ಕನ್ನಡ ಸಾಹಿತ್ಯ ಸಂದರ್ಭ: ಭಾಷಾಂತರದ ಚಾರಿತ್ರಿಕ ಚಹರೆ

Main Article Content

ಗಜಾನನ ನಾಯ್ಕ
ಜಿ. ವೀರಭದ್ರಗೌಡ

Abstract

ಭಾಷೆಯ ಪ್ರಕ್ರಿಯೆಗಳು ವೈವಿಧ್ಯಮಯ. ಭಾಷಾಂತರವು ಅವುಗಳಲ್ಲಿ ಒಂದು ವಿಶಿಷ್ಟ ಪ್ರಕ್ರಿಯೆಯಾಗಿದೆ. ಪ್ರತಿ ಭಾಷೆಯ ಸಾಹಿತ್ಯ ಸಂದರ್ಭದಲ್ಲಿ ಅದರದೇ ಆದ ಚಾರಿತ್ರಿಕ ಚಹರೆಗಳನ್ನು ಸೃಷ್ಟಿಸಿದೆ. ಪ್ರಸ್ತುತ ಲೇಖನದಲ್ಲಿ ಕನ್ನಡ ಸಾಹಿತ್ಯ ಪರಂಪರೆಯನ್ನು ಭಿನ್ನ ಕಾಲಘಟ್ಟದ ಭಾಷಾಂತರದ ನಿರ್ದಿಷ್ಟ ಪ್ರೇರಣೆಗಳಿಂದ; ವಸಾಹತು ಪೂರ್ವದ ಕಾಲಘಟ್ಟ, ವಸಾಹತು ಕಾಲಘಟ್ಟ, ವಸಾಹತೋತ್ತರ ಕಾಲಘಟ್ಟಗಳೆಂದು ಗುರುತಿಸಿಕೊಂಡು, ಆಯಾ ಕಾಲಘಟ್ಟದ ಭಾಷಾಂತರ ಚಹರೆಗಳನ್ನು ಸ್ಥೂಲವಾಗಿ ಅವಲೋಕಿಸಲಾಗಿದೆ.
ವಸಾಹತು ಪೂರ್ವ ಕಾಲಘಟ್ಟದಲ್ಲಿ ʼಸ್ವʼ ಮತ್ತು ʼಅನ್ಯʼವೆಂದು ಅಥವಾ ʼಭಾಷಾಂತರʼವೆಂದು ಪರಿಗಣಿಸಿಲ್ಲ. ಕವಿ ಪ್ರತಿಭೆ, ಪ್ರೌಢಿಮೆಗಳಿಂದ ಸ್ವವೆಂದು ಪರಿಗಣಿಸಲಾಗಿದೆ. ವಸಾಹತು ಕಾಲಘಟ್ಟದಲ್ಲಿ ಮೂಲಅನ್ಯ/ಭಾಷಾಂತರ ಸಾಹಿತ್ಯವೆಂದು ನೋಡುವ ದೃಷ್ಟಿಕೋನವನ್ನು ಬೆಳೆಸಿದೆ. ವಸಾಹತೋತ್ತರ ಕಾಲಘಟ್ಟದಲ್ಲಿ, ವಸಾಹತು ಕಾಲಘಟ್ಟದ ಚಟುವಟಿಕೆಗಳನ್ನು ಮೂಲನಿಷ್ಠತೆಯಿಂದ ವ್ಯವಸ್ಥಿತವಾಗಿ ವಿಸ್ತರಿಸಿಕೊಳ್ಳಲಾಗಿದೆ. ಇದರ ಪರಿಣಾಮವಾಗಿ ಕನ್ನಡ ಸಾಹಿತ್ಯದ ಪ್ರಕ್ರಿಯೆ ಸ್ವರೂಪದಲ್ಲಿ ಅಭೂತಪೂರ್ವ ಬದಲಾವಣೆಗಳು ಏರ್ಪಟ್ಟು, ವಸ್ತು ದೃಷ್ಟಿಯಿಂದ ವೈವಿಧ್ಯವಾಗಿ ವಿಕಾಸವಾಗಲು ಕಾರಣವಾಗಿರುವ ಭಾಷಾಂತರದ ಚಾರಿತ್ರಿಕ ಚಹರೆಗಳನ್ನು ಲೇಖನದ ಮಿತಿಯಲ್ಲಿ ಅವಲೋಕಿಸಿದೆ. ಜೊತೆಗೆ ಆ ನಿಟ್ಟಿನ ಸೂಕ್ಷ್ಮ ಅಧ್ಯಯನಗಳಿಗೆ ಸಮೃದ್ಧವಾಗಿ ಪ್ರೇರಣೆಯಾಗಬಲ್ಲದೆಂದು ವಿಶ್ವಾಸಿಸಿದೆ.

Article Details

Section

Research Articles

Author Biographies

ಗಜಾನನ ನಾಯ್ಕ

ಸಹ ಪ್ರಾಧ್ಯಾಪಕರು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ.

ಜಿ. ವೀರಭದ್ರಗೌಡ

ಸಹಾಯಕ ಪ್ರಾಧ್ಯಾಪಕರು, ಕನ್ನಡ ಅಧ್ಯಯನ ವಿಭಾಗ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು.

How to Cite

ಗಜಾನನ ನಾಯ್ಕ, & ಜಿ. ವೀರಭದ್ರಗೌಡ. (2025). ಕನ್ನಡ ಸಾಹಿತ್ಯ ಸಂದರ್ಭ: ಭಾಷಾಂತರದ ಚಾರಿತ್ರಿಕ ಚಹರೆ. ಅಕ್ಷರಸೂರ್ಯ (AKSHARASURYA), 8(01), 88 to 100. https://aksharasurya.com/index.php/latest/article/view/1363

References

ಕೀರ್ತಿನಾಥ ಕುರ್ತಕೋಟಿ, (1992), ಬಯಲು ಆಲಯ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಗಿರಡ್ಡಿ ಗೋವಿಂದರಾಜ, (1981), ಸಾಹಿತ್ಯ ಮತ್ತು ಪರಂಪರೆ, ಅಭಿಜಾತ ಗ್ರಂಥಮಾಲೆ, ಬೆಂಗಳೂರು.

ನಾಗಭೂಷಣ ಸ್ವಾಮಿ ಓ.ಎಲ್., (1993), ಭಾಷಾಂತರ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ತಾರಕೇಶ್ವರ ವಿ.ಬಿ., (2007), ವಸಾಹತುಶಾಹಿ ಮತ್ತು ಭಾಷಾಂತರ: ಮೈಸೂರು ಮತ್ತು ಕನ್ನಡ ಪ್ರಕರಣಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಪ್ರಧಾನ ಗುರುದತ್, (1989), ಭಾಷಾಂತರ ಕಲೆ, ಬಿ.ಎಂ. ಶ್ರೀ ಪ್ರತಿಷ್ಠಾನ, ಬೆಂಗಳೂರು.

ಪ್ರಧಾನ ಗುರುದತ್, (2004), ಅನಾವರಣ, ಪುಸ್ತಕ ಪ್ರಾಧಿಕಾರ, ಬೆಂಗಳೂರು.

Most read articles by the same author(s)