ಡಾ. ಸಿದ್ಧಲಿಂಗಯ್ಯನವರ ಸದನದ ಭಾಷಣಗಳು: ಅಲಕ್ಷಿತ ಸಮುದಾಯಗಳ ದನಿ

Main Article Content

ಶ್ರೀಧರ್ ಆರ್.

Abstract

ಡಾ. ಸಿದ್ಧಲಿಂಗಯ್ಯನವರು ಯಾರ ದನಿಯನ್ನು ಕೇಳಿಸಿಕೊಳ್ಳಲು ಪ್ರಭುತ್ವ ಇಚ್ಛಿಸುವುದಿಲ್ಲವೋ ಅಂತಹ‌ ಅಲಕ್ಷಿತ ಸಮುದಾಯಗಳ ಪ್ರತಿನಿಧಿಯಂತೆ, ದಮನಿತರ ಪರವಾದ ಕಾಳಜಿಯಿಂದ ದನಿಯೆತ್ತಿದ್ದಾರೆ. ವಿಧಾನ ಪರಿಷತ್ತಿನ ಸದಸ್ಯರಾಗಿ ಅವರು ಸದನದಲ್ಲಿ ಪ್ರಸ್ತಾಪಿಸಿರುವ ವಿಷಯಗಳು ಯಾವುದನ್ನು ಆಳುವ ವರ್ಗ ಜನಸಮುದಾಯದ ಅಂಚಿಗೆ ತಳ್ಳಿದೆಯೋ, ಯಾರ ವಿಚಾರಗಳಿಗೆ, ಬದುಕಿಗೆ ಮನ್ನಣೆ ಸಿಗದೆ ಮೂಲೆಗುಂಪು ಮಾಡಲಾಗಿದೆಯೋ, ಸಮಾಜದ ಆದ್ಯತೆಯ ದೃಷ್ಟಿಯಿಂದ ಕಡೆಗಣಿಸಿ ನಗಣ್ಯ ಎಂದು ಅಧಿಕಾರಶಾಹಿಗಳು, ಪ್ರತಿಷ್ಠಿತ ಗಣ್ಯವರ್ಗ ನಿರ್ಲಕ್ಷಿಸಿ ವಂಚಿಸಿದೆಯೋ ಅಂತಹ ಕಣ್ಣಿಗೆ ಸಹಜವಾಗಿ ಕಾಣದ ಬಹಿಷ್ಕೃತ ನೆಲೆಗಳಿಗೆ ಕಣ್ಣುಹಾಯಿಸಿ ಜನಪ್ರತಿನಿಧಿಗಳನ್ನು ಹಕ್ಕೊತ್ತಾಯದ ಧಾಟಿಯಲ್ಲಿ ಮನವೊಲಿಸುವ, ಸಮಾಜದ ಕಣ್ತೆರೆಸುವ ಕಾರ್ಯವನ್ನು ಮಾಡುತ್ತವೆ.

Article Details

Section

Research Articles

Author Biography

ಶ್ರೀಧರ್ ಆರ್.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯನಗರ, ಬೆಂಗಳೂರು.

How to Cite

ಶ್ರೀಧರ್ ಆರ್. (2026). ಡಾ. ಸಿದ್ಧಲಿಂಗಯ್ಯನವರ ಸದನದ ಭಾಷಣಗಳು: ಅಲಕ್ಷಿತ ಸಮುದಾಯಗಳ ದನಿ. ಅಕ್ಷರಸೂರ್ಯ (AKSHARASURYA), 15(01), 74 to 79. https://aksharasurya.com/index.php/latest/article/view/1986

References

ದೊಡ್ಡಹುಲ್ಲೂರು ರುಕ್ಕೋಜಿ (ಸಂ.), (2004), ಡಾ. ಸಿದ್ಧಲಿಂಗಯ್ಯನವರ ಸದನದ ಭಾಷಣಗಳು (ಪರಿಷ್ಕೃತ ವಿಸ್ತೃತ ಆವೃತ್ತಿ), ಬೆಂಗಳೂರು: ಅಂಕಿತ ಪುಸ್ತಕ.

ದೊಡ್ಡಹುಲ್ಲೂರು ರುಕ್ಕೋಜಿ (ಸಂ.), (2021), ಡಾ. ಸಿದ್ಧಲಿಂಗಯ್ಯನವರ ಸದನದ ಭಾಷಣಗಳು-02, ಬೆಂಗಳೂರು: ಅಂಕಿತ ಪುಸ್ತಕ.

Most read articles by the same author(s)