ಅಕ್ಕಮಹಾದೇವಿಯ ವಚನಗಳು: ಕಾವ್ಯಸೌಂದರ್ಯ ತತ್ವ ಚಿಂತನೆ

Main Article Content

ಮಲ್ಲಯ್ಯ ಸಂಡೂರು

Abstract

ಶಿವಶರಣೆ ಅಕ್ಕಮಹಾದೇವಿಯ ವಚನಗಳನ್ನು ಕೇವಲ ತತ್ತ್ವದ ನೆಲೆಯಲ್ಲಿ ನೋಡದೆ, ಕಾವ್ಯಸೌಂದರ್ಯದ ದೃಷ್ಟಿಯಿಂದ ಇಲ್ಲಿ ವಿಶ್ಲೇಷಿಸಲಾಗಿದೆ. ವಚನಗಳು ಗದ್ಯ ಮತ್ತು ಪದ್ಯಗಳ ಸಮ್ಮಿಲನವಾಗಿದ್ದು, ಅವುಗಳಲ್ಲಿ ಭಾವತೀವ್ರತೆ, ಲಯಬದ್ಧತೆ ಮತ್ತು ರಸಾನುಭವ ಅಡಗಿದೆ ಎಂದು ಪ್ರತಿಪಾದಿಸಲಾಗಿದೆ. ಅಕ್ಕನ ವಚನಗಳಲ್ಲಿ ಕಂಡುಬರುವ ವಿಶಿಷ್ಟ ಉಪಮೆ, ರೂಪಕ ಮತ್ತು ದೃಷ್ಟಾಂತಗಳು (ಉದಾಹರಣೆಗೆ ರೇಷ್ಮೆ ಹುಳು, ಅಗಸ, ಬಾರೆಯ ಮುಳ್ಳು) ಅನುಭಾವದ ಆಳವನ್ನು ಮತ್ತು ಲೌಕಿಕ ಜಗತ್ತಿನ ನಶ್ವರತೆಯನ್ನು ಎಷ್ಟು ಪರಿಣಾಮಕಾರಿಯಾಗಿ ವ್ಯಕ್ತಪಡಿಸುತ್ತವೆ ಎಂಬುದನ್ನು ಚರ್ಚಿಸಲಾಗಿದೆ. ಚೆನ್ನಮಲ್ಲಿಕಾರ್ಜುನನೊಂದಿಗಿನ ಆಧ್ಯಾತ್ಮಿಕ ದಾಂಪತ್ಯ, ವಿರಹದ ತೀವ್ರತೆ ಮತ್ತು ಶರಣ ಸತಿ ಲಿಂಗ ಪತಿ ಭಾವವನ್ನು ವಿವರಿಸುತ್ತಾ, ಅಕ್ಕನ ಭಾಷಾ ಶೈಲಿ, ಸಂಕ್ಷಿಪ್ತತೆ (ಸೂತ್ರಬದ್ಧತೆ) ಮತ್ತು ಅಭಿವ್ಯಕ್ತಿ ಕ್ರಮವು ಕನ್ನಡ ಸಾಹಿತ್ಯದಲ್ಲಿ ಮತ್ತು ವಚನ ಸಾಹಿತ್ಯದಲ್ಲಿ ಹೇಗೆ ವಿಶಿಷ್ಟ ಹಾಗೂ ಶ್ರೇಷ್ಠ ಸ್ಥಾನವನ್ನು ಪಡೆದಿದೆ ಎಂಬುದನ್ನು ಲೇಖನವು ನಿರೂಪಿಸುತ್ತದೆ.

Article Details

Section

Research Articles

Author Biography

ಮಲ್ಲಯ್ಯ ಸಂಡೂರು

ಅಧ್ಯಾಪಕರು, ಕನ್ನಡ ಅಧ್ಯಯನ ವಿಭಾಗ, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಸ್ನಾತಕೋತ್ತರ ಕೇಂದ್ರ, ಜ್ಞಾನ ಸರೋವರ, ನಂದಿಹಳ್ಳಿ, ಸಂಡೂರು.

References

ಪ್ರೊ. ಶಿ. ಶಿ. ಬಸವನಾಳ (ಸಂ.): ಬಸವಣ್ಣನವರ ಷಟ್ ಸ್ಥಲದ ವಚನಗಳು.

ಪ್ರೊ. ಬಿ. ಸಿ. ಜವಳಿ ಮತ್ತು ಮಲ್ಲಾಬಾದಿ ವೀರಭದ್ರಪ್ಪ (ಸಂ.): ಉಡುತಡಿಯ ಮಹಾದೇವಿಯಕ್ಕನವರ ಸಾಹಿತ್ಯ.

ಡಾ. ಆರ್. ಸಿ. ಹಿರೇಮಠ (ಸಂ.): ಚೆನ್ನಬಸವಣ್ಣನವರ ವಚನಗಳು.

ಡಾ. ಆರ್. ಸಿ. ಹಿರೇಮಠ (ಸಂ.): ಶಿವಶರಣೆಯರ ವಚನಗಳು.

ಡಾ. ಆರ್. ಸಿ. ಹಿರೇಮಠ (ಸಂ.): ಮಹಾದೇವಿಯಕ್ಕನ ವಚನಗಳು.

ಫ.ಗು. ಹಳಕಟ್ಟಿ: ಶಿವಶರಣೆಯರ ಚರಿತ್ರೆಗಳು.

ಫ.ಗು. ಹಳಕಟ್ಟಿ: ಶಿವಶರಣೆಯರ ಚರಿತ್ರೆಗಳು ಭಾಗ-1, ಭಾಗ-3.

ಡಾ. ಎಲ್. ಬಸವರಾಜು (ಸಂ.): ಅಲ್ಲಮನ ವಚನ ಚಂದ್ರಿಕೆ.

ಡಾ. ಎಲ್. ಬಸವರಾಜು (ಸಂ.): ಅಕ್ಕನ ವಚನಗಳು.

ಚೆನ್ನಪ್ಪ ಉತ್ತಂಗಿ ಮತ್ತು ಎಸ್.ಎಸ್. ಭೂಸನೂರಮಠ (ಸಂ.): ಮೋಳಿಗಿ ಮಾರಯ್ಯ ಮತ್ತು ರಾಣಿಮಹಾದೇವಿಯವರ ವಚನಗಳು.

ಡಾ. ಪಿ. ವಿ. ನಾರಾಯಣ: ವಚನ ಚಳುವಳಿ ಮತ್ತು ಮಹಿಳೆ.