ಅಳಿವಿನಿಂದ ಉಳಿವಿಗೆ ಕಾದಂಬರಿ ವಿಶ್ಲೇಷಣೆ

Main Article Content

ಹೆಚ್.ಎಂ. ಮಲ್ಲಿಕಾರ್ಜುನ
ಮೀನಾಕ್ಷಿ

Abstract

ಡಾ. ಎಚ್. ತಿಪ್ಪೇರುದ್ರಸ್ವಾಮಿ ಅವರು ರಚಿಸಿದ 'ಅಳಿವಿನಿಂದ ಉಳಿವಿಗೆ' ಕಾದಂಬರಿಯನ್ನು ಸಂಶೋಧನಾತ್ಮಕವಾಗಿ ಇಲ್ಲಿ ವಿಶ್ಲೇಷಿಸಲಾಗಿದೆ. 12ನೇ ಶತಮಾನದ ಕಲ್ಯಾಣ ಕ್ರಾಂತಿಯ ನಂತರದ ಘಟನೆಗಳು, ಶರಣರ ಮೇಲಾದ ರಾಜಕೀಯ ಮತ್ತು ಧಾರ್ಮಿಕ ಧಾಳಿಗಳು, ಹಾಗೂ ವಚನ ಸಾಹಿತ್ಯದ ರಕ್ಷಣೆಗಾಗಿ ಅವರು ಉಳವಿಯತ್ತ ಬೆಳೆಸಿದ ಸಾಹಸಮಯ ಪಯಣವನ್ನು ಈ ಕಾದಂಬರಿ ಚಿತ್ರಿಸುತ್ತದೆ. ಚನ್ನಬಸವಣ್ಣ, ಅಕ್ಕನಾಗಮ್ಮ ಮತ್ತು ಇತರ ಶರಣರ ನೇತೃತ್ವದಲ್ಲಿ ನಡೆದ ಈ ಐತಿಹಾಸಿಕ ಪಯಣದ ವಿವಿಧ ಹಂತಗಳನ್ನು (ಬಯಕೆಯ ಬಿತ್ತಿ, ಧರೆಹತ್ತಿ ಉರಿದೊಡೆ, ಇತ್ಯಾದಿ) ಲೇಖಕರು ಕ್ರಮಬದ್ಧವಾಗಿ ಚರ್ಚಿಸಿದ್ದಾರೆ. ಇತಿಹಾಸ ಮತ್ತು ಕಲ್ಪನೆಯ ಸಮ್ಮಿಲನದೊಂದಿಗೆ, ಕಷ್ಟದ ಸಮಯದಲ್ಲೂ ಶರಣರು ಹೇಗೆ ತಮ್ಮ ತತ್ತ್ವಗಳಿಗೆ ಬದ್ಧರಾಗಿದ್ದರು ಮತ್ತು ಶರಣ ಧರ್ಮದ ಮೌಲ್ಯಗಳನ್ನು ಹೇಗೆ ಉಳಿಸಿಕೊಂಡರು ಎಂಬುದನ್ನು ಈ ಬರಹವು ವಿವರಿಸುತ್ತದೆ.

Article Details

Section

Research Articles

Author Biographies

ಹೆಚ್.ಎಂ. ಮಲ್ಲಿಕಾರ್ಜುನ

ಸಹಾಯಕ ಕನ್ನಡ ಪ್ರಾಧ್ಯಾಪಕರು, ಮಹಾಜನ ಪ್ರಥಮದರ್ಜೆ ಕಾಲೇಜು, ಮೈಸೂರು.

ಮೀನಾಕ್ಷಿ

ಸಹಾಯಕ ಕನ್ನಡ ಪ್ರಾಧ್ಯಾಪಕರು, ಜೆಎಸ್‌ಎಸ್ ಕಾಲೇಜು, ಊಟಿ ರಸ್ತೆ, ಮೈಸೂರು.

References

ಎಂ.ಎಂ ಕಲಬುರ್ಗಿ (ಪ್ರ.ಸಂ): ಬಸವಯುಗದ ಮಹಾಸಂಪುಟ -1.

ರಂಜಾನ್ ದರ್ಗಾ: ಜಾತಿವ್ಯವಸ್ಥೆಗೆ ಸವಾಲಾದ ಶರಣರು.

ಗಿರಡ್ಡಿ ಗೋವಿಂದರಾಜ: ಕಾದಂಬರಿಯಲ್ಲಿ ವೈಚಾರಿಕತೆ, ಮನ್ವಂತರ-7.

ಡಾ. ಎಚ್.ಟಿ. ಶೈಲಜ(ಸಂ): ಡಾ. ಎಚ್. ತಿಪ್ಪೇರುದ್ರಸ್ವಾಮಿ ಸಮಗ್ರ ಸಾಹಿತ್ಯ ಮಾಲೆ-5.

ಚನ್ನೇಶ್‌ ಹೊನ್ನಾಳಿ: ಎಚ್‌. ತಿಪ್ಪೇರುದ್ರಸ್ವಾಮಿ, ಸಾಹಿತ್ಯ ಅಕಾಡೆಮಿ ದೆಹಲಿ 2013.

ಚಂದ್ರಶೇಖರ ನಾರಣಾಪುರ: ಕರ್ನಾಟಕದ ವೀರಶೈವ ಮಠಗಳು ಸಂ-1.