ಸಾಮಾಜಿಕ ಚಿಕಿತ್ಸಕ ಪ್ರವೃತ್ತಿಯವರು ದಾಸ ಸಾಹಿತಿಗಳು

Authors

  • Syed Muen

Abstract

ದಾಸರು ಭಕ್ತಿ ಪಂಥದ ಜತೆಗೆ ಸಾಮಾಜಿಕ ಕಳಕಳಿ ಹೊಂದಿದ್ದರು, ಅಂದಿನ ಸಮಾಜದಲ್ಲಿನ ಅನಿಷ್ಟ ಪದ್ಧತಿಗಳನ್ನು ದಾಸರು ವಿರೋಧಿಸಿದರು, ಅಸ್ಪೃಶ್ಯತೆ, ಜಾತಿ ತಾರತಮ್ಯದ ವಿರುದ್ಧ ದನಿ ಎತ್ತಿದ್ದರು, ದಾಸ ಸಾಹಿತ್ಯವು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳ್ಳದೆ ಎಲ್ಲಾ ಸಮುದಾಯದವರನ್ನು ಹೊಂದಿರುವದು ಸಮಂಜಸವೇ ಆಗಿದೆ. ದಾಸರ ಈ ಕೀರ್ತನೆಗಳು ಸಮಾಜಕ್ಕೆ ಸಂಜೀವಿನಿಯಾಗಿ ಕಾರ್ಯನಿರ್ವಹಿಸುತ್ತಿವೆ ಸಾಹಿತ್ಯ, ಧಾರ್ಮಿಕ ಚಿಂತನೆ, ಭಕ್ತಿಯ ರಸಾಮೃತ ಮತ್ತು ಸಮಾನತೆ ತತ್ವಗಳನ್ನು ಬೋಧಿಸುವುದು ಅಂದಿಗೆ ಮಾತ್ರ ಸೀಮಿತವಾಗಿರದೆ ಅದು ಸಾರ್ವಕಾಲಿಕವಾಗಿದೆ. ಹೀಗಾಗಿ ಅವುಗಳನ್ನು ನಮ್ಮ ಜೀವನದ ಆದರ್ಶಗಳನ್ನಾಗಿ ಸ್ವೀಕರಿಸಬೇಕು.ಸಮಾಜದಲ್ಲಿನ ಕಂದಾಚಾರ, ಅಸಮಾನತೆ, ಭೇಧಭಾವ ಹಾಗೂ ಅಂಕುಡೊಂಕುಗಳನ್ನು ಸಾಹಿತ್ಯದ ಮೂಲಕ ಅಂಧಕಾರವನ್ನು ಓಡಿಸಲು ಪ್ರಯತ್ನಗಳೂ ಆಗಿವೆ.

Downloads

Published

05.02.2023

How to Cite

Syed Muen. (2023). ಸಾಮಾಜಿಕ ಚಿಕಿತ್ಸಕ ಪ್ರವೃತ್ತಿಯವರು ದಾಸ ಸಾಹಿತಿಗಳು. AKSHARASURYA, 2(02), 37 to 39. Retrieved from https://aksharasurya.com/index.php/latest/article/view/51

Issue

Section

Article