ಯಶವಂತ ಚಿತ್ತಾಲರ ‘ಶಿಕಾರಿʼ ಒಂದು ಅವಲೋಕನ

Main Article Content

ಪುಟ್ಟಸ್ವಾಮಿ

Abstract

ಯಶವಂತ ಚಿತ್ತಾಲರ ‘ಶಿಕಾರಿʼಯ ಕೇಂದ್ರ ಪ್ರತಿಮೆ ಬೇಟೆ... ಇಂದಿನ ಔದ್ಯೋಗೀಕೃತ ನಾಗರಿಕತೆಯಲ್ಲಿ ಎಲ್ಲಿಯೂ ನೋಡಸಿಗುವ ಮನುಷ್ಯನಿಂದ ಮನುಷ್ಯನ ಬೇಟೆ ‘ಶಿಕಾರಿʼಯ ಕೇಂದ್ರ ವ್ಯಕ್ತಿ ನಾಗಪ್ಪ. ಇಲ್ಲಿ ಬೇಟೆಯ ಗುರಿ ಸ್ವಾರ್ಥ, ಸ್ವಹಿತ ರಕ್ಷಣೆಗಳ ಉದ್ದೇಶಗಳಿಂದ ಒಂದಾದ ಬೇಟೆಗಾರರ ತಂಡವೇ ಅದನ್ನು ಬೆನ್ನು ಹತ್ತುತ್ತದೆ. ಅವನ ಅಸ್ತಿತ್ವದ ಬೇರುಗಳನ್ನೇ ಅಲುಗಾಡಿಸಿ ಅವನ ನಾಶಕ್ಕಾಗಿ ಹೊಂಚುಹಾಕುತ್ತದೆ. ಇಂತಹ ಒಂದು ಸನ್ನಿವೇಶದಲ್ಲಿ ಮನುಷ್ಯನ ಬಾಳಿಗೆ ಅರ್ಥವಿದೆಯೇ? ಇದರಿಂದ ಪಾರಾಗಿ ಬದುಕುವ ಸಾಧ್ಯತೆಗಳಿವೆಯೇ, ಇಂತಹ ಸನ್ನಿವೇಶ ಹುಟ್ಟಿತಾದರೂ ಹೇಗೆ? ಅದಕ್ಕೆ ಹೊಣೆಗಾರರು ಯಾರು? ಎನ್ನುವ ಮೂಲಭೂತ ಪ್ರಶ್ನೆಗಳನ್ನು ಎತ್ತುವುದರ ಮೂಲಕ ‘ಶಿಕಾರಿʼ ನಮಗೆ ಅತ್ಯಂತ ಪ್ರಸ್ತುತವಾದ ಕೃತಿಯಾಗಿದೆ. ಕನ್ನಡದ ಮಟ್ಟಿಗೆ ತೀರಾ ಹೊಸ ವಸ್ತುವನ್ನು ಆಯ್ದುಕೊಂಡ ಚಿತ್ತಾಲರು ಅದನ್ನು ಬಹುಸಮರ್ಥವಾಗಿ ನಿರ್ವಹಿಸಿದ್ದಾರೆ. (ಡಾ. ಜಿ.ಎಸ್. ಅಮೂರ) ಅವರು ಕೃತಿಯ ಹಿನ್ನುಡಿಯಲ್ಲಿ ಆಡಿದ ಮಾತು ಕೃತಿಯ ಕುರಿತಾಗಿ ಅತ್ಯಂತ ಯೋಗ್ಯವಾದ ಮಾತಾಗಿದೆ. ಯಶವಂತ ಚಿತ್ತಾಲರ ಕೃತಿಗಳ ಮುಖ್ಯ ಭೂಮಿಕೆ ಅವರ ಹುಟ್ಟೂರು ಹನೇಹಳ್ಳಿ ಹಾಗೂ ಮುಂದೆ ಉದ್ಯೋಗಶೀಲರಾಗಿ ಬಾಳಿದ ಅವರ ಕರ್ಮಭೂಮಿ ಮುಂಬಯಿ. `ಶಿಕಾರಿʼಯಲ್ಲಿನ ಅವರ ಪಾತ್ರಗಳಾದ ನಾಗಪ್ಪನೂ ಹನೇಹಳ್ಳಿಯಲ್ಲಿ ಹುಟ್ಟಿ ಮುಂಬಯಿಯನ್ನು ಕರ್ಮಭೂಮಿಯನ್ನಾಗಿ ಮಾಡಿಕೊಂಡವನು.

Article Details

Section

Research Articles

Author Biography

ಪುಟ್ಟಸ್ವಾಮಿ

ಪ್ರಾಧ್ಯಾಪಕರು, ಪಿಜಿ ಸೆಂಟರ್‌, ಹೇಮಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

How to Cite

ಪುಟ್ಟಸ್ವಾಮಿ. (2025). ಯಶವಂತ ಚಿತ್ತಾಲರ ‘ಶಿಕಾರಿʼ ಒಂದು ಅವಲೋಕನ. ಅಕ್ಷರಸೂರ್ಯ (AKSHARASURYA), 7(04), 94 to 101. https://aksharasurya.com/index.php/latest/article/view/1304

References

ರಾಜೇಂದ್ರ ಚೆನ್ನಿ (ಸಂ), (೧೯೯೬), ಯಶವಂತ ಚಿತ್ತಾಲರ ಸಾಹಿತ್ಯ ಲೋಕ, ಪ್ರಿಸಮ್ ಬುಕ್ಸ್ ಪ್ರೈ.ಲಿ., ಬೆಂಗಳೂರು.

ಹಳ್ಳಿಕೇರಿ ಎಫ್.ಟಿ., (1995), ಯಶವಂತ ಚಿತ್ತಾಲ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಹೆಗಡಿ ವಿ.ಡಿ., (2007೦, ಯಶವಂತ ಚಿತ್ತಾಲ, ಚೇತನ ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್, ಮೈಸೂರು.

ಸುರೇಶ ನಾರಾಯಣ ನಾಯ್ಕ, (2002), ಯಶವಂತ ಚಿತ್ತಾಲರ ಬದುಕು-ಬರಹ, ಸುವರ್ಣ ಪ್ರಕಾಶನ, ಹೊನ್ನಾವರ.

ಹೆಗಡೆ ಜಿ.ಎಂ. (ಸಂ.), (1999), ಸಾಹಿತ್ಯ ವಿಮರ್ಶೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

ಯಶವಂತ ಚಿತ್ತಾಲ, (2005), ಸಾಹಿತ್ಯ ಸೃಜನಶೀಲಿಕೆ ಮತ್ತು ನಾನು, ವಸಂತ ಪ್ರಕಾಶನ, ಬೆಂಗಳೂರು.

Most read articles by the same author(s)