ಸಿದ್ಧಲಿಂಗಯ್ಯನವರ ʼಮತಾಂತರʼ ಕತೆ: ವಿಮೋಚನೆಯ ಹುಡುಕಾಟ

Main Article Content

ಶ್ರೀಧರ್ ಆರ್.

Abstract

ಕವಿ ಸಿದ್ಧಲಿಂಗಯ್ಯನವರು ಮನುಷ್ಯತ್ವದ ಸಹಜ ವಿಸ್ತಾರಕ್ಕೆ ಅಡ್ಡಿಯಾಗಿರುವ ಅಸಮಾನತೆಯ ವಿರುದ್ಧ ನಿರಂತರವಾಗಿ ಸ್ಪಂದಿಸಿದವರು. ಕಾವ್ಯ, ನಾಟಕ, ಆತ್ಮಕಥನ, ಸದನದ ಸಂವಾದಗಳು, ಭಾಷಣಗಳು, ವಿಮರ್ಶೆ, ಸಂಶೋಧನಾ ಅಧ್ಯಯನವನ್ನೊಳಗೊಂಡ ಅವರ ಸಮಗ್ರ ಸಾಹಿತ್ಯ ಸಮಾನತೆಯ ಅನ್ವೇಷಣೆ, ಸಾಮಾಜಿಕ ಕಾಳಜಿಯನ್ನು ಪ್ರತಿಪಾದಿಸುತ್ತದೆ. ಹಸಿವು, ಅಸಮಾನತೆಗಳೇ ತಮ್ಮ ಬೌದ್ಧಿಕ ಪ್ರಯಾಣದ ಮೂಲಧಾತುಗಳು ಎಂದು ಅವರು ಪರಿಭಾವಿಸುತ್ತಾರೆ. ಜನರ ಬದುಕನ್ನು ನೇರ್ಪುಗೊಳಿಸುವ ಜೀವಪರವಾದ ನಿಲುವನ್ನು ಅವರ ಗದ್ಯಬರಹಗಳು ಸಾಬೀತುಪಡಿಸುತ್ತವೆ. 
ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆ ಹಾಗೂ ಹೋರಾಟದ ಪ್ರಯೋಗ ಎರಡು ಮಾರ್ಗದಲ್ಲಿ ಸಾಗಿದೆ. ಒಂದು, ಸಾಮಾಜಿಕ ಪರಿವರ್ತನೆಯ ಮಾರ್ಗ; ಎರಡನೆಯದು, ಆಧ್ಯಾತ್ಮಿಕ ಅನ್ವೇಷಣೆಯ ಮಾರ್ಗ. ಮೇಲ್ನೋಟಕ್ಕೆ ಎರಡು ಈ ಮಾರ್ಗಗಳು ಭಿನ್ನ ಮತ್ತು ಸಮಾನಾಂತರ ಮಾರ್ಗಗಳಂತೆ ಕಂಡರೂ ಅಂಬೇಡ್ಕರ್ ಚಿಂತನೆ, ಹೋರಾಟ ಮತ್ತು ಅನುಭವದ ನೆಲೆಯಲ್ಲಿ ಇವೆರಡೂ ಒಂದರೊಳಗೊಂದು ಬೆಸೆದುಕೊಂಡಿರುವುದನ್ನು ಗುರುತಿಸಬಹುದು. ಬಾಬಾಸಾಹೇಬರು ತಮ್ಮ ಜೀವಿತಾವಧಿಯ ಕಡೆಯ ಕಾಲದಲ್ಲಿ ಅಕ್ಟೋಬರ್ 14, 1956 ರಂದು ಬೌದ್ಧರಾದುದು ಹತಾಶೆಯಿಂದ ಹುಟ್ಟಿದ ಸಿನಿಕತನದಲ್ಲಿ ಅಲ್ಲ; ಅನುಭವದ ಬೆಳಕಿನಲ್ಲಿ ಮೂಡಿದ ಅರಿವಿನಲ್ಲಿ ಎಂಬುದನ್ನು ನಾವು ಮನಗಾಣಬೇಕಿದೆ.

Article Details

Section

Research Articles

Author Biography

ಶ್ರೀಧರ್ ಆರ್.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯನಗರ, ಬೆಂಗಳೂರು.

References

ಹನುಮಂತಯ್ಯ ಎಲ್. & ಚಿನ್ನಸ್ವಾಮಿ ಬಿ. (ಸಂ), (1996), ದಲಿತ ಕಥೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

ನಾಗರಾಜ್ ಡಿ.ಆರ್. (ಮೂಲ), ಆಶಾದೇವಿ ಎಂ.ಎಸ್. (ಅನು), (2002), ಉರಿ ಚಮ್ಮಾಳಿಗೆ: ದಲಿತ ಚಳವಳಿಯ ಅಧ್ಯಯನ, ವಸಂತ ಪ್ರಕಾಶನ, ಬೆಂಗಳೂರು.

ದೇವನೂರ ಮಹಾದೇವ, (2012), ಎದೆಗೆ ಬಿದ್ದ ಅಕ್ಷರ, ಅಭಿನವ, ಬೆಂಗಳೂರು.

ಸುಮಾ ಬಿ.ಯು. (ಸಂ), (2008), ಡಾ. ಬಿ.ಆರ್. ಅಂಬೇಡ್ಕರ್: ವರ್ತಮಾನದೊಂದಿಗೆ ಮುಖಾಮುಖಿ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

ಅಂಬೇಡ್ಕರ್ ಬಿ.ಆರ್. (ಮೂಲ), ಸದಾಶಿವ ಮರ್ಜಿ (ಅನು), (2011), ವೀಸಾದ ನಿರೀಕ್ಷೆಯಲ್ಲಿ ನೆನಪುಗಳು, ಲಡಾಯಿ ಪ್ರಕಾಶನ, ಗದಗ.

ಚಿನ್ನಸ್ವಾಮಿ ಸೋಸಲೆ ಎನ್., (2009), ದಲಿತರು ಮತ್ತು ಮತಾಂತರ: ಒಂದು ಚಿಂತನೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಚಿನ್ನಸ್ವಾಮಿ ಸೋಸಲೆ ಎನ್., (2012), ಅಂಬೇಡ್ಕರ್ ದೃಷ್ಟಿಯಲ್ಲಿ ದಲಿತರು ಮತ್ತು ಮತಾಂತರ, ಯಾಜಿ ಪ್ರಕಾಶನ, ಹೊಸಪೇಟೆ.

ದಿವಾಕರ ನಾ., (2022), ಮತಾಂತರ: ವ್ಯಕ್ತಿ ಸ್ವಾತಂತ್ರ್ಯದ ಆದಿಮ ಹಾದಿ, ಲಡಾಯಿ ಪ್ರಕಾಶನ, ಗದಗ.