ಡಾ. ಬಿ. ಕೆ. ಹಿರೇಮಠರ ಜೀವನ, ಸಾಧನೆ: ಒಂದು ಸ್ಥೂಲ ಅವಲೋಕನ

Main Article Content

ಜಿ. ವೀರಭದ್ರಗೌಡ

Abstract

ಡಾ|| ಬಿ.ಕೆ.ಹಿರೇಮಠ ಅವರು ಅಪರೂಪದ ಕನ್ನಡ ಪ್ರಾಧ್ಯಾಪಕರು ಮತ್ತು ಚಿತ್ರಕಲಾವಿದರು. ಕನ್ನಡ ಸಂಶೋಧನೆ ಮತ್ತು ಕರ್ನಾಟಕ ಚಿತ್ರಕಲೆಯಲ್ಲಿ ಅವರದೇ ಆದ ಅಪರೂಪದ ಕೊಡುಗೆಯನ್ನು ನೀಡಿದ ಪ್ರತಿಭಾಸಂಪನ್ನರು. ತಮ್ಮ ಲೇಖನಿ ಮತ್ತು ಕುಂಚಗಳನ್ನು ಜವಾಬ್ದಾರಿಯೆಂದು ಭಾವಿಸಿ ದುಡಿಸಿದವರು. ಸಂಶೋಧನೆ, ಸಂಪಾದನೆ, ಕಲಾಸಾಹಿತ್ಯ, ಅನುವಾದ ಪ್ರಕಾರಗಳಲ್ಲಿ ಕೃಷಿಗೈದಿದ್ದಾರೆ. ಹಸ್ತಪ್ರತಿಶಾಸ್ತ್ರ, ಗ್ರಂಥಸಂಪಾದನೆ, ಹಳೆಗನ್ನಡ ಮತ್ತು ನಡುಗನ್ನಡ ಸಾಹಿತ್ಯ ಹಾಗೂ ಶರಣ ಪರಂಪರೆ ಕುರಿತ ಸಾಹಿತ್ಯ ಪ್ರಕಾರ ಮತ್ತು ಕ್ಷೇತ್ರಗಳ ಅಧ್ಯಯನಗಳು ಇವರ ಸಂಶೋಧನಾ ವಲಯಗಳಾಗಿವೆ. ಸಾಹಿತ್ಯದ ಶ್ರೀಮಂತ ಓದು ಅಧ್ಯಯನಗಳ ಅನುಭವದಿಂದ ಇವರ ಕುಂಚ ಫಲಗಳು ಒಂದು ಪ್ರತ್ಯೇಕ ದೃಷ್ಟಿಯಿಂದ ಅವಲೋಕಿಸಲು ಪ್ರೇರೇಪಿಸುತ್ತವೆ. ಅವರ ಕಲಾಕೃತಿಗಳು ಹೊಂದಿರುವ ಸಂಕೇತಗಳು ಹಾಗೂ ಅವು ವಿಸ್ತರಿಸುವ ಚಿತ್ರಭಾಷೆ ವಿಶಿಷ್ಟವಾದವು. ಇಂತಹ ಅಪರೂಪದ ವಿದ್ವಾಂಸರ ಜೀವನ ಸಾಧನೆಯನ್ನು ಪ್ರಸ್ತುತ ಬರಹದಲ್ಲಿ; ಕುಟುಂಬದ ಹಿನ್ನೆಲೆ ಮತ್ತು ಬದುಕು, ವೃತ್ತಿ ಜೀವನ, ಸಾಹಿತ್ಯಿಕ ಕೊಡುಗೆ ಹಾಗೂ ಕಲಾ ಸಾಧನೆ ಎಂಬ ನಾಲ್ಕು ಪ್ರಮುಖ ಭಾಗಗಳಲ್ಲಿ ಸ್ಥೂಲವಾಗಿ ಅವಲೋಕಿಸಲಾಗಿದೆ.

Article Details

Section

Research Articles

Author Biography

ಜಿ. ವೀರಭದ್ರಗೌಡ

ಸಹಾಯಕ ಪ್ರಾಧ್ಯಾಪಕರು, ಕನ್ನಡ ಅಧ್ಯಯನ ವಿಭಾಗ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು.

 

How to Cite

ಜಿ. ವೀರಭದ್ರಗೌಡ. (2026). ಡಾ. ಬಿ. ಕೆ. ಹಿರೇಮಠರ ಜೀವನ, ಸಾಧನೆ: ಒಂದು ಸ್ಥೂಲ ಅವಲೋಕನ. ಅಕ್ಷರಸೂರ್ಯ (AKSHARASURYA), 12(04), 60 to 75. https://aksharasurya.com/index.php/latest/article/view/383

References

ಹಿರೇಮಠ ಬಿ.ಕೆ., (1992), ಕನ್ನಡ ಹಸ್ತಪ್ರತಿಗಳು: ಒಂದು ಅಧ್ಯಯನ, ಕಸಬಾ ಜಂಬಗಿ (ಮುಧೋಳ): ವೀರಶೈವ ಅಧ್ಯಯನ ವೇದಿಕೆ, ಶ್ರೀ ಹಿರೇಮಠ.

ಹಿರೇಮಠ ಬಿ.ಆರ್. (ಪ್ರ.ಸಂ), (2೦23), ನಿಜದ ನೆಲೆ, ಬಾಗಲಕೋಟ: ವೈರಾಗ್ಯದ ಮಲ್ಲಣಾರ್ಯ ಪ್ರಕಾಶನ, ಬಸವೇಶ್ವರ ವಿದ್ಯಾವರ್ಧಕ ಸಂಘ.

ಹಿರೇಮಠ ಬಿ.ಕೆ., (2೦23), ಸೃಷ್ಟಿ, ಬಾಗಲಕೋಟ: ಬಾಪೂಜಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ).

ಸೀತಾರಾಮಯ್ಯ ವಿ., (2೦18), ಪ್ರತಿಭಾ ಸಂಪನ್ನರು (ಭಾಗ-7), ಬೆಂಗಳೂರು: ವಿ.ಸೀ. ಸಂಪದ.

Most read articles by the same author(s)