Table of Contents
Trodden Path
ಅಲ್ಲಮನ ಕಾಯ ಸಿದ್ಧಾಂತ
01 to 29
ಅಲ್ಲಮಪ್ರಭುವಿನ ವಚನಗಳ ಮೂಲಕ ಅನಾವರಣಗೊಳ್ಳುವ 'ಕಾಯ ಸಿದ್ಧಾಂತ'ವು ಕಾಶ್ಮೀರ ಶೈವ ಹಾಗೂ ಕೌಳ ತಾಂತ್ರಿಕ ಪರಂಪರೆಗಳಿಗೆ ಮುಖಾಮುಖಿಯಾದ ವಿಶಿಷ್ಟ ತಾತ್ವಿಕ ನೆಲೆಯಾಗಿದೆ. ಅಭಿನವಗುಪ್ತನಂತಹ ದಾರ್ಶನಿಕರು ಶರೀರ ಮತ್ತು ಕಾಮವನ್ನು ಆಧ್ಯಾತ್ಮಿಕ ಮುಕ್ತಿಯ ಮಾರ್ಗವೆಂದು ಪ್ರತಿಪಾದಿಸಿದರೆ, ಅಲ್ಲಮನು ಆ ವಿಚಾರವನ್ನು ತೀವ್ರವಾಗಿ ನಿರಾಕರಿಸುತ್ತಾನೆ. ಕಾಯವನ್ನು 'ಮಹಾಕದಳಿ' ಹಾಗೂ ಪಂಚೇಂದ್ರಿಯಗಳನ್ನು 'ವಿಷಯದ ಮಳೆ' ಎಂದು ರೂಪಕೀಕರಿಸುವ ಮೂಲಕ ಶರೀರದ ಮಿತಿಯನ್ನು ಅಲ್ಲಮ ಎಚ್ಚರಿಸುತ್ತಾನೆ. ಪೌರಾಣಿಕ ಮಾರ್ಗ, ಗಣಾಚಾರದ ಹಿಂಸೆ ಮತ್ತು ಚಾರಿತ್ರಿಕ ವಿಧಿವಿಧಾನಗಳನ್ನು ಧಿಕ್ಕರಿಸುವ ಪ್ರಭು, 'ಗುಹೇಶ್ವರ'ನೆಂಬ ನಿರಾಕಾರ ಬಯಲನ್ನು ಮಾತ್ರ ಸತ್ಯವೆಂದು ನಂಬುತ್ತಾನೆ. ತತ್ವ ಮತ್ತು ಕಾವ್ಯರೂಪಕಗಳ ಬಳಕೆಯ ಮೂಲಕ ಅಲ್ಲಮನು ಪ್ರಬಲ ದಾರ್ಶನಿಕ ವಾಗ್ವಾದವನ್ನು ಮಂಡಿಸುವ ಬಗೆಯನ್ನು ಡಿ.ಆರ್. ನಾಗರಾಜ್ ಅವರ ಈ ವಿಶ್ಲೇಷಣೆಯು ಕಟ್ಟಿಕೊಡುತ್ತದೆ.
Byway
ಕವಿಯನ್ನು ರೂಪಿಸಿದ ಪರಿಸರ...
30 to 33
“ನನ್ನ ಬದುಕಿನ ಹಿನ್ನೆಲೆಯನ್ನು ನೆನೆಸಿಕೊಂಡರೆ ನಾನು ಯಾರೋ ಭೂಮಾಲೀಕರ ಮನೆಯ ಜೀತಗಾರನಾಗಿಯೋ, ಬೆಂಗಳೂರಿನ ಯಾವುದಾದರೂ ಗಿರಣಿಯ ಕಾರ್ಮಿಕನಾಗಿಯೋ ಇರಬೇಕಾಗಿತ್ತು. ಆದರೆ ಕೂದಲೆಳೆಯ ಅಂತರದಲ್ಲಿ ಪಾರಾದ ನಾನು ಅನೇಕರ ಸಹಾನುಭೂತಿ, ಪ್ರೀತಿ, ಕರುಣೆಯಿಂದ ಕವಿಯಾಗಿದ್ದೇನೆ, ಲೇಖಕನಾಗಿದ್ದೇನೆ.
ನಾನು ನನ್ನ ಹಿನ್ನೆಲೆಯನ್ನು ಮರೆಯದೆ ಜೀತಗಾರರು, ಕೂಲಿಕಾರರು, ರೈತರು, ಕಾರ್ಮಿಕರು ಮತ್ತು ಜಾತೀಯತೆ, ಅಸ್ಪೃಶ್ಯತೆಯ ಕಾರಣದಿಂದ ನೊಂದ ಜೀವಿಗಳ ಪರವಾದ ನಿಲುವನ್ನು ರೂಢಿಸಿಕೊಂಡೆ. ಆದ್ದರಿಂದ ನನ್ನ ಸಾಹಿತ್ಯ ವಿಭಿನ್ನ ಮಾರ್ಗದಲ್ಲಿ ಮುನ್ನಡೆಯಲು ಕಾರಣವಾಯಿತು.”
ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಗೊಂಡಿರುವ ‘ಡಾ. ಸಿದ್ಧಲಿಂಗಯ್ಯ: ಸಮಗ್ರ ಸಾಹಿತ್ಯ’ ಸಂಪುಟಗಳ (2018) ಲೇಖಕರ ಮಾತಿನಲ್ಲಿ ಈ ಸಾಲುಗಳನ್ನು ಓದುಗರು ಗಮನಿಸಿರಬಹುದು. ಆಧುನಿಕ ಕನ್ನಡ ಸಾಹಿತ್ಯ ಹಾಗೂ ದಲಿತ ಚಳವಳಿಗೆ ತಮ್ಮ ಹೋರಾಟದ ಹಾಡುಗಳ ಮೂಲಕ ಜೀವತುಂಬಿದ ಕವಿ ತಾನು ಹುಟ್ಟಿದ ಊರಿನ ಪರಿಸರದಿಂದ ಪ್ರೇರಣೆಗೊಂಡು ಹಾಗೂ ಆತನ ಸಂವೇದನೆಯ ಅಖಂಡ ಸ್ಥಿತಿಯಾದ ಬಾಲ್ಯಕಾಲದ ವಿಶಿಷ್ಟ ಅನುಭವಗಳು ಮತ್ತು ವಿಮೋಚನಾ ಹೋರಾಟಗಳ ಮೂಲಕ ತನ್ನ ಅಭಿವ್ಯಕ್ತಿಯಲ್ಲಿ ಕಂಡುಕೊಂಡ ಸೃಜನಶೀಲ ಅನುಸಂಧಾನವನ್ನು ನಾವಿಲ್ಲಿ ಕಾಣಬಹುದು.
Research Articles
ಸಾಮರಸ್ಯದ ತಾಣಗಳಾಗಿ ಶಿಂಷಾ ಮಾರಮ್ಮ ದೇಗುಲ ಹಾಗೂ ಹಜರತ್ ಮರ್ದಾನಿ ಗೈಬ್ ದರ್ಗಾ
34 to 40
ಕನ್ನಡ ನಾಡಿನಲ್ಲಿ ಪ್ರಾಚೀನ ಕಾಲದಿಂದಲೂ ಸಾಮರಸ್ಯವನ್ನು ಪ್ರತಿಬಿಂಬಿಸುವ ಅನೇಕ ಘಟನೆಗಳು ನಡೆಯುತ್ತಾ ಬಂದಿವೆ; ಅನೇಕ ಸ್ಥಳಗಳು ರೂಪುಗೊಂಡಿವೆ. ಸಂತ ಸಮುದಾಯವು ಸಾಮಾಜಿಕ ಸಾಮರಸ್ಯಕ್ಕಾಗಿ ಬೋಧಿಸುತ್ತಾ ನಡೆದು ಕನ್ನಡ ಸಂಸ್ಕೃತಿಯಲ್ಲಿ ಬಹುದೊಡ್ಡ ಕ್ರಾಂತಿಯನ್ನುಂಟುಮಾಡಿರುವುದು ಚಾರಿತ್ರಿಕ ಸಂಗತಿಯಾಗಿದೆ. ಕರ್ನಾಟಕದ ಅನೇಕ ಸಂತರೂ ಮತ್ತು ಅವರ ಶಿಷ್ಯಂದಿರ ಸೇವಾಕಾರ್ಯದ ಪ್ರಭಾವದಿಂದಾಗಿ ಸಾಮಾಜಿಕ ಸ್ವಾಸ್ಥ್ಯವೂ ಸಾಮರಸ್ಯವೂ ಸಾಧಿತಗೊಂಡು ಇಂದಿಗೂ ಜನಸಮುದಾಯಗಳು ಒಕ್ಕಲಾಗಿ ನಡೆದುಕೊಳ್ಳುತ್ತಿದ್ದಾರೆ. ಕಾವೇರಿ ನದಿಯ ಉಪನದಿಯಾದ ಶಿಂಷಾ ಹರಿವಿನ ಮಾರ್ಗದಲ್ಲಿ ರೂಪುಗೊಂಡಿರುವ ಶಿಂಷಾ ಮಾರಮ್ಮ ದೇವಾಲಯ, ಶಿವನಸಮುದ್ರ ದರ್ಗಾ ಅಥವಾ ದರ್ಗಾ ಹಜರತ್ ಮರ್ದಾನಿ ಗೈಬ್ ತಾಣಗಳು ಸಾಮಾಜಿಕ ಸಾಮರಸ್ಯಕ್ಕೆ ಹೆಸರುವಾಸಿಯಾಗಿವೆ.
ಅಲ್ಲಮನ ವಚನದ ವಿವೇಚನೆ
41 to 46
ಅಲ್ಲಮ ಈ ವಚನದಲ್ಲಿ ಮುಸುರೆ ಹಾಗು ನೊಣವನ್ನು ಉಪಮೆ ನೀಡುವುದರ ಮೂಲಕ ವಿಷಯಾಸೆಗಳನ್ನು ಮುಸುರೆಯೆಂದು ಸಾಮಾನ್ಯ ಮನುಷ್ಯನ ಮನಸ್ಸನ್ನು ನೊಣವೆಂದು ಹೇಳಿದ್ದಾನೆ.
ಮುಸುರೆ ಅಲ್ಪಾವಧಿಯದ್ದಾಗಿದ್ದು ಸ್ವಲ್ಪ ಸಮಯದ ಅನಂತರ ಕೊಳೆತು ನಾರುತ್ತದೆ ಅಂತೆಯೇ ವಿಷಯಾಸಕ್ತಿಗಳು ಆ ಕ್ಷಣಕ್ಕೆ ಸಂತಸವನ್ನು ತಂದು ಕೊಟ್ಟರೂ ದೀರ್ಘಾವಧಿಯಲ್ಲಿ ತನ್ನ ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳುತ್ತಾ, ಚಿತ್ತ ವಿಕೃತಿಗೆ ಒಳಗಾಗುವುದಲ್ಲದೆ ಅವನು ತನ್ನ ವ್ಯಕ್ತಿತ್ವ ನಾರುವಂತೆ ಮಾಡಿಕೊಳ್ಳುತ್ತಾನೆ. ಇನ್ನು ಮತ್ತೊಂದು ಆಯಾಮವನ್ನು ನೋಡುವುದಾದರೆ ಮುಸುರೆಯ ಮಡಕೆ ಮನುಷ್ಯನ ಲೋಭತನದ ಕ್ರೋಢೀಕರಣ ಇದು ಆರೋಗ್ಯಕರ ಸಮಾಜಕ್ಕೆ ಮಾರಕವಾಗುತ್ತದೆ. ನೊಣ ಈ ಕ್ರೋಢೀಕರಣವನ್ನು ಹರಡುವ ಸಾಂಕ್ರಾಮಿಕ ರೋಗದ ಮನೋಭಾವದಂತೆ ಕಾಣುತ್ತದೆ.
ನೊಣದ ಸ್ವಭಾವದಲ್ಲಿನ ಚಂಚಲತೆ, ಪಶುವಿನಲ್ಲಿರುವ ಅಲ್ಪಮತಿ ಸಾಮಾನ್ಯ ಮನುಷ್ಯನಲ್ಲಿ ಪ್ರಚೋದಿತವಾಗುತ್ತಿರುತ್ತದೆ. ವಚನದ ಕೊನೆಯ ಸಾಲಿನಲ್ಲಿ ಅಲ್ಲಮನು ಆಧ್ಯಾತ್ಮ ಚಿಂತನೆಯ ಗುರು (ಭಗವಂತ/ಗುಹೆಶ್ವರ) ನಿಮ್ಮ ಶರಣರು ಈ ಪ್ರಚೋದನೆಗೆ ಒಳಗಾಗದ ಹಂತವನ್ನು ತಲುಪಿ ಆಶಾಪಾಶವಿರಹಿತರಾಗಿದ್ದಾರೆ ಎನ್ನುತ್ತಾನೆ. ಅಂದರೆ ಅಲ್ಲಮನು ‘ಶರಣತ್ವ’ ಎಂಬುದು ಮನುಷ್ಯ ಜನಾಂಗದ ಔನತ್ಯದ ಹಂತ ಎಂದು ಹೇಳುವಂತಿದೆ. ಶರಣರ ಚಿಂತನೆ ಮನುಷ್ಯ ಜನಾಂಗದ ಮುಂದುವರೆದ ಹಂತ ಎಂದು ಪ್ರತಿಪಾದಿಸುವ ದೃಷ್ಟಿಯನ್ನ ಗ್ರಹಿಸಬಹುದಾಗಿದೆ.
ವಚನ ಸಾಹಿತ್ಯದಲ್ಲಿ ಜೀವನಕೌಶಲ್ಯದ ಆಯಾಮಗಳು
47 to 53
ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಜೀವನ ಕೌಶಲ್ಯಗಳನ್ನು ಬದುಕಿನ ಮೌಲ್ಯಗಳಾಗಿ ಅಳವಡಿಸಿಕೊಂಡು ‘ಅರಿತೆಡೆ ಶರಣ ಮರೆತೆಡೆ ಮಾನವ’ ಎಂಬ ಮಾತನ್ನು ಸಾಕ್ಷೀಕರಿಸುವಂತೆ ಬದುಕಿದವರು ಶಿವಶರಣರು. ವಚನ ರೂಪದಲ್ಲಿ ಬರೆದ ಅವರ ಅನುಭವದ ನುಡಿಗಳು, ಅವುಗಳಲ್ಲಿ ಅಡಗಿರುವ ಜೀವ ಕೌಶಲ್ಯಗಳನ್ನು, ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ 10 ಮುಖ್ಯವಾದ ಜೀವನ ಕೌಶಲ್ಯಗಳನ್ನು ತೌಲನಿಕವಾಗಿ ಅಧ್ಯಯನ ನಡೆಸಿ, ಜೀವನ ಕೌಶಲ್ಯಗಳನ್ನು ಒಳಗೊಂಡಿರುವ ವಚನಗಳನ್ನು ವಿಶ್ಲೇಷಿಸಲಾಗಿದೆ. ವಚನಗಳ ಅರ್ಥ, ವ್ಯಾಪ್ತಿ ಮತ್ತು ದೃಷ್ಟಿಕೋನ ವಿಶಾಲವಾದದ್ದು ಮನೋವೈಜ್ಞಾನಿಕವಾಗಿ ಅಧ್ಯಯನ ನಡೆಸಿದಾಗ ಅದು ಸಮುದ್ರದ ಅಲೆಗಳಂತೆ ಭಿನ್ನವೂ ಮತ್ತು ವೈವಿದ್ಯಪೂರ್ಣವೂ ಆದ ಅರ್ಥವಿವೇಚನೆಯ ಸಾಧ್ಯತೆಗಳನ್ನು ಓದುಗರಿಗೆ ತೆರೆದಿಡುವುದರ ಜೊತೆಗೆ ಇಂದಿನ ಒತ್ತಡಯುಕ್ತ ಬದುಕಿನಲ್ಲಿ ಕೌಶಲ್ಯಗಳನ್ನು ಅಳವಡಿಸಿಕೊಂಡು ಜೀವನವನ್ನು ನಿರ್ವಹಿಸಲು ಸಹಕಾರಿಯಾಗಿವೆ.
ಜನ್ನನ ಯಶೋಧರೆ ಚರಿತೆಯಲ್ಲಿ ಅಮೃತಮತಿ ಮತ್ತು ಅಷ್ಟಾವಂಕನ ಪ್ರೇಮಾಂಕುರ: ಒಂದು ಅಧ್ಯಯನ
54 to 59
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಜನ್ನ ಕವಿಯು ವಿಶಿಷ್ಟವಾಗಿ ಕಂಡುಬರುತ್ತಾನೆ.ಯಶೋಧರ ಚರಿತೆ ಕೃತಿಯಲ್ಲಿ ಕೃತಿಯಲ್ಲಿ ದೈಹಿಕ,ಮಾನಸಿಕ ಮತ್ತು ತಾರ್ಕಿಕ ಚಿಂತನೆಗಳು ಅಭಿವ್ಯಕ್ತಗೊಂಡಿವೆ. ಸೌಂದರ್ಯ ಮತ್ತು ಕುರೂಪತೆಯ ಅವಳಿ ವೈರುಧ್ಯಗಳು ವಿಭಿನ್ನತೆಯ ನೆಲೆಯಲ್ಲಿ ಚಿತ್ರಿತಗೊಂಡಿವೆ. ಪ್ರೀತಿಯಿಂದ ವಂಚಿತಳಾದ ರಾಣಿಯು ಸಾಮಾನ್ಯನ ಸಂಗೀತಕ್ಕೆ ಮನಸೋತು ಇಡೀ ಸರ್ವಸ್ವವನ್ನೇ ತ್ಯಾಗ ಮಾಡಿ ಅಷ್ಟವಂಕನಲ್ಲಿ ಬರುತ್ತಾಳೆ. ಆತನು ನೀಡುವ ಘೋರವಾದ ಶಿಕ್ಷೆ ಯಲ್ಲಿಯೂ ಆನಂದವನ್ನು ಪಡುತ್ತಾಳೆ.ಯಶೋಧರ ಮತ್ತು ಆತನ ಪೂರ್ವಜರು ಮಾಡಿದ ಪಾಪದ ಪ್ರತಿಫಲವಾಗಿ ಹಲವಾರು ಜನ್ಮಗಳನ್ನು ಎತ್ತಿ ಬಂದರು ಒಂದಲ್ಲ ಒಂದು ರೀತಿಯಲ್ಲಿ ಕಷ್ಟಗಳನ್ನು ಎದುರಿಸಬೇಕಾಯಿತು. ಅಹಿಂಸ ಪಾಲಕರಾಗಿದ್ದರು ಯಾವುದೋ ರೂಪದಲ್ಲಿ ಅವರಿಗೆ ಅರಿವು ಇಲ್ಲದೆಯೇ ಹಿಂಸೆಯನ್ನು ಮಾಡುವ ಮೂಲಕ ದೈಹಿಕ ಮತ್ತು ಮಾನಸಿಕವಾಗಿ ಕುಗ್ಗಿ ಹೋಗುವಂತೆ ವಿಧಿಯಾಟವು ಅವರ ಜೀವನದಲ್ಲಿ ನಡೆಯುತ್ತದೆ, ಎಂಬುದನ್ನು ಕವಿಯು ಚಿಂತನೆ ಮಾಡಿದ್ದಾರೆ.
ಬಂಜಾರರ ಸಾಂಪ್ರದಾಯಿಕ ಸ್ಥಿತ್ಯಂತರ
60 to 68
ಜನಪದ ಸಾಹಿತ್ಯವೂ ಆಕಾಶದಷ್ಟೇ ವಿಶಾಲ, ಸಾಗರದಷ್ಟೇ ಆಳ. ಅದರಲ್ಲಿ ಹಲವು ಪ್ರಕಾರಗಳಿವೆ. ಗಾದೆ, ಒಗಟು, ಒಡಪು, ಕಥೆ, ಲಾವಣಿ, ಕಥನಗೀತೆ ಪ್ರಮುಖವಾಗಿವೆ. ಇಡೀ ಜಗತ್ತಿನಲ್ಲಿ ಸಾಹಿತ್ಯದ ಮೂಲವನ್ನೇಲ್ಲಾ ಜನಪದ ಸಾಹಿತ್ಯದಲ್ಲಿ ಕಾಣಬಹುದು. ಹೀಗಾಗಿ ಬಿ.ಎಂ.ಶ್ರೀರವರು ಜನಪದ ಸಾಹಿತ್ಯವನ್ನು ‘ಜನವಾಣಿ ಬೇರು, ಕವಿವಾಣಿ ಹೂವು’ ಎಂದುಕರೆದಿದ್ದಾರೆ. ಈ ನಾಡಿನ ಶ್ರಮ ಸಂಸ್ಕೃತಿಯ ಪ್ರತೀಕವಾದ ಬುಡಕಟ್ಟು ಸಮುದಾಯಕ್ಕೆ ಸೇರಿದ ಲಂಬಾಣಿಗರು ನಂಬಿಕೆಗೆ ಹೆಸರಾದವರು. ನಂಬಿದವರ ಪಾಲಿನ ಅಂಗರಕ್ಷಕರಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡಾದರೂ, ಮತ್ತೊಬ್ಬರನ್ನು ಕಾಪಾಡುವ ಗುಣವನ್ನು ಹೊಂದಿದವರು. ತಮ್ಮ ಪ್ರಾಮಾಣಿಕತೆಯಿಂದ ಬದುಕುವ ಇವರು ಸಾಹಸಿಗಳು. ಏಕೆಂದರೆ ಇದೊಂದು ಅಖಿಲ ಭಾರತ ವ್ಯಾಪ್ತಿಯ ಅಲೆಮಾರಿ ಗುಂಪು. ಭಾರತದಲ್ಲಿ ಸುಮಾರು ೮೩೦ ಬುಡಕಟ್ಟುಗಳಿವೆ. ಅದರಲ್ಲಿ ಅತೀ ಶ್ರೀಮಂತ ಸಂಸ್ಕೃತಿಯನ್ನು ಉಳಿಸಿಕೊಂಡು ತನ್ನೊಡಲಲ್ಲಿ ಇರಿಸಿಕೊಂಡಿದೆ. ತಮ್ಮದೇ ಆದ ವಿಶಿಷ್ಟ ವರ್ಣರಂಜಿತ ವೇಷ ಭೂಷಣಗಳನ್ನು ಹೊಂದಿ, ನೋಡಿದ ತಕ್ಷಣವೇ ಲಂಬಾಣಿಗರು ಎಂದು ಮನಸೆಳೆಯುವ ವಿಶೇಷತೆಯನ್ನು ಇವರು ಹೊಂದಿದ್ದಾರೆ. ಅವರ ವೈವಿಧ್ಯಮಯ ಜನಪದ ಸಾಹಿತ್ಯವಂತೂ ಯಾರು ಕೃಷಿ ಮಾಡದಕನ್ನೆ ನೆಲ. ಕೈಹಾಕದ ತುಂಬು ಕಣಜ.
ಭಾರತದ ಹಲವಾರು ಬುಡಕಟ್ಟುಗಳು ತಮ್ಮ ಸಮುದಾಯವನ್ನು ಸಂರಕ್ಷಿಸಿದ, ಅನ್ಯರ ದಾಳಿಯಿಂದ ಕಾಪಾಡಿದ, ತಮ್ಮ ಸಂಸ್ಕೃತಿಯ ಅನನ್ಯತೆಯನ್ನು ಸೃಷ್ಟಿಸಿದ ವೀರರು ಮತ್ತು ಸಾಂಸ್ಕೃತಿಕ ನಾಯಕರನ್ನು ದೈವವೆಂದು ಆರಾಧಿಸುವುದನ್ನು ಕಾಣುತ್ತೇವೆ. ಮಂಟೆಸ್ವಾಮಿ, ಕಾಡುಗೊಲ್ಲರ ಯತ್ತಪ್ಪ-ಜುಂಜಪ್ಪ, ಕುರುಬರ ಮೈಲಾರಲಿಂಗ, ಮಲೆಯ ಮಾದೇಶ್ವರ ಮೊದಲಾದವರ ಸಾಲಿಗೆ ಲಂಬಾಣಿ ಬುಡಕಟ್ಟಿನ ಆರಾಧ್ಯದೈವ ಸಂತ ಸೇವಾಲಾಲ್ ಅವರೂ ಸೇರುತ್ತಾರೆ.
ಸೇವಾಲಾಲರು ಒಬ್ಬ ಮಹಾಯೋಗಿ, ಮಹಾಜ್ಞಾನಿ, ವಿಭೂತಿ ಪುರುಷ, ಪವಾಡ ಪುರುಷ, ಕಾಲಜ್ಞಾನಿ, ದಾರ್ಶನಿಕ, ಅರಣ್ಯವಾಸಿಗಳ ಉದ್ಧಾರಕ, ಸಮಾಜ ಸುಧಾರಕ (ಆಯಿವಾಳೊ, ಜೊಡವಾಳೋ, ಝಾಂಡಿವಾಳೋ, ಗೇನೀಬಾಪು, ಬಾವಾಲಾಲ) ಮುಂತಾದ ಗುಣ, ರೂಪಗಳಿಂದ ಬಂಜಾರ (ಲಂಬಾಣಿ) ಸಮುದಾಯದಲ್ಲಿ ವರ್ಣಿಸಲ್ಪಡುತ್ತಾರೆ. ಸೇವಾಲಾಲರು ಅಂದಿನ ಕಾಲದಲ್ಲಿಯೇ ಭಾರತ ದೇಶಾದ್ಯಂತ ಪರ್ಯಟನೆ ಮಾಡಿ ಸಮಾಜ ಸಂಘಟನೆ, ಸಮಾಜ ಸುಧಾರಣೆಯ ಮತ್ತು ಧರ್ಮ ಬೋಧನೆ ಮಾಡುತ್ತ ಅಲೆಮಾರಿ ಜೀವನ ನಡೆಸುತ್ತಿದ್ದ ಬಂಜಾರ ಸಮುದಾಯದವರನ್ನು ಜಾಗೃತಗೊಳಿಸಿದ್ದಾರೆ.
ತೇಜಸ್ವಿ: ಪ್ರೀತಿ, ಜಾತಿ ಇತ್ಯಾದಿ
69 to 93
ತೇಜಸ್ವಿಯವರ ಸಾಹಿತ್ಯ ಕುರಿತು ಒಂದು ನಿಟ್ಟಿನಿಂದ ತಮಾಷೆಯಾಗಿ ಅದರಲ್ಲಿ ಬರುವ ಬೈಗುಳಗಳನ್ನು ಸೀಮಿತ ದೃಷ್ಟಿಕೋನದಿಂದ ನೋಡುವ ಒಂದು ನೋಟ. ಅದರಂತೆ ಅದನ್ನು ತಪ್ಪಾಗಿ ಅರ್ಥೈಸಿಕೊಂಡು ತೇಜಸ್ವಿ ಎಂಬ ಜಾತ್ಯಾತೀತವಾದಿ ನಿಲುವಿನ ವ್ಯಕ್ತಿತ್ವವನ್ನೇ ಜಾತಿವಾದಿ ವ್ಯಕ್ತಿಯಾಗಿ ಒಂದೇ ದೃಷ್ಟಿಕೋನದಿಂದ ಏಕಮುಖಿ ಗ್ರಹಿಕೆಯಲ್ಲಿ ಕಂಡುಕೊಂಡಿರುವುದಕ್ಕೆ ಒಂದು ಪ್ರತಿಕ್ರಿಯಾತ್ಮಕ ವಿವೇಚನೆಯಾಗಿ ಈ ಲೇಖನ ನಿರೂಪಿತವಾಗಿದೆ.
ಉದಾಹರಣೆಗೆ ತೇಜಸ್ವಿಯವರ ಪರಿಸರದ ಕತೆ ಪುಸ್ತಕದಲ್ಲಿನ ಪಾತ್ರ ಕರಿಯಪ್ಪ ಮೇಲು ಜಾತಿಯ ಒಕ್ಕಲಿಗರ ಗೌಡ ಸಮುದಾಯದವನಾದುದರಿಂದ ಕೆಳವರ್ಗವೊಂದರ ಸಮುದಾಯದ ಪಾತ್ರವಾದ ಎಂಗ್ಟನನ್ನು ಬೈಗುಳದಲ್ಲಿ ಕೆಟ್ಟಪದಗಳನ್ನು ಬಳಸಿ ನಿಂದಿಸಿದ್ದಾನೆ; ಇದರಲ್ಲಿ ಹುಟ್ಟಿನ ಜಾತಿಯಿಂದ ಕರಿಯಪ್ಪನನ್ನೇ ಪ್ರತಿನಿಧಿಸುವ ತೇಜಸ್ವಿಯವರ ಒಕ್ಕಲಿಗ ಗೌಡ ಜಾತಿಯ ಅಹಂಮಿಕೆಯೂ ಈ ಹಿನ್ನೆಲೆಯಲ್ಲಿ ಕೆಲಸಮಾಡಿದೆ ಎಂಬ ಭಾವದಲ್ಲಿ ಸಿ. ಜಿ. ಲಕ್ಷ್ಮೀಪತಿ ಅವರು ಇತ್ತೀಚೆಗೆ ಪತ್ರಿಕೆವೊಂದರಲ್ಲಿ ಲೇಖನ ಬರೆದು ಜಾತ್ಯತೀತ ಧೋರಣೆಯ ತೇಜಸ್ವಿಯವರನ್ನು ಇದೇ ಪ್ರಥಮ ಬಾರಿಗೆ ಜಾತಿವಾದಿ ಎಂಬಂತೆ ಬರೆದಿದ್ದಾರೆ. ಹೀಗೆ ಮಾಸ್ತಿ ಮತ್ತು ಬೈರ ಎಂಬ ಪಾತ್ರಗಳನ್ನೂ ಜಾತಿ ಹಿನ್ನೆಲೆಯೊಳಗೆ ತೇಜಸ್ವಿ ಚಿತ್ರಿಸಿದ್ದಾರೆ ಎಂದು ಚಿಂತನೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ನಾನು “ಪ್ರೀತಿವಾದಿ ತೇಜಸ್ವಿ ಯಾವತ್ತೂ ಜಾತಿವಾದಿ ಆಗಿರಲಿಲ್ಲ!” ಎಂದು ಇಲ್ಲಿ ಕೆಲವು ನಿದರ್ಶನಗಳ ಮೂಲಕ ಈ ಲೇಖನದಲ್ಲಿ ವಿವರಿಸಿದ್ದೇನೆ.
ಶಾಸನಗಳಲ್ಲಿ ಯಕ್ಷಿ ಆರಾಧನೆ
94 to 99
ಜೈನರಲ್ಲಿ ಯಕ್ಷಿ ಆರಾಧನೆಯನ್ನು ನೋಡುವುದಾದರೆ ಯಕ್ಷಿ ಪೂಜೆಯನ್ನು ಬೌದ್ಧ ಮತ್ತು ಜೈನಧರ್ಮದಲ್ಲಿ ಅದರಲ್ಲಿಯೂ ಸ್ತ್ರೀಯರಿಗೆ ಅಷ್ಟಾಗಿ ಪ್ರಾಮುಖ್ಯತೆ ಕೊಟ್ಟಿರಲಿಲ್ಲ. ಮೊದಲು ಬೌದ್ಧಧರ್ಮದಲ್ಲಿ ಆರಂಭವಾಗಿ ನಂತರದಲ್ಲಿ ಯಕ್ಷಿ ಆರಾಧನೆಯು ಜೈನಧರ್ಮದ ಪ್ರವೇಶಪಡೆಯಿತು. ಜೈನರಲ್ಲಿ ಆಚಾರ್ಯರಿಗೆ ಇರುವಷ್ಟು ಪ್ರಾಧಾನ್ಯತೆ ಸನ್ಯಾಸಿನಿಯರಿಗಿರಲಿಲ್ಲ. ಕಾಲಾಂತರದಲ್ಲಿ ಬದಲಾವಣೆಗೊಂಡು ಜೈನರಿಗೆ ಶಕ್ತಿ ದೇವತೆಗಳ ಪ್ರವೇಶವು ತಂತ್ರ ರೂಪದಲ್ಲಿ, ಸ್ತ್ರೀ ರೂಪದಲ್ಲಿ ಕಂಡುಬರುತ್ತದೆ. ಜೈನರಲ್ಲಿ ಪದ್ಮಾವತಿ, ಬೌದ್ಧರಲ್ಲಿ ತಾರಾಭಗವತಿ ಪ್ರಮುಖ ಶಕ್ತಿ ದೈವಗಳಾಗಿ ಜನಪ್ರಿಯರಾದರು.
ತೀರ್ಥಂಕರರು ಕೇವಲ ಜ್ಞಾನಿಯಾಗಿರುವ ಮುನ್ನ ಆತ್ಮ ಕಲ್ಯಾಣಕ್ಕಾಗಿ ತಪಸ್ಸಿನಲ್ಲಿ ನಿರತರಾಗಿದ್ದಾಗ ಆಕಸ್ಮಿಕವಾಗಿ ಅನೇಕ ಉಪಸರ್ಗಗಳು ಎದುರಾಗುವುದು ಉಂಟು. ಅದು ಪೂರ್ವಕೃತ ಕರ್ಮದ ಫಲವಾಗಿ ಇರಬಹುದು ಅಥವಾ ಪ್ರಾಕೃತಿಕ ವಿಕೋಪಗಳಿಂದ, ದುಷ್ಟಶಕ್ತಿ, ಪ್ರಾಣಿಗಳಿಂದ ಉಂಟಾಗುವ ತೊಂದರೆ ಇರಬಹುದು. ಆ ಉಪಸರ್ಗಗಳನ್ನು ಯಕ್ಷ ಯಕ್ಷಿಯರು ನಿವಾರಿಸಿ ಮೋಕ್ಷದ ಹಾದಿಯತ್ತ ಸುಗಮವಾಗಿ ಸಾಗಲು ಅನುವು ಮಾಡಿಕೊಡುವರು. ಇಪ್ಪತ್ತನಾಲ್ಕು ಜನ ತೀರ್ಥಂಕರರಿಗೂ ಮೂರ್ತಿಯ ಬಲಭಾಗದಲ್ಲಿ ಯಕ್ಷನು ಎಡಭಾಗದಲ್ಲಿ ಯಕ್ಷಿಯೂ ಇರುತ್ತಾರೆ. ತೀರ್ಥಂಕರರ ಜೊತೆಯಲ್ಲಿಯೇ ಇವರೂ ಸಹ ದೇವತಾ ಸ್ಥಾನವನ್ನು ಪಡೆದುಕೊಂಡಿದ್ದು, ಪೂಜೆಗೆ ಅರ್ಹರಾಗಿ ಯಕ್ಷಿಯರು ಜೈನರಲ್ಲಿ ಪೂಜೆಗೊಳ್ಳುತ್ತಾರೆ.
Mrudghatanam -Ecofriendly Fridge
100 to 107
Refrigeration is the process of creating cooling conditions by removing heat. It is mostly used to preserve food and other perishable items, preventing food borne illnesses. It works because bacteria growth is slowed at lower temperatures. In modern times, before the invention of the modern electric refrigerator, icehouses and iceboxes were used to provide cool storage for most of the year. In Indus Valley Civilization and are considered to have been used for cooling as well as storing water. The pots are similar to the present-day Ghara and Matki used in India and Pakistan. We have selected Amravati district in Maharashtra state to make this Mrudghatanam -Ecofriendly Fridge.
Book Review
ಕನ್ನಡ ಕಾವ್ಯಕ್ಕೆ ಬಂಜಗೆರೆ ಜಯಪ್ರಕಾಶರವರ ಕೊಡುಗೆ
108 to 114
ಬಂಜಗೆರೆ ಜಯಪ್ರಕಾಶರವರು ಕರ್ನಾಟಕದ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರೇ ಹೇಳಿದಾಗೆ ಬಿ.ಎ. ತರಗತಿಯಿಂದಲೇ ಕಾವ್ಯ ಕ್ವೇತ್ರದಲ್ಲಿ ಕಾವ್ಯಾಸಕ್ತಿ ಬೆಳೆಸಿಕೊಂಡವರು. ತಾವು ಕವಿತೆ ಬರೆಯುತ್ತ ಇನ್ನೊಬ್ಬರನ್ನು ಬರೆಯುವುದಕ್ಕೆ ಪ್ರೇರಣೆ ನೀಡಿದ ಕವಿ. ಕನ್ನಡ ಸಾಹಿತ್ಯದ ಸಾರಸ್ವತ ಲೋಕದಲ್ಲಿ ಅನೇಕ ಕವಿಗಳು ಆಯಾ ಕಾಲಘಟ್ಟದಲ್ಲಿ ಕಾವ್ಯಗಳ ಮೂಲಕ ಹೆಸರುವಾಸಿಯಾಗಿದ್ದರೆ. ಎಪ್ಪತ್ತರ ದಶಕದ ಕಾಲಘಟ್ಟದ ವಸ್ತುವಿನ ನಿರ್ಮಾಣದಲ್ಲಿ ಸ್ವತಂತ್ರವಾದ ಚಿಂತನೆಗಳು ವಾಸ್ತವ ನೆಲೆಯಲ್ಲಿ ಜೀವಧ್ವನಿಯಾಗಿ ಮಿಡಿದಿರುವುದು ಕಾಣುತ್ತೇವೆ. ಈ ಮಿಡಿಯುವಿಕೆಯಲ್ಲಿ ಸಾಮಾಜಿಕ ನ್ಯಾಯದ ಭಾವನೆಗಳನ್ನು ಹೊರಹಾಕಲು ಪರಿಪಕ್ವತೆಯ ಕಾಲವೆಂದು ಗಮನಿಸುವ ಅಗತ್ಯತೆಯಿದೆ. ಒಬ್ಬ ಕವಿ ಅಥವಾ ಲೇಖಕ ತನ್ನ ಬದುಕಿನ ಮೈಲುಗಲ್ಲುಗಳನ್ನು ದಾಟಬೇಕಾದರೆ ಆತನಿಗೆ ತಾನು ತಲುಪಬೇಕಾದ ಮಾರ್ಗದ ಕಡೆ ಪ್ರಯಾಣಿಸುವ ಕಾರ್ಯದಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿರುತ್ತಾನೆ. ಈ ಹಿನ್ನೆಲೆಯಲ್ಲಿ ಬಂಜಗೆರೆ ಜಯಪ್ರಕಾಶರವರು ದಲಿತ-ಬಂಡಾಯ ಸಾಹಿತ್ಯ ಘಟ್ಟದ, ಅದಕ್ಕೆ ಸ್ಪಂದಿಸುವ ನೆಲೆಯಲ್ಲಿ ತಮ್ಮದೆಯಾದ ವಿಚಾರಗಳ ಮೂಲಕ ಬೆಳಕು ಚೆಲ್ಲಿದ್ದಾರೆ. ಸೂಕ್ಷ್ಮ ಸಂವೇದನೆ ಮತ್ತು ರೂಪಕ ಸಂಕೇತಗಳ ಮೂಲಕ ಮಾತನಾಡಬಲ್ಲ ವೈಚಾರಿಕ ಕವಿಗಳ ಸಾಲಿನಲ್ಲಿ, ಬಂಜಗೆರೆ ಜಯಪ್ರಕಾಶರು ಪ್ರಮುಖರಾಗಿ ಕಾಣುತ್ತಾರೆ. ಇವರ ಕಾವ್ಯಗಳು ದಲಿತ ಅಥವಾ ಜನಸಾಮಾನ್ಯರ ನೋವು, ಬಡತನ, ಹಸಿವು, ಶೋಷಣೆ, ಕ್ಷಾಮ, ಬರಗಾಲ, ಮೋಸ, ವಂಚನೆ, ಪರ್ಯಾಯ ವಿಚಾರಗಳು ಜನಸಾಮಾನ್ಯರಿಗೆ ಹತ್ತಿರವಾಗುವ ಧ್ವನಿಯ ಮೂಲಕ ಎಳೆ ಎಳೆಯಾಗಿ ಬಿಚ್ಚಿಡುವ ಸಂದರ್ಭ, ಬಳಸುವ ಶೈಲಿ, ನಿರೂಪಣ ಕ್ರಮ, ವಸ್ತು ಆಯ್ಕೆಯ ವಿಧಾನ, ತಂತ್ರಗಾರಿಕೆ ವಿಶಿಷ್ಟತೆಯಿಂದ ಕೂಡಿದ್ದಾಗಿದೆ. ಅಂತೆಯೇ ಸಂಕೀರ್ಣತೆಯ ಅನೇಕ ಸಂಗತಿಗಳನ್ನು ಸಹೃದಯರಿಗೆ ನೀಡುವ ಕುಶಲತೆ ಎದ್ದು ಕಾಣುತ್ತದೆ.
Essay
ಕುವೆಂಪು ಅವರ ವೈಚಾರಿಕತೆ
115 to 125
ಕನ್ನಡ ಸಾಹಿತ್ಯ ಸಂದರ್ಭದಲ್ಲಿ ‘ಕುವೆಂಪು’ ಎನ್ನುವ ಹೆಸರೇ ಒಂದು ವಿಶಿಷ್ಟವಾದ ಕಂಪನ್ನ, ಸೊಂಪನ್ನ ಒಳಗೊಂಡಿದೆ. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಕೃಷಿ ಮಾಡಿರುವ ಇವರು ಸೀಮಾಪುರುಪರೆನಿಸಿಕೊಂಡಿದ್ದಾರೆ. ಮುಖ್ಯವಾಗಿ ಅವರ ವೈಚಾರಿಕ ನಿಲುವು ವೈಜ್ಞಾನಿಕ ದೃಷ್ಟಿಯಿಂದ ಪ್ರೇರಿತವಾದದ್ದು. ವೈಚಾರಿಕತೆ ಎಂಬುದು ಬುದ್ಧಿ ಮತ್ತು ಭಾವಗಳ ವಿದ್ಯುದಾಲಿಂಗನ. ಸೂಕ್ಷ್ಮವಾದ ವಿವೇಚನಾಶಕ್ತಿ, ಆಲೋಚನಾಶಕ್ತಿಗಳ ಅಭಿವ್ಯಕ್ತಿಯ ಸಂಗಮ. ವಿವೇಕಪೂರ್ಣವಾದ ವಿವೇಚನೆಯೇ ವೈಚಾರಿಕತೆಯ ತಳಹದಿಯಾಗಿದೆ. ವೈಚಾರಿಕತೆ ಎಂಬುದು ಮೂಲಭೂತ ಮೌಲ್ಯಗಳನ್ನು ನಿರಾಕರಿಸಬಾರದು. ಸತ್ಯವನ್ನು ಶೋಧಿಸುವಾಗ ಭೌತಿಕವಾಗಿ ಕಣ್ಣಿಗೆ ಕಾಣುವ ವಸ್ತುವಿನ ವೈಜ್ಞಾನಿಕ ದೃಷ್ಟಿಯೊಂದೆ ನಿಜವಾಗಲಾರದು. ಅದರ ಜೊತೆಗೆ ಆ ವಸ್ತುವಿನ ಅಂತರಾಳದ ಚೈತನ್ಯಾತ್ಮಕ ಭಾವಲಹರಿಯು ಕೂಡ ಮುಖ್ಯವಾಗುತ್ತದೆ. ಇದನ್ನು ಹಿನ್ನೆಲೆಯಾಗಿಟ್ಟುಕೊಂಡು ಕುವೆಂಪು ವೈಚಾರಿಕ ಪ್ರಜ್ಞೆಯ ಆಶಯವನ್ನು ನಾಡು, ನುಡಿ, ಸಮಾಜ, ವೃತ್ತಿ, ದೇವರು, ಧರ್ಮ ಮೊದಲಾದ ಚಿಂತನೆಗಳ ಮೂಲಕ ತಿಳಿಯಬೇಕಾಗುತ್ತದೆ.
ದೇಸಿ ಸಾಹಿತ್ಯ ಸಂಪಾದನೆಯಲ್ಲಿ ವೈ.ಸಿ. ಭಾನುಮತಿ ಅವರ ಹೆಜ್ಜೆ ಗುರುತು
126 to 131
ವೈ.ಸಿ. ಭಾನುಮತಿ ಅವರು ಹಸ್ತಪ್ರತಿ ಗ್ರಂಥ ಸಂಪಾದನಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಇವರ ಕೃತಿಗಳ ಮೂಲಕ ಅವಲೋಕಿಸಲಾಗಿದೆ. ಹಸ್ತಪ್ರತಿ ಹಾಗೂ ಗ್ರಂಥ ಸಂಪಾದನಾ ಕ್ಷೇತ್ರವು ಶ್ರಮದಾಯಕವಾಗಿರುವಂತಹದ್ದು, ಈ ಶ್ರಮದಾಯಕ ಕ್ಷೇತ್ರವನ್ನು ವೃತ್ತಿಯಾಗಿ ಸ್ವೀಕರಿಸಿ, ಅನೇಕ ಗ್ರಂಥ ಸಂಪಾದಕ ವಿದ್ವಾಂಸರ ಹಾದಿಯಲ್ಲಿ ವೈ.ಸಿ. ಭಾನುಮತಿಯವರು ಸಹ ಪ್ರಮುಖರಾಗಿರುತ್ತಾರೆ. ಭಾನುಮತಿ ಅವರು ಇದುವರೆಗೂ ಹಲವಾರು ಪ್ರಾಚೀನ ಹಳೆಗನ್ನಡ ಕೃತಿಗಳನ್ನು ಸಂಪಾದಿಸಿ, ಪರಿಷ್ಕರಿಸಿ ಪ್ರಕಟಿಸಿದ್ದಾರೆ. ಇವರ ಕೃತಿಗಳನ್ನು ಮಾರ್ಗ-ದೇಶಿ-ಮೌಖಿಕ ಎಂದು ವಿಭಾಗಿಸಿಕೊಂಡು ಆಯ್ದ ಕೆಲವು ಕೃತಿಗಳ ಸಂಪಾದನೆ, ವೈಧಾನಿಕತೆಯ ಕುರಿತು ಪ್ರಸ್ತುತ ಬರಹದಲ್ಲಿ ನೀಡಲಾಗಿದೆ. ಇವರ ಮಾರ್ಗ-ದೇಶಿ ಕೃತಿಗಳ ಸಂಪಾದನೆಯಲ್ಲಿ ಕನ್ನಡನಾಡಿನ ಚರಿತ್ರೆ ತಿಳಿಯುವಂತಹ ಚಾರಿತ್ರಿಕ ಅಂಶಗಳು, ಸಾಮಾಜಿಕ, ಆರ್ಥಿಕ ಮತ್ತು ಕೃತಿಗೆ ಸಂಬಂಧಿಸಿದ ಪೂರಕ ಸಾಹಿತ್ಯವನ್ನು ಅನುಬಂಧದಲ್ಲಿ ದಾಖಲಿಸಿರುವುದು, ಭಾನುಮತಿ ಅವರ ಸಂಪಾದನೆಯ ವೈಶಿಷ್ಟವಾಗಿದೆ. ಇದರಿಂದ ಓದುಗರಿಗೆ ವೈ.ಸಿ. ಭಾನುಮತಿ ಅವರು ಗ್ರಂಥ ಸಂಪಾದನಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯು ಇವರ ಸಂಪಾದಿತ ಕೃತಿಗಳಿಂದ ಸಂದ ಪ್ರಶಸ್ತಿಗಳಿಂದ ಇವರ ಸಂಪಾದನೆಯ ಮಹತ್ವ ತಿಳಿಯುತ್ತದೆ.
ಮಹಿಳಾ ವಿಮೋಚನೆ: ವಿವಿಧ ಆಯಾಮಗಳು
132 to 141
ಮನುಷ್ಯ ಮನುಷ್ಯನ ನಡುವಿನ ಅಸಮಾನತೆಯ ಪ್ರಶ್ನೆಯಲ್ಲಿ ಲಿಂಗಾಧರಿತ ಅಸಮಾನತೆ ಅತ್ಯಂತ ಸಂಕೀರ್ಣವಾದುದು ಮತ್ತು ಸೂಕ್ಷ್ಮವಾದುದು. ಹೆಣ್ಣಿನ ದಮನವು ಸಾಮಾಜಿಕ ಹಾಗೂ ಕೌಟುಂಬಿಕ ನೆಲೆಯೆರಡರಲ್ಲೂ ನಡೆಯುವುದರಿಂದ ಶೋಷಕ ವರ್ಗವನ್ನು ಪ್ರತ್ಯೇಕವಾಗಿ ಗುರುತಿಸುವುದು ಅಸಾಧ್ಯ. ಹೆಣ್ಣಿನ ದಮನದ ವಿಚಾರ ಬಹಳ ಸೂಕ್ಷ್ಮವಾದದ್ದು, ಹಾಗಾಗಿ ಲಿಂಗ ತಾರತಮ್ಯದ ಎಲ್ಲ ಹೋರಾಟ ಅಥವಾ ಹೆಣ್ಣಿನ ಬಿಡುಗಡೆಯ ಚರ್ಚೆಯನ್ನು ಕುಟುಂಬದ ನೆಲೆಯಿಂದಲೇ ಪ್ರಾರಂಭಿಸಬೇಕಾಗುತ್ತದೆ. ಅಲ್ಲದೇ ಈ ಹೋರಾಟವನ್ನು ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಹೀಗೆ ಬಹು ಆಯಾಮಗಳಲ್ಲಿ ನಡೆಸಬೇಕಾಗುತ್ತದೆ. ಲಿಂಗ ತಾರತಮ್ಯದ ವ್ಯವಸ್ಥೆಯನ್ನು ಭಂಜನಗೊಳಿಸುವ ಪ್ರಕ್ರಿಯೆಯೇ ಮಹಿಳಾ ವಿಮೋಚನೆ. ಇಂತಹ ಆಶಯದಲ್ಲಿ ಕಟ್ಟುವ ಎಲ್ಲಾ ಚಟುವಟಿಕೆಗಳನ್ನು ವಾಸ್ತವವಾಗಿ ಮಹಿಳಾ ವಿಮೋಚನಾ ಚಳುವಳಿಯಾಗಿಯೇ ಗ್ರಹಿಸಬಹುದು. ಮಹಿಳಾ ವಿಮೋಚನಾ ಹೋರಾಟ ಹೊರ ಜಗತ್ತಿನೊಡನೆ ನಡೆಸುವ ಹೋರಾಟವಷ್ಟೇ ಅಲ್ಲ ಹೆಣ್ಣಿನ ಅಂತಸತ್ವದ ಒಳಲೋಕವನ್ನು ಕಟ್ಟುವ ಹೋರಾಟವು ಆಗಬೇಕು. ಮಹಿಳಾ ವಿಮೋಚನಾ ಚಳುವಳಿಯ ಹೋರಾಟಕ್ಕೆ ಗುರಿಯ ಸ್ಪಷ್ಟತೆ ಹಾಗೂ ದಾರಿಯ ಖಚಿತತೆ ಎರಡೂ ಬಹಳ ಮುಖ್ಯವಾದುದು. ಇಲ್ಲದೇ ಹೋದರೆ ನಾವು ಸಮಾಜದಲ್ಲಿ ಇನ್ನಷ್ಟು ಗದ್ದಲ, ಗೊಂದಲವನ್ನಷ್ಟೇ ಸೃಷ್ಟಿಸಿದಂತಾಗುತ್ತದೆ. ಈ ಲೇಖನದಲ್ಲಿ ಇದರ ಸುತ್ತ ಚರ್ಚಿಸಲಾಗಿದೆ.
ಸದಾಶಿವರಾಯನ ಕಾರ್ಯಕರ್ತ: (ಅಳಿಯ) ರಾಮರಾಜಯ್ಯ
142 to 148
ವಿಜಯನಗರ ಸಾಮ್ರಾಜ್ಯ ಜಗದ್ವಿಖ್ಯಾತಗೊಂಡದ್ದು ಮೊದಲು ಸಂಗಮ ಅರಸ ಪ್ರೌಢದೇವರಾಯನ ಕಾಲದಲ್ಲಿ ನಂತರ ಮತ್ತೆ ಅದು ಉಚ್ಛ್ರಾಯಸ್ಥಿತಿ ತಲುಪಿದ್ದು ಶ್ರೀಕೃಷ್ಣ ದೇವರಾಯನ ಕಾಲದಲ್ಲಿ ಎಂಬುದು ಅನೇಕ ಶಾಸನಗಳು ವಿದೇಶಿ ಪ್ರವಾಸಿಗರ ಬರವಣಿಗೆಗಳಿಂದ ತಿಳಿದು ಬರುತ್ತದೆ. ಇದಕ್ಕೆ ಕಾರಣ ಆ ಅರಸರು ನೇಮಿಸಿಕೊಂಡಿದ್ದ ಮಂತ್ರಿಗಳು ಮತ್ತು ಸೇನಾ ದಂಡನಾಯಕರು ಎಂದು ತಿಳಿದು ಬರುತ್ತದೆ. ಒಂದು ಸಾಮ್ರಾಜ್ಯ ಉನ್ನತಿ ಮತ್ತು ಅವನತಿ ಕಾಣಲು ಆ ಸಾಮ್ರಾಜ್ಯದ ಸೇನೆಯ ಮುಂದಾಳತ್ವವಹಿಸುವ ದಂಡಾನಾಯಕರನ್ನು ಅವಲಂಬಿಸಿದೆ. ಅಂಥ ಸೇನಾದಂಡನಾಯಕರಲ್ಲಿ ಅಳಿಯ ರಾಮರಾಯನೂ ಒಬ್ಬ. ಈತನನ್ನು ಅಖಂಡ ಬಳ್ಳಾರಿ ಜಿಲ್ಲೆಯ ಶಾಸನಗಳು ಅಳಿಯ ರಾಮರಾಜಯ್ಯ, ಅಳಿಯ ರಾಮರಾಜ ಅರಸು, ರಾಮರಾಜ ಮಹಾಅರಸು ಎಂದು ಕರೆದಿವೆ. ಶಾಸನಗಳಲ್ಲಿ ಬರುವ ಅಳಿಯ ರಾಮರಾಜ ಮತ್ತು ರಾಮರಾಜ ಮಹಾಅರಸು ಇಬ್ಬರೂ ಒಬ್ಬನೇ ಎಂದು ಪ್ರಸ್ತುತ ಸಂಶೋಧನಾ ಲೇಖನದಲ್ಲಿ ಕಂಡುಕೊಳ್ಳಲಾಗಿದೆ.