ಕುವೆಂಪು ಅವರ ವೈಚಾರಿಕತೆ

Main Article Content

ಪುಟ್ಟಸ್ವಾಮಿ

Abstract

ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯ ಮತ್ತು ಚಿಂತನೆಗಳಲ್ಲಿ ಅಡಗಿರುವ ವೈಚಾರಿಕ ನೆಲೆಗಟ್ಟುಗಳನ್ನು ಇಲ್ಲಿ ಗುರುತಿಸಲಾಗಿದೆ. ಮೌಢ್ಯ, ಕಂದಾಚಾರಗಳನ್ನು ವಿರೋಧಿಸಿ, ವೈಜ್ಞಾನಿಕ ದೃಷ್ಟಿಕೋನ ಮತ್ತು 'ಮನುಜಮತ'ವನ್ನು ಪ್ರತಿಪಾದಿಸಿದ ಕುವೆಂಪು ಅವರ ದಾರ್ಶನಿಕತೆಯನ್ನು ಇದು ಚರ್ಚಿಸುತ್ತದೆ. ಡಾ. ಎಚ್. ತಿಪ್ಪೇರುದ್ರಸ್ವಾಮಿ ಅವರ ವಿಶ್ಲೇಷಣೆಯ ಹಿನ್ನೆಲೆಯಲ್ಲಿ, ಕುವೆಂಪು ಅವರ 'ವಿಶ್ವಮಾನವ ಸಂದೇಶ', ಸರ್ವೋದಯ, ಮತ್ತು ಪೂರ್ಣದೃಷ್ಟಿಯ ಪರಿಕಲ್ಪನೆಗಳನ್ನು ವಿವರಿಸಲಾಗಿದೆ. ನಾಡು-ನುಡಿ, ಶಿಕ್ಷಣ ವ್ಯವಸ್ಥೆ ಮತ್ತು ಸಾಮಾಜಿಕ ನ್ಯಾಯದ ಕುರಿತಾದ ಕುವೆಂಪು ಅವರ ನಿಷ್ಟುರ ಹಾಗೂ ಖಚಿತ ನಿಲುವುಗಳು ಹೇಗೆ ಸಮಾಜವನ್ನು ಎಚ್ಚರಿಸಿದವು ಎಂಬುದನ್ನು ಲೇಖನವು ಎತ್ತಿ ತೋರಿಸುತ್ತದೆ. ಆಧ್ಯಾತ್ಮ ಮತ್ತು ವಿಜ್ಞಾನಗಳ ಸಮನ್ವಯದ ಮೂಲಕ ಹೊಸ ಮೌಲ್ಯಗಳನ್ನು ಕಟ್ಟಿಕೊಟ್ಟ ಕುವೆಂಪು ಅವರ 'ವಿಚಾರಕ್ರಾಂತಿಗೆ ಆಹ್ವಾನ'ದ ಮಹತ್ವವನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.

Article Details

Section

Research Articles

Author Biography

ಪುಟ್ಟಸ್ವಾಮಿ

ಪ್ರಾಧ್ಯಾಪಕರು, ಸ್ನಾತಕೋತ್ತರ ಕೇಂದ್ರ, ಹೇಮಗಂಗೋತ್ರಿ, ಹಾಸನ.

References

ಎಚ್. ತಿಪ್ಪೇರುದ್ರಸ್ವಾಮಿ: 'ಕುವೆಂಪು ಅವರ ವೈಚಾರಿಕತೆ'.

ಕುವೆಂಪು: ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ.

ಕುವೆಂಪು: ವಿಚಾರ ಕ್ರಾಂತಿಗೆ ಆಹ್ವಾನ.

ಪ್ರೊ. ಎಚ್.ಎಂ. ಚೆನ್ನಯ್ಯ (ಸಂಪಾದಿತ ಲೇಖನಗಳು).