ಯುವ ಬರಹಗಾರರ ತಲ್ಲಣಗಳು ಮತ್ತು ಹೊಸ ಹುಡುಕಾಟ
Main Article Content
Abstract
ಸಾಹಿತ್ಯವು ಸ್ಥಿರವಾಗಿರುವುದಿಲ್ಲ; ಅದು ಕಾಲದ ಹಾದಿ ಅನುಸರಿಸಿ ನಿರಂತರವಾಗಿ ರೂಪಾಂತರಗೊಳ್ಳುತ್ತದೆ. ಪ್ರತಿಯೊಂದು ಪೀಳಿಗೆಯ ಬರಹಗಾರರು ತಮ್ಮದೇ ಆದ ಹೊಸ ಹಾದಿಯನ್ನು ಹುಡುಕುತ್ತಾರೆ. ಈ ಪೈಕಿ ಯುವ ಬರಹಗಾರರ ಹೊಸ ಹುಡುಕಾಟ ಅತ್ಯಂತ ವಿಶೇಷ. ಏಕೆಂದರೆ, ಯುವಕರಲ್ಲಿ ಉತ್ಸಾಹ, ಬದಲಾವಣೆಯ ಹಂಬಲ, ಹೊಸತನದ ತವಕ ಇವೆಲ್ಲವೂ ತೀವ್ರವಾಗಿ ಕಾಣುತ್ತವೆ. ಭಾಷೆಯಲ್ಲಿನ ಹೊಸತನದೊಂದಿಗೆ ಯುವ ಬರಹಗಾರರು ಪರಂಪರೆಯ ಕಠಿಣ ಶೈಲಿಯಿಂದ ದೂರವಾಗಿ ಸರಳ, ನುಡಿಗಟ್ಟುಗಳ ಸಮೃದ್ಧ ಭಾಷೆಯನ್ನು ಬಳಸುತ್ತಿದ್ದಾರೆ. “ನನ್ನ ನುಡಿಯೇ ನನ್ನ ಕಲೆ” ಎಂಬ ತೇಜಸ್ವಿಯವರ ನಿಲುವು ಇವರಿಗೂ ಪ್ರೇರಣೆ. ಇಂದಿನ ಯುವ ಬರಹಗಾರರು ತಮ್ಮ ದೈನಂದಿನ ಬದುಕಿನ ಮಾತುಗಳನ್ನು ಸಾಹಿತ್ಯದ ಹೃದಯವಾಗಿಸುತ್ತಿದ್ದಾರೆ. ಶೈಲಿಯ ವೈವಿಧ್ಯತೆಯಲ್ಲಿ ಯುವ ಬರಹಗಾರರು ಕಥೆ–ಕವನ–ಕಾದಂಬರಿಯ ಸಾಂಪ್ರದಾಯಿಕ ಹಾದಿಗೆ ಸೀಮಿತವಾಗದೆ, ಕಿರು ಕತೆಗಳು, ಕವಿತೆಗಳ ನವ್ಯ ರೂಪಗಳು, ಬ್ಲಾಗ್ ಬರಹ, ಡಿಜಿಟಲ್ ಸಾಹಿತ್ಯ ಮುಂತಾದ ಹಾದಿಗಳನ್ನು ಹುಡುಕುತ್ತಿದ್ದಾರೆ. ಹೀಗೆ ಸಾಹಿತ್ಯವನ್ನು ಹೊಸ ಮಾಧ್ಯಮಗಳಲ್ಲಿ ತಲುಪಿಸಲು ಅವರ ಪ್ರಯತ್ನ ಕಾಣಿಸುತ್ತದೆ. ಜೊತೆಗೆ ಬದಲಾವಣೆಯ ಹಂಬಲ ಬಯಸುವ ಯುವ ಬರಹಗಾರರು ಹಳೆಯ ಮೌಲ್ಯಗಳನ್ನು ಕುರುಡಾಗಿ ಅನುಸರಿಸುವುದಿಲ್ಲ. ಬದಲಾಗಿ, ಅವುಗಳನ್ನು ಪ್ರಶ್ನಿಸಿ ಹೊಸ ಅರ್ಥ ನೀಡಲು ಪ್ರಯತ್ನಿಸುತ್ತಾರೆ. ಕುವೆಂಪುರವರು ಹೇಳಿದಂತೆ –”ಹೊಸ ಹೊಲವು ಬಿತ್ತನೆಗೆ ಬಯಸುತ್ತದೆ” ಅವನ ಬರಹವೂ ಸಮಾಜದಲ್ಲಿ ಬದಲಾವಣೆಯ ಬಿತ್ತನೆ ಮಾಡಲು ಹಂಬಲಿಸುತ್ತದೆ. ಯುವ ಬರಹಗಾರನ ಮತ್ತೊಂದು ಹೊಸ ಹುಡುಕಾಟ ಎಂದರೆ ತನ್ನದೇ ಆದ ಧ್ವನಿಯನ್ನು ಕಂಡುಹಿಡಿಯುವುದು. ಅಡಿಗರು ನವ್ಯ ಚಳವಳಿ ಆರಂಭಿಸಿದAತೆ, ಇಂದಿನ ಯುವ ಬರಹಗಾರರೂ ತಮ್ಮದೇ ಆದ ನವೀನ ಧ್ವನಿಯನ್ನು ರೂಪಿಸುತ್ತಿದ್ದಾರೆ. ಅವರು “ಹಿರಿಯರ ಪ್ರತಿಧ್ವನಿಯಲ್ಲ, ನನ್ನದೇ ಸ್ವರ ಬೇಕು” ಎಂಬ ತವಕದಿಂದ ಬರೆಯುತ್ತಿದ್ದಾರೆ. ಯುವ ಬರಹಗಾರರ ಹೊಸ ಹುಡುಕಾಟವು ಕನ್ನಡ ಸಾಹಿತ್ಯಕ್ಕೆ ನೂತನ ಚೈತನ್ಯ ನೀಡುತ್ತಿದೆ. ಹೊಸ ವಿಷಯಗಳು, ಹೊಸ ಶೈಲಿಗಳು, ಹೊಸ ದೃಷ್ಟಿಕೋನಗಳು ಅವರ ಬರಹದ ಮೂಲಕ ಸಾಹಿತ್ಯವನ್ನು ಸಮೃದ್ಧಗೊಳಿಸುತ್ತಿವೆ. ಹೀಗಾಗಿ, ಯುವ ಬರಹಗಾರರ ಹೊಸ ಹುಡುಕಾಟವೆಂದರೆ ಕೇವಲ ಸೃಜನಶೀಲತೆಯ ಚಟುವಟಿಕೆ ಅಲ್ಲ; ಅದು ಸಮಾಜವನ್ನು ಬದಲಿಸುವ ಶಕ್ತಿ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಆಶಾದೇವಿ ಎಮ್.ಎಸ್., (2011), ನಡುವೆ ಸುಳಿವ ಆತ್ಮ, ಅಹರ್ನಿಶಿ ಪ್ರಕಾಶನ, ಶಿವಮೊಗ್ಗ.
ಮಾಧವಿ ಬಂಡಾರಿ, (2011), ನಿನುಂಟು ನಿನ್ನ ರೆಕ್ಕೆಗಳುಂಟು, ಚಿಂತನ ಪುಸ್ತಕ, ಬೆಂಗಳೂರು.
ಸುರೇಶ ನಾಗಲಮಡಿಕೆ, (2018), ಹಲವು ಬಣ್ಣದ ಹಗ್ಗ, ದೀಪಂಕರ ಪ್ರಕಾಶನ, ಬೆಂಗಳೂರು.
ಸತ್ಯ ಮಂಗಲ ಮಹಾದೇವ (ಸಂ), (2017), ಕಣ್ಣ ಕಾಡುಗೆ ಬೆಳಕೆ, ತಳುಕಿನ ವೆಂಕಟಯ್ಯ ಗ್ರಂಥಮಾಲೆ, ಬೆಂಗಳೂರು.