ಶಹಾಪೂರ ತಾಲೂಕಿನ ಶಾಸನಗಳ ಸಾಂಸ್ಕೃತಿಕ ಅಧ್ಯಯನ

Main Article Content

ಬಾಬುರಾಯ ದೊರೆ

Abstract

ಪ್ರಸ್ತುತ ಈ ಲೇಖನದಲ್ಲಿ ಶಾಸನಗಳ ಹಿನ್ನಲೆಯಲ್ಲಿ ಒಂದು ಪ್ರದೇಶದ ಸಾಂಸ್ಕೃತಿಕ ಇತಿಹಾಸವನ್ನು ಅರಿಯುವ ಪ್ರಯತ್ನ ಮಾಡಲಾಗಿದೆ. ಶಹಾಪುರ ತಾಲೂಕು ಸಾಂಸ್ಕೃತಿಕವಾಗಿ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಈ ಪ್ರದೇಶವನ್ನು ಮೌರ್ಯರು, ಶಾತವಾಹನರು, ಬಾದಾಮಿ ಚಾಲುಕ್ಯರು, ಕಲ್ಯಾಣಿ ಚಾಲುಕ್ಯರು, ಕಲಚೂರಿಗಳು, ಸೇವುಣರು, ಬಹಮನಿಯರು, ಆದಿಲ್‌ ಶಾಹಿಗಳು, ಸುರಪುರದ ಅರಸರು ಮತ್ತು ಹೈದರಾಬಾದ್ ನಿಜಾಮ ಮುಂತಾದವರು ಆಳಿದ್ದಾರೆ.
ಈ ಪ್ರದೇಶದಲ್ಲಿ ನೂರಾರು ಶಾಸನಗಳು ದೊರಕಿವೆ. ಮುಖ್ಯವಾಗಿ ಅಣಬಿ, ಇಂಗಳಗಿ, ದೋರನಹಳ್ಳಿ, ನಡಾಲ್‌, ಮದ್ದರಕಿ, ಮರಮಕಲ್‌, ಮೂಡಬೂಳ, ಸಗರ, ಶಿರವಾಳ, ಸಂಗಮ, ಹೋತಪೇಟೆ ಮತ್ತು ಭೀಮರಾಯನ ಗುಡಿಗಳಲ್ಲಿ ದೊರಕಿರುವ ಶಾಸನಗಳು ತುಂಬಾ ಮಹತ್ವದವುಗಳಾಗಿವೆ. ಎಲ್ಲ ಶಾಸನಗಳು ತಾಲೂಕಿನ ಸಾಂಸ್ಕೃತಿಕ ಇತಿಹಾಸಕ್ಕೆ ಮಹತ್ವದ ಆಕರಗಳಾಗಿ ಮಾಹಿತಿಯನ್ನು ಒದಗಿಸುತ್ತವೆ. ಈ ಮಾಹಿತಿಯ ಹಿನ್ನಲೆಯಲ್ಲಿ ಪ್ರಾಗೈತಿಹಾಸಿಕ ಕುರುಹುಗಳು, ರಾಜಕೀಯ ಇತಿಹಾಸ, ಧಾರ್ಮಿಕ ಇತಿಹಾಸ, ಅಗ್ರಹಾರಗಳು, ಅಳತೆ ಮತ್ತು ನಾಣ್ಯ ಮುಂತಾದ ವಿಷಯಗಳನ್ನು ಅರಿಯುವ ಪ್ರಯತ್ನ ಮಾಡಲಾಗಿದೆ.

Article Details

Section

Research Articles

Author Biography

ಬಾಬುರಾಯ ದೊರೆ

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಗುರುಮಠಕಲ್.

References

ಹನುಮಾಕ್ಷಿ ಗೋಗಿ, (1995), ಕಲಬುರಗಿ ಜಿಲ್ಲೆಯ ಶಾಸನಗಳು, ಮಹಿಳಾ ಸಾಹಿತ್ಯಿಕಾ, ಹುಬ್ಬಳ್ಳಿ.

ಗೋಪಾಲರಾವ್ ಹೆಚ್.ಎಸ್., (2019), ಶಾಸನ ಅಧ್ಯಯನ ಕೆಲ ಹೆಜ್ಜೆ ಗುರುತುಗಳು, ಅಭಿನವ ಪ್ರಕಾಶನ, ಬೆಂಗಳೂರು.

ಹನುಮಾಕ್ಷಿ ಗೋಗಿ, (1983), ವ್ಯಾಸಂಗ, ಮಹಿಳಾ ಸಾಹಿತ್ಯಿಕಾ, ಹುಬ್ಬಳ್ಳಿ.

ಚಿದಾನಂದಮೂರ್ತಿ ಎಂ., (2015), ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಸ್ವಪ್ನ ಬುಕ್ ಹೌಸ್, ಬೆಂಗಳೂರು.