ಲಂಬಾಣಿ ರಾಮಾಯಣದಲ್ಲಿ ಸೀತಾರಾಮ ಕಲ್ಯಾಣ

Main Article Content

ಸೋಮಶೇಖರ ಎಂ.

Abstract

ಲಂಬಾಣಿಗರು ತಮ್ಮ ಗೋರಬೋಲಿ (ಲಂಬಾಣಿ ಭಾಷೆ)ಯಲ್ಲಿ ಮೌಖಿಕ ‘ರಾಮಾಯಣ’ವನ್ನು ಕಟ್ಟಿಕೊಂಡಿರುವುದು ವಿಶೇಷವಾಗಿದೆ. ಜೈನರಾಮಾಯಣ, ಗೊಂಡರಾಮಾಯಣ, ಬೌದ್ಧರಾಮಾಯಣ ಹೀಗೆ ಮೊದಲಾದ ರಾಮಾಯಣಗಳ ಸಾಲಿನಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳುವ ಲಂಬಾಣಿ ರಾಮಾಯಣವು ಜನಪದ ಹಾಡಿನ (ಜನಪದ ಕಥನಗೀತೆ) ರೂಪದಲ್ಲಿದೆ. ಲಂಬಾಣಿಗರು ತಮ್ಮ ವಿರಾಮದ ವೇಳೆಯಲ್ಲಿ, ಮದುವೆ ಸಂಭ್ರಮದಲ್ಲಿ, ಸೂತಕದ ಮನೆಯಲ್ಲಿ, ಹಬ್ಬಹರಿದಿನಗಳಲ್ಲಿ ಭಜನೆ (ವಾಝ) ಮಾಡುವ ಪರಂಪರೆಯಿದೆ. ಇಂಥ ಸಂದರ್ಭದಲ್ಲಿ ತಮ್ಮ ಸ್ಮೃತಿಪಟಲದಲ್ಲಿ ಹುದುಗಿದ್ದ ಕಾವ್ಯ-ಪುರಾಣಗಳ ಕಥೆಗಳನ್ನು ಪಠಿಸುವ ಪರಿಪಾಠವಿದೆ. ಪುರಾಣ ಪ್ರವಚನಗಳಂತೆ ಕಾಣಿಸಿಕೊಳ್ಳುವ ಈ ವಿಶಿಷ್ಟ ಪದ್ಧತಿಯು ಲಂಬಾಣಿಗರ ಪ್ರಮುಖ ಮನೋರಂಜನಾ ಕಾರ್ಯಕ್ರಮ. ಇಂಥ ಕಾರ್ಯಕ್ರಮಗಳಲ್ಲಿ ವಾಚಿಸುವ ರಾಮಾಯಣದ ಸೀತೆ, ರಾಮ ಹಾಗೂ ವಿವಿಧ ಪಾತ್ರಗಳ ಕುರಿತಾದ ಕಥೆಗಳು ಅಸಂಖ್ಯಾತವಾಗಿವೆ. ಅವುಗಳಲ್ಲಿ ಲಂಬಾಣಿ ಜನಪದರಲ್ಲಿ ಮಹತ್ವ ಪಡೆದ ಸೀತಾರಾಮ ಕಲ್ಯಾಣದ ಕುರಿತಾದ ಕಥಾವಸ್ತುವಿನ ವಿಶೇಷತೆಯನ್ನು ಪ್ರಸ್ತುತ ಲೇಖನ ಒಳಗೊಂಡಿದೆ.

Article Details

Section

Research Articles

Author Biography

ಸೋಮಶೇಖರ ಎಂ.

ಕನ್ನಡ ಸಹ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೋಕ. ಬಳ್ಳಾರಿ.

How to Cite

ಸೋಮಶೇಖರ ಎಂ. (2026). ಲಂಬಾಣಿ ರಾಮಾಯಣದಲ್ಲಿ ಸೀತಾರಾಮ ಕಲ್ಯಾಣ. ಅಕ್ಷರಸೂರ್ಯ (AKSHARASURYA), 11(05), 113 to 124. https://aksharasurya.com/index.php/latest/article/view/1941

References

ನಾಯಕ ಡಿ.ಬಿ. & ಹರಿಲಾಲ ಪವಾರ (ಸಂ), (2020), ಲಂಬಾಣಿ ರಾಮಾಯಣ, ಹಾವೇರಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯ.

ನಾಯಕ ಡಿ.ಬಿ. (ಸಂ), (2021), ಲಂಬಾಣಿ ಸಾಂಸ್ಕೃತಿಕ ಪದಕೋಶ: ಸಂಪುಟ-17, ಗೊಟಗುಡಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯ.

Most read articles by the same author(s)