ಪಂಪನಲ್ಲಿ ಪ್ರಕೃತಿ

Main Article Content

ವಿಶ್ವನಾಥ

Abstract

ಕನ್ನಡ ಸಾಹಿತ್ಯದ ಆದಿಕವಿ ಪಂಪನ ಕಾವ್ಯಗಳಲ್ಲಿ ಪ್ರಕೃತಿ ಮತ್ತು ಕರ್ನಾಟಕದ ಸಾಂಸ್ಕೃತಿಕ ಸಂಪತ್ತು ಅತ್ಯಂತ ರಮಣೀಯವಾಗಿ ಅನಾವರಣಗೊಂಡಿದೆ. ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ ಕೃತಿಗಳಲ್ಲಿ ಲೌಕಿಕ ಪ್ರಯೋಜನದ ಜೊತೆಗೆ ಪ್ರಕೃತಿಯ ಸೌಂದರ್ಯವನ್ನು ಆರಾಧಿಸಲಾಗಿದೆ. ಬನವಾಸಿ ನಾಡಿನ ಸುಂದರ ಪರಿಸರ, ಮಲ್ಲಿಗೆ, ಮಾವು, ದುಂಬಿ, ಗಿಳಿ ಮತ್ತು ಕೋಗಿಲೆಗಳ ಇಂಪಾದ ಗಾನವನ್ನು ಕವಿ ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. ಮನುಷ್ಯ ಮತ್ತು ಪ್ರಕೃತಿಯ ನಡುವಿನ ಅವಿನಾಭಾವ ಸಂಬಂಧವನ್ನು ಬಿಂಬಿಸುವ ಈ ಕಾವ್ಯಗಳು, ಪ್ರಕೃತಿಯನ್ನು ಪೋಷಿಸುವ ಮತ್ತು ಆರಾಧಿಸುವ ಮಹತ್ವವನ್ನು ಸಾರುತ್ತವೆ. ಪ್ರಕೃತಿ ಉಳಿದರೆ ಮಾತ್ರ ಮಾನವ ಸಂಪತ್ತು ಬೆಳೆಯುತ್ತದೆ ಎಂಬ ಪಂಪನ ಪರಿಸರ ಪ್ರೇಮ ಮತ್ತು ದೇಶಭಕ್ತಿ ಇಲ್ಲಿ ನಿರೂಪಿತವಾಗಿದೆ.

Article Details

Section

Research Articles

Author Biography

ವಿಶ್ವನಾಥ

ಕನ್ನಡ ಅಧ್ಯಯನ ಪೀಠ, ಜೆ.ಎನ್.ಯು., ನವದೆಹಲಿ.

How to Cite

ವಿಶ್ವನಾಥ. (2023). ಪಂಪನಲ್ಲಿ ಪ್ರಕೃತಿ. ಅಕ್ಷರಸೂರ್ಯ (AKSHARASURYA), 2(06), 16 to 20. https://aksharasurya.com/index.php/latest/article/view/139

References

ಮುಗಳಿ ರಂ. ಶ್ರೀ, ಕನ್ನಡ ಸಾಹಿತ್ಯ ಚರಿತ್ರೆ, ಗೀತಾಬುಕ್ ಹೌಸ್, 2019.

ನಾಯಕ ಹಾ. ಮಾ., ಶ್ರೀ ಸಾಹಿತ್ಯ, ಕು.ಕ.ಅ.ಸಂ., ಮೈಸೂರು ವಿ.ವಿ., 2002.

ತಿಪೇರುದ್ರಸ್ವಾಮಿ, ಎಚ್., ಕರ್ನಾಟಕ ಸಾಂಸ್ಕೃತಿಕ ಸಮೀಕ್ಷೆ, ಡಿ.ವಿ.ಕೆ. ಮೂರ್ತಿ ಪ್ರಕಾಶನ, ಮೈಸೂರು, ಹದನೈದನೆಯ ಮುದ್ರಣ, 2018.

ವಿಶ್ವನಾಥ, ಪರಿಶೀಲನ, ದೇವಿ ಪ್ರಕಾಶನ, ಮೈಸೂರು, 2020.

ಶ್ರೀಕಂಠಯ್ಯ, ತಿ. ನಂ., ಪಂಪ, ಪ್ರಸಾರಾಂಗ, ಮೈಸೂರು, 1959.

ಪುಟ್ಟಪ್ಪ, ಕೆ. ವಿ., ಪಂಪನಲ್ಲಿ ಭವ್ಯತೆ, ಮೈಸೂರು ವಿ.ವಿ. ಪ್ರಕಟಣೆ, 1960.

ಶಿವರುದ್ರಪ್ಪ ಜಿ. ಎಸ್., ಪಂಪ ಒಂದು ಅಧ್ಯಯನ, ಬೆಂಗಳೂರು ವಿ.ವಿ., 1980.

ಶಿವರುದ್ರಪ್ಪ ಜಿ. ಎಸ್., ಸಂ: ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ, ಬೆಂಗಳೂರು ವಿ.ವಿ. ಪ್ರಕಟಣೆ, 1982.

Most read articles by the same author(s)