ಲಂಬಾಣಿ ರಾಮಾಯಣ: ಸಾಂಸ್ಕೃತಿಕ ಅವಲೋಕನ
Main Article Content
Abstract
ಭಾರತದಲ್ಲಿ ಅಸಂಖ್ಯಾತ ಬುಡಕಟ್ಟು ರಾಮಾಯಣಗಳಿವೆ. ಜಾತಿ, ಧರ್ಮ, ಸಮಾಜ ಹೀಗೆ ಹಲವು ನೆಲೆಗಳಲ್ಲಿ ಕಾಣಿಸಿಕೊಂಡಿರುವ ರಾಮಾಯಣಗಳು; ವಸ್ತುವಿನ ವಿಚಾರದಲ್ಲಿ ಒಂದೇ ಆಗಿದ್ದರೂ, ಅದನ್ನು ಅಭಿವ್ಯಕ್ತಪಡಿಸುವ ಮಾಧ್ಯಮ ವಿಭಿನ್ನವಾಗಿವೆ. ಲಿಖಿತ ರಾಮಾಯಣ ಅಥವಾ ಶಿಷ್ಟ ರಾಮಾಯಣದ ಕಥಾವಸ್ತುವಿನಲ್ಲಿ ಅಲ್ಪಸ್ವಲ್ಪ ಮಾರ್ಪಾಡುಗಳೊಂದಿಗೆ ರಚನೆಯಾಗಿರುವ ಮೌಖಿಕ ನೆಲೆಯ ರಾಮಾಯಣಗಳು ವಿಶಿಷ್ಟವಾಗಿ ಕಾಣಿಸಿಕೊಳ್ಳುತ್ತವೆ. ಲಿಖಿತ ಕಾವ್ಯಕ್ಕೂ; ಜನಪದ ಕಾವ್ಯಕ್ಕೂ ಇರುವ ವ್ಯತ್ಯಾಸವೆಂದರೆ ಕಥಾವಸ್ತುವಿನ ನಿರೂಪಣೆ. ಮೂಲ ಕಾವ್ಯಕ್ಕೆ ಧಕ್ಕೆಯಾಗದಂತೆ; ಕಾವ್ಯದ ಆಶಯವನ್ನು ಬಿಗಿಯಾಗಿಸುತ್ತಲೇ ಜನಪದರು ತಮ್ಮದೇ ಶೈಲಿಯಲ್ಲಿ ಕಟ್ಟಿಕೊಡುವ ರಾಮಾಯಣದ ಕಥೆಯು ಆಲಿಸಲು, ವಾಚಿಸಲು ಯೋಗ್ಯವಾಗಿರುತ್ತವೆ. ಬುಡಕಟ್ಟು ಜನರ ಕಥಾ ನಿರೂಪಣಾ ಶೈಲಿಯು ತಮ್ಮ ಬದುಕಿನೊಡನೆ ಹೆಣೆದುಕೊಂಡಿರುತ್ತವೆ. ಪಂಡಿತಮಾನ್ಯರಿಗೆ ರಾಮ, ಸೀತೆ ಸಾಮಾನ್ಯರಂತೆ ಕಂಡರೆ, ಜನಪದರಿಗೆ ದೈವಪುರುಷರಂತೆ ಕಾಣುವರು. ಹಾಗಾಗಿ ಇಂಥ ಪಾತ್ರಗಳು ಜನಪದರ ಮೇಲೆ ನೇರವಾಗಿ ಪ್ರಭಾವಬೀರುವುದಲ್ಲದೇ ತಮ್ಮ ಬದುಕು ಕಟ್ಟಿಕೊಳ್ಳಲು ರಾಮಾಯಣದ ಮೌಲ್ಯಗಳು ಆದರ್ಶವಾಗುತ್ತವೆ. ಇಂಥ ಆದರ್ಶ ಮೌಲ್ಯಗಳನ್ನು ಒಳಗೊಂಡಿರುವ ರಾಮಾಯಣ ಕೃತಿಯು ಬುಡಕಟ್ಟು ಲಂಬಾಣಿಗರ ಸಂಸ್ಕೃತಿಯಲ್ಲಿ ಹೇಗೆ ಮಿಳಿತಗೊಂಡಿವೆ ಎಂಬುದನ್ನು ಈ ಲೇಖನವು ಪ್ರಸ್ತುತ ಪಡಿಸುತ್ತದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ನಾಯಕ ಡಿ.ಬಿ. ಮತ್ತು ಹರಿಲಾಲ ಪವಾರ (ಸಂ.), (2020), ಲಂಬಾಣಿ ರಾಮಾಯಣ, ಗೊಟಗೋಡಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯ.
ರಾಠೋಡ್ ಪಿ.ಕೆ., (2015), ಬಂಜಾರ ಸಂಸ್ಕೃತಿ ಕಥನ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.
ನಾಯಕ ಡಿ.ಬಿ. (ಸಂ.), (2021), ಲಂಬಾಣಿ ಸಾಂಸ್ಕೃತಿಕ ಪದಕೋಶ (ಸಂಪುಟ-17), ಗೊಟಗೋಡಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯ.