Table of Contents
Research Articles
ಶಾಸನೋಕ್ತ ವೀರಗಲ್ಲಿನಲ್ಲಿ ವೃತ್ತಿ ಸಮುದಾಯಗಳು
01 to 05
ಹಾಸನ ಜಿಲ್ಲಾ ಪರಿಸರವು ಹೊಯ್ಸಳರ ವಾಸ್ತು ರಚನೆಗಳ ತವರುಮನೆ. ಪ್ರಸ್ತುತ ವಿದ್ಯಾಕಾಶಿ ಮತ್ತು ಹೈಟೆಕ್ ನಗರವಾಗಿ ಬೆಳೆಯುತ್ತಿದೆ. ಹಾಸನ, ಬೇಲೂರು, ಹೊಳೆನರಸೀಪುರ, ಆಲೂರು, ಅರಸೀಕೆರೆ, ಸಕಲೇಶಪುರ, ಚನ್ನರಾಯಪಟ್ಟಣ, ಅರಕಲಗೂಡು ಸೇರಿದಂತೆ ಪ್ರಸ್ತುತ ಜಿಲ್ಲೆಯಲ್ಲಿ 8 ತಾಲೂಕುಗಳಿವೆ. ಹಾಸನ ಜಿಲ್ಲೆಯ ಪೂರ್ವ ಭಾಗಕ್ಕೆ ತುಮಕೂರು ಮತ್ತು ಮಂಡ್ಯ, ಪಶ್ಚಿಮಕ್ಕೆ ಮಂಗಳೂರು ಮತ್ತು ಚಿಕ್ಕಮಗಳೂರು, ಉತ್ತರಕ್ಕೆ ಚಿತ್ರದುರ್ಗ, ದಕ್ಷಿಣಕ್ಕೆ ಕೊಡಗು ಮತ್ತು ಮೈಸೂರು ಜಿಲ್ಲೆಗಳಿಂದ ಸುತ್ತುವರಿದಿವೆ. ಹಾಸನ ಜಿಲ್ಲೆಯಲ್ಲಿ ಶಾಸನೋಕ್ತ ವೀರಗಲ್ಲುಗಳಿದ್ದು, ಕೆಲವೊಂದು ಶಾಸನೋಕ್ತ ವೀರಗಲ್ಲಿನಲ್ಲಿ ವೃತ್ತಿ ಸಮುದಾಯದ ಉಲ್ಲೇಖವಿದೆ. ಉಲ್ಲೇಖವಾಗಿರುವ ವೃತ್ತಿ ಸಮುದಾಯದ ಕುರಿತು ಪ್ರಸ್ತುತ ಲೇಖನದಲ್ಲಿ ಚರ್ಚಿಸಲಾಗಿದೆ.
ವರ್ತಮಾನದ ಕನ್ನಡಿಯಲ್ಲಿ ಕನಕ ದರ್ಶನ
06 to 16
ಭಕ್ತಿಯ ಖಾಸಗಿ ವಿಚಾರಗಳನ್ನು ಸಮಾಜ ಸುಧಾರಣೆಗೆ ಮಾಧ್ಯಮವಾಗಿ ಬಳಸಿಕೊಂಡ ಕನಕದಾಸರು ಕನ್ನಡ ನಾಡಿನ ಅನನ್ಯ ಭಕ್ತಿ ಕವಿ. ಅವರು ವಾಸಿಸುತ್ತಿದ್ದ ಮಧ್ಯಕಾಲೀನ ಅವಧಿಯು ಸಂಕೀರ್ಣವಾಗಿತ್ತು. ಇದು ಧರ್ಮ ಮತ್ತು ಆಡಳಿತದ ನಡುವಿನ ತೀವ್ರ ಸಂಘರ್ಷದ ಅವಧಿ. ಅಲ್ಲಿ ಅವರು ಹರಿದಾಸ ಚಳವಳಿಯ ಮುಖವಾಣಿಯಾಗಿ ನಮ್ಮನ್ನು ಭೇಟಿಯಾಗುತ್ತಾರೆ. ಆ ಚಳವಳಿಯ ತತ್ತ್ವಶಾಸ್ತ್ರವು ಮೇಲ್ನೋಟಕ್ಕೆ ಉದಾರವಾದದ್ದಾಗಿತ್ತು. ಆಂತರಿಕವಾಗಿ ದೋಷಯುಕ್ತ, ತಾರತಮ್ಯ ಮತ್ತು ಅಸಮ ನೆಲ. ಕನಕನೂ ತನ್ನ ಹಿನ್ನಲೆಯಲ್ಲಿ ಇಟ್ಟುಕೊಂಡಿರುವ ಎಲ್ಲ ಸೈದ್ಧಾಂತಿಕ ಗೊಂದಲಗಳಲ್ಲಿ ಸಿಲುಕಿಕೊಳ್ಳುತ್ತಾನೆ. ವ್ಯಾಸಕೂಟ ಮತ್ತು ದಾಸಕೂಟಗಳು ತಾತ್ವಿಕ ಸಂಘರ್ಷದ ನಡುವೆ ತಮ್ಮನ್ನು ತಾವು ಪ್ರತಿಪಾದಿಸಲು ಹೆಣಗಾಡುತ್ತವೆ.
ಚಳವಳಿಯ ಪರಿಸರದಲ್ಲೂ ಅಪಾರ ಒಂಟಿತನ ಅನುಭವಿಸಿದ ಕವಿ. ಇದಕ್ಕೆ ಕಾರಣವೆಂದರೆ ಅವರು ಹುಟ್ಟಿರುವ ಜಾತಿಯ ಹಿನ್ನೆಲೆ, ಶೂದ್ರ (IV ನೇ ವರ್ಣ) ಜಾತಿಯಿಂದ ಬಂದು ಭಕ್ತಿ ಚಳುವಳಿಯ ಮೂಲಕ ಅವರು ತಮ್ಮ ಜೀವನದುದ್ದಕ್ಕೂ ಲೆಕ್ಕವಿಲ್ಲದಷ್ಟು ಅವಮಾನಗಳನ್ನು ಅನುಭವಿಸುತ್ತಾರೆ. ಅವರು ಅನೇಕ ಅಗ್ನಿಪರೀಕ್ಷೆಗಳನ್ನು ಸಹ ಎದುರಿಸುತ್ತಾರೆ. ಆದರೆ ಅದರ ನಡುವೆಯೂ ಅವರು ವ್ಯವಸ್ಥೆಗೆ ವಿರುದ್ಧವಾದ ಮಾತುಗಳನ್ನು ದಾಖಲಿಸದೆ ಬಿಡುವುದಿಲ್ಲ. ಅದಕ್ಕಾಗಿ ಕನ್ನಡ ಕಾವ್ಯಾಭಿವ್ಯಕ್ತಿಯ ವಿವಿಧ ರೂಪಗಳಲ್ಲಿ ತಮ್ಮನ್ನು ತಾವು ತೆರೆದುಕೊಳ್ಳುತ್ತಲೇ ಇರುತ್ತಾರೆ. ಈ ಅರ್ಥದಲ್ಲಿ ಕನಕದಾಸರು ಆ ಕಾಲದ ಏಕಾಂಗಿ ಧ್ವನಿಯಾಗಿದ್ದರು. ವಿಭಜಕ ಧ್ವನಿ ಕೂಡ.
ರವೀಂದ್ರನಾಥ ಠಾಗೋರ್: ಜೀವನ, ಸಾಹಿತ್ಯ ಮತ್ತು ಸಂಘರ್ಷ
17 to 23
ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದ ಏಷ್ಯಾ ಖಂಡದ ಮೊದಲ ಕವಿ ರವೀಂದ್ರನಾಥ ಠಾಗೋರ್. ಗುರುದೇವ್ ಎಂಬ ಅಂಕಿತ ನಾಮದೇಯರಾದ ಇವರು ಬಂಗಾಳಿಯ ಮಹಾ ವಿದ್ವಾಂಸ ಕವಿ, ಕಾದಂಬರಿಕಾರ, ಸಂಗೀತಕಾರ ಮತ್ತು ಪ್ರಗತಿಪರ ನಾಟಕಕಾರರಾಗಿದ್ದಾರೆ. ಇವರು 19-20ನೇ ಶತಮಾನಗಳ ಸಂಧಿಕಾಲದಲ್ಲಿ ಬಂಗಾಳಿ ಸಾಹಿತ್ಯ ಮತ್ತು ಸಂಗೀತಕ್ಕೆ ಹೊಸ ರೂಪವನ್ನು ತಂದು ಕೊಟ್ಟವರಾಗಿದ್ದಾರೆ. ಇವರು ರಚಿಸಿದ ಕವನಗಳು, ಸಣ್ಣ ಕಥೆಗಳು ಮತ್ತು ಕಾದಂಬರಿಗಳು ಸಾಹಿತ್ಯಕ್ಕೆ, ಆಡುಮಾತಿನ ಪ್ರಯೋಗಕ್ಕೆ, ವಿಚಾರಶೀಲತೆಗೆ, ವಾಸ್ತವಿಕತೆಗೆ ಮತ್ತು ತತ್ವಶಾಸ್ತ್ರದ ಅವಲೋಕನಕ್ಕೆ ಸಾಣೆಯಂತಿವೆ. ಇವರು ರಚಿಸಿದ ಎರಡು ಗೀತೆಗಳು ಭಾರತ ಮತ್ತು ಬಾಂಗ್ಲಾ ದೇಶಗಳ ರಾಷ್ಟ್ರಗೀತೆಗಳಾಗಿವೆ. ಬಂಗಾಳಿ ಕಲಾ ಪ್ರಕಾರಕ್ಕೆ ಹೊಸ ಮೆರಗು ನೀಡಿದ ಠಾಗೋರ್ ಅವರ ಕಾದಂಬರಿಗಳು, ಸಣ್ಣ ಕಥೆಗಳು, ಕವನಗಳು, ನೃತ್ಯ-ನಾಟಕಗಳು ಮತ್ತು ಪ್ರಬಂಧಗಳು ರಾಜಕೀಯ ಮತ್ತು ವೈಯಕ್ತಿಕ ವಿಷಯಗಳಲೆಲ್ಲ ಅನುರಣಿಸಿವೆ. ಇವರು ಸ್ಥಾಪಿಸಿದ ಸಂಸ್ಥೆ ‘ವಿಶ್ವಭಾರತಿ ವಿಶ್ವಾವಿದ್ಯಾನಿಲಯ’ ಮತ್ತು ಬಹುದೊಡ್ಡ ‘ಗ್ರಂಥಮಾಲೆ’ ಇವು ಠಾಗೋರ್‌ರು ಜಗತ್ತಿಗೆ ನೀಡಿದ ಪ್ರಮುಖ ಕೊಡುಗೆಗಳಾಗಿವೆ.
ಸಾಲಿ ವೆಂಕಣ್ಣಯ್ಯರ ‘ಗಿರಿಜಾಕಲ್ಯಾಣ’ ಯಕ್ಷಗಾನ ಕಾವ್ಯ ಒಂದು ಪಕ್ಷಿನೋಟ
24 to 34
ಗಿರಿಜಾ ಕಲ್ಯಾಣ ಕಥೆಯು ಪುರಾಣ ಪ್ರಸಿದ್ಧವಾಗಿದೆ. ಸುಮಾರು 15 ಪುರಾಣಗಳಲ್ಲಿ ಅಲ್ಪ ಸ್ವಲ್ಪ ಮರ್ಪಾಡುಗಳಲ್ಲಿ ಕಂಡುಬರುವ, ಶಿವ ಪಾರ್ವತಿಯರ ವಿವಾಹ ವಸ್ತುವಿರುವ ಈ ಕಥೆಯನ್ನು ಕುರಿತು ಕಾಳಿದಾಸನು ಸಂಸ್ಕೃತದಲ್ಲಿ ಕುಮಾರಸಂಭವನ್ನು, ಕನ್ನಡದಲ್ಲಿ ಹರಿಹರ ಕವಿಯು ಗಿರಿಜಾಕಲ್ಯಾಣವನ್ನು ಬರೆದು ಪ್ರಸಿದ್ಧಗೊಳಿಸಿದ್ದಾರೆ. ಹಾಗೆಯೇ ಕನ್ನಡ ಸಾಹಿತ್ಯದ ತ್ರಿಪದಿ, ಷಟ್ಪದಿ, ಸಾಂಗತ್ಯ ಮುಂತಾಗಿ ಹಲವು ಪ್ರಕಾರಗಳಲ್ಲಿಯಲ್ಲದೆ ಜನಪದರ ಹಾಡು ಕಥೆಗಳಲ್ಲಿಯೂ, ಯಕ್ಷಗಾನ ಬಯಲಾಟಗಳ ರೂಪದಲ್ಲಿಯೂ ರಚನೆಯಾಗಿವೆ. ಈ ನಿಟ್ಟಿನಲ್ಲಿ ಸಾಲಿವೆಂಕಣ್ಣಯ್ಯರೂ ಕೂಡ ಯಕ್ಷಗಾನ ಬಯಲಾಟ ಪ್ರಕಾರದಲ್ಲಿ ಈ ಕಥೆಯನ್ನು ಬರೆದಿದ್ದಾರೆ. ಅವರ ಕಿರು ಪರಿಚಯದೊಂದಿಗೆ ಅವರ ಗಿರಿಜಾಕಲ್ಯಾಣ ಯಕ್ಷಗಾನ ಕೃತಿಯನ್ನು ಪರಿಚಯಿಸುವುದು ಮತ್ತು ಹರಿಹರನ ಗಿರಿಜಾಕಲ್ಯಾಣದೊಂದಿಗೆ ಈ ಕೃತಿಗೆ ಇರುವ ಆಕರಗಳನ್ನು ಪರಿಶೀಲಿಸುವುದು ಈ ಲೇಖನದ ಆಶಯವಾಗಿದೆ.
ಕರ್ನಾಟಕದ ಜಾನಪದ ನಂಬಿಕೆಗಳು
35 to 42
ಜನರಿಗೆ ಸಂಬಂಧಿಸಿದ್ದು ಜನಪದ ಎಂದು ಸರಳವಾಗಿ ಹೇಳಬಹುದು. ಜೀವಕೋಟಿಯ ನಿರ್ದಿಷ್ಟ ಜನ ಸಮುದಾಯ ತನ್ನ ಉಳಿವಿಗೆ, ಸಂಸಾರಕ್ಕೆ, ಸಮಾಜಕ್ಕೆ, ಬದುಕಿಗೆ, ಸಾವಿಗೆ, ಹುಟ್ಟಿನಿಂದ ಅಂತ್ಯವರಿಗೂ ಕೆಲವು ಸಂಪ್ರದಾಯ ರೀತಿ ನೀತಿ, ಆಚಾರ-ವಿಚಾರ, ಆಚರಣೆ ಆಲೋಚನೆ ಮೊದಲಾದವುಗಳನ್ನು ರೂಢಿಗೆ ತಂದಿತ್ತು. ಇದೆಲ್ಲ ಜನಪದದ ಅಂಗವಾಯಿತು. ಜನರು ಮತ್ತು ಜನರಬದುಕು ಜನಪದವಾಯಿತು. ಜನಪದ ಶಬ್ದವು ಜನ, ಜನರ ಭಾಷೆ, ಅವರು ನೆಲೆಸಿರುವ ಸ್ಥಳ, ಜಾತಿ-ಪಂಗಡ, ಆಚಾರ-ವಿಚಾರ, ಕಲೆ, ಸಾಹಿತ್ಯ ಮೊದಲಾದವುಗಳೆಲ್ಲವನ್ನು ಒಳಗೊಂಡಿದೆ. ಆಚಾರ ವಿಚಾರಗಳಲ್ಲಿ ಏಕ ರೀತಿಯ ಗುಣಲಕ್ಷಣವಿರುವ, ಭೌತಿಕ ಹಾಗೂ ಭಾವನೆಗಳಲ್ಲಿ ಸಮಾನತೆ ಕಾಣುವ ಜನರ ಗುಂಪನ್ನು ಜನಪದ ಎಂದಿದ್ದಾರೆ. ಪರಂಪರೆಯತ್ತ ಮುಖ ಮಾಡಿರುವ ಯಾವುದೇ ಜನಸಮುದಾಯ ಜನಪದರು ಎನಿಸಿಕೊಳ್ಳುತ್ತಾರೆ.
ಜನಪದಕ್ಕೆ ಸಂಬಂಧಿಸಿದ್ದು ಜನಪದ, ಸಮಸ್ತವನ್ನು ಒಳಗೊಂಡಿದ್ದು ಜಾನಪದ. ಸಂಸ್ಕೃತಿ ಜನರಿಂದ ಜನರಿಗೆ, ತಲೆಮಾರಿನಿಂದ ತಲೆಮಾರಿಗೆ ಸಾಗುತ್ತಾ ಬಂದಿದೆ. ಇಂಗ್ಲಿಷ್ ಭಾಷೆಯಲ್ಲಿ ‘Floklore’ ಎಂದು ಬಳಸುತ್ತಿರುವ ಶಬ್ದಕ್ಕೆ ಸಮನಾರ್ಥಕವಾಗಿ ‘ಜಾನಪದ’ ಪದ ಬಳಕೆಯಾಗುತ್ತಿದೆ. ‘Floklore’ ಪದಕ್ಕೆ ಪ್ರಾಚೀನ ಕಾಲದ, ಪ್ರಾಚೀನ ಜನರ ಸಮಸ್ತ ಸಂಸ್ಕೃತಿಯ ಸಾರರೂಪವೇ ಜಾನಪದ. ಅದರ ಅಭ್ಯಾಸವೇ ಜಾನಪದದ ಅಭ್ಯಾಸ, ಜಾನಪದ ಅಭ್ಯಾಸವೆಂದರೆ ಮನುಕುಲದ ಸಾಂಸ್ಕೃತಿಕ ಪರಂಪರೆಯ ಅಭ್ಯಾಸವೆಂದೇ ಅರ್ಥ.
ರಂಗಕಲಾವಿದೆಯರು ಮತ್ತು ಚಳವಳಿಗಳು (ಮೈಸೂರು ಸಂಸ್ಥಾನ ಮತ್ತು ಅಖಂಡ ಕರ್ನಾಟಕವನ್ನು ಅನುಲಕ್ಷಿಸಿ)
43 to 52
ಅನೇಕ ರಂಗಕಲಾವಿದೆಯರು ಬದುಕಿನ ಅನಿವಾರ್ಯತೆಗಾಗಿ, ಮತ್ತೆ ಕೆಲವರು ಅಭಿವ್ಯಕ್ತಿಯ ತುಡಿತದಿಂದಾಗಿ ರಂಗಭೂಮಿಗೆ ಪ್ರವೇಶಿಸಿದವರು. ಕಲಾದೃಷ್ಟಿಯಿಂದ ತಮ್ಮ ವೃತ್ತಿಯಲ್ಲಿ ಅಮೋಘವಾದದ್ದನ್ನು ಸಾಧಿಸಿದ್ದಾರೆ. ಕೆಲವರು ಬದುಕಿನ ಅನಿವಾರ್ಯತೆಯಿಂದ ಉಪಜೀವನಕ್ಕಾಗಿ ಎಂಬಂತೆ ಇದನ್ನು ಆರಂಭದಲ್ಲಿ ಆಶ್ರಯಿಸಬೇಕೆಂಬ ಹಂಬಲದಿಂದ ಬಂದವರು ಕೂಡ ವೃತ್ತಿ ರಂಗಭೂಮಿಯ ಹಿನ್ನೆಲೆಯಲ್ಲಿ ಇವರು ಸಾಧಿಸಿದ್ದ ಕಲಾಸಾದನೆ ಬೆಟ್ಟದಷ್ಟು ಎಂಬುವುದನ್ನು ಮರೆಯಬಾರದು. ಅನೇಕರು ಬಣ್ಣ ಬಳಿದು ಕಲೆಯೆಂಬ ಸಾಧನಾ ಪಥದಲ್ಲಿ ಸಿದ್ಧಿ ಕಾಣಬೇಕೆಂಬ ಅಪೇಕ್ಷೆಯಿಲ್ಲದೆ ರಂಗಭೂಮಿಗೆ ಪ್ರವೇಶಿಸಿದರೂ ಕೂಡ ನಂತರ ತಮ್ಮ ಬದುಕಿನ ದಡ ಮುಟ್ಟಲು ತಡಕಾಡಿದರೂ ಕೂಡ ಅವರಿಗರಿವಿಲ್ಲದೆ ಕಲಾಲೋಕದಲ್ಲಿ, ತಾವಾರಿಸಿಕೊಂಡ ಬಣ್ಣದ ಲೋಕದ ಕಲಾ ಪ್ರಪಂಚದಲ್ಲಿ ಗುರುತರವಾದ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ಅನೇಕ ರಂಗಕಲಾವಿದೆಯರಿಗೆ ರಂಗಜೀವನ ಅದು ತಮಗೆ ಬದುಕಿನ ಒಂದು ಭಾಗ ಎಂದು ಭಾವಿಸಿದ್ದರು ಅನೇಕ ಸಂದರ್ಭಗಳಲ್ಲಿ ವೃತ್ತಿನಾಟಕ ಕಂಪನಿಗಳಲ್ಲಿ ಅಧ್ಯಯನದ ಇತಿಹಾಸದಲ್ಲಿ ಕಲಾದೃಷ್ಟಿಯಿಂದ ರಂಗಕಲಾವಿದೆಯರೇ ಕಂಪನಿಯಾಗಿ, ಅಥವಾ ಕಂಪನಿಯೇ ರಂಗಕಲಾವಿದೆಯರಾಗಿ ಕಾಣಿಸಿಕೊಂಡಿರುವುದುಂಟು. ಯಾಂತ್ರಿಕ ಜಗತ್ತಿನಲ್ಲಿ ಬೇಸತ್ತ ಮನುಷ್ಯ, ರಂಗಭೂಮಿಯ ಕಲಾ ಪ್ರಕಾರದಲ್ಲಿ ನೂತನತೆಯನ್ನು ಬಯಸಿದಾಗ ಆ ಕಾರಣಕ್ಕಾಗಿಯೇ ಪೌರಾಣಿಕ, ಐತಿಹಾಸಿಕ, ಧಾರ್ಮಿಕ, ಭಕ್ತಿಪ್ರಧಾನವಾದ, ಸಾಮಾಜಿಕ ವಸ್ತುಗಳುಳ್ಳ ಹೊಸ ಅಲೆಯ ನಾಟಕಗಳಲ್ಲಿ ರಂಗಕಲಾವಿದೆಯರು ಅಭಿನಯಿಸಿ ನೂತನತೆಯನ್ನು ಸಾಧಿಸಿದ್ದಾರೆ.
ಶ್ರೀರಂಗಪಟ್ಟಣ ತಾಲ್ಲೂಕಿನ ಪ್ರಮುಖ ದೇವಿ ಶಿಲ್ಪಗಳು
53 to 59
ಶ್ರೀ ರಂಗಪಟ್ಟಣವು ಮಂಡ್ಯ ಜಿಲ್ಲೆಯ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಇದು ಟಿಪ್ಪು ಸುಲ್ತಾನನ ಆಳ್ವಿಕೆಯಲ್ಲಿ ರಾಜಧಾನಿಯಾಗಿತ್ತು. ಈ ತಾಣವು ಬೇಸಿಗೆಯ ಅರಮನೆ, ಕೋಟೆ, ಶ್ರೀ ರಂಗನಾಥ ದೇವಸ್ಥಾನ, ಗುಂಬಜ್, ಪಕ್ಷಿಧಾಮ ಮತ್ತು ಪ್ರವಾಸೋದ್ಯಮ ಸ್ಥಳಗಳಿಗೆ ಹೆಸರುವಾಸಿಯಾಗಿದೆ. ಆ ಪ್ರದೇಶದಲ್ಲಿ ಕಾವೇರಿ ನದಿಯ ದಡದಲ್ಲಿರುವ ಅನೇಕ ಪ್ರಸಿದ್ಧ ದೇವಿ ದೇವಾಲಯಗಳು ಸೂಕ್ತವಾಗಿವೆ. ಗೌತಮೆ ಮಹರ್ಷಿ ಮಹಾವಿಷ್ಣುವನ್ನು ಒರಗಿರುವ ಭಂಗಿಯಲ್ಲಿ ವೀಕ್ಷಿಸಲು ಈ ಸ್ಥಳದಲ್ಲಿ ಕಠಿಣ ತಪಸ್ಸು ಮಾಡಿದ್ದರು. ಈ ಸ್ಥಳದಲ್ಲಿ ವಿಷ್ಣುವು ತನ್ನನ್ನು ರಂಗನಾಥ ಸ್ವಾಮಿಯಾಗಿ ಚಿತ್ರಿಸಿಕೊಂಡಿದ್ದಾನೆ.
ಗೌತಮ ಮಹರ್ಷಿಯು ಅವರನ್ನು ಶಾಶ್ವತವಾಗಿ ಇಲ್ಲಿಯೇ ಇರುವಂತೆ ಕೇಳಿಕೊಂಡರು. ಆದ್ದರಿಂದ ಮುಂಬರುವ ಯುಗಗಳಲ್ಲಿ ಭಕ್ತರು ಈ ಭಗವಂತನನ್ನು ಪ್ರರ್ಥಿಸುತ್ತಾರೆ. ಶ್ರೀ ರಂಗಪಟ್ಟಣವು ಕ್ರಿ.ಶ. 1799 ಯಲ್ಲಿ ನಡೆದ ಆಂಗ್ಲೋ ಮೈಸೂರು ಯುದ್ಧದ ಕೊನೆಯ ಮತ್ತು ನಿರ್ಣಾಯಕ ಕದನ ನಡೆದ ಸ್ಥಳವಾಗಿದೆ.
ನಾನು ಕೆಲವು ಮುಖ್ಯ ದೇವಿ ಶಿಲ್ಪಗಳನ್ನು ಶ್ರೀರಂಗಪಟ್ಟಣದ ಸುತ್ತಲೂ ಕಂಡುಹಿಡಿದಿರುವುದನ್ನು ತೋರಿಸಲು ಪ್ರಯತ್ನಿಸುತ್ತೇನೆ. ಕ್ಷೇತ್ರ ಕಾರ್ಯದ ಆಧಾರದ ಮೇಲೆ ಅವುಗಳ ಪ್ರತಿಮಾಶಾಸ್ತ್ರದ ಬಗ್ಗೆ ಮಾಹಿತಿಯನ್ನು ನೀಡುತ್ತೇನೆ.
ಸ್ವಾತಂತ್ರ್ಯ ಹೋರಾಟ ಸಂದರ್ಭದ ನವೋದಯ ಕವನಗಳಲ್ಲಿ ಗಾಂಧೀಜಿ ಚಿತ್ರಣ
60 to 69
ಸಾವಿರ ಸಾವಿರ ಸಾಮಾನ್ಯರ ನಡುವೆ ಸಾವಿರ ಅಸಾಧಾರಣರು ಅಲ್ಲಿ ಇಲ್ಲಿ ಬಂದು ಹೋಗುತ್ತಾರೆ. ಅಂತಹ ಜನರು ಜಗತ್ತಿನಲ್ಲಿ ತಮ್ಮ ಹೆಸರನ್ನು ದಾಖಲಿಸುತ್ತಾರೆ. ಮನುಕುಲದ ಇತಿಹಾಸದಲ್ಲಿ ಎಲ್ಲರೂ ಬುದ್ಧನಂತೆ ಶಾಶ್ವತ ವೈಭವಕ್ಕೆ ಅರ್ಹರಾಗುವುದಿಲ್ಲ! ಎಲ್ಲರೂ ಬಸವಣ್ಣನವರಂತೆ ತಮ್ಮ ಗುರುತು ಬಿಡುವುದಿಲ್ಲ! ಎಲ್ಲರೂ ಮಹಾತ್ಮರಲ್ಲ! ತಮ್ಮ ವ್ಯಕ್ತಿತ್ವ ಹಾಗೂ ವಿಚಾರಧಾರೆಯಿಂದ ಇಡೀ ಜಗತ್ತಿನ ಜನರನ್ನು ಸೆಳೆದ ಮಹಾನ್ ಚೇತನ. ಮೋಹನ್ ದಾಸ್ ಕರಮಚಂದ್ ಗಾಂಧಿ, ಅಂತಹ ಅಪರಿಮಿತ ಪ್ರಭಾವದಲ್ಲಿ ಅನನ್ಯ. ಕನ್ನಡ ಕವಿಗಳು ಮಹಾತ್ಮಾ ಗಾಂಧಿಯನ್ನು ಅಪರೂಪದ ವ್ಯಕ್ತಿ ಎಂದು ಕರೆಯುತ್ತಾರೆ. ಅದರಲ್ಲೂ ಸ್ವಾತಂತ್ರ್ಯಪೂರ್ವದ ನವೋದಯ ಕವಿಗಳು ಹೇಗೆ ಬಣ್ಣಿಸಿದರು ಎಂಬುದನ್ನು ದಾಖಲಿಸುವ ಸಣ್ಣ ಪ್ರಯತ್ನ ಈ ಬರಹ.
ಸಮಾನತೆಯ ಹರಿಕಾರ ಬಸವಣ್ಣ
70 to 74
ಬಸವಣ್ಣ 12ನೇಯ ಶತಮಾನದಲ್ಲಿ ಕನ್ನಡ ನಾಡಿನಲ್ಲಿ ಮನುಕುಲದ ಉದ್ಧಾರಕ್ಕಾಗಿ ಎಲ್ಲ ರಂಗದಲ್ಲಿಯೂ ಕ್ರಾಂತಿಗೈದ ಮಹಾನ್ ಪುರುಷ, ಕ್ರಾಂತಿಕಾರಿ. ಸಮಾಜದಲ್ಲಿನ ಅನಿಷ್ಟಗಳನ್ನು ತೆಗೆದುಹಾಕಲು ಶ್ರಮಿಸಿದರು. ವಚನಗಳ ಮುಖಾಂತರ ಸಮಾಜದ ಮಧ್ಯದಲ್ಲಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡಲು ಜನರ ಮಧ್ಯ ದುಮುಕಿ ಜನಸಾಮಾನ್ಯರಿಗೆ ತಿಳಿಯುವ ಭಾಷೆಯಲ್ಲಿ ವಚನಗಳ ಮೂಲಕ ಸಮಾಜದ ಅಂಕು, ಡೊಂಕುಗಳನ್ನು, ಢಾಂಬಿಕತೆಗಳನ್ನು ಎಳೆ ಎಳೆಯಾಗಿ ಬಿಡಿಸಿ ತಿಳಿಗನ್ನಡ ವಚನಗಳ ಮೂಲಕ ನಿರೂಪಿಸಿದ ಮಹಾನ ನೇತಾರ. ಸದ್ಗುಣ ಸದಾಚಾರಗಳು ಯಾವುದೇ ಜಾತಿಗೆ ಮೀಸಲಾದವುಗಳಲ್ಲ ಇಲ್ಲವೆ ಹುಟ್ಟಿನಿಂದ ಬಂದವುಗಳೂ ಅಲ್ಲ. ಈ ಅಸ್ಪೃಶ್ಯತಾ ಭಾವನೆಯನ್ನು ಬಸವಣ್ಣನವರು ಸಂಪೂರ್ಣವಾಗಿ ತೆಗೆದುಹಾಕಿ ಸಮಾನತೆಯನ್ನು ತಮ್ಮ ಜೀವನದಲ್ಲಿ ಆಚರಣೆಗೆ ತಂದರು.
ಚಾರಿತ್ರಿಕ ಹಿನ್ನೆಲೆಯಲ್ಲಿ ಕನ್ನಡ ಭಾಷೆ ಮತ್ತು ಲಿಪಿಯ ಹುಟ್ಟು
75 to 84
ಕನ್ನಡ ಭಾಷೆಗೆ ಪ್ರಭುತ್ವದ ಹಿನ್ನೆಲೆ ಲಭಿಸಿದ ಕಾರಣದಿಂದಲೇ ಅದು ಆಡಳಿತ ಭಾಷೆಯಾಗಿ ರೂಪ ಪಡೆಯಲು ಅನೇಕ ಮಜಲುಗಳನ್ನು ದಾಟಿ ತನ್ನ ಸಾಂಸ್ಕೃತಿವಾದ ಹಿನ್ನೆಲೆಯ ಜೊತೆಗೆ ಮೇಳೈಸಿಕೊಂಡು ಲಿಪಿ ಸಹಿತ ಭಾಷೆಯಾಗಿ ಬಳಕೆಗೆ ಬರಬೇಕಾದರೆ ಸಾವಿರಾರು ವರ್ಷಗಳ ಬೆಳವಣಿಗೆಯನ್ನು ತನ್ನ ಒಡಲೊಳಗೆ ಹೊಂದಿರುತ್ತದೆ. ಪುನ್ನಾಟ, ಕದಂಬರು ಮತ್ತು ಗಂಗರು ಸಂಸ್ಕೃತ ಮತ್ತು ಕನ್ನಡ ಭಾಷೆಯನ್ನು ಬಳಸುವಲ್ಲಿ ಮಿಶ್ರ ರೂಪಿನ ಬಳಕೆಯನ್ನು ರೂಢಿಗೆ ತಂದರು. ಇಂದಿನ ನಗರ ವಾಸಿ ಜನ ಮಾತಿನಲ್ಲಿ ಕನ್ನಡ ಇಂಗ್ಲೀಷ್ ಬೆರಸಿ ಮಾತನಾಡುವಂತೆ ಅಂದಿನ ರಾಜ ಪ್ರಭುತ್ವದ ಭಾಷೆಯಲ್ಲಿ ಬರವಣಿಗೆಯಲ್ಲಿ ಕನ್ನಡ ಮತ್ತು ಸಂಸ್ಕೃತ ಪದಗಳ ಮಿಶ್ರಣಗೊಂಡು ರಚಿತವಾದ ಭಾಷೆಗಳನ್ನು ಗಮನಿಸಬಹುದು. ಆ ಕಾಲಕ್ಕಾಗಲೇ ಪ್ರಾಕೃತದ ಪ್ರಭಾವ ಕುಗ್ಗಿ ಅದರ ಸ್ಥಾನವನ್ನು ಸಂಸ್ಕೃತ ಪಡೆದುಕೊಳ್ಳುವ ಸರಿಸುಮಾರು ಕಾಲದಲ್ಲಿ – ಅಂದರೆ ೪ನೆಯ ಶತಮಾನದ ಆರಂಭದಲ್ಲಿನ ಸಂದರ್ಭದಲ್ಲಿ ಬ್ರಾಹ್ಮಿಸ್ಥಾನವನ್ನು ಕನ್ನಡಲಿಪಿ ಪಡೆದುಕೊಳ್ಳಲು ಮುಂದಾಗಿದ್ದುದನ್ನು ಚಾರಿತ್ರಿಕವಾಗಿ ಗುರುತಿಸಬಹುದು. ಕದಂಬರು ಸಂಸ್ಕೃತ ಭಾಷೆಯಲ್ಲಿ ಶಾಸನಗಳನ್ನು ಬರೆಸತೊಡಗಿದಾಗ ನೆಟ್ಟಿಗೆ ತಲೆಕಟ್ಟಿನ ದಕ್ಷಿಣ ಲಿಪಿಯನ್ನು ಅವರು ಬಳಸಿದರು. ಈ ಲಿಪಿಗೂ ಕನ್ನಡಲಿಪಿಗೂ ಗಾಢಸಂಬಂಧವಿದೆ ಎಂದು ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟರೆ, ಅದು ತುಂಬಾ ಗೌಣವೆಂದು ಇನ್ನು ಕೆಲವರು ವಾದಿಸಿರುವರು. ಇದು ಏನೇ ಇರಲಿ, ಪುನ್ನಾಟರು ಕನ್ನಡ ಲಿಪಿಯಲ್ಲಿ ಬರೆಸಿದ ಮೂರು ಶಾಸನಗಳಲ್ಲಿ ಒಂದು ಪೂರ್ಣ ಸಂಸ್ಕೃತ ಭಾಷೆಯಲ್ಲಿದ್ದರೆ ಇನ್ನೆರಡು ಕನ್ನಡ ಪದಗಳನ್ನು ಪೋಣಿಸಿಕೊಂಡ ಅಶುದ್ಧ ಸಂಸ್ಕೃತದಲ್ಲಿವೆ. ಇದೇ ನಮೂನೆಯನ್ನು ಕದಂಬರ, ಗಂಗರ ಶಾಸನದಲ್ಲಿ ಕಾಣಬಹದುದಾಗಿದೆ.
Heroic Women in The Freedom Struggle in The History of Karnataka
85 to 92
“Women’s Capacity in Kannada Nadu”
Women from Kannada Nadu have demonstrated their capacity.
They have fought against foreign attacks, demonstrating resilience and determination.
Many women from Kannada are seen in it. Prominent among them are ‘Ullalada Rani Abbakka’, ‘Kittur Chennamma’, ‘Belavadi Mallamma’, ‘Keladiya Chennamma, ‘ etc. All of them have fought for freedom in Karnataka, to save their land and culture till their last breath. Each of them had the same story or purpose. It is the protection of the citizens, the protection of the state, and from there the struggle for the freedom of the country. Women fought bravely and sacrificed their lives for the country as no one was less. All of them are role models for the entire women community. In this background, let us briefly know the achievements of these heroines.
Land Revenue System in The State of Mysore: A Review
93 to 99
To meet the administrative and other expenses, state has to levy taxes. Land revenue was the most notable source of state income. The state largely relied on land revenue for administrative, military and other important expenditure. Right from the time period of Manu, the land revenue has been a major source of income of the state. After the Reorganization the uniform Mysore Land Revenue Act and Rules were brought into force on 1st April 1964. The Survey and Settlement Department prepares a Register showing the area and assessment of each survey number. It also prepares another register known as akarbund. On receipt of this, Village Accountants are required to prepare the khetwar patrika or index of land. It is a combined document of tights, tenancy and crops. The original Record of Tenancy and Crops which is maintained in the Taluk Offices is rewritten once in five years. The Katha Register, another important document which is opened on the 1st of July every year is the basic record containing the entries with reference to the RTC, Khirdhi (day book) and receipt book. Patta or a ryot’s receipt book is kept with the ryot after getting the entries made regarding payment of land revenue and other dues. It is a record of land held by him. The Village Accountant should make entries in the Patta books of all registered transactions. The Sheristedar verifies the entries made in the Pattas. Tahsildars and Assistant Commissioner examine the Pattas by comparison with the connected ledgers. After each revenue year, annual accounts (Saljade) are prepared. The object of the system of Jamabandhi was to review the Revenue administration of each village. The main objective of the paper is to understand the history and evolution of land revenue accounts system in Mysore state. Data for the present study has been collected from secondary sources, including Gazetteers, books and internet sources.
A worth remembering Pepper Queen: Chēnnabhairādēvi
100 to 107
This research article aims to highlight the achievements of Queen Chēnnabhairādēvi who is unfamiliar to most people but worth remembering, ruled a small principality for a long time in a very commendable manner. She ruled the Sāḷuvas of Nagire (Honnāvar taluk in Uttara Kannada district) and Hāḍuvaḷḷi (taluk in Uttara Kannada district) principalities unitedly. Her achievements have been assessed by examining primary sources such as inscriptions, Portuguese accounts, works of court poets, and secondary sources. Examined sources show that her political struggles, commercial policies, cultural advancements, and conflict with the Portuguese made her one of the finest queens of Karnataka and India has ever seen. Portuguese addressed her ‘‘Reyna da Pimenta’’, the pepper queen.
Contribution of The Mysore Province to Literary Translation works in Kannada and English Language
108 to 111
The Mysore Province which was a seat of excellence greatly benefited by the establishment of the Oriental Library, at Mysore in 1891. The Literary translations from other languages to Kannada and vice versa, gained momentum from then and helped the Kannada literary arena, to flourish and bloom into a full-fledged expressive and inclusive modern language. The translations gave a host of novel and fresh literary forms and ideas, which joined forces with the grand repository of existing classic literature. Many literary personalities starting from B M Sri to A K Ramanujan, contributed to the enrichment of Kannada language through their deft translation works. The paper speaks about the contribution of Mysore province for such translatory works, lists out them and their impact on Kannada literature.
Banni Pooja (Shami Vriksha Pooja) and its Significance for Mysore Dasara Festival
112 to 118
In this paper an attempt has been made to explain the worship of Shammi Tree (Banni Mara) on the Vijaya-Dasami day in Mysore. Vijayadashami is celebrated differently in different parts of India, but one noticeable thing in most of these celebrations is the importance given to certain plants. Banni tree or Shammi tree is very sacred to Hindus and comes into prominence during Dasara festival. Every Hindu warrior before going to war would offer prayers to Banni tree and then proceed. Banni tree holds a special place in the Mysore Dasara where it’s worshipped on the Vijay-Dashami day. While every region has its own unique flavor and significance for the day, this is a piece discussing a ritualistic practice – Worship of Shammi Vruksha (Banni Tree) and giving Shammi Patra (Banni ele in Kannada) to others. Not only this, there are so many things were discussed in this paper.