ಶಹಾಬುದ್ದೀನ್ ಕಾಲೇಖಾನ್ ಅವರ ‘ಅದೃಷ್ಟ ಕೈದಿ’

Main Article Content

ರಾಜಶೇಖರ ಬಿರಾದಾರ

Abstract

‘ಕಾಲವನ್ನು ಮರೆಸುವ, ಚಿತ್ತಭಿತ್ತಿಯಲ್ಲಿ ಅಚ್ಚಳಿಯದೆ, ಸದಾ ಉಳಿಯುವ, ನೋವ ಮರೆಸುವ ಮಾಂತ್ರಿಕತೆ’ಯು ಸಾಹಿತ್ಯಕ್ಕೆ ಇರುತ್ತದೆ. ಇದನ್ನರಿತ ಹಲವರು ಪೊಲೀಸ್ ಇಲಾಖೆಯಲ್ಲಿದ್ದರೂ ಸಾಹಿತ್ಯ ಸಂಗಾತಿಗಳಾಗಿದ್ದಾರೆ. ಪೊಲೀಸ್ ಇಲಾಖೆಯ ಪ್ರಖರ ಪ್ರಭಾವಳಿಯ ಮುಂದೆ ನೆರಳಿನಂತಿರುವ ಬಂಧೀಖಾನೆ ಇಲಾಖೆಯಲ್ಲಿ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಹಾಬುದ್ದೀನ್ ಕಾಲೇಖಾನ್ ಅವರು ‘ಕಾವ್ಯ ಸ್ಪೂರ್ತಿ’ ಹಾಗೂ ‘ಅದೃಷ್ಟ ಕೈದಿ’ ಎಂಬ ಎರಡು ಕವನ ಸಂಕಲನಗಳನ್ನು ರಚಿಸುವ ಮೂಲಕ ಒತ್ತಡದ ಕೆಲಸಕ್ಕೆ ಹೆಸರುವಾಸಿಯಾಗಿರುವ ಇಲಾಖೆಯಲ್ಲಿದ್ದೂ ಸಾಹಿತ್ಯಾಸಕ್ತಿಯನ್ನು, ಸಾಹಿತ್ಯ ರಚನೆಯ ವಿಶಿಷ್ಟ ಹವ್ಯಾಸವನ್ನು ರೂಢಿಸಿಕೊಂಡಿರುವ ವಿಶಿಷ್ಟ ಅಧಿಕಾರಿಯಾಗಿದ್ದಾರೆ.
ಜಾತಿ, ಧರ್ಮ, ಭಾಷೆ, ಪ್ರದೇಶ ಸೇರಿದಂತೆ ಕ್ಷುಲ್ಲಕ ಸಂಗತಿಗಳನ್ನು ಆಧರಿಸಿ ‘ಹತ್ತಿರವಿದ್ದೂ ದೂರ’ವಾಗುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಕಾಲೇಖಾನ್ ಅವರ ಕವಿತೆಗಳು ಉಪಯುಕ್ತವೆನಿಸುತ್ತವೆ. ಈ ಸಂಕಲನದಲ್ಲಿ ಆಧುನಿಕೋತ್ತರ ಕಾಲದ ಅಗತ್ಯಗಳಾಗಿರುವ ಸಮಾನತೆ, ಭ್ರಾತೃತ್ವ, ಸಾಮರಸ್ಯ, ಸಹಬಾಳ್ವೆ, ಪ್ರಕೃತಿ ಪ್ರೇಮ, ಪ್ರೀತಿ-ಪ್ರೇಮ-ಪ್ರಣಯ-ವಿರಹ ಭಾವಾಭಿವ್ಯಕ್ತಿಯ ಕವಿತೆಗಳಿವೆ. ನಾಡು-ನುಡಿ-ದೇಶಾಭಿಮಾನವನ್ನು ಹುರಿದುಂಬಿಸುವ ಕವಿತೆಗಳಿವೆ. ಭಾಷೆಯು ಸರಳವಾಗಿದ್ದು, ಸುಲಭವಾಗಿ ಅರ್ಥವಾಗುವಂತಿದೆ.

Article Details

Section

Research Articles

Author Biography

ರಾಜಶೇಖರ ಬಿರಾದಾರ

ಸಹಾಯಕ ಪ್ರಾಧ್ಯಾಪಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಯರಗಟ್ಟಿ,  ಬೆಳಗಾವಿ.

How to Cite

ರಾಜಶೇಖರ ಬಿರಾದಾರ. (2026). ಶಹಾಬುದ್ದೀನ್ ಕಾಲೇಖಾನ್ ಅವರ ‘ಅದೃಷ್ಟ ಕೈದಿ’. ಅಕ್ಷರಸೂರ್ಯ (AKSHARASURYA), 13(06), 97 to 102. https://aksharasurya.com/index.php/latest/article/view/631

References

ಶೇಷಗಿರಿರಾವ್ ಎಲ್.ಎಸ್., (2022), ಆಧುನಿಕ ಕನ್ನಡ ಸಾಹಿತ್ಯ ನಡೆದು ಬಂದ ದಾರಿ, ಬೆಂಗಳೂರು: ಅಂಕಿತ ಪುಸ್ತಕ.

ರಾಮಚಂದ್ರನ್ ಸಿ.ಎನ್., (2002), ವಸಾಹತೋತ್ತರ ಚಿಂತನೆ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.

ಶಹಾಬುದ್ದೀನ್ ಎಂ. ಕಾಲೇಖಾನ್, (2024), ಕಾವ್ಯ ಸ್ಪೂರ್ತಿ, ಕಲಬುರ್ಗಿ: ಮಣೂರ ಮೀಡಿಯಾ.

ಶಹಾಬುದ್ದೀನ್ ಎಂ. ಕಾಲೇಖಾನ್, (2024), ಅದೃಷ್ಟ ಕೈದಿ, ಕಲಬುರ್ಗಿ: ಮಣೂರ ಮೀಡಿಯಾ.

Most read articles by the same author(s)