ನಾ. ಡಿಸೋಜ: ವೀರವನಿತೆ ರಾಣಿ ಚೆನ್ನಮ್ಮ

Main Article Content

ಸಿದ್ದರಾಜು ಎಸ್.ಪಿ.
ಡಾ. ವಿಶ್ವನಾಥ

Abstract

ನಾ. ಡಿಸೋಜ ಅವರ ವಿರಚಿತ ‘ಚೆನ್ನಿ ಚೆನ್ನಮ್ಮ ಚೆನ್ನಮ್ಮಾಜಿ’ ಕಾದಂಬರಿಯನ್ನಾಧರಿಸಿ ಕೆಳದಿ ರಾಣಿ ಚೆನ್ನಮ್ಮನ ಐತಿಹಾಸಿಕ ಹಾಗೂ ಸಾಹಸಮಯ ಬದುಕಿನ ಚಿತ್ರಣವನ್ನು ಇಲ್ಲಿ ಸಮಗ್ರವಾಗಿ ವಿಶ್ಲೇಷಿಸಲಾಗಿದೆ. ಕೋಟಿಪುರದ ಸಾಮಾನ್ಯ ಹೆಣ್ಣುಮಗಳಾದ ಚೆನ್ನಿ, ಅರಸ ಸೋಮಶೇಖರ ನಾಯಕನ ಪತ್ನಿಯಾಗಿ, ಪಿತೃಪ್ರಧಾನ ಸಮಾಜದ ತಾರತಮ್ಯ ಹಾಗೂ ವಿರೋಧಗಳನ್ನು ದಿಟ್ಟತನದಿಂದ ಮೆಟ್ಟಿ ನಿಂತು ‘ಮಹಾರಾಣಿ ಚೆನ್ನಮ್ಮಾಜಿ’ಯಾಗಿ ಬೆಳೆದ ರೋಚಕ ಹಾದಿಯನ್ನು ನಿರೂಪಿಸಲಾಗಿದೆ. ಆಂತರಿಕ ದ್ರೋಹಿಗಳನ್ನು ಸದೆಬಡಿದು, ಪ್ರಜಾನುರಾಗಿಯಾಗಿ ದಕ್ಷ ಆಡಳಿತ ನೀಡಿದ ಆಕೆಯ ಸಾಧನೆಗಳು ಅವಿಸ್ಮರಣೀಯ. ಛತ್ರಪತಿ ಶಿವಾಜಿಯ ಮಗ ರಾಜರಾಮನಿಗೆ ಅಭಯ ನೀಡಿ, ದೆಹಲಿಯ ಸುಲ್ತಾನ ಔರಂಗಜೇಬನ ಬೃಹತ್ ಸೇನೆಯನ್ನು ಹಿಮ್ಮೆಟ್ಟಿಸಿದ ಆಕೆಯ ಶೌರ್ಯವನ್ನು ಎತ್ತಿಹಿಡಿಯಲಾಗಿದೆ. ಸ್ತ್ರೀಯರು ಕೇವಲ ಅಬಲೆಯರಲ್ಲ; ಅವರ ಬುದ್ಧಿವಂತಿಕೆ, ದೂರದೃಷ್ಟಿ, ಸಂಘಟನಾ ಕೌಶಲ್ಯ ಮತ್ತು ಆಡಳಿತಾತ್ಮಕ ನಿಪುಣತೆಯು ಅವರನ್ನು ಸಶಕ್ತ ನಾಯಕಿಯರನ್ನಾಗಿಸುತ್ತದೆ ಎಂಬ ಸ್ತ್ರೀಪರ ಕಾಳಜಿಯ ಉದಾತ್ತ ಆಶಯವನ್ನು ಈ ಬರಹವು ಅತ್ಯಂತ ಪರಿಣಾಮಕಾರಿಯಾಗಿ ಅಭಿವ್ಯಕ್ತಪಡಿಸುತ್ತದೆ.

Article Details

Section

Research Articles

Author Biographies

ಸಿದ್ದರಾಜು ಎಸ್.ಪಿ.

ಸಂಶೋಧನಾ ವಿದ್ಯಾರ್ಥಿ, ಮಹಾರಾಜ ಕಾಲೇಜು, ಮೈಸೂರು.

ಡಾ. ವಿಶ್ವನಾಥ

ನಿವೃತ್ತ ಪ್ರಾಧ್ಯಾಪಕರು, ಕನ್ನಡ ವಿಭಾಗ, ಮಹಾರಾಜ ಕಾಲೇಜು, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

How to Cite

ಸಿದ್ದರಾಜು ಎಸ್.ಪಿ., & ವಿಶ್ವನಾಥ. (2026). ನಾ. ಡಿಸೋಜ: ವೀರವನಿತೆ ರಾಣಿ ಚೆನ್ನಮ್ಮ. ಅಕ್ಷರಸೂರ್ಯ (AKSHARASURYA), 17(05), 197 to 203. https://aksharasurya.com/index.php/latest/article/view/2383

References

ಗುರುರಾವ್ ಬಾಪಟ್ ಮತ್ತು ವಿಲಿಯಂ (ಸಂ: ಮಾರ್ಷಲ್ ಶರಾಮ್), (2012), ಮಲೆನಾಡಿಗ, ಶಿವಮೊಗ್ಗ: ಗೀತಾಂಜಲಿ ಪುಸ್ತಕ ಪ್ರಕಾಶನ.

ಡಿಸೋಜ ನಾ., (2020), ನಾಡಿ ಮಿಡಿತ (ಸಂಪುಟ-05), ಶಿಕಾರಿಪುರ: ಸುವ್ವಿ ಪಬ್ಲಿಕೇಷನ್ಸ್.

ಸಫ್ರಾಜ್ ಚಂದ್ರಗುತ್ತಿ, (2011), ನಾ. ಡಿಸೋಜ ಎಂಬ ಶರಾವತಿಯ ನಾಲ್ಕು ಜಲಧಾರೆ, ಮೈಸೂರು: ಶ್ರುತಿಲೋಕ ಪ್ರಕಾಶನ.

Most read articles by the same author(s)