ಮೋಹನ ಕುಂಟಾರ ಅವರ ಅನುವಾದಗಳ ಅಧ್ಯಯನ
Main Article Content
Abstract
ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ 30 ವರ್ಷಗಳ ಸಾರ್ಥಕ ಅಧ್ಯಾಪನ ವೃತ್ತಿಯೊಂದಿಗೆ ಮೋಹನ ಕುಂಟಾರ ಅವರು ಅನುವಾದ ಸಾಹಿತ್ಯವನ್ನು ಕುರಿತು ಸಾಕಷ್ಟು ಅಧ್ಯಯನ ಮತ್ತು ಸಂಶೋಧನೆಗಳನ್ನು ನಡೆಸಿದ್ದಾರೆ. ಮಲಯಾಳಂ ಭಾಷೆಯಿಂದ ಹಲವು ಉಪಯುಕ್ತ ಕೃತಿಗಳನ್ನು ಕನ್ನಡಕ್ಕೆ ತರುವುದರ ಜೊತೆಗೆ ಭಾಷಾಂತರವನ್ನು ಕುರಿತು ಹಲವು ಮಹತ್ವದ ಶಾಸ್ತ್ರ ಗ್ರಂಥಗಳನ್ನು ಹೊರತಂದಿದ್ದಾರೆ. ಭಾಷಾಂತರ ಮತ್ತು ಭಾಷಾಂತರ ಅಧ್ಯಯನಗಳು ಇವರ ಪ್ರಧಾನವಾದ ಆಸಕ್ತಿಯ ಕ್ಷೇತ್ರಗಳಾಗಿವೆ. ಭಾಷಾಂತರ ಅಧ್ಯಯನದ ಪ್ರಮೇಯಗಳನ್ನು, ಸಿದ್ಧಾಂತಗಳನ್ನು ಆನ್ವಯಿಕ ನೆಲೆಯಲ್ಲಿ ಚಾರಿತ್ರಿಕವಾಗಿ ದೃಷ್ಟಾಂತಗಳ ಸಮೇತ ವಿವರಿಸುವ, ವಿಶ್ಲೇಷಿಸುವ, ಅರ್ಥೈಸುವ ಕಲೆ ಅವರ ವೈಶಿಷ್ಟ್ಯತೆಯಾಗಿದೆ. ಅಧ್ಯಯನ ಹಾಗೂ ಅಧ್ಯಾಪನದಲ್ಲಿನ ಅವರ ಶಿಸ್ತು, ವಸ್ತುನಿಷ್ಠತೆ ಹಾಗೂ ಹಿತಮಿತ ವಚನವು ಕೃತಿಗಳಲ್ಲಿಯೂ ಪಡಿಮೂಡಿರುವುದು ಮತ್ತೊಂದು ವಿಶೇಷತೆಯಾಗಿದೆ.
ಕುಂಟಾರ ಅವರು ʼಭಾಷಾಂತರದ ವಿಭಿನ್ನ ನೆಲೆಗಳುʼ, ʼಭಾಷಾಂತರ ಪ್ರಕ್ರಿಯೆ ಪ್ರೇರಣೆ ಪ್ರಭಾವʼ, ʼಮಾಧ್ಯಮಗಳು ಮತ್ತು ಭಾಷಾಂತರʼ, ʼಅನುವಾದ, ಅನುಸೃಷ್ಟಿ, ರೂಪಾಂತರʼ, ʼಅನುವಾದ ಒಲವು ನಿಲುವುʼ, ʼಕನ್ನಡಮಲಯಾಳಂ ಭಾಷಾಂತರ ಪ್ರಕ್ರಿಯೆʼ, ʼಅನುವಾದ ಸಾಹಿತ್ಯʼ ಮತ್ತು ʼಅನುವಾದ ಹೆಜ್ಜೆ ಗುರುತುʼ ಎಂಬ ಎಂಟಕ್ಕೂ ಹೆಚ್ಚು ಭಾಷಾಂತರ ಶಾಸ್ತ್ರವನ್ನು ವಿವೇಚಿಸುವ ಮಹತ್ವದ ಕೃತಿಗಳ ಜೊತೆಗೆ ನೂರಕ್ಕೂ ಹೆಚ್ಚು ಮೌಲ್ಯಯುತ ಲೇಖನಗಳ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಅದರಲ್ಲೂ ಭಾಷಾಂತರಶಾಸ್ತ್ರ ವಲಯವನ್ನು ಶ್ರೀಮಂತಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೋಹನ ಕುಂಟಾರ ಅವರ ಅನುವಾದ ಕುರಿತ ಶಾಸ್ತ್ರ ಕೃತಿಗಳ ವಸ್ತು, ಆಶಯ ಹಾಗೂ ಸ್ವರೂಪಗಳನ್ನು ವಿಶ್ಲೇಷಣೆಗೆ ಒಳಪಡಿಸುವುದು ಈ ಲೇಖನದ ಉದ್ದೇಶವಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಮೋಹನ ಕುಂಟಾರ, (2010), ಭಾಷಾಂತರ ವಿಭಿನ್ನ ನೆಲೆಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಮೋಹನ ಕುಂಟಾರ, (2015), ಭಾಷಾಂತರ ಪ್ರಕ್ರಿಯೆ ಪ್ರೇರಣೆಪ್ರಭಾವ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಮೋಹನ ಕುಂಟಾರ, (2016), ಮಾಧ್ಯಮಗಳು ಮತ್ತು ಭಾಷಾಂತರ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಮೋಹನ ಕುಂಟಾರ, (2021), ಅನುವಾದ, ಅನುಸೃಷ್ಟಿ, ರೂಪಾಂತರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.
ಮೋಹನ ಕುಂಟಾರ, (2023), ಅನುವಾದ ಒಲವುನಿಲುವು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಮೋಹನ ಕುಂಟಾರ, (2023), ಕನ್ನಡಮಲಯಾಳಂ ಭಾಷಾಂತರ ಪ್ರಕ್ರಿಯೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಮೋಹನ ಕುಂಟಾರ, (2024), ಅನುವಾದ ಸಾಹಿತ್ಯ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
ಮೋಹನ ಕುಂಟಾರ, (2025), ಅನುವಾದದ ಹೆಜ್ಜೆಗುರುತು, ಯಾಜಿ ಪ್ರಕಾಶನ, ಹೊಸಪೇಟೆ.