ಶಿರಗಾನಹಳ್ಳಿ ಶಾಂತನಾಯ್ಕರವರ ʼತಾಂಡʼ ಕಾದಂಬರಿಯ ಕಾಯಕಯೋಗಿಗಳು

Main Article Content

ಸೋಮಶೇಖರ ಎಂ.

Abstract

ʼತಾಂಡʼ ಶಿರಗಾನಹಳ್ಳಿ ಶಾಂತನಾಯ್ಕ ಅವರು ಬರೆದಿರುವ ಕಾದಂಬರಿ. ಶೀರ್ಷಿಕೆಯೇ ಸೂಚಿಸುವಂತೆ ಲಂಬಾಣಿ ಸಮುದಾಯದ ಸಂಸ್ಕೃತಿ ಹಾಗೂ ಜನರ ಬದುಕುಬವಣೆಗಳು ಇಲ್ಲಿನ ಕಥಾವಸ್ತು. ಪರಂಪರೆ ಮತ್ತು ಜಾಗತೀಕರಣಗಳ ನಡುವೆ ನಡೆಯುವ ಇಲ್ಲಿನ ಕಥನವು ಲಂಬಾಣಿ ಸಮುದಾಯದ ಆಂತರ್ಯದ ಸಂಗತಿಗಳನ್ನು ತೆರೆದಿಟ್ಟಿದೆ. ಅಷ್ಟೇ ಅಲ್ಲದೆ, ಆ ಕುರಿತ ಚರ್ಚೆಗಳು ಹಲವು ಆಯಾಮಗಳಲ್ಲಿ ಕಾಣಿಸಿಕೊಂಡಿವೆ. ಅವುಗಳು ಸಂಸ್ಕೃತೀಕರಣಗೊಂಡು ಒಂದು ಜನಾಂಗದ ಸುತ್ತಲೂ ಹೆಣೆದುಕೊಂಡಿದ್ದರೂ ಅದರಾಚೆಗೂ ವಿಸ್ತರಿಸಿವೆ. ಲಂಬಾಣಿ ಸಮುದಾಯದ ಜೊತೆಗೆ ಇತರೆ ಸಮುದಾಯದ ಬದುಕು, ಕಾಯಕಗಳು ತಳುಕು ಹಾಕಿಕೊಂಡಿವೆ. ವ್ಯಾಪಾರವ್ಯವಹಾರಗಳು, ದುಡಿಮೆಶ್ರಮಗಳು, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ವಿಚಾರಗಳು ವಿಭಿನ್ನ ನೆಲೆಗಳಲ್ಲಿ ಹರಡಿಕೊಂಡಿವೆ. ಹನ್ನೆರಡನೇ ಶತಮಾನದ ಶಿವಶರಣರ ಕಾಯಕ ತತ್ವದ ಪ್ರಭಾವ ಮತ್ತು ಪ್ರೇರಣೆ ಕನ್ನಡ ನೆಲದಲ್ಲಿ ಜನ್ಮವೆತ್ತಿದ ಪ್ರತಿಯೊಬ್ಬರಲ್ಲಿಯೂ ಮೈಗೂಡಿಕೊಂಡಿದೆ ಎಂಬ ಮಾತಿಗೆ ನಿದರ್ಶನವೆಂಬಂತೆ ಈ ಕಾದಂಬರಿ ಪ್ರಸ್ತುತಗೊಳಿಸಿದೆ.

Article Details

Section

Research Articles

Author Biography

ಸೋಮಶೇಖರ ಎಂ.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೋಕ, ಬಳ್ಳಾರಿ ಜಿಲ್ಲೆ.

How to Cite

ಸೋಮಶೇಖರ ಎಂ. (2025). ಶಿರಗಾನಹಳ್ಳಿ ಶಾಂತನಾಯ್ಕರವರ ʼತಾಂಡʼ ಕಾದಂಬರಿಯ ಕಾಯಕಯೋಗಿಗಳು. ಅಕ್ಷರಸೂರ್ಯ (AKSHARASURYA), 7(06), 71 to 77. https://aksharasurya.com/index.php/latest/article/view/1339

References

ರಾಠೋಡ್ ಪಿ.ಕೆ., (2015), ಬಂಜಾರ ಸಂಸ್ಕೃತಿ ಕಥನ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

ಹರಿಲಾಲ್ ಪವಾರ್, (2017), ಬಂಜಾರ ಭಾಷೆ ತೌಲನಿಕ ಅಧ್ಯಯನ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೋಟಗುಡಿ.

ನಾಯಕ ಡಿ.ಬಿ. (ಸಂ), (2021), ಲಂಬಾಣಿ ಸಾಂಸ್ಕೃತಿಕ ಪದಕೋಶ: ಸಂಪುಟ-17, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೋಟಗುಡಿ.

Most read articles by the same author(s)