ಕೃಷ್ಣಪ್ರಜ್ಞೆಯ ರೂಪಕವಾಗಿ ʼಭಾಂಡೀರ ದರ್ಶನʼ
Main Article Content
Abstract
ಕನ್ನಡದಲ್ಲಿ ಮಹಾಕಾವ್ಯಗಳ ಬಹು ದೊಡ್ಡ ಪರಂಪರೆಯೇ ಇದೆ. ಇದು ಪ್ರಧಾನವಾಗಿ ಶಿಷ್ಟ ಮತ್ತು ಜನಪದ ಎರಡೂ ಧಾರೆಗಳಲ್ಲಿ ಹರಿದು ಬಂದಿದೆ. ಶಿಷ್ಟ ಪರಂಪರೆಯಲ್ಲಿ ಲಿಖಿತವಾಗಿ ಮತ್ತು ಜನಪದ ಪರಂಪರೆಯಲ್ಲಿ ಮೌಖಿಕವಾಗಿ ಅಂದಿನಿಂದ ಇಂದಿನವರೆಗೂ ಅವಿಚ್ಛಿನ್ನವಾಗಿ ಸಾಗಿ ಬರುತ್ತಿದೆ. ಪಂಪನಿಂದ ಷಡಕ್ಷರಿಯವರೆಗೆ, ಮುಂದುವರಿದು ಮುದ್ದಣ್ಣನವರೆಗೆ, ಮತ್ತೂ ಮುಂದುವರಿದು ಕುವೆಂಪು - ಗೋಕಾಕ್ - ಪುತಿನ ಮೊದಲಾದವರವರೆಗೂ ಮಹಾಕಾವ್ಯಗಳ ಹರಹಿದೆ. ಕವಿಯ ಮನೋಧರ್ಮ ಮತ್ತು ಪ್ರತಿಭೆಗಳು ಅವಿನಾಭಾವದಿಂದ ಸೇರಿದರೆ ಕಾಲ-ದೇಶಗಳ ನಿಯತ ನಿಯಮಗಳಾಚೆಗೂ ಮಹಾಕಾವ್ಯಗಳನ್ನು ಸೃಜಿಸಬಲ್ಲವು ಎಂಬುದಕ್ಕೆ ನಮ್ಮ ಆಧುನಿಕ ಕನ್ನಡ ಮಹಾಕಾವ್ಯಗಳು ಅತ್ಯುತ್ತಮ ನಿದರ್ಶನಗಳಾಗಿವೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಲೇಖನ ಪುತಿನರವರ “ಶ್ರೀಹರಿಚರಿತೆ” ಮಹಾಕಾವ್ಯದ ʼಭಾಂಡೀರ ದರ್ಶನʼ ಉಲ್ಲಾಸವನ್ನು ಅಭ್ಯಸಿಸುವ ಪ್ರಯತ್ನ ಮಾಡುತ್ತದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ನರಸಿಂಹಾಚಾರ್ ಪು.ತಿ., (2014), ಶ್ರೀಹರಿಚರಿತೆ, ಬೆಂಗಳೂರು: ಪು.ತಿ.ನ. ಟ್ರಸ್ಟ್.
ಶಾಂತಕುಮಾರಿ ಎಲ್.ವಿ., (2016), ಶ್ರೀಹರಿಚರಿತೆ ಪು.ತಿ.ನ. ರಸದರ್ಶನ, ಬೆಂಗಳೂರು: ಪು.ತಿ.ನ. ಟ್ರಸ್ಟ್.
ನರಸಿಂಹಾಚಾರ್ ಪು.ತಿ., (1999), ಕಾವ್ಯಕುತೂಹಲ, ಮೈಸೂರು: ಡಿ.ವಿ.ಕೆ.ಮೂರ್ತಿ.
ಶಿವರುದ್ರಪ್ಪ ಜಿ.ಎಸ್., (1997), ಮಹಾಕಾವ್ಯ ಸ್ವರೂಪ, ಧಾರವಾಡ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ.
ಮುಗಳಿ ರಂ.ಶ್ರೀ., (1988), ಮಹಾಕೃತಿ, ಮೈಸೂರು: ಸಹ್ಯಾದ್ರಿ ಪ್ರಕಾಶನ.