ಚಾಮರಸನ ಪ್ರಭುಲಿಂಗಲೀಲೆ

Main Article Content

ಮೀನಾಕ್ಷಿ
ಹೆಚ್.ಎಂ. ಮಲ್ಲಿಕಾರ್ಜುನ

Abstract

ಹದಿನೈದನೆಯ ಶತಮಾನದ ಪ್ರಮುಖ ವೀರಶೈವ ಕವಿ ಚಾಮರಸನು ರಚಿಸಿದ ಪ್ರಭುಲಿಂಗಲೀಲೆಯು ಅಲ್ಲಮಪ್ರಭುವಿನ ಜೀವನ ಮತ್ತು ಸಾಧನೆಗಳನ್ನು ಅನಾವರಣಗೊಳಿಸುವ ಮಹತ್ವದ ಕೃತಿಯಾಗಿದೆ. ವಿಜಯನಗರ ಸಾಮ್ರಾಜ್ಯದ ಕಾಲಘಟ್ಟದಲ್ಲಿ ರಚಿತವಾದ ಈ ಕಾವ್ಯವು ಅಲ್ಲಮನು ಮಾಯೆಯನ್ನು ಗೆದ್ದು, ಶೂನ್ಯ ಸಿಂಹಾಸನವನ್ನೇರುವ ಪರಿಯನ್ನು ವರ್ಣಿಸುತ್ತದೆ. ಲೌಕಿಕ ಮತ್ತು ಪಾರಮಾರ್ಥಿಕ ಮೌಲ್ಯಗಳ ಸಂಘರ್ಷವನ್ನು ಇಲ್ಲಿ ಚಿತ್ರಿಸಲಾಗಿದೆ. ಕವಿ ತನ್ನ ಪಾಂಡಿತ್ಯ ಮತ್ತು ಭಕ್ತಿಭಾವವನ್ನು ಈ ಕೃತಿಯ ಮೂಲಕ ವ್ಯಕ್ತಪಡಿಸಿದ್ದು, ವೀರಶೈವ ಧರ್ಮದ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಮತ್ತು ಅಲ್ಲಮನ ವ್ಯಕ್ತಿತ್ವವನ್ನು ಮಹೋನ್ನತಿಗೆ ಏರಿಸುವಲ್ಲಿ ಈ ಕೃತಿ ಯಶಸ್ವಿಯಾಗಿದೆ.

Article Details

Section

Research Articles

Author Biographies

ಮೀನಾಕ್ಷಿ

ಕನ್ನಡ ಸಹಾಯಕ ಪ್ರಾಧ್ಯಾಪಕರು, ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ಮೈಸೂರು.

ಹೆಚ್.ಎಂ. ಮಲ್ಲಿಕಾರ್ಜುನ

ಕನ್ನಡ ಸಹಾಯಕ ಪ್ರಾಧ್ಯಾಪಕರು, ಮಹಾಜನ ಪ್ರಥಮ ದರ್ಜೆ ಕಾಲೇಜು, ಮೈಸೂರು.

References

ಕನ್ನಡ ಸಾಹಿತ್ಯ ಚರಿತ್ರೆ : ರಂ.ಶ್ರೀ ಮುಗಳಿ.

ಪ್ರಭುಲಿಂಗಲೀಲೆ ಸಂಗ್ರಹ: ಬಿ.ಎಂ. ಶ್ರೀಕಂಠಯ್ಯ.

ಚಾಮರಸಕೃತ ಪ್ರಭುಲಿಂಗಲೀಲೆ (ಭಾಗ-1): ಸಂಪಾದಕರು: ಆರ್.ಸಿ. ಹಿರೇಮಠ, ಎಮ್.ಎಸ್. ಸುಂಕಾಪುರ.

ಚಾಮರಸ ಕವಿಯ ಪ್ರಭುಲಿಂಗಲೀಲೆ ಗದ್ಯಾನುವಾದ ಮತ್ತು ಕಾವ್ಯ ವಿಮರ್ಶೆ: ಲೇಖಕರು: ಪ್ರೋ. ಬಿ.ಸಿ ಜವಳಿ ಎಮ್.ಎ ಮತ್ತು ಶ್ರೀಮಲ್ಲಾಬಾದಿ ವೀರಭದ್ರಪ್ಪ.

ಪ್ರಭುಲಿಂಗಲೀಲೆಯ ಸಂಗ್ರಹ: ಸಂ: ಎಂ.ಎಸ್. ಬಸವಲಿಂಗಯ್ಯ ಮತ್ತು ಎಂ.ಆರ್. ಶ್ರೀನಿವಾಸಮೂರ್ತಿ.