ಬಹುಭಾಷಿಕತೆ ಮತ್ತು ಕನ್ನಡ
Main Article Content
Abstract
ಬಹುಭಾಷಿಕ ಪರಿಸರವು ವೈವಿಧ್ಯಮಯ ಸಾಂಸ್ಕೃತಿಕ ಚಹರೆಗಳ ಸಂಕೇತವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಇಂಗ್ಲಿಷ್‌ನಂತಹ ಪ್ರಬಲ ಭಾಷೆಗಳು ಯಜಮಾನಿಕೆ ಸಾಧಿಸುತ್ತಿದ್ದು, ಕನ್ನಡವೂ ಸೇರಿದಂತೆ ಅನೇಕ ಸ್ಥಳೀಯ ಭಾಷೆಗಳು ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿವೆ. ಐತಿಹಾಸಿಕವಾಗಿ ಸಂಸ್ಕೃತವು ಶಿಕ್ಷಣದಲ್ಲಿ ಅಧಿಪತ್ಯ ಸಾಧಿಸಿದ್ದಂತೆ, ಪ್ರಸ್ತುತ ಇಂಗ್ಲಿಷ್ ಮಾಧ್ಯಮದ ವ್ಯಾಮೋಹವು ತಳಮಟ್ಟದ ಜನರನ್ನು ಭಾಷಿಕ ಹಾಗೂ ಆರ್ಥಿಕ ಗೊಂದಲಕ್ಕೆ ದೂಡುತ್ತಿದೆ. ಮಾತೃಭಾಷಾ ಶಿಕ್ಷಣದ ನಿರ್ಲಕ್ಷ್ಯದಿಂದಾಗಿ ಮುಂದಿನ ತಲೆಮಾರಿನ ಸಾಂಸ್ಕೃತಿಕ ಬೇರುಗಳು ಸಡಿಲಗೊಳ್ಳುತ್ತಿವೆ. ಪ್ರಾದೇಶಿಕ ಭಾಷೆಗಳ ಸಬಲೀಕರಣಕ್ಕಾಗಿ ಸಮಾಜ, ಶಿಕ್ಷಣ ವ್ಯವಸ್ಥೆ ಮತ್ತು ಸರ್ಕಾರಗಳು ಜಂಟಿಯಾಗಿ ಪೂರಕ ನೀತಿಗಳನ್ನು ರೂಪಿಸಬೇಕಾದ ತುರ್ತು ಅಗತ್ಯವಿದೆ. ಇಲ್ಲವಾದಲ್ಲಿ, ಪ್ರಬಲ ಅನ್ಯಭಾಷೆಯ ಏಕಸ್ವಾಮ್ಯದಿಂದಾಗಿ ಬಹುಭಾಷಿಕತೆಯ ಸಹಜ ಸೌಂದರ್ಯ ಮತ್ತು ದೇಶೀಯ ಸಂಸ್ಕೃತಿಗಳು ನಶಿಸಿಹೋಗುವ ಅಪಾಯವಿದೆ ಎಂಬ ಎಚ್ಚರಿಕೆಯನ್ನು ಇಲ್ಲಿ ನೀಡಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಚಲಪತಿ ಆರ್., (2026), ಪಠ್ಯಪುಸ್ತಕಗಳು ಮತ್ತು ಸಾಂಸ್ಕೃತಿಕ ರಾಜಕಾರಣ, ಬೆಂಗಳೂರು: ರಾಸೀ ಪ್ರಕಾಶನ.
ಶ್ರೀಪಾದ ಭಟ್ ಬಿ., (2023), ಕಣ್ಕಟ್ಟು, ಆನೇಕಲ್: ಕೌದಿ ಪ್ರಕಾಶನ.
ರೋಮಿಲಾ ಥಾಪರ್, (2017), ರಾಷ್ಟ್ರೀಯತೆ, ಮೈಸೂರು: ಅಭಿರುಚಿ ಪ್ರಕಾಶನ.
ಚಲಪತಿ ಆರ್., (2012), ನಮ್ಮದೇ ತಿಳಿವಿನ ದಾರಿಯಲ್ಲಿ, ಚನ್ನಪಟ್ಟಣ: ಪಲ್ಲವ ಪ್ರಕಾಶನ.
ಅಮರೇಂದ್ರ ಹೊಲ್ಲಂಬಳ್ಳಿ, (2014), ಮರುಮಾತು, ಬೆಂಗಳೂರು: ಮೇಘ ಪ್ರಕಾಶನ.