ಕನ್ನಡ ಶಾಸನ ಮತ್ತು ಸಾಹಿತ್ಯ: ಜೈನ ಶಿಕ್ಷಣ ಪರಂಪರೆ
Main Article Content
Abstract
ನಾವು ಪ್ರಾಚೀನ ಮತ್ತು ಮಧ್ಯಕಾಲೀನ ಸಂದರ್ಭದ ಕರ್ನಾಟಕದ ಬಹು ಸಾಂಸ್ಕೃತಿಕ ಇತಿಹಾಸದಲ್ಲಿ ಜೈನಧರ್ಮವು ವಹಿಸಿದಂತಹ ಪಾತ್ರ ಮಹತ್ವವಾದದ್ದು. ಸುಮಾರು ಒಂದು ಸಾವಿರ ವರ್ಷಗಳ ಸುದೀರ್ಘ ಕಾಲದಲ್ಲಿ ಅನೇಕ ರಾಜಮನೆತನಗಳ ಆಶ್ರಯದಲ್ಲಿ ಬೆಳೆದ ಈ ಜೈನ ಧರ್ಮವು, ಕೇವಲ ಆಧ್ಯಾತ್ಮಿಕ ಕ್ಷೇತ್ರಕ್ಕೆ ಸೀಮಿತವಾಗದೆ ಶಿಕ್ಷಣ ಕ್ಷೇತ್ರದಲ್ಲಿಯೂ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿತು. ಇಲ್ಲಿ ಶ್ರವಣಬೆಳಗೊಳ ಪ್ರದೇಶ ಸೇರಿದಂತೆ ಕರ್ನಾಟಕದ ಅನೇಕ ಪ್ರದೇಶಗಳಲ್ಲಿ ಸಿಕ್ಕಿರುವ ಶಾಸನಗಳು ಹಾಗೂ ಕನ್ನಡದ ಮೊದಲ ಗದ್ಯ ಗ್ರಂಥ ವಡ್ಡಾರಾಧನೆಯಂತಹ ಪ್ರಾಚೀನ ಕನ್ನಡ ಸಾಹಿತ್ಯ ಕೃತಿಗಳನ್ನು ಅನುಲಕ್ಷಿಸಿ ಜೈನ ಶಿಕ್ಷಣ ಪರಂಪರೆಯನ್ನು ಸಮಗ್ರವಾಗಿ ವಿಶ್ಲೇಷಿಸಲು ಪ್ರಯತ್ನಿಸಲಾಗಿದೆ. ರಾಜಾಶ್ರಯದ ಚಾರಿತ್ರಿಕ ಹಿನ್ನೆಲೆ, ಬಸದಿ-ಚೈತ್ಯಾಲಯಗಳು ವಿದ್ಯಾಕೇಂದ್ರಗಳಾಗಿ ರೂಪುಗೊಂಡ ಬಗೆ, ವಿದ್ಯಾಭ್ಯಾಸ ಆರಂಭದ ವಯೋಮಿತಿ, ಗುರು-ಶಿಷ್ಯ ಪರಿಭಾಷೆ, ಬೋಧನಾ ವಿಧಾನ, ಪಠ್ಯಕ್ರಮದ ವ್ಯಾಪ್ತಿ ಮತ್ತು ಸಹ ಶಿಕ್ಷಣ ಪದ್ಧತಿ ಎಂಬ ಆರು ಆಯಾಮಗಳ ಮೂಲಕ ಈ ಅಧ್ಯಯನ ರೂಪುಗೊಂಡಿದೆ. ವೈದಿಕ ಪರಂಪರೆಯ ಜಾತಿ-ಲಿಂಗಾಧಾರಿತ ಶೈಕ್ಷಣಿಕ ನಿರ್ಬಂಧಗಳಿಗೆ ಪ್ರತಿಕ್ರಿಯೆಯಾಗಿ ರೂಪುಗೊಂಡ ಜೈನ ಶಿಕ್ಷಣ ಪದ್ಧತಿ, ಎಲ್ಲರಿಗೂ ಪ್ರವೇಶ, ಸ್ಥಳೀಯ ಭಾಷೆ, ಮತ್ತು ಎಲ್ಲರನ್ನು ಒಳಗೊಳ್ಳುವ ಮೂಲಕ ಕರ್ನಾಟಕದ ಸಾಂಸ್ಕೃತಿಕ ಸಾಮಾಜಿಕ ಇತಿಹಾಸದಲ್ಲಿ ಶಾಶ್ವತ ಗುರುತನ್ನು ಮೂಡಿಸಿತು ಎಂಬುದರ ಕುರಿತು ಈ ಅಧ್ಯಯನ ನಡೆಸಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಚಿದಾನಂದಮೂರ್ತಿ ಎಂ., (2014), ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ (ಕ್ರಿ ಶ 450-1150), ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ.
ಕೊಪ್ಪ ಎಸ್. ಕೆ., (1990), ತರ್ದವಾಡಿ ನಾಡು ಒಂದು ಅಧ್ಯಯನ, ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ.
ಶಾಸನಗಳಲ್ಲಿ ಕರ್ನಾಟಕದ ಸ್ತ್ರೀಸಮಾಜ, (1990), ಧಾರವಾಡ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ.
ವೀರಪ್ಪ ಎಸ್. ಎಸ್., (1984), ಭಾರತೀಯ ಶಿಕ್ಷಣದ ಇತಿಹಾಸ, ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ.
ನಾಗರಾಜು ಡಿ. ಎಂ., (2012), ಕಲ್ಯಾಣ ಚಾಲುಕ್ಯ ಆರನೇಯ ವಿಕ್ರಮಾದಿತ್ಯನ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ.
ತಿಪ್ಪೇರುದ್ರಸ್ವಾಮಿ ಎಚ್., (2007), ಕರ್ನಾಟಕ ಸಂಸ್ಕೃತಿ ಸಮೀಕ್ಷೆ, ಮೈಸೂರು: ಡಿ. ವಿ. ಕೆ. ಮೂರ್ತಿ ಪ್ರಕಾಶನ.
ದೇಸಾಯಿ ಎಚ್. ಆರ್., (2010), ಕಲ್ಯಾಣ ಚಾಲುಕ್ಯರ ಶಿಕ್ಷಣ ಪದ್ಧತಿ, ಧಾರವಾಡ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ.
ನಂದಿಮಠ ಎಸ್. ಸಿ., (ವರ್ಷ ಲಭ್ಯವಿಲ್ಲ), ಕರ್ನಾಟಕದ ಧರ್ಮಗಳು, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.
ಹಂಪ ನಾಗರಾಜಯ್ಯ, (1998), ಶಾಸನಗಳಲ್ಲಿ ಬಸದಿಗಳು, ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ.
ನಾಗರಾಜಯ್ಯ, (1981), ಕರ್ನಾಟಕ ಮತ್ತು ಜೈನಧರ್ಮ, ಬೆಂಗಳೂರು: ಐ. ಬಿ. ಎಚ್. ಪ್ರಕಾಶನ.