ಹಾನಗಲ್ ಪ್ರದೇಶದ ಕೆಲವು ಶಾಸನಾಧಾರಿತ ಕೆರೆಗಳು
Main Article Content
Abstract
ಹಾವೇರಿ ಜಿಲ್ಲೆಯ ಹಾನಗಲ್ ಪ್ರದೇಶವು ಸಾಕಷ್ಟು ಪೌರಾಣಿಕ ಘಟನೆಗಳನ್ನು ಹೊಂದಿದೆ. “ಮಹಾಭಾರತದ ಕಾಲದಲ್ಲಿ ಹಾನಗಲ್ ವಿರಾಟರಾಜನ ರಾಜಧಾನಿಯಾಗಿತ್ತೆಂಬ ನಂಬಿಕೆ ಇದೆ. ಇದಕ್ಕೆ ಆಧಾರವೆಂಬಂತೆ ಕೀಚಕನ ಗರಡಿಮನೆಯೊಂದು ಇಲ್ಲಿ ಇದ್ದುದು ತಿಳಿದು ಬರುತ್ತದೆ. ಇದು ವಿರಾಟ ರಾಜನ ರಾಜಧಾನಿಯಾಗಿತ್ತೆಂಬ ಅಂಶ 12ನೇಯ ಶತಮಾನದ ಒಂದು ಶಾಸನದಲ್ಲಿ ವ್ಯಕ್ತವಾಗಿದೆ. ಹಾವೇರಿ ಪಟ್ಟಣವನ್ನು ನಳ ಮಹಾರಾಜನು ಸ್ಥಾಪಿಸಿದನೆಂದು ಅಲ್ಲಿಯ ಒಂದು ಶಾಸನ ಹೇಳುತ್ತದೆ. ಈ ಪ್ರದೇಶದಲ್ಲಿ ಕ್ರಿ.ಶ 1134 ರ ಹಾವೇರಿ ಶಾಸನವು ಅಗ್ರಹಾರ ಪಾವರಿಯಲ್ಲಿ ಆಳ್ವಿಕೆ ಮಾಡಿದ ದಂಡನಾಯಕ ಕುಮಾರ ಪದ್ಮನಾಭರಸನು ಈಗಾಗಲೇ ಕಟ್ಟಿಸಿದ ಕೆರೆಯನ್ನು ಕದಂಬ ಮನೆತನದ ಮಲ್ಲಿಕಾರ್ಜುನನು ಜೀರ್ಣೋದ್ಧಾರಗೊಳಿಸಿದನೆಂದು ತಿಳಿಸುತ್ತದೆ. ಅಂತೆಯೇ ಹಾನಗಲ್ ಪ್ರದೇಶದಲ್ಲಿ ಎರಡನೇ ಜಗದೇಕ ಮಲ್ಲನ ಸಾಮಂತ ದೇವಗಾವುಂಡನು ಕೊಳನೂರು ಗ್ರಾಮದ ಹೊರಭಾಗದಲ್ಲಿ ಬಾವಿ ಕಟ್ಟಿಸುವುದರ ಜೊತೆಗೆ ಒಂದು ಕೆರೆಯನ್ನು ನಿರ್ಮಿಸಿದ ಅವನು ಈ ಕಾರ್ಯಗಳಿಗೆ ತನ್ನ ಆಸ್ತಿಯನ್ನು ಮಾರಿಬಂದ ಹಣವನ್ನು ವ್ಯಯಿಸಿದ.
ಹೀಗೆ ಹಾನಗಲ್ ಪ್ರದೇಶದಲ್ಲಿ ರಾಜರು, ಮಂತ್ರಿಗಳು, ದಂಡನಾಯಕರು, ಗ್ರಾಮದ ಅಥವಾ ಸ್ಥಳೀಯ ಆಡಳಿತದ ಮುಖ್ಯಸ್ಥರಾಗಿದ್ದ ಗಾವುಂಡ, ಗೌಡರು ಮತ್ತು ನಾಳ್ಗಾವುಣ್ಡರು (ನಾಡಗೌಡರು) ಹಲವಾರು ಕೆರೆಗಳನ್ನು ನಿರ್ಮಿಸಿ, ನೀರಾವರಿ ಸೌಲಭ್ಯದ ಮೂಲಕ ಫಸಲನ್ನು ಹೆಚ್ಚು ಹೆಚ್ಚು ಬೆಳೆಯಲು ಪ್ರೋತ್ಸಾಹಿಸಿದರು. ಇವರು ಕೆರೆಯನ್ನು ಕಟ್ಟಿಸುವುದು ಜನತೆಯ ಔದಾರ್ಯ ಮತ್ತು ದಾನ ಶೀಲತೆಯ ಸಂಕೇತವಾಗಿತ್ತು. ಇದು ಧಾರ್ಮಿಕ ಕಾರ್ಯವೆಂದು ಮೋಕ್ಷಸಾಧನೆಯ ಮಾರ್ಗವೆಂದು ಅಂದು ಭಾವಿಸಿದ್ದರು. ಕೆಲವೊಂದು ಸಲ ಕೆರೆಯ ಜೀರ್ಣೋದ್ಧಾರ ಮಾಡಿದ ಉಲ್ಲೇಖಗಳು ಶಾಸನಗಳಲ್ಲಿವೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಚನ್ನಕ್ಕ ಎಲಿಗಾರ, (1990), ಶಾಸನಗಳಲ್ಲಿ ಕರ್ನಾಟಕದ ಸ್ತ್ರೀ ಸಮಾಜ, ಧಾರವಾಡ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ.
ಚಿದಾನಂದಮೂರ್ತಿ ಎಂ., (1966), ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ.
ಬಿ. ಆರ್. ಗೋಪಾಲ (ಸಂ.), (1969), ಕರ್ನಾಟಕ ಇನ್ಸ್ಕ್ರಿಪ್ಷನ್ಸ್ - ಸಂಪುಟ 5 (ಶಾಸನ ಸಂಖ್ಯೆ: 59, ಹಾನಗಲ್, 1196 A.D), ಧಾರವಾಡ: ಕನ್ನಡ ಸಂಶೋಧನ ಸಂಸ್ಥೆ, ಕರ್ನಾಟಕ ವಿಶ್ವವಿದ್ಯಾಲಯ.
ಆರ್. ಎಸ್. ಪಂಚಮುಖಿ (ಸಂ.), (1941), ಕರ್ನಾಟಕ ಇನ್ಸ್ಕ್ರಿಪ್ಷನ್ಸ್ - ಸಂಪುಟ 1 (ಶಾಸನ ಸಂಖ್ಯೆ: 3 ಆಫ್ 1939-40), ಧಾರವಾಡ: ಕನ್ನಡ ಸಂಶೋಧನ ಸಂಸ್ಥೆ.
ಕೊಟ್ರಯ್ಯ ಸಿ. ಟಿ. ಎಮ್., (1995), ಇರಿಗೇಷನ್ ಸಿಸ್ಟಮ್ ಅಂಡರ್ ವಿಜಯನಗರ ಎಂಪೈರ್, ಮೈಸೂರು: ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ನಿರ್ದೇಶನಾಲಯ.
ಕುಪ್ಪುಸ್ವಾಮಿ ಜಿ. ಆರ್., (1991), ಇರಿಗೇಷನ್ ಇನ್ ಕರ್ನಾಟಕ ಇನ್ಸ್ಕ್ರಿಪ್ಷನ್ಸ್ ಆಸ್ ಎ ಸೋರ್ಸ್.
ದೀಕ್ಷಿತ್ ಜಿ. ಎಸ್. ಮತ್ತು ಕುಪ್ಪುಸ್ವಾಮಿ ಜಿ. ಆರ್. (ಅನು: ನೀಲತ್ತಹಳ್ಳಿ ಕಸ್ತೂರಿ), (2000), ಕರ್ನಾಟಕದಲ್ಲಿ ಕೆರೆ ನೀರಾವರಿ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಜಗದೀಶ ಅಗಸಬಾಲ, (2002), ಮಧ್ಯಕಾಲೀನ ಕೆರೆಗಳ ತಾಂತ್ರಿಕತೆ ಮತ್ತು ಮಿತಿಗಳು (ಗ್ರಂಥ: ಕೆರೆ ನೀರಾವರಿ ನಿರ್ವಹಣೆ: ಚಾರಿತ್ರಿಕ ಅಧ್ಯಯನ, ಸಂ: ರಾಜರಾಮ ಹೆಗಡೆ), ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಕುಂಚೂರು ಬಸವರಾಜ, (2009), ನಮ್ಮೂರ ಕೆರೆಗಳು (ಪು.ಸಂ. 14), ದಾವಣಗೆರೆ: ಶ್ರೀ ಚಕ್ರ ಪ್ರಕಾಶನ (ಕುಂಚೂರು).
ಫ್ರಾನ್ಸಿಸ್ ಬುಖಾನನ್, (1988), ಎ ಜರ್ನಿ ಫ್ರಂ ಮದ್ರಾಸ್ ಥ್ರೂ ದಿ ಕಂಟ್ರೀಸ್ ಆಫ್ ಮೈಸೂರು, ಕೆನರಾಸ್ ಅಂಡ್ ಮಲಬಾರ್, ನವದೆಹಲಿ: ಏಷ್ಯನ್ ಎಜುಕೇಷನಲ್ ಸರ್ವಿಸಸ್ (ಮರುಮುದ್ರಣ).
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, (ವರ್ಷ ಲಭ್ಯವಿಲ್ಲ), ಸೌತ್ ಇಂಡಿಯನ್ ಇನ್ಸ್ಕ್ರಿಪ್ಷನ್ಸ್ (S.I.I) - ಸಂಪುಟ 18 (ಶಾಸನ ಸಂಖ್ಯೆ: 136), ನವದೆಹಲಿ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ.
ಎ. ಎಂ. ಅಣ್ಣಿಗೇರಿ (ಸಂ.), (1961), ಕರ್ನಾಟಕ ಇನ್ಸ್ಕ್ರಿಪ್ಷನ್ಸ್ (K.I) - ಸಂಪುಟ 4 (ಶಾಸನ ಸಂಖ್ಯೆ: 53, ಹಾನಗಲ್), ಧಾರವಾಡ: ಕನ್ನಡ ಸಂಶೋಧನ ಸಂಸ್ಥೆ, ಕರ್ನಾಟಕ ವಿಶ್ವವಿದ್ಯಾಲಯ.