ನಾಗರಿಕ ಸಮಾಜದಲ್ಲಿ ಮಹಿಳಾ ರಾಜಕೀಯ ಭಾಗವಹಿಸುವಿಕೆ ಮತ್ತು ಸಬಲೀಕರಣ
Main Article Content
Abstract
ನಾಗರಿಕ ಸಮಾಜದಲ್ಲಿ ಮಹಿಳೆಯರ ರಾಜಕೀಯ ಭಾಗವಹಿಸುವಿಕೆ ಮತ್ತು ಸಬಲೀಕರಣವು ಕೇವಲ ಲಿಂಗ ಸಮಾನತೆಯ ವಿಷಯವಲ್ಲ, ಅದು ಸದೃಢ ಪ್ರಜಾಪ್ರಭುತ್ವದ ಅಡಿಪಾಯವಾಗಿದೆ. ರಾಜಕೀಯ ವ್ಯವಹಾರಗಳಲ್ಲಿ ನಾಗರಿಕರ ಸಕ್ರಿಯ ಭಾಗವಹಿಸುವಿಕೆಯು ಪ್ರಜಾಪ್ರಭುತ್ವದ ರಚನೆಯನ್ನು ಬಲಪಡಿಸುತ್ತದೆ. ರಾಜಕೀಯ ಭಾಗವಹಿಸುವಿಕೆಯು ಪ್ರಜಾಪ್ರಭುತ್ವ ವ್ಯವಸ್ಥೆಯ ವಿಶಿಷ್ಟ ಲಕ್ಷಣವಾಗಿದ್ದು ಅದರ ಪರಿಣಾಮಕಾರಿತ್ವವು ಅದರ ಎಲ್ಲಾ ನಾಗರಿಕರಿಗೆ ಸಮಾನ ಮತ್ತು ಪರಿಣಾಮಕಾರಿ ಭಾಗವಹಿಸುವಿಕೆಯನ್ನು ಎಷ್ಟರಮಟ್ಟಿಗೆ ಒದಗಿಸಲಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಮಹಿಳಾ ಸಬಲೀಕರಣವು ಇಂದು ಬಹು ಆಯಾಮದ ಪರಿಕಲ್ಪನೆಯಾಗಿ ರೂಪಗೊಂಡಿದ್ದು, ಸಮಾಜದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಮಹಿಳೆಯರು ತಮ್ಮ ಜೀವನದ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುವಂತೆ ಅವರಿಗೆ ಶಕ್ತಿ ತುಂಬುವ ಪ್ರಕ್ರಿಯೆ ಮಾತ್ರ ಸಬಲೀಕರಣವಲ್ಲ; ಬದಲಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ, ಉದ್ಯೋಗ, ಆರೋಗ್ಯ ಮೊದಲಾದ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರನ್ನು ಪುರುಷನಷ್ಟೇ ಸಮಬಲರನ್ನಾಗಿಸುವುದೇ ಮಹಿಳಾ ಸಬಲೀಕರಣವೆನಿಸಿಕೊಳ್ಳುತ್ತದೆ. ನಾಗರಿಕ ಸಮಾಜವು ತನ್ನೆಲ್ಲ ನಾಗರಿಕರಿಗೆ ಯಾವುದೇ ವರ್ಗ ಭೇದವಿಲ್ಲದೆ ಸಮಾನ ಹಕ್ಕು ಮತ್ತು ಅವಕಾಶಗಳನ್ನು ಒದಗಿಸುವಂಥದ್ದು. ಇದು ಸರ್ಕಾರೇತರ ಸಂಘಟನೆಗಳ ಸಮೂಹವಾಗಿದ್ದು, ನಾಗರಿಕರ ಕುಂದು ಕೊರತೆಗಳನ್ನು ಸರ್ಕಾರದ ಎದುರು ತಂದು ಅವುಗಳನ್ನು ಪರಿಹರಿಸುವಂತೆ ಒತ್ತಡ ಹೇರುತ್ತದೆ. ಮುಕ್ತ ಅವಕಾಶಗಳನ್ನು ನೀಡುವ ಮೂಲಕ ಎಲ್ಲರನ್ನು ಸಬಲೀಕರಣದತ್ತ ಮುನ್ನಡೆಸುವ ಕೆಲಸ ಮಾಡುತ್ತದೆ. ಜಾನ್ ಲಾಕ್‌ರವರು ‘ನಾಗರಿಕ ಸಮಾಜವು ಸಾಮಾಜಿಕ ಒಪ್ಪಂದದ ಪದವಾಗಿ ವ್ಯಕ್ತಿಗಳ ನೈಸರ್ಗಿಕ ಹಕ್ಕುಗಳನ್ನು ರಕ್ಷಿಸಲು ಉಂಟಾದ ವ್ಯವಸ್ಥೆಯಾಗಿದೆ’ ಎಂದಿದ್ದಾರೆ.
ನಾಗರಿಕ ಸಮಾಜವು ಸರ್ಕಾರದ ಹೊರತಾಗಿ ಕಾರ್ಯ ನಿರ್ವಹಿಸುವ ಸಾಮಾಜಿಕ ಸಂಘಟನೆಗಳು, ಸ್ವಯಂ ಸೇವಾ ಸಂಸ್ಥೆಗಳು, ಮಹಿಳಾ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಮಾಧ್ಯಮಗಳು, ಜನಾಂದೋಲನಗಳು ಇತ್ಯಾದಿಗಳ ಸಮೂಹವಾಗಿದೆ. ಈ ನಾಗರಿಕ ಸಮಾಜವು ಮಹಿಳೆಯರ ಧ್ವನಿಯನ್ನು ರಾಜಕೀಯ ವ್ಯವಸ್ಥೆಯತ್ತ ಕೊಂಡೊಯ್ಯುವ ಸೇತುವೆಯಂತೆ ಕಾರ್ಯ ನಿರ್ವಹಿಸುತ್ತದೆ. ನಾಗರಿಕ ಸಮಾಜದ ಸಂಸ್ಥೆಗಳು ಮಹಿಳೆಯರಿಗೆ ತರಬೇತಿ, ಕಾನೂನಿನ ಅರಿವು ಮತ್ತು ನೆರವು, ರಾಜಕೀಯ ಜ್ಞಾನ ಮತ್ತು ಸಾಮಾಜಿಕ ಜಾಲಗಳನ್ನು ಒದಗಿಸುವ ಮೂಲಕ ಅವರನ್ನು ಸಬಲೀಕರಿಸುತ್ತವೆ. ಮಹಿಳಾ ಸಬಲೀಕರಣದಲ್ಲಿ ಸಕ್ರಿಯ ರಾಜಕೀಯ ಭಾಗವಹಿಸುವಿಕೆಯು ಮಹತ್ವಪೂರ್ಣವಾಗಿದ್ದು, ಅವರ ರಾಜಕೀಯ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಸಲುವಾಗಿ ರಾಜಕೀಯ ಅವಕಾಶಗಳನ್ನು, ಹಕ್ಕುಗಳನ್ನು, ರಾಜಕೀಯ ಮೀಸಲಾತಿಯನ್ನು ಸಂವಿಧಾನಬದ್ಧವಾಗಿ ನೀಡಲಾಗಿದೆ. ವಿಕಸಿತ ಭಾರತವನ್ನು ಸಾಧಿಸುವ ಪ್ರೇರಕ ಶಕ್ತಿಯಾಗಿ ಮಹಿಳೆಯರ ಸಕ್ರಿಯ ರಾಜಕೀಯ ಭಾಗವಹಿಸುವಿಕೆ ಮತ್ತು ಸಬಲೀಕರಣವು ಮಹತ್ವದ ಸ್ಥಾನ ಪಡೆಯುತ್ತದೆ. “ಪ್ರಧಾನಿ ನರೇಂದ್ರ ಮೋದಿಯವರು ವಿಕಸಿತ ಭಾರತದ ದೃಷ್ಟಿಕೋನಕ್ಕೆ ಮಹಿಳೆಯರ ಸಂಪೂರ್ಣ ಮತ್ತು ಸಮಾನ ಒಳಗೊಳ್ಳುವಿಕೆಯ ಅಗತ್ಯವಿದೆ ಎಂದಿದ್ದಾರೆ.”
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಮಗ್ರ ಬರೆಹಗಳು ಮತ್ತು ಭಾಷಣಗಳು, ಸಂಪುಟ 15.
ಎಸ್. ಜಾಫೆಟ್, ಅಂಬೇಡ್ಕರ್ ಅವರ ಚಿಂತನೆಗಳ ಪ್ರವೇಶಿಕೆ, 2017.
ಎಂ. ಲಕ್ಷ್ಮೀಕಾಂತ್, 2024, ಭಾರತೀಯ ರಾಜ್ಯ ವ್ಯವಸ್ಥೆ, McGraw Hill Education (India) Private Limited. Chennai.
Shirur, S. S. (2023). Dr. B. R. Ambedkar’s role in women empowerment. International Journal for Multidisciplinary Research (IJFMR), 5(4). doi.org.
Kumar, S. (2021). Ambedkar’s vision of women: Empowerment, equality, and social justice. Research Hub International Multidisciplinary Research Journal (RHIMRJ), 8(5), 15–18.
Jyoti, & Shashi. (2024). Women’s empowerment: A key key to achieving Viksit Bharat 2047. Educational Administration: Theory and Practice, 30(5), 4501–4507. kuey.net.
Yeasmin, M. (2024). Dr. B. R. Ambedkar’s vision for women empowerment. International Journal of Research Publication and Reviews, 5(1), 3290–3294. ijrpr.com.
Singh, S., & Kumar, S. (2024). Women empowerment and gender equality in India: A strategic imperative for Viksit Bharat. International Journal of Social Science and Economic Research (IJSSER), 9(1), 108–117. doi.org.
Naik, Z. H. (2017). Empowerment of women through political participation in India. International Journal of Academic Research and Development, 2(6), 728–731.
Lavanya, K. (2024). Breaking barriers: Empowering women in political participation and leadership. International Journal of Creative Research Thoughts (IJCRT), 12(6), g353–g362. https://ijcrt.org/papers/IJCRT2406723.pdf.