ಸಿದ್ದಲಿಂಗಯ್ಯ ಅವರ ‘ಮತಾಂತರ’ ಕತೆ ಮುನ್ನೆಲೆಗೆ ತರುವ ಪ್ರಶ್ನೆಗಳು

Main Article Content

ಅಮರೇಂದ್ರ ಶೆಟ್ಟಿ ಆರ್.

Abstract

ಸಿದ್ದಲಿಂಗಯ್ಯನವರ ಏಕೈಕ ಕತೆ ‘ಮತಾಂತರ’ವು ಗ್ರಾಮೀಣ ಭಾರತದಲ್ಲಿ ಆಳವಾಗಿ ಬೇರುಬಿಟ್ಟಿರುವ ಜಾತಿ ತಾರತಮ್ಯ, ಅಸ್ಪೃಶ್ಯತೆ ಮತ್ತು ದಲಿತರ ದೈನಂದಿನ ಸಂಕಟಗಳನ್ನು ತೀಕ್ಷ್ಣವಾಗಿ ಅನಾವರಣಗೊಳಿಸುತ್ತದೆ. ಹಳ್ಳಿಯ ಕ್ರೌರ್ಯದಿಂದ ಪಾರಾಗಲು ಪಟ್ಟಣ ಸೇರುವ ದಲಿತ ಯುವಕರು ಅಲ್ಲಿಯೂ ಜಾತಿಯ ನೆರಳಿಗೆ ಸಿಲುಕುವ ವಾಸ್ತವವನ್ನು ಕತೆಯು ಮಾರ್ಮಿಕವಾಗಿ ಕಟ್ಟಿಕೊಡುತ್ತದೆ. ದೇವಸ್ಥಾನ ಪ್ರವೇಶ ಮತ್ತು ಕುಡಿಯುವ ನೀರಿನ ಹಕ್ಕಿನಿಂದ ವಂಚಿತರಾದ ದಲಿತರು, ಜಾತಿಯ ಅವಮಾನಗಳಿಂದ ಮುಕ್ತಿ ಪಡೆಯಲು ಕ್ರಿಶ್ಚಿಯನ್ ಹಾಗೂ ಇಸ್ಲಾಂ ಧರ್ಮಗಳಿಗೆ ಮತಾಂತರಗೊಳ್ಳುವ ಪ್ರಕ್ರಿಯೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಮತಾಂತರಗೊಂಡರೂ ಅವರ ಮೂಲ ಜಾತಿಯ ಗುರುತು ಬೆಂಬಿಡದೆ ಕಾಡುವ ದುರಂತವನ್ನು ಕತೆ ಹೇಳುತ್ತದೆ. ಗಾಂಧೀಜಿಯವರ ಆದರ್ಶವಾದಿ ದೃಷ್ಟಿಕೋನಕ್ಕಿಂತ, ಹಳ್ಳಿಗಳ ಕ್ರೌರ್ಯ ಮತ್ತು ಮತಾಂತರದ ಮಿತಿಗಳ ಕುರಿತಾದ ಅಂಬೇಡ್ಕರ್ ಅವರ ವಾಸ್ತವಿಕ ನಿಲುವೇ ಭಾರತೀಯ ಸಮಾಜವನ್ನು ಅರ್ಥೈಸಲು ಹೆಚ್ಚು ಪ್ರಸ್ತುತ ಎಂಬುದನ್ನು ಮಂಡಿಸಲಾಗಿದೆ.

Article Details

Section

Research Articles

Author Biography

ಅಮರೇಂದ್ರ ಶೆಟ್ಟಿ ಆರ್.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯನಗರ, ಬೆಂಗಳೂರು.

 

How to Cite

ಅಮರೇಂದ್ರ ಶೆಟ್ಟಿ ಆರ್. (2026). ಸಿದ್ದಲಿಂಗಯ್ಯ ಅವರ ‘ಮತಾಂತರ’ ಕತೆ ಮುನ್ನೆಲೆಗೆ ತರುವ ಪ್ರಶ್ನೆಗಳು. ಅಕ್ಷರಸೂರ್ಯ (AKSHARASURYA), 14(02), 01 to 06. https://aksharasurya.com/index.php/latest/article/view/658

References

ಗಿರಡ್ಡಿ ಗೋವಿಂದರಾಜ, (2009), ಕಲ್ಪಿತ ವಾಸ್ತವ: ಕನ್ನಡ ಸಣ್ಣಕತೆ, ಹುಬ್ಬಳ್ಳಿ: ಸಾಹಿತ್ಯ ಪ್ರಕಾಶನ.

ಅಶೋಕ ಟಿ.ಪಿ., (2012), ಸಾಹಿತ್ಯ ಸಂಚಾರ, ಹೆಗ್ಗೋಡು: ಅಕ್ಷರ ಪ್ರಕಾಶನ.

ಅಮೂರ ಜಿಎಸ್., (2004), ಸ್ವಾತಂತ್ರ್ಯೋತ್ತರ ಕನ್ನಡ ಕಥಾಲೋಕ, ಬೆಂಗಳೂರು: ಅಂಕಿತ ಪುಸ್ತಕ.

ಅಮರೇಂದ್ರ ಹೊಲ್ಲಂಬಳ್ಳಿ, (2021), ಕನ್ನಡ ಸಣ್ಣಕತೆಗಳು ಮತ್ತು ಜಾಗತೀಕರಣ, ಬೆಂಗಳೂರು: ಐಸಿರಿ ಪ್ರಕಾಶನ.

Most read articles by the same author(s)