ಸಿನಿಮಾವಾಗಿ ವೈದೇಹಿಯವರ ‘ಗುಲಾಬಿ ಟಾಕೀಸು’ ಹಾಗೂ ‘ಅಮ್ಮಚ್ಚಿಯೆಂಬ ನೆನಪು’

Authors

  • ಮಮತ ಎಂ. ಉಪನ್ಯಾಸಕರು, ಕನ್ನಡ ವಿಭಾಗ, ಮಿಲಾಗ್ರಿಸ್‌ ಕಾಲೇಜು, ಹಂಪನಕಟ್ಟ, ಮಂಗಳೂರು.

Keywords:

ಗುಲಾಬಿ ಟಾಕೀಸು, ಸಿನಿಮಾ, ಬೆಳ್ಳಿಪರದೆ, ಮನೋಜ್ಞ, ಅಮ್ಮಚ್ಚಿಯೆಂಬ ನೆನಪು

Abstract

ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತ ಹೆಸರು ವೈದೇಹಿ. ನೇರ ದಿಟ್ಟ ಗಂಭೀರ ನಡೆನುಡಿಯಿಂದ ಕನ್ನಡ ಮಹಿಳಾ ಸಾಹಿತ್ಯದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದವರು. ವೈದೇಹಿಯವರ ಕೃತಿಗಳಲ್ಲಿ ಅನುಭವದ ಮಾಲಿಕೆ ಇದೆ. ಹೆಣ್ಣಿನ ಗಂಭೀರ ಸಮಸ್ಯೆಗಳ ಬಗ್ಗೆ ಕಾಳಜಿ ಇದೆ. ಹಾಗಾಗಿ ಅವರ ಕಥೆಗಳು ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತವಾಗದೆ ನಾಟಕವಾಗಿ ರಂಗದ ಮೇಲೆ, ಸಿನಿಮಾವಾಗಿ ಪರದೆಯ ಮೇಲೆ ಪ್ರದರ್ಶನಗೊಂಡಿದೆ. ಮಹಿಳಾಪರವಾಗಿ, ಹೆಣ್ಣಿಗೊಂದು ಗಟ್ಟಿ ಧ್ವನಿಯಾಗಿ, ಸಾಂತ್ವನದ ನುಡಿಗಳ ಮೂಲಕ ಓದುಗರನ್ನು ತಲುಪಿದೆ. ಹೆಣ್ಣಿನ ಅನುಭವದ ನೆಲೆಯಿಂದ ಬದುಕನ್ನು ಪರಿಶೀಲನಾತ್ಮಕವಾಗಿ ನೋಡುವ ಕಾಳಜಿಯೊಂದು ಆಕೆಯ ಕೃತಿಗಳಲ್ಲಿ ಕಾಣಿಸುತ್ತದೆ. ಕನ್ನಡದ ಸಿನಿ ಪರದೆಯಲ್ಲಿ ವೈದೇಹಿ ಅವರ ‘ಗುಲಾಬಿ ಟಾಕೀಸು’ ಅದೇ ಹೆಸರಿನಲ್ಲಿ ಕನ್ನಡದ ಕಲಾತ್ಮಕ ಚಿತ್ರವಾಗಿ ಮೂಡಿ ಬಂದಿದೆ. ‘ಅಮ್ಮಚ್ಚಿಯೆಂಬ ನೆನಪು’ ಚಿತ್ರವು ವೈದೇಹಿಯವರ ಮೂರು ಸಣ್ಣ ಕಥೆಗಳನ್ನು ಆಧರಿಸಿ ಪರದೆಯ ಮೇಲೆ ಮೂಡಿಬಂದಿದೆ. ಯಾವುದೇ ಒಂದು ಸಿನೆಮಾಗೆ ಅದರ ಕಥಾ ವಸ್ತುವಷ್ಟೇ ಅಲ್ಲ, ಕಥೆಯೂ ಗಟ್ಟಿಯಾಗಿದ್ದಾಗಲೇ ಅದು ಮನಸ್ಸಿಗೆ ನಾಟುತ್ತದೆ, ಸ್ಮೃತಿ ಪಟಲದಲ್ಲಿ ನೆಲೆಯೂರುತ್ತದೆ. ಉತ್ತಮವಾದ ಕಥೆ ಹಾಗೂ ಕಥಾ ವಸ್ತುವಿನ ಜೊತೆಗೆ, ಅನೇಕ ಸಂದೇಶಗಳನ್ನು ಈ ಚಿತ್ರ ಕೊಡುತ್ತದೆ.

References

ಮುರಳೀಧರ ಉಪಾಧ್ಯ ಹಿರಿಯಡಕ. (2018). ವೈದೇಹಿ ಜೀವನ ಮತ್ತು ಕೃತಿಗಳ ಸಮೂಹ ಶೋಧ. ಅಭಿನವ ಪ್ರಕಾಶನ. ಬೆಂಗಳೂರು.

ಸವಿತಾ ನಾಗಭೂಷಣ & ತಾರಿಣಿ ಶುಭದಾಯಿನಿ. (2019). ಇರುವಂತಿಗೆ- ವೈದೇಹಿ ಗೌರವ ಗ್ರಂಥ 2019. ಎಚ್‌ಐಜಿ ಪ್ರಕಾಶನ. ಶಿವಮೊಗ್ಗ.

ಶ್ರೀನಿವಾಸ ರಾವ್. (2018). ಹೊಸಕಿ ಹೋದ ಹೂವುಗಳ ಹೋರಾಟ-ಅಮ್ಮಚ್ಚಿಯೆಂಬ ನೆನಪು(ಲೇ). ಕನ್ನಡ ಪ್ರಭ.

Downloads

Published

11.08.2024

How to Cite

ಮಮತ ಎಂ. (2024). ಸಿನಿಮಾವಾಗಿ ವೈದೇಹಿಯವರ ‘ಗುಲಾಬಿ ಟಾಕೀಸು’ ಹಾಗೂ ‘ಅಮ್ಮಚ್ಚಿಯೆಂಬ ನೆನಪು’ . AKSHARASURYA, 4(04), 131 to 138. Retrieved from https://aksharasurya.com/index.php/latest/article/view/462

Issue

Section

ಪ್ರಬಂಧ. | ESSAY.