ಹಾವೇರಿ ಪ್ರದೇಶದ ಕೆರೆಗಳ ನಿರ್ಮಾಣದ ಕ್ರಮಗಳು
Main Article Content
Abstract
ದಕ್ಷಿಣ ಭಾರತವನ್ನು ಒಳಗೊಂಡ ಕರ್ನಾಟಕದ ಭಾಗದ ಭೂ ಪ್ರದೇಶವನ್ನು ಆಳ್ವಿಕೆ ಮಾಡಿರುವಂತೆ ಹಾವೇರಿ ಪ್ರದೇಶದ ವ್ಯಾಪ್ತಿಗೆ ಒಳಪಟ್ಟು ಆಳ್ವಿಕೆ ಮಾಡಿದ ರಾಜಮನೆತನಗಳಾದ ಕದಂಬರು, ಬಾದಾಮಿ ಚಾಲುಕ್ಯರು, ಗಂಗರು, ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ವಿಜಯನಗರ ಅರಸರು ಹಾಗೂ ಅನೇಕ ಸ್ಥಳೀಯ ಮಾಂಡಲಿಕರು ತಮ್ಮದೇ ಆದ ಆಡಳಿತದ ಮಾರ್ಪಾಡುಗಳನ್ನು ಮಾಡಿಕೊಂಡು ಆಡಳಿತ ಮಾಡಿದ್ದಾರೆ. ಇವುಗಳು ಇತಿಹಾಸ ಪುಟದಿಂದ ಹಿಂದೆ ಸರಿದಿವೆ. ಆದರೆ ಆ ಕಾಲದಲ್ಲಿ ರಾಜ ಮಹಾರಾಜರು, ರಾಣಿಯರು, ಮಂತ್ರಿಗಳು, ದಂಡನಾಯಕರು, ಶ್ರೀಮಂತ ವರ್ಗದವರು ಹಾಗೂ ಜನಸಾಮಾನ್ಯರು ಸಮಾಜದ ಹಿತಕ್ಕಾಗಿ ಮಾಡಿದಂತಹ ಕೆಲಸ ಕಾರ್ಯಗಳ ಕುರುಹುಗಳಾಗಿ ಇಂದಿಗೂ ನಮ್ಮ ನಾಡಿನಲ್ಲಿ ಅಳಿದುಳಿದಿರುವಂತಹ ಕುರುಹುಗಳಾಗಿ ಲಭ್ಯವಾಗುತ್ತವೆ. ಇವುಗಳೆಂದರೆ ಶಾಸನಗಳು, ನಾಣ್ಯಗಳು, ದೇವಾಲಯಗಳು ಮತ್ತು ಸಾರ್ವಜನಿಕ ಕಟ್ಟಡಗಳು ರಕ್ಷಣೆಗಾಗಿ ನಿರ್ಮಾಣ ಮಾಡಿದಂತಹ ಕೋಟೆ ಕೊತ್ತಲಗಳು ಅದರಲ್ಲಿಯೂ ಪ್ರಮುಖವಾಗಿ ಕೆರೆ ಕಟ್ಟೆಗಳನ್ನು ನಿರ್ಮಾಣ ಮಾಡಿರುವುದನ್ನು ಈಗಲೂ ಸಹ ನಾವು ಇತಿಹಾಸದ ಆಧಾರಗಳಿಂದ ನೋಡಬಹುದಾಗಿದೆ. ಹಾವೇರಿ ಪ್ರದೇಶದಲ್ಲಿ ಹಾನಗಲ್ ತಾಲೂಕು-ಹಾನಗಲ್, ತಿಳುಳ್ಳಿ, ಅಕ್ಕಿಆಲೂರು, ಆಡೂರು, ಚಿಕ್ಕಬಾಸೂರು, ಹಿರೇಕೆರೂರು ತಾಲೂಕು - ಮದಗ್ ಮಾಸೂರು, ಹಿರೇಕೆರೂರು, ಹಂಸಭಾವಿ, ಮಡ್ಲೂರು, ಸಾತನಳ್ಳಿ, ಚಿಕ್ಕೇರೂರು, ಗುಡ್ಡದಮಾದಾಪುರ, & ಹಳ್ಳೂರು, ರಾಣೇಬೆನ್ನೂರು ತಾಲೂಕು- ಅಸುಂಡಿ, ಮೇಡ್ಲೇರಿ, ಗುಡ್ಡಗುಡೂರು, ಹೊನ್ನತ್ತಿ, ರಾಣೇಬೆನ್ನೂರು, ಬ್ಯಾಡಗಿ ತಾಲೂಕು- ಕಾಗಿನೆಲೆ, ಕದರಮಂಡಲಗಿ, ಸವಣೂರು ತಾಲೂಕು-ಮಾದಾಪುರ, ಮೊತಿತಲಾಬ್‌ಕೆರೆ, ಮಾದಾಪುರ, ಇವುಗಳಲ್ಲಿ ಹತ್ತಿಮತ್ತೂರು ಹಿರೇಕೆರೂರ, ಹಾನಗಲ್ಲು, ಚಿಕ್ಕೇರೂರು, & ಮದಗ್ ಮಾಸೂರು ಕೆರೆಗಳು ಈ ಪ್ರದೇಶದಲ್ಲಿ ಇರುವ ಪ್ರಸಿದ್ಧ ಕೆರೆಗಳಾಗಿವೆ. ಕೆರೆಯು ಹಲವಾರು ಆಕಾರಗಳಲ್ಲಿ ರಚಿತವಾಗುತ್ತಿತ್ತು. ಬಹುತೇಕ ಸ್ಥಳೀಯ ಭೌಗೋಳಿಕ ಲಕ್ಷಣಗಳನ್ನು ಅನುಸರಿಸಿ ಕೆರೆಗಳು ತಮ್ಮ ಆಕಾರವನ್ನು ಪಡೆದುಕೊಳ್ಳುತ್ತಿದ್ದವು. ಹಾವೇರಿ ಪ್ರದೇಶದಲ್ಲಿ ಕೆರೆಗಳ ನಿರ್ಮಾಣದಲ್ಲಿ ಪ್ರಕೃತಿಯ ನೀರಿನ ಅನುಗುಣವಾಗಿ ಕಲ್ಲಿನ & ಮಣ್ಣಿನಿಂದ ವ್ಯವಸ್ಥಿತವಾಗಿ ಹಲವಾರು ಶೈಲಿಗಳಲ್ಲಿ ನಿರ್ಮಿಸಲಾಗಿದೆ ಎಂದು ಅಧ್ಯಯನದಿಂದ ತಿಳಿದುಬರುತ್ತದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಭಗವತಿ ಎಸ್.ಎಸ್. ಮತ್ತು ಮೇಲಿನಮನೆ ಹೆಚ್.ಎಸ್., (2004), ಕನ್ನಡ ಶಾಸನಗಳ ಅಧ್ಯಯನ, ಗದಗ: ವಿದ್ಯಾನಿಧಿ ಪ್ರಕಾಶನ.
ನಾಯಕ ಹಾ.ಮಾ. (ಪ್ರ.ಸಂ.), (1969), ಕನ್ನಡ ವಿಷಯ ವಿಶ್ವಕೋಶ, ಮೈಸೂರು: ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ.
ಜಿಲ್ಲಾ ಸಂಖ್ಯಾಧಿಕಾರಿ, (2018), ಹಾವೇರಿ ಜಿಲ್ಲೆಯ ಅಂಕಿ ಅಂಶಗಳ ನೋಟ 2017-2018, ಹಾವೇರಿ: ಜಿಲ್ಲಾ ಸಂಖ್ಯಾಧಿಕಾರಿಗಳ ಕಚೇರಿ.
ಪಂಚಮುಖಿ ಆರ್.ಎಸ್., (1967), ಕರ್ನಾಟಕ ಇತಿಹಾಸ, ಧಾರವಾಡ: ಕರ್ನಾಟಕ ಐತಿಹಾಸಿಕ ಸಂಶೋಧನಾ ಮಂಡಲ.
ಚಂದ್ರಶೇಖರ ಎನ್. (ಮುಖ್ಯ ಸಂ.), (2015), ಕರ್ನಾಟಕ ಗ್ಯಾಸೆಟಿಯರ್, ಬೆಂಗಳೂರು: ಕರ್ನಾಟಕ ಗ್ಯಾಸೆಟಿಯರ್ ಇಲಾಖೆ, ಕರ್ನಾಟಕ ಸರ್ಕಾರ.
ಗೋಪಾಲ ಬಾ.ರಾ., ಕರ್ನಾಟಕದಲ್ಲಿ ನವಶಿಲಾಯುಗ, ಧಾರವಾಡ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ.
ಕಾಮತ್ ಸೂರ್ಯನಾಥ ಯು. (ಮುಖ್ಯ ಸಂ.), (1995), ಕರ್ನಾಟಕ ರಾಜ್ಯ ಗ್ಯಾಸೆಟಿಯರ್: ಧಾರವಾಡ ಜಿಲ್ಲೆ, ಬೆಂಗಳೂರು: ಕರ್ನಾಟಕ ಗ್ಯಾಸೆಟಿಯರ್ ಇಲಾಖೆ.
ಕಲಬುರ್ಗಿ ಎಂ.ಎಂ. (ಸಂ.), (1975), ಧಾರವಾಡ ಜಿಲ್ಲೆಯ ಶಾಸನ ಸೂಚಿ, ಧಾರವಾಡ: ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ.
ಚಿದಾನಂದಮೂರ್ತಿ ಎಂ., (2002), ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ (ತೃತೀಯ ಮುದ್ರಣ), ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ.
ಬಡಿಗೇರ ವೀರೇಶ, (2010), ಶಾಸನಗಳಲ್ಲಿ ಆಯಗಾರಿಕೆ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಹೆಗಡೆ ರಾಘುರಾಮ (ಸಂ.), (2002), ಕೆರೆ ನೀರಾವರಿ ನಿರ್ವಹಣೆ: ಚಾರಿತ್ರಿಕ ಅಧ್ಯಯನ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಪೂಜಾರಹಳ್ಳಿ ವಿರೂಪಾಕ್ಷಿ, (1999), ಜಲಸಂಬಂಧಿ ಚಳುವಳಿಗಳು, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.