ಶಿವಶರಣೆ ಅಕ್ಕಮಹಾದೇವಿ ವಚನಗಳಲ್ಲಿ ಕುಟುಂಬ

Main Article Content

ಶರಣಪ್ಪ ಆಡಕಾರ

Abstract

12ನೆಯ ಶತಮಾನದ ವಚನ ಚಳುವಳಿಯೊಂದು ಸಮಾಜದ ಪಿತೃಪ್ರಧಾನ ಧೋರಣೆ, ಯಜಮಾನಿಕೆ, ಜಾತಿ-ಮತ ಮತ್ತು ಸಾಂಸಾರಿಕ ಬಿಗುದಾಣಗಳನ್ನು ಪ್ರಶ್ನಿಸಿದ ಆಧ್ಯಾತ್ಮಿಕ-ಸಾಮಾಜಿಕ ಪ್ರತಿರೋಧ ಚಳುವಳಿಯಾಗಿದೆ. ಇದರೊಳಗೆ ಶಿವಶರಣೆ ಅಕ್ಕಮಹಾದೇವಿಯ ವಚನಗಳು ಮಹಿಳೆಯ ಬದುಕಿನ ಸಂಕಟ, ವಿವಾಹದ ಬಂಧನ, ಕುಟುಂಬದ ಒತ್ತಾಯ ಮತ್ತು ಪುರುಷ ಪ್ರಧಾನ ಮೌಲ್ಯಗಳ ವಿರುದ್ಧದ ತಾತ್ವಿಕ ನಿಲುವನ್ನು ಬಲವಾಗಿ ಪ್ರತಿಧ್ವನಿಸುತ್ತವೆ. ಸಂಸಾರ ಮತ್ತು ಕುಟುಂಬದ ಪರಿಕಲ್ಪನೆಗಳನ್ನು ಕೇವಲ ಸಮಾಜದ ನಿರ್ಮಿತ ವ್ಯವಸ್ಥೆಯಾಗಿಯೇ ನೋಡಿದ ಅಕ್ಕ, ಲೌಕಿಕ ಗಂಡನನ್ನು ನಿರಾಕರಿಸಿ ಆಧ್ಯಾತ್ಮಿಕ ಗಂಡನಾದ ಚನ್ನಮಲ್ಲಿಕಾರ್ಜುನನನ್ನು ಅರಸುವ ಮೂಲಕ ಹೊಸ ಸ್ತ್ರೀ-ಆಧ್ಯಾತ್ಮಿಕತೆಗಾಗಿ ಮಾರ್ಗ ತೆರೆದಳು.
ಕುಟುಂಬವು ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣಕ್ಕೆ ಆಧಾರವಾದರೂ, ಪಿತೃಪ್ರಧಾನ ಸಂರಚನೆಯಲ್ಲಿ ಕುಟುಂಬವು ಸ್ತ್ರೀಯನ್ನು ಗೃಹಾಚಾರ, ಮಾತೃತ್ವ ಮತ್ತು ಗಂಡಸಾಧೀನ ಬದುಕಿಗೆ ಕುಗ್ಗಿಸುವ ಸಾಧನವಾಗುತ್ತದೆ. ಈ ಹಿನ್ನೆಲೆಯಲ್ಲಿ ‘ಈ ಸಾವ ಕೆಡುವ ಗಂಡರ ನೊಯ್ದು ಒಲೆಯೊಳಗಿಕ್ಕು’ ಎಂಬ ಆಕ್ರೋಶದ ವಚನಗಳ ಮೂಲಕ ಅಕ್ಕ ಸಾಮಾಜಿಕ-ಪುರುಷಾಧಿಪತ್ಯವನ್ನು ವಿರೋಧಿಸಿ ತನ್ನ ಸ್ವಾತಂತ್ರ್ಯ, ಆಧ್ಯಾತ್ಮಿಕ ಹಕ್ಕು ಮತ್ತು ಜೀವದ ಸ್ವಮೌಲ್ಯವನ್ನು ಪ್ರತಿಪಾದಿಸುತ್ತಾಳೆ.
ಅಕ್ಕಮಹಾದೇವಿಯ ವಚನಗಳು ಸಂಸಾರದ ವಿರುದ್ಧದ ಪರಿತ್ಯಾಗಮಾರ್ಗವನ್ನು ಮಾತ್ರವಲ್ಲ, ಮಹಿಳೆಯ ಸ್ವಯಂಪ್ರತಿಷ್ಠೆಗಾಗಿ ಕುಟುಂಬದ ಮಿತಿ ಮೀರುವ ಅಗತ್ಯವನ್ನೂ ಸಮರ್ಥಿಸುತ್ತವೆ. ಸಮಾಜವು ನಿಯೋಜಿಸಿದ ಕುಟುಂಬ-ವಿವಾಹ ಮಾದರಿಗಳಿಗೆ ಪರ್ಯಾಯವಾಗಿ ‘ನಿಶ್ಚಲ ಚೈತನ್ಯ’ವನ್ನು ಗಂಡನಾಗಿ ಕೊಂಡಾಡಿದ ಅಕ್ಕ, ಆಧ್ಯಾತ್ಮವನ್ನು ಸ್ವಾತಂತ್ರ್ಯದ ವೇದಿಕೆ ಮಾಡಿಕೊಂಡಳು. ಹೀಗಾಗಿ ಅಕ್ಕಮಹಾದೇವಿಯ ವಚನಗಳಲ್ಲಿ ಕುಟುಂಬವು ಕೇವಲ ಲೌಕಿಕ ಸಂಸ್ಥೆಯಲ್ಲ, ಆತ್ಮಸ್ವಾತಂತ್ರ್ಯ ಮತ್ತು ಮುಕ್ತಿಯ ನಡುವೆ ಅಡ್ಡವಾಗುವ ಸಂರಚನೆಯಾಗಿ ಕಾಣುತ್ತದೆ.

Article Details

Section

Research Articles

Author Biography

ಶರಣಪ್ಪ ಆಡಕಾರ

ಅತಿಥಿ ಉಪನ್ಯಾಸಕರು, ಕಿಟೆಲ್ ಕಲಾ ಮಹಾವಿದ್ಯಾಲಯ, ಧಾರವಾಡ.

References

ಕಲಬುರ್ಗಿ ಎಂ.ಎಂ. (ಪ್ರಧಾನ ಸಂಪಾದಕರು), (2001), ಸಮಗ್ರ ವಚನ ಸಂಪುಟ-05, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.

ನಾರಾಯಣ ಪಿ.ವಿ., (2010), ವಚನ ಸಾಹಿತ್ಯ: ಒಂದು ಸಾಂಸ್ಕೃತಿಕ ಅಧ್ಯಯನ, ಮೈಸೂರು: ಗೀತಾ ಬುಕ್ ಹೌಸ್.

ಕಮಲಮ್ಮ ವಿ., (1997), ಹನ್ನೆರಡನೆಯ ಶತಮಾನದ ಕನ್ನಡ ವಚನ ಸಾಹಿತ್ಯದಲ್ಲಿ ಚಿತ್ರಿತವಾದ ಆದರ್ಶ ಕುಟುಂಬ ವ್ಯವಸ್ಥೆ, ಮೈಸೂರು: ಶ್ರೀಗಂಧ ಪ್ರಕಾಶನ.

ಅರವಿಂದ ಜತ್ತಿ (ಸಂಪಾದಕರು), (2025), ಬಸವ ಪಥ (ಸಂಪುಟ-46, ಸಂಚಿಕೆ-2), ಬೆಂಗಳೂರು: ಬಸವ ಸಮಿತಿ.

ಸವಿತಾ ರವಿಶಂಕರ್, (2021), ಸ್ತ್ರೀವಚನ ತಾತ್ವಿಕತೆ, ಮೈಸೂರು: ಶ್ರೀಕ್ಷೇತ್ರ ಪ್ರಕಾಶನ.

ಬಸವರಾಜ ಬಳಿಗಾರ, (2020), ಸಂತೆಯ ಚೆನ್ನ ಬೆಳಕು, ಗದಗ: ಲಡಾಯಿ ಪ್ರಕಾಶನ.