ಸಮಗ್ರ ಸಂಶೋಧಕ: ಎಂ.ಎಂ. ಕಲಬುರ್ಗಿ
Main Article Content
Abstract
ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ
ಹರದ ಕುಳ್ಳಿರ್ದ ನಮ್ಮ ಮಹಾದೇವಸೆಟ್ಟಿ.
ಒಮ್ಮನವಾದಡೆ ಒಡನೆ ನುಡಿವನು
ಇಮ್ಮನವಾದಡೆ ನುಡಿಯನು.
ಕಾಣಿಯ ಸೋಲ, ಅರ್ಧಗಾಣಿಯ ಗೆಲ್ಲ
ಜಾಣ ನೋಡವ್ವಾ ನಮ್ಮ ಕೂಡಲಸಂಗಮದೇವ.
ಎಂಬ ಬಸವವಾಣಿಯಂತೆ ನಿಷ್ಠುರ ಸಂಶೋಧನೆಯ ಅಂಗಡಿಯನ್ನಿಟ್ಟುಕೊಂಡು, ಏಕನಿಷ್ಠೆ, ಸತ್ಯ ಪ್ರತಿಪಾದನೆಗಳಿಗೆ ತಕ್ಷಣ ಕರಗಿ, ಅದಕ್ಕೆ ವಿರುದ್ಧವಾದುದಕ್ಕೆ ‘ಕ್ಷತ್ರಿಯನು ಮುರಿದಾನೆ ಹೊರತು ಮಣಿಯುವುದಿಲ್ಲ’ವೆಂಬ ದೃಢತೆಯನ್ನು ಸಾರಿದ ಎಂ.ಎಂ. ಕಲಬುರ್ಗಿಯವರು ಕನ್ನಡ ಸಂಶೋಧನ ಕ್ಷೇತ್ರದ ಅಪರೂಪದ ಸಾಧಕರು; ಸಮಗ್ರ ಸಂಶೋಧಕರು. ಸೃಜನಶೀಲ ಕ್ಷೇತ್ರದಲ್ಲಿ ಬಹುಮುಖತೆಯು ಸಾಮಾನ್ಯವಾಗಿರುತ್ತದೆ. ಆದರೆ ಒಂದು ಶಾಸ್ತ್ರ ಕ್ಷೇತ್ರದಲ್ಲಿ ಪರಿಣಿತಿ ಕಷ್ಟಸಾಧ್ಯ. ಅಂತಹುದರಲ್ಲಿ ಕಲಬುರ್ಗಿಯವರು ಶಿವನಂತೆ ಅಷ್ಟಮೂರ್ತಿಗಳು. ಶಾಸನ, ಛಂದಸ್ಸು, ಹಸ್ತಪ್ರತಿ ಮತ್ತು ಗ್ರಂಥ ಸಂಪಾದನೆ, ಭಾಷೆ, ಜನಪದ ಸಾಹಿತ್ಯ, ಶಿಷ್ಟ ಸಾಹಿತ್ಯ, ಕನ್ನಡ ಸಂಸ್ಕೃತಿ ಮತ್ತು ಸಂಶೋಧನೆ ಎಂಬ ಎಂಟು ಕ್ಷೇತ್ರಗಳಲ್ಲಿ ಸಂಶೋಧನೆ. ಸಾಲದೆಂಬಂತೆ ನಾಟಕ, ಕವನ ಸಂಕಲನಗಳನ್ನೂ ರಚಿಸಿದ್ದಾರೆ. ಅವರ ಈ ಅಷ್ಟಮುಖಿ ಸಾಧನೆಗಳನ್ನು ಪರಾಮರ್ಶನಕ್ಕೆ ಒಳಪಡಿಸುವುದು ಈ ಲೇಖನದ ತಿರುಳಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಜಿ. ಪಾಟೀಲ ಕಲ್ಯಾಣರಾವ., (2017) ಡಾ. ಎಂ.ಎಂ. ಕಲಬುರ್ಗಿಯವರ ಶೋಧಗಳು: ಡಾ. ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಟದಾರ್ಯ ಮಠ, ಡಂಬಳ-ಗದಗ
ರುಮಾಲೆ ಮೃತ್ಯುಂಜಯ., ಸಮಗ್ರ ಸಂಶೋಧಕ ಎಂ ಎಂ ಕಲಬುರ್ಗಿ: ಪಲ್ಲವ ಪ್ರಕಾಶನ ಚನ್ನಪಟ್ಟಣ.
ಪಾಟೀಲ ಸಿದ್ದನಗೌಡ., (2022) ಎಂ.ಎಂ. ಕಲಬುರ್ಗಿ ನವಕರ್ನಾಟಕ ಪ್ರಕಾಶನ ಬೆಂಗಳೂರು.
ಅಂಗಡಿ ಎಸ್.ಎಸ್., (2020) ಆಧುನಿಕ ಕನ್ನಡ ಸಂಶೋಧನೆ: ಪ್ರಿಯದರ್ಶಿನಿ ಪ್ರಕಾಶನ ಬೆಂಗಳೂರು.