ಮೌಲ್ಯ ಸಾಹಿತ್ಯದ ಹಿರಿಮೆ-ಗರಿಮೆ

Main Article Content

ಹೆಚ್.ಎಂ. ಮಲ್ಲಿಕಾರ್ಜುನ

Abstract

ಮಾನವನ ಬದುಕನ್ನು ಹಸನುಗೊಳಿಸುವಲ್ಲಿ ಸಾಹಿತ್ಯದ ಪಾತ್ರ ಹಿರಿದಾದುದು. ಜೈನ ಧರ್ಮದ ಅಹಿಂಸಾ ತತ್ವದಿಂದ ಹಿಡಿದು, ಹನ್ನೆರಡನೇ ಶತಮಾನದ ವಚನ ಚಳುವಳಿಯ ಸಾಮಾಜಿಕ ಸಮಾನತೆಯ ಆಶಯದವರೆಗೆ ಕನ್ನಡ ಸಾಹಿತ್ಯವು ಮೌಲ್ಯಗಳನ್ನು ಎತ್ತಿ ಹಿಡಿದಿದೆ. ಬಸವಣ್ಣನವರ ಕಾಯಕ ನಿಷ್ಠೆ ಮತ್ತು ಜಾತಿ ರಹಿತ ಸಮಾಜದ ಕಲ್ಪನೆ, ದಾಸ ಸಾಹಿತ್ಯದ ಭಕ್ತಿ ಹಾಗೂ ತಾಳ್ಮೆಯ ಸಂದೇಶಗಳು ಸಮಾಜವನ್ನು ತಿದ್ದುವಲ್ಲಿ ಪ್ರಮುಖ ಪಾತ್ರವಹಿಸಿವೆ. ತತ್ವಪದಕಾರರು ಆಡಂಬರದ ಬದುಕನ್ನು ವಿರೋಧಿಸಿ, ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಒತ್ತು ನೀಡಿದರು. ಸರ್ಪಭೂಷಣ ಶಿವಯೋಗಿಗಳಂತಹ ತತ್ವಪದಕಾರರು ಡಾಂಭಿಕ ಭಕ್ತಿಯನ್ನು ಖಂಡಿಸಿದರು. ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವ, ಜೀವನ ಪ್ರೀತಿಯನ್ನು ಕಲಿಸುವ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಮೌಲ್ಯಾಧಾರಿತ ಸಾಹಿತ್ಯದ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ.

Article Details

Section

Research Articles

Author Biography

ಹೆಚ್.ಎಂ. ಮಲ್ಲಿಕಾರ್ಜುನ

ಹುಸ್ಕೂರು ಗ್ರಾಮ, ನಂಜನಗೂಡು ತಾಲ್ಲೂಕು, ಮೈಸೂರು.

How to Cite

ಹೆಚ್.ಎಂ. ಮಲ್ಲಿಕಾರ್ಜುನ. (2023). ಮೌಲ್ಯ ಸಾಹಿತ್ಯದ ಹಿರಿಮೆ-ಗರಿಮೆ . ಅಕ್ಷರಸೂರ್ಯ (AKSHARASURYA), 2(01), 11 to 14. https://aksharasurya.com/index.php/latest/article/view/32

References

ಡಾ. ಎಲ್. ಬಸವರಾಜು(ಸಂ) : ಸರ್ವಜ್ಞನ ವಚನಗಳು, ಸಪ್ನ ಬುಕ್ ಹೌಸ್ ಬೆಂಗಳೂರು ೨೦೧೨

ಡಾ. ಎಂ.ಎಂ. ಕಲಬುರ್ಗಿ (ಪ್ರ.ಸಂ) : ಬಸವಯುಗದ ವಚನ ಮಹಾಸಂಪುಟ : ೧. ಕನ್ನಡ ಪುಸ್ತಕ ಪ್ರಾಧಿಕಾರ, ೨೦೦೬

ಎಚ್.ಎಸ್. ವೆಂಕಟೇಶ ಮೂರ್ತಿ : ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ಸಂಪುಟ ೮, ಕೀರ್ತನಾಕಾರರು, ಸಪ್ನ ಬುಕ್ ಹೌಸ್ ಬೆಂಗಳೂರು, ೨೦೧೮

ಡಾ. ಹೆಚ್.ಟಿ. ಶೈಲಜ (ಸಂ) : ಡಾ. ಎಚ್. ತಿಪ್ಪೇರುದ್ರಸ್ವಾಮಿ ಸಮಗ್ರ ಸಾಹಿತ್ಯ ಮಾಲೆ-೯, ವಿಮರ್ಶಾ ಸಾಹಿತ್ಯ -೧ ತಾತ್ವಿಕ ವಿಮರ್ಶೆ, ಕನ್ನಡದಲ್ಲಿ ಕೈವಲ್ಯ ಸಾಹಿತ್ಯ, ಭಾರತೀ ಪ್ರಕಾಶನ ಮೈಸೂರು, ೨೦೧೮

Most read articles by the same author(s)