ವಚನಕಾರ್ತಿಯರಲ್ಲಿ ಬಂಡಾಯದ ನೆಲೆಗಳು

Main Article Content

ಪ್ರಕಾಶ

Abstract

೧೨ನೇ ಶತಮಾನದ ವಚನಚಳವಳಿಯೇ ಚಾರಿತ್ರಿಕವಾಗಿ ಬಹುದೊಡ್ಡ ಪ್ರಮಾಣದ ಬಂಡಾಯಕ್ಕೆ ನೂತನ ಅಯಾಸವನ್ನು ನೀಡಿತು. ಸುಮಾರು ಮೂವತ್ತೆರಡು ಜನ ಶರಣೆಯರು ವಚನಗಳನ್ನು ರಚಿಸಿ ಶ್ರೇಷ್ಠ ಚಿಂತಕಿಯರಾದರು ಅವರು ಸಮಾಜದ ಡಾಂಭಿಕತೆಯ ವಿರುದ್ಧ ಪ್ರತಿಭಿಟಿಸಿದ ರೀತಿ ಅಗಮ್ಯವಾದುದು. ಲಿಂಗಭೇದ ನಿರಾಕರಣೆ, ಮನೋಪ್ರವೃತ್ತಿಗಳ ವಿರುದ್ಧ ಪ್ರತಿಭಟನೆ ಮಾಡಿರುವುದು ಅವರ ಜ್ಞಾನ, ಆತ್ಮಸ್ಥೈರ್ಯ ಹಾಗೂ ಅವರ ಒಳಗಿನ ಬಂಡಾಯ ಗುಣಕ್ಕೆ ಸಾಕ್ಷಿಯಾಗಿದೆ.
ಪುರುಷ ಪ್ರಧಾನ ಸಮಾಜವು ತನ್ನ ಹಿತಾಶಕ್ತಿಯನ್ನು ಕಾಯ್ದುಕೊಂಡು ಮಹಿಳೆಯನ್ನು ಕತ್ತಲೆಯ ಕೂಪಕ್ಕೆ ತಳ್ಳಿತ್ತು ೧೨ನೇಯ ಶತಮಾನದ ಬಸವಾದಿ ಶರಣರು ಮಹಿಳೆಯರ ಬದುಕಿನಲ್ಲಿದ್ದ ಕತ್ತಲೆಯನ್ನು ಸರಿಸಿ ಬೆಳಕಿನ ಮಾರ್ಗವನ್ನು ದರ್ಶಿಸಿದರು ಮನುಷ್ಯನ ಸಣ್ಣತನವನ್ನು ಶಮನಗೊಳಿಸಿ ಸಮಾನತೆಯ ತಳಹದಿಯ ಮೇಲೆ ಮಾನವೀಯವಾದ ಸಮಸಂಸ್ಕೃತಿಯ ಸಮಾಜವನ್ನು ನಿರ್ಮಿಸಿಹೊರಟ ಶರಣರು ಸಮಾನತೆಯನ್ನೇ ಪ್ರಧಾನ ಆಶಯವನ್ನಾಗಿಸಿಕೊಂಡಿದ್ದರು. ಆಧ್ಯಾತ್ಮಿಕ ಸಾಧನೆಗಳಲ್ಲಿ ಹೆಣ್ಣಿಗೆ ಸ್ವಾತಂತ್ರ್ಯವನ್ನು ನೀಡಿ , ಹೆಣ್ಣು ಜೀವಕ್ಕೆ ಅಂಟಿದ್ದ ಎಲ್ಲ ಬಗೆಯ ಸೂತಕಗಳನ್ನು ಕಿತ್ತೊಗೆದರು, ಇದರಿಂದ ಮಹಿಳೆಯರಿಗೆ ಶಿಕ್ಷಣ, ಸಮಾಜಸೇವೆ, ಆಧ್ಯಾತ್ಮಿಕ ಸಾಧನೆ ಸಾಹಿತ್ಯಾಭಿವ್ಯಕ್ತಿಗಳು ಸಾಧ್ಯವಾದವು. ಮಹಿಳೆಯ ಅನುಭವ, ಚಿಂತನೆಗಳ ಗಡಿ ಜಗದಗಲ, ಮುಗಿದಗಲಕ್ಕೆ ವಿಸ್ತರಿಸಿದವು, ಮಾನುಧರ್ಮಶಾಸ್ತ್ರ ನಿರ್ಮಿಸಿದ ಕೌಟುಂಬಿಕ ಚೌಕಟ್ಟನ್ನು ಒಡೆದು ಹೆಣ್ಣಿಗೂ ಸ್ವತಂತ್ರವಾದ ಅಸ್ತಿತ್ವವಿದೆ ಎಂಬುದನ್ನು ಶಿವಶರಣೆಯರು ತಮ್ಮ ಜೀವನ ಸಾಧನೆಯ ಮೂಲಕ ಸಾಬೀತುಪಡಿಸಿದರು.

Article Details

Section

Research Articles

Author Biography

ಪ್ರಕಾಶ

ಸಹಾಯಕ ಪ್ರಧ್ಯಾಪಕರು, ಕನ್ನಡ ವಿಭಾಗ, ದಯಾನಂದ ಸಾಗರ್‌ ಬಿಸಿನೆಸ್‌ ಅಕಾಡೆಮಿ, ಬೆಂಗಳೂರು.

How to Cite

ಪ್ರಕಾಶ. (2025). ವಚನಕಾರ್ತಿಯರಲ್ಲಿ ಬಂಡಾಯದ ನೆಲೆಗಳು. ಅಕ್ಷರಸೂರ್ಯ (AKSHARASURYA), 6(04), 56 to 63. https://aksharasurya.com/index.php/latest/article/view/1144

References

ಶಶಿಕಲಾ ಶಿವಶಂಕರ, (2000), ದೀಪಕ್ಕೆ ದೀಪ್ತಿ, ಜ್ಞಾನೋದಯ ಪ್ರಕಾಶನ, ಬೆಂಗಳೂರು, ಪು.ಸ. 108

ವೀರಣ್ಣರಾಜರ (ಸಂ), (2001), ಶಿವಶರಣೆಯರ ವಚನ ಸಂಧಿ, ಕ.ಸ.ಕ.ಪು.ಪ್ರಾ., ಬೆಂಗಳೂರು, ಪು.ಸಂ. 239

ಅದೇ, ಪು.ಸಂ. 255

ಶಿವಕುಮಾರಸ್ವಾಮಿ ವಿ.ಎಂ., (1998), ಶರಣ ಜಗತ್ತು, ಅ.ರಾ.ಶ. ವಚನ ಸಾಹಿತ್ಯ ಪರಿಷತ್ತು, ಮೈಸೂರು, ಪು.ಸಂ. 198

ಬೀರಣ್ಣ ರಾಜೂರು, (1992), ಶಿವ ಶರಣೆಯರ ವಚನ ಸಂಪುಟ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ಪು.ಸಂ. 6

ತಿಪ್ಪರುದ್ರಸ್ವಾಮಿ ಎಚ್‌., (1985), ಶನ್ಯ ಸಂಪಾದನೆ ಮತ್ತು ಆಧುನಿಕ ಮೌಲ್ಯಗಳು, ಚಿತ್ತರಗಿ ಶ್ರೀ ವಿಜಯ ಮಹಾತೇಶ್ವರ ಧರ್ಮ ಪ್ರಚಾರಕ ಮಂಡಳಿ, ಇಲಕಲ್ಲು, ಪು.ಸಂ. 85

ಹೊಸಮನಿ ಎಸ್.ಬಿ., (2006), ಶರಹೆಂದರಮ್ಮವರು ಹರಳಯ್ಯ ನಿಮ್ಮಡಿಗೆ, ಆದಿಶಕ್ತಿ ಪ್ರಕಾಶನ, ಶಿವಮೊಗ್ಗ, ಪು.ಸಂ. 147

Most read articles by the same author(s)