ಜನಪದ ಪರಂಪರೆ ಮತ್ತು ಆಧುನಿಕ ಪ್ರಭಾವಗಳು

Main Article Content

ಹೆಚ್.ಎಂ. ಮಲ್ಲಿಕಾರ್ಜುನ

Abstract

ಜನಪದ ಪರಂಪರೆ ಎನ್ನುವುದು ಒಂದು ಸಮಾಜದ ಸಾಂಸ್ಕೃತಿಕ ಗುರುತು. ಪೀಳಿಗೆಯಿಂದ ಪೀಳಿಗೆಗೆ ಮೌಖಿಕವಾಗಿ ಸಾಗಿಬಂದ ಆಚರಣೆಗಳು, ನಂಬಿಕೆಗಳು, ಕಲೆ, ಸಾಹಿತ್ಯ, ಸಂಗೀತ ಮತ್ತು ಜೀವನಶೈಲಿಯೇ ಜನಪದ ಪರಂಪರೆಯ ಮೂಲ. ಇದು ಜನಸಾಮಾನ್ಯರ ಬದುಕಿನ ಅನುಭವಗಳಿಂದ ಹುಟ್ಟಿ, ಸಮುದಾಯದ ಒಕ್ಕೂಟವನ್ನು ಪ್ರತಿಬಿಂಬಿಸುತ್ತದೆ. ಜನಪದ ಗೀತೆಗಳು, ಕಥೆಗಳು, ನೃತ್ಯಗಳು, ಹಬ್ಬಗಳು ಹಾಗೂ ಸಂಸ್ಕಾರಗಳು ಜನರ ದಿನನಿತ್ಯದ ಬದುಕಿನೊಂದಿಗೆ ನಿಕಟವಾಗಿ ಸಂಬಂಧವನ್ನು ಹೊಂದಿವೆ.
ಆಧುನಿಕ ಯುಗದಲ್ಲಿ ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ನಗರೀಕರಣ ಮತ್ತು ಜಾಗತೀಕರಣವು ಸಮಾಜದಲ್ಲಿ ಮಹತ್ತರವಾದ ಬದಲಾವಣೆಗಳನ್ನು ತಂದಿವೆ. ಈ ಆಧುನಿಕ ಪ್ರಭಾವಗಳು ಜನಪದ ಪರಂಪರೆಯ ಮೇಲೂ ಪರಿಣಾಮ ಬೀರಿವೆ. ಒಂದು ಕಡೆ ಮಾಧ್ಯಮಗಳು ಮತ್ತು ಡಿಜಿಟಲ್ ತಂತ್ರಜ್ಞಾನಗಳ ಮೂಲಕ ಜನಪದ ಕಲೆಗಳಿಗೆ ಹೊಸ ವೇದಿಕೆಗಳು ದೊರೆತಿವೆ. ಜನಪದ ಸಾಹಿತ್ಯ, ಸಂಗೀತ ಮತ್ತು ನೃತ್ಯಗಳು ದಾಖಲೀಕರಣಗೊಂಡು ಅವುಗಳನ್ನು ಸಂರಕ್ಷಿಸುವ ಅವಕಾಶಗಳು ಹೆಚ್ಚಿವೆ. ಹೊಸ ಪ್ರಯೋಗಗಳ ಮೂಲಕ ಯುವಜನರಲ್ಲಿ ಜನಪದ ಪರಂಪರೆಯತ್ತ ಆಸಕ್ತಿ ಮೂಡುತ್ತಿದೆ. ಆದರೆ ಇನ್ನೊಂದು ಕಡೆ, ನಗರ ಜೀವನಶೈಲಿ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಅನೇಕ ಜನಪದ ಆಚರಣೆಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ವಾಣಿಜ್ಯೀಕರಣದಿಂದ ಜನಪದ ಕಲೆಗಳ ಮೂಲ ಆತ್ಮ ಮತ್ತು ಮೌಲ್ಯಗಳಿಗೆ ಧಕ್ಕೆ ಉಂಟಾಗಿದೆ. ಸಮುದಾಯದ ಐಕ್ಯತೆಯ ಬದಲಿಗೆ ವೈಯಕ್ತಿಕತೆಯು ಹೆಚ್ಚಾಗುತ್ತಿರುವುದು ಜನಪದ ಸಂಸ್ಕೃತಿಗೆ ಸವಾಲಾಗಿದೆ.
ಆದುದರಿಂದ ಜನಪದ ಪರಂಪರೆಯನ್ನು ತಿರಸ್ಕರಿಸದೇ, ಆಧುನಿಕತೆಯೊಂದಿಗೆ ಸಮತೋಲನ ಸಾಧಿಸುವುದು ಅಗತ್ಯ. ಶಿಕ್ಷಣ ಕ್ಷೇತ್ರದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಬೆಂಬಲ ನೀಡುವುದರ ಮೂಲಕ ಜನಪದ ಪರಂಪರೆಯನ್ನು ಜೀವಂತವಾಗಿ ಉಳಿಸಬಹುದು. ಜನಪದ ಸಂಸ್ಕೃತಿಯ ಸಂರಕ್ಷಣೆಯು ನಮ್ಮ ಸಾಂಸ್ಕೃತಿಕ ಅಸ್ತಿತ್ವದ ರಕ್ಷಣೆಯಾಗಲಿದೆ.
ಆಧುನಿಕ ಪ್ರಭಾವಗಳು ಹೇಗೆ ಜನಪದ ಸಂಸ್ಕೃತಿಯನ್ನು ಹಿನ್ನೆಲೆಗೆ ಸರಿಯುವಂತೆ ಮಾಡಿವೆ ಎಂಬುದನ್ನು ಕುರಿತು ಗಂಭೀರವಾಗಿ ಇಂದು ಪರಿಗಣಿಸಬೇಕಾದ ಅಗತ್ಯತೆ ಇದೆ. ಪರಂಪರೆಯಿಂದ ನಡೆದುಕೊಂಡು ಬಂದ ಅನೇಕ ಆಚರಣೆಗಳನ್ನು ಅನುಸರಿಸುವುದು ಅವಮಾನದ ಸಂಗತಿ ಎಂಬಂತೆ ಈ ಪೀಳಿಗೆಯವರು ಭಾವಿಸಿರುವುದು ಜನಪದ ಪರಂಪರೆಯ ಅಳಿವಿಗೆ ಕಾರಣವಾಗಿದೆ. ಇಂತಹ ಸೂಕ್ಷ್ಮ ಅಂಶಗಳನ್ನು ಈ ಸಂಶೋಧನಾ ಲೇಖನದಲ್ಲಿ ಚರ್ಚಿಸಲಾಗುವುದು. ಅದರ ಜೊತೆಗೆ ಅದರ ಉಳಿವಿಗೆ ಅನುಸರಿಸಬೇಕಾದ ಕ್ರಮಗಳನ್ನು ವಿವೇಚಿಸಲಾಗುತ್ತದೆ.

Article Details

Section

Research Articles

Author Biography

ಹೆಚ್.ಎಂ. ಮಲ್ಲಿಕಾರ್ಜುನ

ಕನ್ನಡ ಸಹಾಯಕ ಪ್ರಾಧ್ಯಾಪಕರು, ಕ್ರೈಸ್ಟ್‌ ಅಕಾಡೆಮಿ ಇನ್ಸ್ಟಿಟ್ಯೂಟ್‌ ಫಾರ್‌ ಅಡ್ವಾನ್ಸ್ಡ್‌ ಸ್ಟಡೀಸ್‌, ಬೆಂಗಳೂರು.

References

ಅಂಬಳಿಕೆ ಹಿರಿಯಣ್ಣ, (1984), ಜಾನಪದ: ಕೆಲವು ವಿಚಾರಗಳು, ಮೈಸೂರು: ಪ್ರಜ್ವಲ ಪ್ರಕಾಶನ.

ಚೇತನ ಎಚ್.ಆರ್., ದಕ್ಷಿಣ ಕರ್ನಾಟಕ ನೃತ್ಯಗಳು, ಗದಗ: ವಿದ್ಯಾನಿಧಿ ಪ್ರಕಾಶನ.

ನರಸಿಂಗರಾವ್‌ ಮಾನ್ವಿ, ಎಫ್.‌ಜಿ. ಮಠದ್‌ ಮತ್ತು ಸಿದ್ದಯ್ಯ ಪುರಾಣಿಕ್‌ (ಸಂ), (1956), ಪದ್ಯರತ್ನಾಕರ, ಹೈದರಾಬಾದು: ಹೈದರಾಬಾದು ಕನ್ನಡ ಸಾಹಿತ್ಯ ಪರಿಷತ್ತು.

ರಾಮಚಂದ್ರೇಗೌಡ ಹಿ.ಶಿ. ಮತ್ತು ಚಕ್ಕೆರೆ ಶಿವಶಂಕರ್ (ಸಂ), (2003), ಜಾನಪದ ತಲೆಮಾರು-1 (ಒಂದೆ ಚಿತ್ತದಿಂ ನೆನೆದು), ಬೆಂಗಳೂರು: ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ.

ಹಲಸಂಗಿ ಚೆನ್ನಮಲ್ಲಪ್ಪ, ಲಿಂಗಪ್ಪ, ರೇವಪ್ಪ ಮತ್ತು ಗೆಳೆಯರು (ಸಂ), (1990), ಗರತಿಯ ಹಾಡು, ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ.