಥೆಗಳಲ್ಲಿ ಪ್ರತಿರೋಧದ ನೆಲೆ” ಎಂಬ ಲೇಖನದಲ್ಲಿ ಆಯ್ದ ಕಥೆಗಳನ್ನು ಪ್ರತಿರೋಧದ ಹಿನ್ನಲೆಯಲ್ಲಿ ವಿಮರ್ಶೆಗೆ ಒಳಪಡಿಸಿರುವುದು ಒಂದು ಸಣ್ಣ ಪ್ರಯತ್ನವಾಗಿದೆ.

Read More »

ಗಿರೀಶ್ ಕಾರ್ನಾಡರ ನಾಗಮಂಡಲ ನಾಟಕ: ಸಂಕೇತಗಳ ಪರಾಮರ್ಶೆ

ತಾರಾಮಣಿ ಆರ್.

113 to 124

ಪ್ರಮುಖ ಚಿಂತಕರಲ್ಲಿ ಒಬ್ಬರಾದ ಎ ಕೆ ರಾಮಾನುಜನ್‌ ಅವರು ಹೇಳಿದ ಜನಪದ ಕಥೆಯನ್ನು ಆಧರಿಸಿ ನಾಟಕ ಕ್ಷೇತ್ರದ ಧೀಮಂತ ಪ್ರತಿಭೆಗಳಾದ ಗಿರೀಶ್‌ ಕಾರ್ನಾಡರು ನಾಗಮಂಡಲ ನಾಟಕವನ್ನೂ, ಕಂಬಾರರು ಸಿರಿಸಂಪಿಗೆ ನಾಟಕವನ್ನೂ ರಚಿಸಿದ್ದಾರೆ. ಎರಡು ನಾಟಕಗಳ ವಸ್ತು ಒಂದೇ ಆದರೂ ನಿರೂಪಣಾ ಶೈಲಿ, ನಾಟಕದ ತಂತ್ರಗಾರಿಕೆ ಹಾಗೂ ಧೋರಣೆಗಳು ಭಿನ್ನವಾಗಿವೆ. ನಾಟಕಗಳು ಮೇಲ್ನೋಟಕ್ಕೆ ಸರಳವಾದ ವಸ್ತುವನ್ನು ಒಳಗೊಂಡಂತೆ ಕಂಡರೂ ಓದುಗರಿಗೆ ಒಂದು ಸುಂದರವಾದ, ಅದ್ಭುತವಾದ ಸತ್ಯದ ಅನಾವರಣ ಮಾಡಿಸುತ್ತದೆ. ನಾಗಮಂಡಲ ನಾಟಕವು ಸಾಂಸ್ಕೃತಿಕ, ಧಾರ್ಮಿಕ, ಮಾನಸಿಕ ಮತ್ತು ಸಾಮಾಜಿಕ ಜೀವನವನ್ನು ಸಂಕೇತಗಳ ಬಳಕೆಯ ಮೂಲಕ ಪ್ರತಿಬಿಂಬಿಸುತ್ತದೆ. ನಾಟಕವು ಪಿತೃಪ್ರಧಾನ ವ್ಯವಸ್ಥೆಯಲ್ಲಿನ ಪುರುಷನ ನ್ಯೂನ್ಯತೆಗಳನ್ನು, ವರ್ತನೆಯ ರೀತಿಯನ್ನು ಹಾಗೂ ಪುರಾತನ ಸಾಂಪ್ರದಾಯಿಕ ಮೌಲ್ಯಗಳು ಮತ್ತು ನಂಬಿಕೆಗಳ ಬಗೆಗೆ ದೋಷಾರೋಪಣೆ ಮಾಡುತ್ತದೆ. ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ಹಲವಾರು ಪರಿಕಲ್ಪನೆಗಳಾದ ಮಹಿಳೆಯರ ಸ್ಥಾನಮಾನ, ಗಂಡು-ಹೆಣ್ಣಿನ ಸಂಬಂಧ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಚಾರಗಳು ಮಹಿಳೆಯರ ಮೇಲೆ ಉಂಟುಮಾಡಬಹುದಾದ ಪರಿಣಾಮ ಮತ್ತು ಪ್ರಭಾವ ಮುಂತಾದ ವಿಚಾರಗಳನ್ನು ನಾಟಕವು ಚರ್ಚಿಸುತ್ತದೆ. 
ನಾಟಕದಲ್ಲಿ ಬಳಸುವ ಸಾಂಸ್ಕೃತಿಕ ಸಂಕೇತಗಳು, ಮೌಲ್ಯಗಳು, ವರ್ತನೆಗಳು, ನಂಬಿಕೆಗಳು, ಕಲ್ಪನೆಗಳು, ಮೂಢನಂಬಿಕೆಗಳು ಭಾರತೀಯ ಸಂಸ್ಕೃತಿ ಮತ್ತು ಸಮುದಾಯವನ್ನು ಪ್ರತಿಬಿಂಬಿಸುತ್ತವೆ. ಈ ಹಿನ್ನೆಲೆಯಲ್ಲಿ ನಾಟಕದಲ್ಲಿ ಬಳಕೆಯಾಗಿರುವ ಸಂಕೇತಗಳು ನಾಟಕದಲ್ಲಿನ ಮುಖ್ಯ ಪಾತ್ರಗಳ ಬೆಳವಣಿಗೆಗೆ ಸಹಾಯಕವಾಗುವಂತೆ ಮೂಡಿರುವುದು ಕಂಡುಬರುತ್ತದೆ. 

Read More »

ಡಾ. ರಾಜಕುಮಾರ್ ಅವರ ಕನ್ನಡ ನಾಡು-ನುಡಿ ಸೇವೆ

ಹುಲುಗಪ್ಪ ಎನ್. ಎಚ್.

125 to 136

ತುಂಬಿದ ಕೊಡ ತುಳುಕುವುದಿಲ್ಲ’ ಎಂಬ ಗಾದೆ ಮಾತಿಗೆ ಡಾ. ರಾಜಕುಮಾರ್ ಅವರು ಸೂಕ್ತ ನಿದರ್ಶನವಾಗಿದ್ದಾರೆ. ಕನ್ನಡ ನಾಡು ಕಂಡ ಉಜ್ವಲ ಕನ್ನಡ ಪ್ರೇಮಿಗಳಲ್ಲಿ ಡಾ. ರಾಜಕುಮಾರ್ ಅವರು ಅಗ್ರಗಣ್ಯರಾಗಿ ನಿಲ್ಲುತ್ತಾರೆ. ಇವರು ಕನ್ನಡ ನಾಡು-ನುಡಿ, ಸಂಸ್ಕೃತಿ ಮೊದಲಾದವುಗಳಿಗೆ ತಮ್ಮ ವಿಶಿಷ್ಟ ವ್ಯಕ್ತಿತ್ವ, ಪ್ರತಿಭೆ ಹಾಗೂ ಐತಿಹಾಸಿಕ ಪಾತ್ರಗಳ ಮೂಲಕ ಸುವರ್ಣ ಅಂಚನ್ನು ಹೊದಿಸಿದ್ದಾರೆ. ರಾಜಕುಮಾರ್ ರವರು ಕೇವಲ ಶ್ರೇಷ್ಠ ನಟರಾಗಿರದೆ, ಕನ್ನಡ ನಾಡಿನ ಅಘೋಷಿತ ಸಾಂಸ್ಕೃತಿಕ ರಾಯಭಾರಿಯಾಗಿದ್ದು, ನೆಲ, ಜಲ, ಭಾಷೆಗೆ ಜನದನಿಯಾಗಿ ನಿಂತವರು. ಕನ್ನಡ ನಾಡು ಹಾಗೂ ಹೊರ ರಾಜ್ಯಗಳಲ್ಲಿನ ಹಲವಾರು ಸಾಮಾಜಿಕ ಅವಘಡಗಳು ನಡೆದಾಗ ರಾಜಕುಮಾರ್ ರವರು ಪಾದಯಾತ್ರೆ ಮಾಡಿ ನಿಧಿ ಸಂಗ್ರಹಿಸಿದರು. 
ರಾಜಕುಮಾರ್ ರವರು ಸರ್ಕಾರಿ ನೌಕರರಿಗೆ ಕಡ್ಡಾಯ ಕನ್ನಡ ಮಾಡಬೇಕೆಂದು ಹೋರಾಟ ಮಾಡಿ ಅದು ಕಾರ್ಯರೂಪಕ್ಕೆ ಬರುವಲ್ಲಿ ಪ್ರಮುಖ ಪಾತ್ರವಹಿಸಿದರು. ಹಾಗೆಯೇ ಕಾವೇರಿ ನದಿಯ ಜಲವಿವಾದದ ಹೋರಾಟದಲ್ಲಿ ರಾಜಕುಮಾರ್ ರವರು ತೊಡಗಿಕೊಂಡಿದ್ದು ಕನ್ನಡಿಗರಿಗೆ ಹೊಸ ಹುರುಪನ್ನು ತುಂಬಿದಂತಾಯಿತು. ಮತ್ತೆ ಬೆಂಗಳೂರು ದೂರದರ್ಶನ ಕೇಂದ್ರದಿಂದ ಉರ್ದು ಭಾಷೆಯಲ್ಲಿ ಪ್ರಸಾರವಾಗುತ್ತಿದ್ದ ವಾರ್ತೆಗಳನ್ನು ನಿಲ್ಲಿಸುವಲ್ಲಿ ಬಹುಮುಖ್ಯರಾಗಿದ್ದಾರೆ. 
ರಾಜಕುಮಾರ್ ರವರು ಚಿತ್ರರಂಗ ಕ್ಷೇತ್ರದಲ್ಲಿ 50 ವರ್ಷಗಳ ಕಾಲ ನಟರಾಗಿ ಜನಮನದಲ್ಲಿ ನೆಲೆಸಿದ್ದಾರೆ. ಚಿತ್ರರಂಗದಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸುವುದರ ಮೂಲಕ ನಾಡಿನ ಸಂಸ್ಕೃತಿ ಉಳಿಸುವಲ್ಲಿ ಪ್ರಮುಖರಾಗಿದ್ದಾರೆ. ಇವರಿಗೆ ಪರಭಾಷೆಗಳಿಂದ ಬಹಳಷ್ಟು ಅವಕಾಶಗಳು ಬಂದರೂ ತನ್ನ ತಾಯಿ ನುಡಿಯನ್ನು ನೆಚ್ಚಿಕೊಂಡು ಬದುಕಿದವರು. ಇವರು ಕೇವಲ ಚಲನಚಿತ್ರಗಳಲ್ಲಿ ನಟಿಸುವುದು ಮಾತ್ರವಲ್ಲದೆ ತಾನು ಮತ್ತು ಬೇರೆಯವರು ಅಭಿನಯಿಸಿದ ಎಷ್ಟೋ ಚಲನಚಿತ್ರಗಳಿಗೆ ಹಾಡುಗಳನ್ನು ಹಾಡಿದ್ದಾರೆ. ತಾವು ಅಭಿನಯಿಸಿದ ಪಾತ್ರಗಳ ಮೂಲಕ ಕನ್ನಡ ನಾಡು-ನುಡಿಯ ಪ್ರಜ್ಞೆಯನ್ನು ತುಂಬಿದ್ದಾರೆ. ರಾಜಕುಮಾರ್ ರವರಿಗೆ ರಾಜಕೀಯ ಅವಕಾಶಗಳು ಸಾಕಷ್ಟಿದ್ದರೂ ಕೇವಲ ಒಬ್ಬ ನಟನಾಗಿ ಸಾಮಾಜಿಕ ಮತ್ತು ಸಾಂಸ್ಕೃತಿಕ ರಾಯಭಾರಿಯಂತೆ ಕೊನೆಯವರೆಗೂ ಉಳಿದದ್ದು ಅಚ್ಚರಿಯೆನಿಸುತ್ತದೆ. ಆದ್ದರಿಂದಾಗಿಯೇ ಕನ್ನಡ ನಾಡು, ಕನ್ನಡ ಜನತೆ ತನ್ನಿಂದ ತಾನೇ ರಾಜಕುಮಾರ್ ಅವರನ್ನು ಕನ್ನಡ ಭಾಷೆ ಮತ್ತು ಸಾಂಸ್ಕೃತಿಕ ಪರಂಪರೆಗೆ ಸಂಕೇತವಾಗಿ ಒಪ್ಪಿಕೊಂಡಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. 
80ರ ದಶಕದಲ್ಲಿ ನಡೆದ ಗೋಕಾಕ್ ಚಳುವಳಿಯಲ್ಲಿ ದೊಡ್ಡ ದೊಡ್ಡ ಕವಿಗಳು ಕೈ ಜೋಡಿಸಲು ಹಿಂದೇಟಾಕಿದರು. ಆದರೆ ರಾಜಕುಮಾರ್ ರವರು ‘ಕನ್ನಡ ನಾಡು-ನುಡಿಗಾಗಿ ಯಾವ ತ್ಯಾಗಕ್ಕೂ ಸಿದ್ಧ, ಕನ್ನಡಕ್ಕೆ ಕುತ್ತು ಬಂದಿತೆಂದರೆ ಯಾವುದಕ್ಕೂ ಹಿಂದೆ ಸರಿಯುವುದಿಲ್ಲ’ ವೆಂಬಂತೆ ಚಳುವಳಿಯಲ್ಲಿ ಕೈ ಜೋಡಿಸಿದ್ದು ಕನ್ನಡ ಪ್ರೇಮಿಗಳಲ್ಲಿ ಒಂದು ರೀತಿಯಲ್ಲಿ ಆನೆ ಬಲವೇ ಬಂದಂತಾಯಿತು. 
ರಾಜಕುಮಾರ್ ರವರು ಸಾಮಾನ್ಯರ ಆಶೋತ್ತರಗಳಿಗಾಗಿ, ರೈತರಿಗಾಗಿ, ನಾಡು-ನುಡಿಗಾಗಿ ಟೊಂಕಕಟ್ಟಿ ನಿಂತವರು. ಕನ್ನಡ ಭಾಷೆಯನ್ನು ಅಚ್ಚ ಸೊಗಡಿನಿಂದ, ಸ್ವಚ್ಚವಾಗಿ, ಸ್ಪುಟವಾಗಿ, ಸುಂದರವಾಗಿ ಮಾತನಾಡುವ ಮತ್ತೊಬ್ಬ ನಟ ಸಿಗುವುದು ವಿರಳ ಎಂದೇ ಹೇಳಬೇಕು. ಅದ್ದರಿಂದಾಗಿಯೇ ಕನ್ನಡದ ಅಣ್ಣನ ಸ್ಥಾನ ಇಂದಿಗೂ ಎಂದಿಗೂ ಅವರಿಗೇನೇ ಮೀಸಲಾಗಿದೆ. 

Read More »

ಟಿ. ವಿ ಮಾಧ್ಯಮದಲ್ಲಿ ಮಹಿಳೆಯರ ಸ್ಥಾನಮಾನ

ಮೀನಾಕುಮಾರಿ ಎಂ.

137 to 144

ಟಿ. ವಿ ಮಾಧ್ಯಮದಲ್ಲಿ ಮಹಿಳೆಯ ಸ್ಥಾನಮಾನಗಳ ಕುರಿತು ಅನೇಕ ಚರ್ಚೆಗಳು ನಡೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಜನಸಾಮಾನ್ಯರ ಮೇಲೆ ಅತಿ ಹೆಚ್ಚು ಪ್ರಭಾವವನ್ನು ಬೀರುತ್ತಿವೆ. ಸುದ್ದಿಯಾಗಲಿ, ಮನರಂಜನೆಯಾಗಲಿ ಇನ್ನೂ ಮತ್ತಿತರ ವಿಷಯಗಳಾಗಲಿ ದಿನದಿಂದ ದಿನಕ್ಕೆ ಭಿನ್ನತೆಯನ್ನು ಪಡೆದುಕೊಳ್ಳುತ್ತಿವೆ. ಈ ಬೆಳವಣಿಗೆಯಲ್ಲಿ ಮಹಿಳೆಯ ಪಾತ್ರಗಳೂ ಸಹ ಬದಲಾಗುತ್ತಿವೆ. ಮಾಧ್ಯಮಗಳು ಮಹಿಳೆಯನ್ನು ಹೆಚ್ಚು ಹೆಚ್ಚು ಕಡೆ ಪ್ರಬಲೆಯಾಗಿ, ಧೈರ್ಯದ ಮೂರ್ತಿಯಾಗಿ, ಸಧೃಡೆಯಾಗಿ ತೋರಿಸುವ ಪ್ರಯತ್ನಗಳು ನಡೆಯುತ್ತಿವೆ. ಹಾಗೆಯೇ ಅದಕ್ಕೆ ವೈರುಧ್ಯವೆಂಬಂತೆ ಖಳನಾಯಕಿಯಾಗಿ, ಧೂರ್ತೆಯಾಗಿ, ಅಬಲೆಯಾಗಿ ಬಿಂಬಿಸುತ್ತಲೂ ಇವೆ. ಉದ್ಯೋಗಸ್ಥ, ವಿಚಾರವಂತ ಮಹಿಳೆಯರನ್ನು ಗಮನದಲ್ಲಿರಿಸಿಕೊಂಡು ಮಾಧ್ಯಮಗಳು ತಮ್ಮ ಕಾರ್ಯಕ್ರಮಗಳನ್ನು ರೂಪಿಸುವುದು ತೀರಾ ಕಡಿಮೆ. ಹಾಗೆಂದ ಮಾತ್ರಕ್ಕೆ ಮಾಧ್ಯಮದಿಂದ ಮಹಿಳೆಗೆ ಏನೂ ಅನುಕೂಲಗಳಾಗಿಲ್ಲ ಎಂದಲ್ಲ. ಆಕೆಯನ್ನು ದಿಟ್ಟೆಯನ್ನಾಗಿ ಬೆಳೆಸಲು ಮಾಧ್ಯಮ ಅನೇಕ ದಾರಿಗಳನ್ನು ಮಾಡಿಕೊಟ್ಟಿದೆ. ಭಾರತದಲ್ಲಿ ಗಂಭೀರ ಪತ್ರಿಕೋದ್ಯಮ ಮಹಿಳೆಯ ಸ್ಥಾನಮಾನಗಳನ್ನು ಕುಗ್ಗಿಸಿಲ್ಲ. ಪತ್ರಕರ್ತೆಯಾಗಿ, ನಟಿಯಾಗಿ, ನಿರೂಪಕಿಯಾಗಿ, ಕಾರ್ಯಕ್ರಮ ನಿರ್ವಾಹಕಿಯಾಗಿ, ವಾರ್ತಾವಾಚಕಿಯಾಗಿ, ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ಮಾಧ್ಯಮ ಸಂಸ್ಥೆಗಳಲ್ಲಿ ಮಹಿಳೆ ತನ್ನನ್ನು ತಾನು ಗುರುತಿಸಿಕೊಂಡಿದ್ದಾಳೆ. ಆದರೆ ಎಷ್ಟೆ ಸಾಧನೆಯನ್ನು ಆಕೆ ಮಾಡುತ್ತಿದ್ದರೂ ಶೋಷಣೆಯ ಮುಖಗಳು ಮಾತ್ರ ಮುಚ್ಚಿಲ್ಲ. ಹೆಣ್ಣನ್ನು ಅಧಿಕಾರಯುತವಾದ ಸ್ಥಾನಗಳಿಗೆ ನೇಮಿಸುವುದರಿಂದ ಹಿಡಿದು ಆಕೆಯನ್ನು ಬಿಂಬಿಸುತ್ತಿರುವ ರೀತಿ, ಆಕೆಯ ಉಡುಗೆ – ತೊಡುಗೆಗಳು ಎಲ್ಲಾ ವಿಚಾರಗಳಲ್ಲೂ ಶೋಷಣೆ ನಡೆಯುತ್ತಿದೆ. ಒಂದು ಕಡೆ ಮಾಧ್ಯಮಗಳ ಮೂಲಕ ಹೆಣ್ಣು ಹೆಚ್ಚು ಬೆಳವಣಿಗೆಯನ್ನು ಕಾಣುತ್ತಿದ್ದರೆ ಮತ್ತೊಂದು ಕಡೆ ಹೆಣ್ಣಿನ ಮೇಲೆ ಶೋಷಣೆಗಳು ನಡೆಯುತ್ತಿವೆ. ಈ ಎಲ್ಲಾ ಅಂಶಗಳ ಕುರಿತು ಚರ್ಚೆ ನಡೆಯಬೇಕಿದೆ. 

Read More »

ಹರಿಹರನ ರಗಳೆಯಲ್ಲಿ ಶರಣ ಕೆಂಬಾವಿ ಭೋಗಣ್ಣ

ಸೋಮಶೇಖರ ಎಂ.

145 to 156

ವಚನ ಸಾಹಿತ್ಯದ ಮಾತು ಬಂದ ತಕ್ಷಣವೇ ನಮ್ಮಲ್ಲಿ ಬಸವಾದಿ ಶರಣರ ಆಲೋಚನೆಗಳು ಸುಳಿದಾಡುತ್ತವೆ. ವಚನ ಸಾಹಿತ್ಯದ ಮೇಲೆ ಸಾಕಷ್ಟು ಸಂಶೋಧನೆಗಳು ನಡೆದಿದೆ; ನಡೆಯತ್ತಲೇ ಇದೆ. ವಚನ ಸಾಹಿತ್ಯವನ್ನು ಅಧ್ಯಯನದ ದೃಷ್ಟಿಯಿಂದ ಬಸವಪೂರ್ವ ಯುಗ (11ನೇ ಶತಮಾನ), ಬಸವ ಯುಗ (12-13ನೇ ಶತಮಾನ), ಬಸವೋತ್ತರ ಯುಗ (15-19ನೇ ಶತಮಾನ) ಹಾಗೂ ಆಧುನಿಕ ಯುಗ (20ನೇ ಶತಮಾನ) ಎಂದೂ ವಿಭಾಗಿಸಿಕೊಳ್ಳಲಾಗಿದೆ. ಈ ಸಾಹಿತ್ಯ ಸೃಷ್ಟಿಯ ಪ್ರಮುಖ ಕಾರಣ ಹಾಗೂ ಪ್ರೇರಣೆಗಳೆಂದರೆ ಶರಣ ಧರ್ಮದ ತತ್ವಗಳ ಪ್ರಸಾರ ಮಾಡುವುದು ಹಾಗೂ ಅಂದಿನ ಸಮಾಜದಲ್ಲಿನ ಅಸಮಾನತೆಯನ್ನು ಹೊಡೆದೋಡಿಸುವುದು. ಹನ್ನೊಂದನೆಯ ಶತಮಾನದಲ್ಲಿ ಈ ಕಾರ್ಯವನ್ನು ಕೈಗೊಂಡವರು ಕೊಂಡಗುಳಿ ಕೇಶಿರಾಜ, ಕೆಂಬಾವಿ ಭೋಗಣ್ಣ, ಶಂಕರದಾಸಿಮಯ್ಯ, ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಸಕಳೇಶ ಮಾದರಸ, ಜೇಡರದಾಸಿಮಯ್ಯ ಹಾಗೂ ಚಂದಿಮರಸ. ಇವರೆಲ್ಲ ಬಸವಣ್ಣನವರಿಗಿಂತ ವಯಸ್ಸಿನಲ್ಲಿ ಹಿರಿಯರು. ಕೆಂಬಾವಿ ಭೋಗಣ್ಣನ್ನು ಹೊರತು ಪಡಿಸಿ ಮಿಕ್ಕೆಲ್ಲರೂ ವಚನಗಳನ್ನು ರಚಿಸಿದ್ದಾರೆಂದು ಹಲವು ಸಂಶೋಧನೆಗಳಿಂದ ತಿಳಿದುಬರುತ್ತದೆ. 
ಭೋಗಣ್ಣನು ವಚನಕಾರನೋ? ಅಲ್ಲವೋ? ಎಂಬುದಕ್ಕೆ ‘ಕೆಂಬಾವಿ ಭೋಗಣ್ಣ ಒಬ್ಬ ಐತಿಹಾಸಿಕ ವ್ಯಕ್ತಿಯಾಗಿದ್ದಾನೆ’ ಎಂದು ಎಂ. ಚಿದಾನಂದ ಮೂರ್ತಿ ಅವರು ‘ವಚನ ಸಾಹಿತ್ಯ’ಕೃತಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಹಲವು ವಿದ್ವಾಂಸರು ಹರಿಹರನ ರಗಳೆಗಳ ಆಧಾರದ ಮೇಲೆಯೇ ಭೋಗಣ್ಣನ ಕಾಯಕ, ವ್ಯಕ್ತಿತ್ವವನ್ನು ದಾಖಲಿಸಿದ್ದಾರೆ. ಏನೇ ಚರ್ಚೆಗಳಿದ್ದರೂ ಭೋಗಣ್ಣನ ಕುರಿತಾದ ವೈಯಕ್ತಿಕ ಮಾಹಿತಿಗಿಂತಲೂ; ಆತನೊಬ್ಬ ಶಿವಶರಣನಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಪ್ರಭುತ್ವ ವ್ಯವಸ್ಥೆಯ ಅಸಮಾನತೆಗಳಿಗೆ ಧ್ವನಿಯೆತ್ತುವ ಮುಖೇನ ಕೆಂಭಾವಿ ಪುರದ ಜನರ ಆರಾಧ್ಯ ದೈವವಾಗಿದ್ದನೆಂಬುದು ಸತ್ಯ. ಈ ವಿಚಾರವನ್ನು ಹರಿಹರ ತನ್ನ ರಗಳೆಯಲ್ಲಿ ಸೊಗಸಾಗಿ ಚಿತ್ರಿಸಿದ್ದನ್ನು ಕಾಣಬಹುದು. 

Read More »

ಪ್ರಬಂಧ ಸಾಹಿತ್ಯ ಚರಿತ್ರೆಯ ವಿಸ್ತಾರ (ಡಾ. ಮಹಾದೇವ್ ಬಡಿಗೇರರವರ ಪ್ರಬಂಧ ಸಾಹಿತ್ಯ)

ಭೀಮಣ್ಣ ಎಚ್.

157 to 161

ಕನ್ನಡ ಸಾಹಿತ್ಯದಲ್ಲಿ ಪ್ರಬಂಧ ಸಾಹಿತ್ಯವು ದಶಕಗಳಿಂದ ಬೆಳೆದು ಬಂದಿದೆ. ಕನ್ನಡ ಸಾಹಿತ್ಯದಲ್ಲಿ ಹಲವಾರು ಪ್ರಬಂಧಕಾರರು ತಮ್ಮ ಬರಹದ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ್ದಾರೆ. ಪ್ರಮುಖವಾಗಿ ಕನ್ನಡ ಸಾಹಿತ್ಯದಲ್ಲಿ ಪ್ರಬಂಧ ಸಾಹಿತ್ಯವನ್ನು ನಗೆ ಬರಹ, ವ್ಯಕ್ತಿ ಚಿತ್ರಗಳು, ನೀತಿ ಬೋದೆ, ಲಲಿತ ಪ್ರಬಂಧಗಳು ಎಂದು ಪರಿಗಣಿಸುತ್ತಿದ್ದರು. ನಂತರ ಇಂಗ್ಲಿಷ್ ಭಾಷೆಯ ಎಸ್ಸೆ ಪದಕ್ಕೆ ಸಂವಾಧಿಯಾಗಿ ಪ್ರಬಂಧ ಎಂದು ಕರೆಯತೊಡಗಿದರು. ಇದು ಕನ್ನಡ ಸಾಹಿತ್ಯದಲ್ಲಿ ಹೆಂಮ್ಮರವಾಗಿ ಬೆಳೆಯ ತೊಡಗಿತು. 
ಡಾ. ಮಹಾದೇವ ಬಡಿಗೇರವರು ಈ ಪ್ರಬಂಧ ಸಾಹಿತ್ಯದಲ್ಲಿ ಲಲಿತ ಪ್ರಬಂಧ ಸಾಹಿತ್ಯಕ್ಕೆ ಸಂಬಂಧಿಸಿದ ಹಲವಾರು ವಿಷಯಗಳನ್ನು ಸಂಶೋಧನೆ ಮಾಡುವುದರ ಮೂಲಕ ಒಂದೆಡೆ ಕಲೆ ಹಾಕಿ ಸಾಹಿತ್ಯ ಓದುಗರಿಗೆ ಕಟ್ಟಿಕೊಟ್ಟಿದ್ದಾರೆ. ಪ್ರಬಂಧ ಸಾಹಿತ್ಯದ ಸೂಕ್ಷ್ಮ ಸಂವೇದನೆಯ ಹೊರನೋಟ ಮತ್ತು ಒಳನೋಟಗಳನ್ನು ಒರೆಗಲ್ಲಿಗೆ ಹಚ್ಚಿ ವಿಶ್ಲೇಷಿಸಿದ್ದಾರೆ. ಲಲಿತ ಪ್ರಬಂಧ ಸಾಹಿತ್ಯದ ಅಧ್ಯಯನವನ್ನು ಮೀಮಾಂಸೆ, ಸಾಹಿತ್ಯ ಚರಿತ್ರೆ ಮತ್ತು ಸಮೀಕ್ಷೆ ಅಧ್ಯಯನದ ಮುಖಾಂತರ ಸಾಹಿತ್ಯದ ಅಂತರ್ಶಿಸ್ತಿಯ ಅಧ್ಯಯನಕ್ಕೆ ಒಳಪಡಿಸಿ ಸಾಹಿತ್ಯದ ರೂಪವಾಗಿ ಲಲಿತ ಪ್ರಬಂಧ ಸಾಹಿತ್ಯದ ಹಲವು ನೆಲೆಗಳನ್ನು ಕಟ್ಟಿಕೊಟ್ಟಿದ್ದಾರೆ. ಈ ಅಧ್ಯಯನದಲ್ಲಿ ಪ್ರಬಂಧ ಸಾಹಿತ್ಯದ ಸ್ವರೂಪ, ಲಕ್ಷಣ, ಪ್ರಕಾರಗಳು, ಪ್ರಬಂಧ ಸಾಹಿತ್ಯ ಚರಿತ್ರೆ, ಅನುವಾದಕ, ಸಂಪಾದಕ ಇಂತಹ ಹಲವು ವಿಷಯಗಳನ್ನು ಮಹಾದೇವ್ ಬಡಿಗೇರ ಅವರ ಸಂಶೋಧನಾತ್ಮಕ ನೆಲೆಗಳುಳ್ಳ ಪ್ರಬಂಧ ಸಾಹಿತ್ಯದ ರಚನೆಯು ಕನ್ನಡ ಸಾಹಿತ್ಯಕ್ಕೆ ಅತ್ಯಂತ ಮಹತ್ವದಾಗಿದೆ. ಲಲಿತ ಪ್ರಬಂಧ ಸಾಹಿತ್ಯ ಚರಿತ್ರೆ ಅಧ್ಯಯನದ ಕೊನೆಯ ಭಾಗದಲ್ಲಿ ಲೇಖಕರು ಪ್ರಬಂಧ ಸಾಹಿತ್ಯದ ಕೊಡುಗೆ, ಅಧ್ಯಯನದ ಇತಿಮಿತಿಗಳು ಜೊತೆಗೆ ಸಾಧ್ಯತೆಗಳನ್ನು ಕುರಿತು ವಿವರಿಸಿದ್ದಾರೆ. 

Read More »