ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಮಹಿಳೆ: ಸೈದ್ಧಾಂತಿಕ ಆಯಾಮಗಳು

Main Article Content

ಸುಮಾ ವಸಂತ ಸಾವಂತ

Abstract

ಭಾರತದ ಸ್ವಾತಂತ್ರ್ಯ ಹೋರಾಟವು ಬ್ರಿಟಿಷ್ ಆಡಳಿತದಿಂದ ದೇಶವನ್ನು ಮುಕ್ತಗೊಳಿಸಲು ನಡೆದ ಒಂದು ಐತಿಹಾಸಿಕ ಚಳುವಳಿಯಾಗಿದೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ಪ್ರಮುಖ ಪಾತ್ರವಹಿಸಿದರು ಮತ್ತು ಅವರ ಅಸ್ಮಿತೆಯನ್ನು ಬಲಪಡಿಸಿದರು. ಅವರು ಕೇವಲ ಹೋರಾಟಗಾರರಾಗದೆ ಸಮಾಜ ಸುಧಾರಕರು, ಶಿಕ್ಷಣ ತಜ್ಞರು ಮತ್ತು ಸಮಾಜ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದರು. ಅವರ ತ್ಯಾಗ ಬಲಿದಾನಗಳು ಭಾರತದ ಸ್ವಾತಂತ್ರ್ಯ ಚಳುವಳಿಗೆ ಹೊಸ ದಿಕ್ಕನ್ನು ನೀಡಿತು. ವಾಸ್ತವವಾಗಿ ಅಂದಿನ ರಾಷ್ಟ್ರೀಯ ಹೋರಾಟವು ‘ಸ್ವಾತಂತ್ರ್ಯಕ್ಕಾಗಿನ ಹೋರಾಟʼವಾಗಿದ್ದಿತು, ಸ್ವಾತಂತ್ರ್ಯವು ಜನತೆಗೆ ದೊರಕಬೇಕಿರುವುದು ‘ಸ್ವಾತಂತ್ರ್ಯಕ್ಕಾಗಿನ ಹೋರಾಟʼದ (೧೯೪೭ರ) ನಂತರವೇ ಎನ್ನಬಹುದು. ನಿಜಾರ್ಥದಲ್ಲಿ ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ಭಾವಿಸಿದ್ದ ಉದಾತ್ತ ಮೌಲ್ಯಗಳು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ನಿರಾಕರಣೆಗೊಳಗಾಗಿದ್ದವು. ಈ ಮೌಲ್ಯಗಳು ಸಾಕಾರಗೊಂಡು ಆಚರಣೆಗೆ ಬರಬೇಕಿದ್ದುದು ಸ್ವಾತಂತ್ರ್ಯ ನಂತರದ ಕಾಲಘಟ್ಟದಲ್ಲೇ. ಇದಕ್ಕೆ ದಿಕ್ಸೂಚಿಯನ್ನು ಒದಗಿಸಿದ್ದು “ಭಾರತದ ಸಂವಿಧಾನ”. ಸಂವಿಧಾನದ ಆಶಯಗಳು ಸ್ವಾತಂತ್ರ್ಯ ಹೋರಾಟದ ಆಶಯಗಳ ಮೊತ್ತವಾಗಿ ಅದರಲ್ಲಿ ಪ್ರತಿಫಲನಗೊಂಡಿವೆ. ಈ ನೆಲೆಯಲ್ಲಿ ದೇಶದ ‘ಹಲವು ಸ್ವಾತಂತ್ರ್ಯʼಗಳಲ್ಲಿ ‘ಮಹಿಳಾ ಸ್ವಾತಂತ್ರ್ಯʼವು ಎಷ್ಟರಮಟ್ಟಿಗೆ ದಕ್ಕಿದೆ ಎಂದು ಕೇಳುವ ಜರೂರು ಇಂದಿನದು. ಅಂದರೆ ಭಾರತವು ಸ್ವಾತಂತ್ರ್ಯಗೊಂಡ ನಂತರದ ಈ ಏಳು ದಶಕಗಳಲ್ಲಿ ಸಮಾನತೆ, ನ್ಯಾಯಪರತೆ, ಸ್ವಾತಂತ್ರ್ಯ ಮತ್ತು ಘನತೆಗಳು ಈ ದೇಶದ ಮಹಿಳೆಗೆ ಎಷ್ಟು ತಲುಪಿದೆ ಎಂಬುದರ ಮೌಲ್ಯಮಾಪನದ ಅಗತ್ಯತೆ ಇದೆ.

Article Details

Section

Research Articles

Author Biography

ಸುಮಾ ವಸಂತ ಸಾವಂತ

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಕೆ.ಎಲ್.ಇ ಸಂಸ್ಥೆಯ ಜಿ.ಐ. ಬಾಗೇವಾಡಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ನಿಪ್ಪಾಣಿ.

How to Cite

ಸುಮಾ ವಸಂತ ಸಾವಂತ. (2025). ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಮಹಿಳೆ: ಸೈದ್ಧಾಂತಿಕ ಆಯಾಮಗಳು. ಅಕ್ಷರಸೂರ್ಯ (AKSHARASURYA), 7(04), 121 to 128. https://aksharasurya.com/index.php/latest/article/view/1307

References

ಅಪರ್ಣಾ ಬಸು, (೧೯೯೫), ಎ ನ್ಯಾಶನಲಿಸ್ಟ್ ಫೆಮಿನಿಸ್ಟ್: ಮೃದುಲಾ ಸಾರಾಬಾಯಿ (೧೯೧೧-೧೯೭೪), ಇಂಡಿಯನ್ ಜರ್ನಲ್ ಆಫ್ ಜೆಂಡರ್ ಸ್ಟಡೀಸ್ ಸಂಚಿಕೆ: ೨, ಸಂಖ್ಯೆ: ೧, ಜನವರಿ-ಜೂನ್.

ಗಾಯತ್ರಿ ನಾವಡ, (೨೦೦೩), ಮಹಿಳಾ ಸಂಕಥನ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

ಜಾನಕಿ ನಾಯರ್, ರೋಹಿತ್‌ ಅಜಾದ್‌ & ಮಲ್ಲಾರಿಕಾ ಸಿನ್ಹಾರಾಯ್‌ (ಸಂ), ಶ್ರೀಪಾದಭಟ್ ಬಿ. (ಅನು), (೨೦೨೦), ಜೆಎನ್‌ಯು ಅಂಗಳದಲ್ಲಿ ರಾಷ್ಟ್ರೀಯವಾದದ ಕ್ಲಾಸುಗಳು, ಕ್ರಿಯಾ ಮಾಧ್ಯಮ ಪ್ರೈ.ಲಿ., ಬೆಂಗಳೂರು

ಗೋವಿಂದರಾಜು ಸಿ.ಆರ್., (೨೦೦೫), ಕನ್ನಡಮ್ಮ: ಹೆಣ್ಣು ಸಂಕಥನದ ನಾಡುನುಡಿ ರೂಪಕ-ಪ್ರತೀಕಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ತೇಜಸ್ವಿನಿ ನಿರಂಜನ ಮತ್ತು ಸೀಮಂತಿನಿ ನಿರಂಜನ (ಸಂ), (೨೦೧೪), ಸ್ತ್ರೀವಾದಿ ಸಾಹಿತ್ಯ ವಿಮರ್ಶೆ: ಸಂಸ್ಕೃತಿ, ಇತಿಹಾಸ, ರಾಜಕಾರಣ, ಭಾರತೀಯ ಸಂದರ್ಭ, ಅಭಿನವ ಪ್ರಕಾಶನ, ಬೆಂಗಳೂರು.

ಬಿಪನ್ ಚಂದ್ರ, (೨೦೧೦), ಇಂಡಿಯನ್ ನ್ಯಾಶನಲ್ ಮೂವ್‌ಮೆಂಟ್: ದಿ ಲಾಂಗ್-ಟರ್ಮ್ ಡೈನಾಮಿಕ್ಸ್, ಹರ್-ಆನಂದ್ ಪಬ್ಲಿಕೇಶನ್ಸ್ ಪ್ರೈ.ಲಿ., ನವದೆಹಲಿ.

ಚಂದ್ರಶೇಖರ್ ಎಸ್. ಮತ್ತುಸುರೇಂದ್ರ ರಾವ್ ಬಿ. (ಸಂ), (2016), ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಯ ಕೆಲವು ನೆಲೆಗಳು, ಸಂಪುಟ-೬, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು.

Most read articles by the same author(s)